ಅದಿತಿಯನ್ನು ಭೇಟಿಯಾಗ್ತಾನಾ ಧ್ರುವ? ಆದ್ಯ ಪ್ಲಾನ್ ಸುಹಾಸಿನಿ ಮುಂದೆ ವರ್ಕ್ ಆಗುತ್ತಾ?

By Poorva

ಗಟ್ಟಿ ಮೇಳ ಧಾರವಾಹಿ ಬಹಳ ಚೆನ್ನಾಗಿ ಮೂಡಿ ಬರುತ್ತಿದ್ದು ನೋಡುಗರ ಮನಸೂರೆಗೊಳ್ಳುವ ಹಾಗೆ ಮಾಡುತ್ತಿದೆ. ಸುಹಾಸಿನಿ ಸುಳ್ಳು ಮಾತುಗಳನ್ನು ನಂಬಿದ ವೇದಾಂತನಿಗೆ ಇನ್ನೂ ಅಸಲಿ ಮುಖ ಗೊತ್ತಾಗಲಿಲ್ಲ. ಇದೀಗ ದ್ರುವ ಎಲ್ಲರ ಹಾಗೆ ಆಗುತ್ತಿರುವುದು ಬಹಳ ಖುಷಿಯ ಸಂಗತಿ. ಇದಕ್ಕೆಲ್ಲ ಕಾರಣ ವೈದೇಹಿ. ವೈದೇಹಿ ತನ್ನ ಮಗನನ್ನು ಬಹಳಷ್ಟು ಕಾಳಜಿಯಿಂದ ನೊಂದುಕೊಳ್ತಿದ್ದಾರೆ. ಇದೀಗ ಸುಹಾಸಿನಿ ಮಾಡಿದ ನಾಟಕ ಎಲ್ಲರಿಗೂ ತಿಳಿಯುವ ಕಾಲ ಬಂದಿದೆ. ದ್ರುವ ರೂಮ್‌ನಲ್ಲಿ ಸಿಸಿ ಕ್ಯಾಮರಾ ಇಟ್ಟಿರುತ್ತಾರೆ.

ಇದರಿಂದ ದ್ರುವ ಬೀಳಲು ಕಾರಣ ಸುಹಾಸಿನಿ ಎಂಬ ವಿಚಾರ ವಿಕ್ರಾಂತ್ ಗೆ ತಿಳಿದಿದೆ. ಸುಹಾಸಿನಿ ವೈಜಯಂತಿ ಅಮ್ಮನಿಗೆ ಏನೋ ಹೇಳಿದ್ದಾರೆ ಅದಕ್ಕಾಗಿ ದ್ರುವನೀಗೆ ಇದರಿಂದ ಕೋಪ ಬಂದಿದೆ, ಇದರಿಂದ ಆತ ಹಾಸಿಗೆಯಿಂದ ಕೆಳಗೆ ಬಿದ್ದಿದ್ದಾನೆ ಎಂದು ಹೇಳುತ್ತಿರುತ್ತಾನೆ. ಇನ್ನು ತನ್ನ ಅಣ್ಣ ಮೊದಲಿನ ಹಾಗೆ ಇರುತ್ತಾನೆ ಎಲ್ಲರ ಜೊತೆಗೆ ಬಹಳ ಖುಷಿಯಿಂದ ಇರುತ್ತಾನೆ ಎನ್ನುವುದು ಆದ್ಯಗೆ ಖುಷಿ. ಆದರೆ ಇನ್ನೂ ಒಂದು ಖುಷಿ ಏನೆಂದರೆ ತನ್ನ ಅಣ್ಣ ಪ್ರೇಮಿಸುತ್ತಿರುವ ಹುಡುಗಿ ಇದೀಗ ದ್ರುವ ಇಷ್ಟು ಚೇತರಿಕೆ ಕಂಡಿದ್ದಾನೆ ಎಂದು ತಿಳಿದರೆ ಎಷ್ಟು ಖುಷಿ ಪಡಬಹುದು ಎಂದು ಯೋಚನೆ ಮಾಡುತ್ತಾ ಅಣ್ಣನ ಬಳಿ ಹೇಳುತ್ತ ಬಹಳ ಖುಷಿ ಪಡುತ್ತಾಳೆ . ಆದ್ಯ ದ್ರುವನ ಬಳಿ ಬಂದು ಅದಿತಿಗೆ ಕರೆ ಮಾಡುತ್ತಾಳೆ.

ಅದಿತಿಗೆ ವಿಡಿಯೋ ಕರೆ ಮಾಡಿದ ಆದ್ಯ

ಅದಿತಿಗೆ ವಿಡಿಯೋ ಕರೆ ಮಾಡಿದ ಆದ್ಯ

ಅದಿತಿ ಅತ್ತಿಗೆ ನನಗೆ ಈಗ ಯಾಕೆ ವಿಡಿಯೋ ಕರೆ ಮಾಡುತ್ತಾ ಇದ್ದಾರೆ ಎಂದು ಯೋಚನೆ ಮಾಡುತ್ತಾ ಫೋನ್ ರಿಸೀವ್ ಮಾಡುತ್ತಾಳೆ. ಈ ವೇಳೆ ಅದಿತಿ ಆದ್ಯ ಬಳಿ ಏನು ಅತ್ತಿಗೆ ವಿಡಿಯೋ ಕಾಲ್ ಮಾಡಿ ಬಿಟ್ಟಿದ್ದಿರಾ ಎಂದಾಗ ಆದ್ಯ ಖುಷಿಯಲ್ಲಿ ಅದಿತಿ ನಿನಗೊಂದು ಸರ್ಪ್ರೈಸ್ ಇದೆ ಎಂದು ದ್ರುವನನ್ನು ತೋರಿಸುತ್ತಾಳೆ. ದ್ರುವನನ್ನು ನೋಡಿದ ಅದಿತಿ ಬಹಳ ಖುಷಿ ಪಡುತ್ತಾಳೆ. ದ್ರುವನನ್ನು ನೋಡಿದ ಅದಿತಿ ದ್ರುವ ಎಂದು ಖುಷಿಯಿಂದ ಕರೆಯುತ್ತಾಳೆ. ಇದನ್ನು ಕೇಳಿದ ಆದ್ಯ ನಿನ್ನ ನೆನಪಿಸಿಕೊಳ್ಳದ ದಿನವೇ ಇಲ್ಲ ಎನ್ನುತ್ತಾಳೆ.

ದ್ರುವನನ್ನು ನೋಡಿ ಖುಷಿ ಪಟ್ಟ ಅದಿತಿ

ದ್ರುವನನ್ನು ನೋಡಿ ಖುಷಿ ಪಟ್ಟ ಅದಿತಿ

ಅದಿತಿ ಈ ದಿನಕ್ಕಾಗಿ ಎಷ್ಟು ದಿನದಿಂದ ಕಾಯುತ್ತಾ ಇದ್ದೆವು ಎಂದೆಲ್ಲ ಹೇಳುವಾಗ ಆದ್ಯ ನಡೆದ ವಿಚಾರವನ್ನು ಎಲ್ಲಾ ಏಳೆ ಎಳೆಯಾಗಿ ಹೇಳುತ್ತಾಳೆ. ಇದನ್ನು ಕೇಳಿದ ಅದಿತಿ ಸಂತೋಷಕ್ಕೆ ಪಾರವೇ ಇರುವುದಿಲ್ಲ. ಇನ್ನು ಆದ್ಯ ಅದಿತಿಗೆ ಮನೆಗೆ ಬರಲು ಹೇಳುತ್ತಾಳೆ. ಆದರೆ ಆಕೆಯ ಮನೆಯ ಪರಿಸ್ಥಿತಿ ಅಷ್ಟಾಗಿ ಸರಿ ಇರುವುದಿಲ್ಲ ದ್ರುವ ಹಾಗೂ ತನ್ನ ಪ್ರೀತಿ ಬಗ್ಗೆ ಗೊತ್ತಾಗಿ ಅಪ್ಪ ಆದಷ್ಟು ಬುದ್ದಿ ಹೇಳಿದ್ದಾರೆ, ಇನ್ನೂ ಪುನಃ ನಾನು ಅಲ್ಲಿಗೆ ಹೋದೆ ಎಂದು ತಿಳಿದರೆ ಇನ್ನೂ ಕಷ್ಟ ಆಗುತ್ತದೆ ಎಂದುಕೊಂಡು ಮನೆಗೆ ಬರುವುದಿಲ್ಲ ಬೇರೆ ಎಲ್ಲಾದರೂ ಹೇಳಿ ಅತ್ತಿಗೆ ಮನೆಗೆ ಬಂದರೆ ದ್ರುವನ ಹತ್ತಿರ ಏನು ಮಾತನಾಡಲು ಆಗುವುದಿಲ್ಲ ಅದಕ್ಕೆ ಹೊರಗಡೆ ಕರೆದುಕೊಂಡು ಬನ್ನಿ ಎಂದು ಹೇಳುತ್ತಾಳೆ

ಸುಹಾಸಿನಿ ಕಣ್ಣು ತಪ್ಪಿಸಿ ದ್ರುವನನ್ನು ಕರೆದುಕೊಂಡು ಹೋಗುತ್ತಾಳ ಆದ್ಯ?

ಸುಹಾಸಿನಿ ಕಣ್ಣು ತಪ್ಪಿಸಿ ದ್ರುವನನ್ನು ಕರೆದುಕೊಂಡು ಹೋಗುತ್ತಾಳ ಆದ್ಯ?

ಇದನ್ನು ಕೇಳಿದ ಆದ್ಯ ನಾನು ಅಣ್ಣನನ್ನು ಹೊರಗೆ ಕರೆದುಕೊಂಡು ಬಂದ ಬಳಿಕ ನಿನಗೆ ನಾನು ಎಲ್ಲಿ ಇದ್ದೇನೆ ಎನ್ನುವ ಲೋಕೇಶನ್ ಶೇರ್ ಮಾಡುತ್ತೇನೆ ಅಲ್ಲಿಗೆ ಬಂದು ಬಿಡು ಎಂದು ಹೇಳುತ್ತಾಳೆ. ಇನ್ನು ಅದಿತಿಗೆ ಬಹಳ ಖುಷಿ ಆಗುತ್ತದೆ. ದ್ರುವನನ್ನು ಎಷ್ಟು ಹೊತ್ತಿಗೆ ಭೇಟಿ ಆಗುತ್ತೇನೆ ಎಂದು ಕಾಯುತ್ತಾ ಇರುತ್ತಾಳೆ. ಇನ್ನು ಆದ್ಯ ಅವಸರ ಅವಸರವಾಗಿ ದ್ರುವನ ಬಳಿ ಬಾ ಅಣ್ಣ ನಾವು ಇವತ್ತು ಹೊರಗೆ ಹೋಗಿ ಸುತ್ತಿಕೊಂಡು ಬರೋಣ ಎಂದು ಹೇಳಿ ಹೊರಡುವ ವೇಳೆ ಅಲ್ಲಿಗೆ ಸುಹಾಸಿನಿ ಬರುತ್ತಾಳೆ. ಮುಂದೇನು ಕಾದು ನೋಡಬೇಕಿದೆ.

More from Filmibeat

English summary
Kannada serial gattimela written update on 30th January
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X