Gattimela: ಗಂಡನನ್ನು ಉಳಿಸಲು ಪ್ರಾಣ ಪಣಕ್ಕೆ ಇಟ್ಟ ವೈದೇಹಿ; ಸುಹಾಸಿನಿ ಆಟಕ್ಕೆ ಫುಲ್‌ಸ್ಟಾಪ್ ಇಡುತ್ತಾಳಾ ವೈದೇಹಿ?

By Poorva

ಗಟ್ಟಿ ಮೇಳ ಧಾರಾವಾಹಿ ನೋಡುಗರಿಗೆ ಇದೀಗ ಕುತೂಹಲ ಮೂಡಿಸುತ್ತಾ ಇದೆ. ಸುಹಾಸಿನಿ ಹಾಗೂ ಅಗ್ನಿ ಇಬ್ಬರು ಸೇರಿಕೊಂಡು ಸೂರ್ಯ ನಾರಾಯಣ ಅವರಿಗೆ ಏನು ಮೋಡಿ ಮಾಡಿದ್ದಾರೆ ಗೊತ್ತಿಲ್ಲ. ಆದರೆ ಸೂರ್ಯ ನಾರಾಯಣ ಮಾತ್ರ ಅಗ್ನಿ ನನ್ನ ಶತ್ರು ಅಲ್ಲ ಆತ ನನ್ನ ಒಳ್ಳೆಯ ಮಿತ್ರ ಎಂದು ನಂಬಿಕೊಂಡಿದ್ದಾರೆ . ಅಗ್ನಿ ತಂದೆಯನ್ನು ವಸಿಷ್ಠ ಕುಟುಂಬ ಜೈಲಿಗೆ ಹಾಕಿದ್ದಾರೆ ಎಂಬುವುದನ್ನು ತಿಳಿದ ಅಗ್ನಿ ಮಾತ್ರ ವಸಿಷ್ಠ ಕುಟುಂಬವನ್ನೇ ಮುಗಿಸಿ ಬಿಡುವ ಎಲ್ಲಾ ತಂತ್ರವನ್ನು ಮಾಡುತ್ತಾ ಇದ್ದಾನೆ.

ಇನ್ನೂ ವೇದಾಂತನಿಗೆ ಇದು ದೊಡ್ಡ ತಲೆ ಬಿಸಿ ಆಗಿ ಪರಿಣಮಿಸಿದೆ. ವೇದಾಂತ ನಿಗೆ ತನ್ನ ತಂದೆ ಯಾರು ಎಂದು ತಿಳಿದ ಬಳಿಕ ಅವರನ್ನು ಅಗ್ನಿ ಯಿಂದ ದೂರ ಮಾಡುವ ಎಲ್ಲಾ ಪ್ರಯತ್ನವನ್ನು ಮಾಡುತ್ತಾನೆ ಆದರೆ ಅದಾವುದೂ ಸಾಧ್ಯ ಆಗದೆ ಅಮೂಲ್ಯ ಹಾಗೂ ವೇದಾಂತ ಮನೆಯತ್ತ ಮುಖ ಮಾಡಿದ್ದಾರೆ ಇತ್ತ ವಿಕ್ರಾಂತ್ ಹೆಂಡತಿ ತುಂಬು ಗರ್ಭಿಣಿ ಆರತಿ ಪತ್ರ ಬರೆದಿಟ್ಟು ತನ್ನ ಗಂಡನ ಹುಡುಕಾಟಕ್ಕೆ ಬೇರೆ ದೇಶಕ್ಕೆ ಹೋಗಿ ಬಿಟ್ಟಿದ್ದಾಳೆ.

Kannada serial Gattimela written update on 3rd August

ತನ್ನ ಗಂಡ ಇನ್ನೂ ಇಲ್ಲ ಎಂಬ ಆಘಾತದ ಸುದ್ದಿ ಕೇಳಿದರೆ ಆರತಿ ಹಾಗೂ ಆಕೆಯ ಮಗುವಿಗೆ ಎಲ್ಲಿ ಏನಾದರು ತೊಂದರೆ ಆಗುತ್ತದೋ ಎಂಬ ಭಯದಲ್ಲಿ ಎಲ್ಲವನ್ನೂ ಅದುಮಿಕೊಂಡು ಸುಮ್ಮನೆ ಇದ್ದರೂ ಅಮೂಲ್ಯ ವೇದಾಂತ .. ಆದರೆ ಇದೀಗ ಆರತಿ ಪತ್ರ ಬರೆದಿಟ್ಟು ಕಾಣೆ ಆಗಿರುವುದು ಇನ್ನಷ್ಟು ಭಯ ತರಿಸಿದೆ.

ಇದೀಗ ಸೂರ್ಯ ನಾರಾಯಣ ಶಾಲೆಯ ಬಗ್ಗೆ ಒಂದು ಪತ್ರ ಬರುತ್ತದೆ ಅದನ್ನು ಕಾಂತ ಹೇಳಬೇಕು ಎಂದುಕೊಂಡು ಇರುವಾಗ ಸಾರ್ಥಕ್ ಹೇಳುತ್ತಾರೆ ಈ ವಿಚಾರ ಯಾರಿಗೂ ತಿಳಿಯಬಾರದು ಎಂಬ ವಿಚಾರ ಆತನಿಗೆ ನೆನಪಿಗೆ ಬರುತ್ತದೆ ಆತ ನ ಹಿಂದೆ ವೈದೇಹಿ ನಿಂತುಕೊಂಡು ಕಾಂತನ ಭುಜದ ಮೇಲೆ ಕೈ ಉತ್ತಗ ಕಾಂತ ನಿಜ ಸುಹಾಸಿನಿ ಬಂದು ನಾನು ಮಾತನಾಡುತ್ತಾ ಇರುವುದನ್ನು ಕೇಳಿಸಿಕೊಂಡರ ಎಂದು ಭಯ ಪಡುತ್ತಾನೆ

ಆ ಬಳಿಕ ಹಿಂದೆ ನೋಡಿದಾಗ ವೈದೇಹಿ ನಿಂತುಕೊಂಡು ಇರುತ್ತಾಳೆ. ಆಕೆಗೆ ಕಾಂತ ಹೇಳಿರುವ ಅರ್ಧಂಬರ್ಧ ಮಾತು ಕೇಳಿಸಿಕೊಂಡು ಇರುತ್ತಾಳೆ ಆಕೆ ಸುಹಾಸಿನಿ ತನ್ನ ಗಂಡನಿಗೆ ಏನಾದರು ಮಾಡಿಯೇ ಮಾಡುತ್ತಾಳೆ ಎಂಬ ಭಯ ಇರುತ್ತದೆ. ಇನ್ನೂ ಸುಹಾಸಿನಿ ಬಹಳ ಆತುರ ಆತುರವಾಗಿ ಕದ್ದು ಮುಚ್ಚಿ ಮನೆಯಿಂದ ಹೊರಟು ಹೋಗುತ್ತಾಳೆ. ಇದನ್ನು ನೋಡಿದ ವೈದೇಹಿ ತನ್ನ ಗಂಡನಿಗೆ ಸುಹಾಸಿನಿ ಏನಾದರು ತೊಂದರೆ ಮಾಡೆ ಬಿಡುತ್ತಾಳೆ ಎಂದು ಆಕೆಯ ಹಿಂದೆ ಪ್ರಾಣದ ಹಂಗು ತೊರೆದು ಹೋಗಲು ನಿರ್ಧಾರ ಮಾಡುತ್ತಾಳೆ.

ಇದನ್ನು ನೋಡಿದ ವೈದೇಹಿ ತಾಯಿ ನಾನು ಬರುತ್ತೇನೆ ಎಂದು ಹೇಳಿದಾಗ ವೈದೇಹಿ ಎಷ್ಟೇ ಬೇಡ ಎಂದು ಹೇಳಿದರು ಅವರ ಮಾತು ಕೇಳದೆ ವೈದೇಹಿ ಜೊತೆ ಹೊರಟು ನಿಲ್ಲುತ್ತಾಳೆ ಇನ್ನೂ ಸುಹಾಸಿನಿ ಯಾವ ಕಡೆಗೆ ಹೋಗುತ್ತಾಳೆ ಎಂದು ತಿಳಿದು ಆಕೆಯ ಹಿಂದೆ ಹೋಗಲು ವೈದೇಹಿ ನಿರ್ಧಾರ ಮಾಡುತ್ತಾಳೆ . ಇನ್ನೂ ಸುಹಾಸಿನಿ ಕುಳಿತಿರುವ ಕಾರನ್ನು ವೈದೇಹಿ ಹಾಗೂ ಆಕೆ ಫಾಲೋ ಮಾಡುತ್ತಾ ಇರುತ್ತಾರೆ..

More from Filmibeat

English summary
Kannada serial gattimela written updated on 3rd August
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X