Gattimela: ಯಾರ ಮಾತೂ ಕೇಳದೇ ತವರ ಮನೆಗೆ ಬಂದ ಅಮೂಲ್ಯ

By Poorva

ಸಾರ್ಥಕ್ ಮತ್ತು ವೇದಾಂತನ ತಂಗಿ ಪ್ಲಾನ್ ಮಾಡಿರುವ ಹಾಗೆ ಎಲ್ಲವೂ ನಡೆಯುತ್ತಿದೆ. ಅಮೂಲ್ಯ ಹಾಗೂ ವೇದಾಂತ್ ನನ್ನು ಸುಳ್ಳು ಹೇಳಿ ಒಂದು ರೆಸ್ಟೋರೆಂಟ್ ಗೆ ಕಳುಹಿಸಿರುತ್ತಾರೆ. ಇದರಿಂದ ಆದರೂ ಅವರಿಬ್ಬರ ಮುನಿಸು ದೂರ ಆಗಿ ಇಬ್ಬರು ಒಂದಾಗಿ ಇರಬೇಕು ಎನ್ನುವುದು ಇಬ್ಬರ ಬಯಕೆ ಕೂಡ. ಇನ್ನು ಈ ವಿಚಾರವನ್ನು ವೇದಾಂತ್ ತಂಗಿ ಅದಿತಿ ಬಳಿ ಫೋನ್ ಮಾಡಿ ಹೇಳುತ್ತಾಳೆ. ಅದಿತಿ ವಿಚಾರ ಗೊತ್ತಾಯಿತ, ಅಮ್ಮು ಮತ್ತು ವೇದಾಂತ್ ಅಣ್ಣ ಒಂದಾಗುವ ಸಮಯ ಬಂದುಬಿಟ್ಟಿದೆ, ನಾವು ಅವರನ್ನು ಹೋಟೆಲ್ ಗೆ ಈಗಾಗಲೇ ಕಳುಹಿಸಿಕೊಟ್ಟಿದ್ದೇವೆ, ಅವರಿಬ್ಬರೂ ಒಂದಾಗ ಬೇಕು ಬೇರೆ ಆಪ್ಷನ್ ಇಲ್ಲ ಎಂದು ಹೇಳುತ್ತಾಳೆ.

ಇನ್ನೂ ಮುಂದುವರಿದು ಮಾತನಾಡುವ ಅದಿತಿ ಅವರಿಬ್ಬರೂ ಒಂದಾಗಲಿ ಅತ್ತಿಗೆ, ಅದು ಅಲ್ಲದೆ ನಾವು ಲವ್ ಮಾಡಬೇಕು ಹೀಗೆ ಜೀವಿಸಬೇಕು ಎಂದು ಹೇಳಿಕೊಟ್ಟವರು ಅವರೇ, ಈಗ ಅವರೇ ಈ ತರ ಮಾಡಿದರೆ ನಂಬಿಕೆ ಹಾಳಾಗಿ ಹೋಗುತ್ತದೆ ಎಂದು ಹೇಳಿದಾಗ ತಂಗಿ ಅದಿತಿಗೆ ಚಿವುಟಿ, ಕೈ ಸನ್ನೆ ಮಾಡುತ್ತಾಳೆ. ಕೊನೆಗೆ ಅದಿತಿಗೆ ತಿಳಿಯದೇ ಇದ್ದಾಗ ಅಲ್ಲಿ ನೋಡು ಯಾರು ಇದ್ದಾರೆ ಎಂದು ಹೇಳುತ್ತಾಳೆ. ಎದುರು ಅಮ್ಮ ನಿಂತುಕೊಂಡು ಇರುವುದನ್ನು ನೋಡಿದ ಅದಿತಿ ಬೆಚ್ಚಿ ಬೀಳುತ್ತಾಳೆ.

ಇನ್ನು ಅದಿತಿ ಕರೆಯಲ್ಲೇ ಇದ್ದ ವೇದಾಂತ್ ತಂಗಿಗೆ ಅದಿತಿ ಇದನೆಲ್ಲ ಅಮ್ಮನಿಗೆ ಹೇಳುತ್ತೇನೆ ಬಾಯ್ ಎಂದು ಫೋನ್ ಇಡುತ್ತಾಳೆ. ಇನ್ನು ಅಮ್ಮನ ಮನವೊಲಿಕೆ ಮಾಡುವ ಸಲುವಾಗಿ ಅದಿತಿ ಅಮ್ಮ ನಿನಗೆ ಹ್ಯಾಪಿ ನ್ಯೂಸ್, ಅದೇನೆಂದರೆ ಸಾರ್ಥಕ್ ಅಣ್ಣ ಒಂದು ಪ್ಲಾನ್ ಮಾಡಿದ್ದಾರೆ ಅಂತೆ, ಅಮ್ಮು ಹಾಗೂ ವೇದಾತ್ ಬಾವನನ್ನು ಒಂದು ಮಾಡಲು ಇವತ್ತು ಅಮ್ಮು ಮತ್ತು ವೇದಾಂತ ಬಾವ ಒಟ್ಟಿಗೆ ಮನೆಗೆ ಬರುತ್ತಾರೆ ನೀವು ಎನು ಟೆನ್ಶನ್ ತೆಗೆದುಕೊಳ್ಳುವುದು ಬೇಡ ಎಂದು ಹೇಳುತ್ತಾಳೆ. ಇದನ್ನು ಕೇಳಿದ ಪರಿಮಳ ಕೊಂಚ ರಿಲೀಫ್ ಆಗುತ್ತದೆ.

ಅಮ್ಮನ ಮಾತು ಕೇಳಿ ಅದಿತಿ ಶಾಕ್

ಅಮ್ಮನ ಮಾತು ಕೇಳಿ ಅದಿತಿ ಶಾಕ್

ಬಳಿಕ ಪರಿಮಳ ನೀನು ಆದ್ಯಾ ಬಳಿ ಬೇರೆ ಏನೋ ಮಾತನಾಡಿದ ಹಾಗೆ ಅನ್ನಿಸುತ್ತಾ ಇತ್ತು ಎಂದಾಗ ಅದಿತಿಗೆ ಶಾಕ್ ಆಗುತ್ತದೆ. ಬೇರೆ ವಿಚಾರ ಏನಮ್ಮ ಎಂದು ಕೇಳುತ್ತಾಳೆ. ಅದಕ್ಕೆ ಪರಿಮಳ ಲವ್ ಮಾಡಲು ಅವರೇ ಸ್ಫೂರ್ತಿ ಎಂದು ಹೇಳುತ್ತ ಇದ್ದಿ ಅಲ್ವಾ ಅದರ ಬಗ್ಗೆ ಕೇಳುತ್ತಾ ಇದ್ದೀನಿ ಎಂದಾಗ ಅದಿತಿಗೆ ಏನು ಹೇಳಬೇಕೋ ತಿಳಿಯದಂತಾಗುತ್ತದೆ.

ಅದಿತಿ ಮೇಲೆ ಅನುಮಾನ ವ್ಯಕ್ತಪಡಿಸಿದ ಪರಿಮಳ

ಅದಿತಿ ಮೇಲೆ ಅನುಮಾನ ವ್ಯಕ್ತಪಡಿಸಿದ ಪರಿಮಳ

ಇನ್ನು ಪರಿಮಳ ಕೋಪದಿಂದ ನಿಜ ಹೇಳು ಅದಿತಿ ನೀನು ಲವ್ ಗಿವ್ ಎಂದು ತಲೆ ಕೆಡಿಸಿಕೊಂಡಿಲ್ಲ ಅಲ್ವಾ ಅದಿತ. ಎಂದಾಗ ಅಂಜಲಿ ಮೆತ್ತಗೆ ಅಮ್ಮನ ಬಳಿ ನಿಜ ಹೇಳು ಅಕ್ಕ ಎಂದಾಗ ಅದಿತಿಗೆ ಪಿತ್ತ ನೆತ್ತಿಗ್ಗೇರುತ್ತದೆ. ಅದಿತಿ ಅಮ್ಮನಿಗೆ ಅಮ್ಮ ನನಗೆ ಲವ್ ಗಿವ್ ಆಗಿಬರಲ್ಲ ಹಾಗೆಯೇ ನನಗೆ ಅದು ಸೆಟ್ಟು ಆಗಲ್ಲ, ಎಂದಾಗ ಪರಿಮಳ ಅಲ್ಲಿಂದ ಹೋಗುತ್ತಾಳೆ. ವೇದಾಂತ್ ಅಮೂಲ್ಯ ಬಳಿ ಇದೆಲ್ಲ ನನಗೆ ತಿಳಿದಿಲ್ಲ, ನಿನಗಾಗಿ ನಾನು ಇಂತಹ ಅರೇಂಜ್ ಮಾಡಿಯೇ ಇಲ್ಲ ಎಂದು ಹೇಳುತ್ತಾನೆ. ಇದನ್ನು ಕೇಳಿದ ಅಮ್ಮು ಸುಮ್ಮನಾಗುತ್ತಾಳೆ.

ಅಮ್ಮು ಜೊತೆ ಮನೆಗೆ ಬಂದ ವೇದಾಂತ

ಅಮ್ಮು ಜೊತೆ ಮನೆಗೆ ಬಂದ ವೇದಾಂತ

ಕೊನೆಗೆ ವೇದಾಂತ ಅಮ್ಮುವನ್ನು ಬಿಡಲು ಮನೆಗೆ ಬಂದಾಗ ಅಮೂಲ್ಯ ತಂದೆಗೆ ಬಹಳ ಖುಷಿಯಾಗಿ ಹೆಂಡತಿಯನ್ನು ಕರೆಯುತ್ತಾನೆ. ಅಮ್ಮು ಹಾಗೂ ವೇದಾಂತ್ ಒಟ್ಟಿಗೆ ಬಂದಿರುವುದನ್ನು ನೋಡಿ ಖುಷಿ ಪಡುತ್ತಾ ಇರುತ್ತಾಳೆ. ವೇದಾಂತ್ ಹಾಗೂ ಅಮೂಲ್ಯ ಒಂದಾಗಿದ್ದಾರೆ ಎಂದುಕೊಂಡು ಖುಷಿ ಪಡುತ್ತಾರೆ.

ಅಮ್ಮು ವೇದಾಂತನನ್ನು ನೋಡಿ ಖುಷಿಪಟ್ಟ ಪರಿಮಳ

ಅಮ್ಮು ವೇದಾಂತನನ್ನು ನೋಡಿ ಖುಷಿಪಟ್ಟ ಪರಿಮಳ

ಪರಿಮಳ ಆ ವೇಳೆ ದೇವರು ನನ್ನ ಕೈ ಬಿಡಲಿಲ್ಲ ಎಂದು ಹೇಳುತ್ತಾಳೆ. ಆದರೆ ಅಮ್ಮು ಹಾಗೂ ವೇದಾಂತ ಒಂದಾಗಿಲ್ಲ ಎಂಬ ಸತ್ಯ ಇನ್ನೂ ಅಮ್ಮು ತಂದೆ ತಾಯಿಗೆ ತಿಳಿದಿಲ್ಲ. ವೇದಾಂತ ಬಳಿ ಕುಳಿತುಕೋ ಬಾ ಎಂದು ಕರೆಯುತ್ತಾನೆ ಅಮ್ಮು ತಂದೆ . ಆದರೆ ವೇದಾಂತ ಇನ್ನೊಂದು ದಿನ ಬರುತ್ತೇನೆ ಎನ್ನುತ್ತಾನೆ. ಅಮ್ಮು ಬ್ಯಾಗ್ ತೆಗೆದುಕೊಂಡು ಬರಲು ಪರಿಮಳ ಅಂಜಲಿಗೆ ಹೇಳುತ್ತಾಳೆ. ಇದನ್ನು ಕೇಳಿದ ಅಮ್ಮು ನಾನು ಎಲ್ಲಿಗೂ ಹೋಗಲ್ಲ, ನಾನು ಹೋಗೋದಕ್ಕೆ ಇಲ್ಲಿ ಬಂದಿಲ್ಲ, ನಾನು ಇಲ್ಲಿ ಇರುವುದಕ್ಕೆ ಬಂದಿರುವುದು, ನನ್ನ ಇಲ್ಲಿ ತನಕ ಬಿಟ್ಟಿದ್ದಕ್ಕೆ ಥಾಂಕ್ಸ್ ನೀವು ಇನ್ನು ಇಲ್ಲಿಂದ ಹೊರಡಬಹುದು ಎಂದು ಹೇಳುತ್ತಾಳೆ. ಇದನ್ನು ಕೇಳಿದ ವೇದಾಂತ ಅಲ್ಲಿಂದ ಹೊರಟು ಹೋಗುತ್ತಾನೆ.. ಮುಂದೇನು ಕಾದು ನೋಡಬೇಕಿದೆ...

More from Filmibeat

English summary
Kannada serial Gattimela written update on 3rd January
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X