Gattimela: ಅಜ್ಜಿ ಮಾತಿಗೆ ಬೆರಗಾದ ಮಂಜುನಾಥ್ ದಂಪತಿ; ಕಣ್ಣು ಕಾಣಿಸುತ್ತಿರುವ ವಿಚಾರ ಅಮ್ಮು ಹೆತ್ತವರಿಗೆ ತಿಳಿಯುತ್ತಾ?

By Poorva
Kannada serial Gattimela written update on 3rd march

ಗಟ್ಟಿಮೇಳ ಧಾರವಾಹಿ ಅದ್ಭುತವಾಗಿ ಮೂಡಿ ಬರುತ್ತಿದ್ದು ಜನರನ್ನು ಆಕರ್ಷಿಸುವ ಹಾಗೆ ಮಾಡುತ್ತಿದೆ. ಈಗೀಗ ಆದ್ಯಾ ಪರ್ಸ್ ಕಳ್ಳತನ ಮಾಡಲಾಗಿದೆ. ಇದರಿಂದ ಆದ್ಯಾ ಜೋರಾಗಿ ಕಿರುಚುತ್ತಾ ಇರುತ್ತಾಳೆ. ಆದ್ಯಾ ಕಿರುಚಾಟ ಕಂಡು ಓಡೋಡಿ ಬಂದ ವೇದಾಂತ್ ಏನು ಎಂದಾಗ ಆದ್ಯಾ ಪರ್ಸ್ ಕಳವು ಆಗಿರುವ ಬಗ್ಗೆ ಹೇಳುತ್ತಾಳೆ. ಇದನ್ನು ಕೇಳಿದ ವೇದಾಂತ ಕಳ್ಳನನ್ನು ಬೆನ್ನಟ್ಟಿ ಹೋಗುತ್ತಾನೆ

ಆದರೆ ಕಾಂತ ಓಡಲು ಆಗದಿದ್ದರೂ ಓಡುತ್ತಾನೆ. ಯಾಕೆಂದರೆ ಬಾಸ್ ಕೈ ಗೆ ಸಿಕ್ಕಿ ಬಿದ್ದಿರೆ ಎಲ್ಲಾ ಖೇಲ್ ಖತಂ ಎಂಬುವುದು ಕಾಂತನಿಗೆ ಕೂಡಾ ತಿಳಿದಿದೆ. ಅದರಿಂದ ಜೋರಾಗಿ ಓಡಿ ಹೋಗುತ್ತಾನೆ. ಇನ್ನು ಅವರೆಲ್ಲ ಹೋದ ಬಳಿಕ ಅದಿತಿ ದ್ರುವನ ಬಳಿ ಓಡಿ ಬರುತ್ತಾಳೆ. ಅದಿತಿ ದ್ರುವನನ್ನು ಮುದ್ದಾಡುತ್ತಾ ಇರುತ್ತಾಳೆ. ದ್ರುವ ನೀನು ಇಲ್ಲದೆ ನನಗೆ ಏನೇನೋ ಇಲ್ಲ, ನೀನು ಇದೀಗ ಕೊಂಚ ಮಟ್ಟಿಗೆ ಸರಿ ಹೋಗುತ್ತಾ ಇದ್ದೀಯಾ ಇಂತಹ ಸಂದರ್ಭದಲ್ಲಿ ನನ್ನ ಪ್ರೀತಿ ವಿಚಾರ ನಿನ್ನ ಬಳಿ ಹೇಳಿದರೆ ನಿನಗೆ ಬಹಳ ತೊಂದರೆ ಕೊಡುತ್ತಾರೆ, ಸುಹಾಸಿನಿ ನಿನ್ನ ಜೀವ ತೆಗೆಯಲು ಹಿಂಜರಿಯಲ್ಲ ಹಾಗೆಯೇ ಆಕೆ ನಮ್ಮಿಬ್ಬರನ್ನು ಹೇಗೆ ದೂರ ಮಾಡಬಹುದು ಎಂದು ಯೋಚನೆ ಮಾಡುತ್ತಾಳೆ, ನನ್ನ ಅಕ್ಕಂದಿರು ನಿಮ್ಮ ಮನೆಯ ಸೊಸೆ ಆಗಿದ್ದಕ್ಕೆ ಇಷ್ಟೆಲ್ಲ ಹಂಗಿಸಿ ಮಾತನಾಡುತ್ತಾರೆ ಅಂತಹದರಲ್ಲಿ ಇದೀಗ ಮೂರನೆಯವಳು ಕೂಡ ನನ್ನ ಮಗನನ್ನು ಬುಟ್ಟಿಗೆ ಹಾಕಿಕೊಂಡು ಬಿಟ್ಟಳಲ್ಲ ಎಂದೆಲ್ಲ ಆಡಿಕೊಳ್ಳುತ್ತಾರೆ ಎಂದು ಬೇಸರ ಪಟ್ಟುಕೊಂಡು ಇರುತ್ತಾಳೆ .

ಬಳಿಕ ದ್ರುವನ ಬಳಿ ಹರಟೆ ಹೊಡೆದುಕೊಂಡು ಇರುತ್ತಾಳೆ. ಇತ್ತ ವೇದಾಂತ ಕಳ್ಳನನ್ನು ಓಡಿಸಿಕೊಂಡು ಹೋಗುವ ಭರದಲ್ಲಿ ದ್ರುವನನ್ನು ಮರೆತೇ ಬಿಟ್ಟಿರುತ್ತಾನೆ. ಇನ್ನು ಮಂಜುನಾಥ್ ಹಾಗೂ ಪರಿಮಳ ತಮ್ಮ ಮಕ್ಕಳ ಬಳಿ ಸೀಮಂತದ ವಿಚಾರ ಮಾತನಾಡುತ್ತಾ ಹೀಗೆ ಬೇರೆ ವಿಚಾರದ ಬಗ್ಗೆಯೂ ಮಾತನಾಡುತ್ತಾರೆ. ಪರಿಮಳ ತನ್ನ ಮಕ್ಕಳನ್ನು ಹಾಡಿ ಹೋಗಳುತ್ತಾರೆ. ತನ್ನ ಮಕ್ಕಳು ಮದುವೆ ಆದ ಬಳಿಕ ನಮಗೆ ಒಂದು ಸೈಟ್ ಕೊಡಿಸಿದ್ದಾರೆ ಇನ್ನೂ ಮನೆ ಬೇರೆ ಕಟ್ಟಿಸಿಕೊಡುತ್ತೇನೆ ಎಂದು ಹೇಳುತ್ತಿದ್ದಾರೆ.

ಆದರೆ ನಮಗೆ ಸೈಟ್ ಕೊಡಿಸಿ ಬಹಳ ಉಪಕಾರ ಮಾಡಿದ್ದೀರಾ ಯಾವ ಮಕ್ಕಳು ಕೂಡ ಮಾಡದ ಕೆಲಸ ನೀವು ಮಾಡಿದ್ದೀರಾ ಆ ಬಗ್ಗೆ ನಮಗೆ ಖುಷಿ ಇದೆ ಆದರೆ ಮನೆ ಕಟ್ಟಲು ನೀವು ಕಷ್ಟ ತೆಗೆದುಕೊಳ್ಳುವುದು ಬೇಡ ನಿಮ್ಮ ಅಪ್ಪ ಬ್ಯಾಂಕ್ ನಲ್ಲಿ ಲೋನ್ ಗೆ ಅಪ್ಲೈ ಮಾಡಿದ್ದಾರೆ ಅದು ಸಿಕ್ಕಾ ಕೂಡಲೇ ಮನೇನ ಕೆಲಸ ಶುರು ಮಾಡುತ್ತೇವೆ ಈಗ ನಿನ್ನ ತಂದೆಗೆ ಒಳ್ಳೆಯ ಕೆಲಸ ಇದೆ ಏನು ಚಿಂತೆ ಮಾಡುವ ಅಗತ್ಯ ಇಲ್ಲ ಎಂದು ಹೇಳುತ್ತಾರೆ. ಇದನ್ನು ಕೇಳಿ ಅಮ್ಮು ಹಾಗೂ ಆರತಿಗೆ ಬಹಳ ಖುಷಿ ಆಗುತ್ತದೆ. ಬಳಿಕ ಅಮ್ಮು ಮತ್ತು ಆರತಿ ಬಳಿ ಏನೇನೋ ಮಾತನಾಡುತ್ತಾ ಇರುವ ವೇಳೆ ಸುಹಾಸಿನಿ ಬರುತ್ತಾಳೆ..

ಏನು ಗಂಡ ಹೆಂಡತಿ ಇಬ್ಬರೂ ಬಂದಿದ್ದಾರೆ ಎಂದೆಲ್ಲ ಹೇಳುತ್ತಾಳೆ. ಬಳಿಕ ಆರತಿ ಮುಖ ನೋಡಿ ಏನು ಆರತಿ ನಿಮ್ಮ ಅಪ್ಪ ಅಮ್ಮ ಬರುತ್ತಾರೆ ಎಂದು ನನಗೆ ಹೇಳಿಯೇ ಇಲ್ಲ ಎಂದು ಹೇಳಿದಾಗ ಆರತಿ ಸುಮ್ಮನಾಗುತ್ತಾಳೆ. ಆದರೆ ಮಾತು ಮುಂದುವರೆಸಿದ ಸುಹಾಸಿನಿ ಏನು ಎಲ್ಲಾ ಮಕ್ಕಳೇ ಕೊಟ್ಟಿದ್ದಾರೆ, ಇನ್ನೇನು ಎಲ್ಲಾ ತಗೊಂಡು ಹೋಗಲು ಬಂದಿದ್ದೀರಾ, ಅಲ್ಲಿದ್ದ ಹಣ್ಣು ಹಂಪಲು ತೆಗೆದುಕೊಂಡು ಹೋಗಿ ಹಾಗೆಯೇ ಇವರಿಗೆ ಏನೇನು ಬೇಕು ಅದೆಲ್ಲವನ್ನೂ ಅವರಿಗೆ ಕೊಡಿ ನಿಮ್ಮ ಗಂಡನ ಮನೆ ಆಸ್ತಿ ಏನು ಕರಗಿ ಹೋಗಲ್ಲ ಎಂದು ಹೇಳಿದಾಗ ಅಮೂಲ್ಯ ಗೆ ಸಿಟ್ಟು ಬಂದು ಸುಹಾಸಿನಿಯನ್ನು ತರಾಟೆಗೆ ತೆಗೆದುಕೊಳ್ಳಲು ಬರುತ್ತಾಳೆ.

ಈ ಸಂದರ್ಭದಲ್ಲಿ ಪರಿಮಳ ತಡೆಯುತ್ತಾಳೆ. ನಮಗೆ ಏನೂ ಬೇಡ ಹೆಣ್ಣು ಹಂಪಲು ಮನೆಯಲ್ಲಿ ಬೇಕಾದಷ್ಟು ಇದೆ, ಅದಿತಿ ಅನನ್ಯ ತಿನ್ನುತ್ತಾರೆ ಎಂದಾಗ ಸುಹಾಸಿನಿ ಮಾತನಾಡದೆ ಮಂಜುನಾಥ್ ಕಡೆ ನೋಡಿ ಮಂಜು ಅವರೇ ನೀವು ಮೊನ್ನೆ ಜೈಲಿಗೆ ಹೋಗಿ ಬಂದಿದ್ದೀರಿ ಅಂತೆ ಎಂದು ಕೇಳುತ್ತಾಳೆ. ಅದನ್ನು ಕೇಳಿದ ಮಂಜು ಹೌದು ಎಂದು ಸುಹಾಸಿನಿ ಬಳಿ ಹೇಳಿ ಹೊರಡಲು ಅನುವಾಗುತ್ತಾನೆ. ಇನ್ನು ಮಂಜುನಾಥ ಹಾಗೂ ಪರಿಮಳ ಮನೆಯಿಂದ ಹೊರಗೆ ಬಂದಾಗ ಅಜ್ಜಿ ಸಿಗುತ್ತಾರೆ. ಅರೆ ಅರೆ ನೀವು ಯಾವಾಗ ಬಂದಿರಿ ಎಂದು ಕೇಳಿದಾಗ ಇಬ್ಬರು ಅವಕ್ಕಾಗುತ್ತಾರೆ. ಇವರಿಗೆ ಕಣ್ಣು ಕಾಣುವುದಿಲ್ಲ ಅಲ್ವಾ ಆದರೂ ಹೇಗೆ ಈಗ ಕಾಣಿಸುತ್ತಟಾ ಇದೆ ಎಂದು ಯೋಚನೆ ಮಾಡುತ್ತಾ ಇರುತ್ತಾರೆ. ಮುಂದೇನು ಕಾದು ಮಾಡಬೇಕಿದೆ

More from Filmibeat

English summary
Kannada serial Gattimela written update on 3rd march
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X