Gattimela: ರಟ್ಟಾಯ್ತಾ ಅದಿತಿ ಧ್ರುವನ ಲವ್ ಸ್ಟೋರಿ? ಮುಂದೇನು ಮಾಡುತ್ತಾಳೆ ಅಮೂಲ್ಯ ?

By ಪೂರ್ವ

ಗಟ್ಟಿಮೇಳ ಧಾರವಾಹಿ ಅದ್ಭುತವಾಗಿ ಮೂಡಿ ಬರುತ್ತಿದ್ದು ನೋಡುಗರ ಮನಸೂರೆಗೊಂಡಿದೆ. ಇದೀಗ ಧ್ರುವನ ಕೆನ್ನೆ ಮೇಲೆ ಇನ್ನೊಮ್ಮೆ ಲಿಪ್ ಸ್ಟಿಕ್ ಮಾರ್ಕ್ ಕಂಡು ಬಂದಿದೆ. ಇದನ್ನು ಕಂಡ ಮನೆ ಮಂದಿಗೆ ಶಾಕ್ ಆಗಿದೆ. ಅಮೂಲ್ಯ ನೀವು ಇಬ್ಬರು ಇದ್ದರೂ ಅದು ಹೇಗೆ ದ್ರುವನ ಹುಡುಗಿ ಬರಲು ಸಾಧ್ಯ, ಹೀಗೆ ಮುತ್ತು ಕೊಡಲು ಸಾಧ್ಯ ಎಂದೆಲ್ಲ ಪ್ರಶ್ನೆ ಮಾಡುತ್ತಾಳೆ.

ಆದ್ಯಾ ಪರ್ಸ್ ಕಳ್ಳ ಎಗರಿಸಿದ ಆ ಕಾರಣಕ್ಕೆ ನಮಗೆ ದ್ರುವನ ಹತ್ತಿರ ಜಾಸ್ತಿ ಗಮನ ಕೊಡಲು ಆಗಲಿಲ್ಲ, ಯಾರೇ ಆಗಿರಲಿ ಆತನನ್ನು ಸುಮ್ಮನೆ ಬಿಡುವುದು ಇಲ್ಲ ಎಂದು ವೇದಾಂತ್ ಹೇಳಿದಾಗ ಅಲ್ಲಿಯೇ ಇದ್ದ ಕಾಂತ ಯಾಕೆ ಸರ್ ಬಯ್ಯಬೇಡಿ ಆತನಿಗೆ ಏನು ಕಷ್ಟ ಇತ್ತೋ ಏನೋ ಎಂದು ಮಾತನಾಡಿಕೊಳ್ಳುತ್ತಾನೆ. ಇದನ್ನು ಕೇಳಿದ ಅಮೂಲ್ಯ ಏನು ಕಾಂತ ನೀನು ಅವನ ಪರವಾಗಿ ಮಾತನಾಡುತ್ತಾ ಇದ್ದೀಯಾ ಎಂದೆಲ್ಲ ಕೇಳಿದಾಗ ಕಾಂತ ಮಾತ್ರ ಸುಮ್ಮನೆ ಇರದೆ ಏನೇನೋ ಮಾತನಾಡಿಬಿಡುತ್ತಾನೆ.

Kannada serial Gattimela written update on 6th march

ಬಳಿಕ ಆದ್ಯ ಅಣ್ಣ ಕಳ್ಳನನ್ನು ಓಡಿಸಿಕೊಂಡು ಹೋದ ಪರ್ಸ್ ಕಳವು ಆದಾಗಿನಿಂದ ನಾನು ಆ ಟೆನ್ಶನ್ ನಲ್ಲಿ ಇದ್ದೆ ಆದರೆ ಆ ಟೈಮ್ ನಲ್ಲಿ ಆತನ ಗೆಳತಿ ಬರುತ್ತಾರಾ ಎಂಬುವುದು ನನಗೆ ತಿಳಿದು ಕೂಡ ಇರಲಿಲ್ಲ ಎಂದೆಲ್ಲ ಯೋಚನೆ ಮಾಡುತ್ತ ಇರುವಾಗ ಅಮೂಲ್ಯ ದ್ರುವನಿಗೆ ಹುಡುಗಿ ಹುಡುಕುತ್ತಾ ಇದ್ದೇವೆ ಎಂದೆಲ್ಲ ಅಡ್ವಟೈಸ್ ಮೆಂಟ್ ಕೊಡೋಣ ಎಂದು ಹೇಳ್ತಾಳೆ. ಇದನ್ನು ಕೇಳಿ ಮನೆ ಮಂದಿ ಎಲ್ಲಾ ಒಪ್ಪಿಕೊಳ್ಳುತ್ತಾರೆ.

ವೇದಾಂತ ಕುಳಿತು ಕೆಲಸ ಮಾಡುತ್ತಾ ಇರುವಾಗ ಅಲ್ಲಿಗೆ ಅಮ್ಮು ಬಂದು ಪಾಲಿಶ್ ಹಚ್ಚುತ್ತಾ ಇರುತ್ತಾಳೆ. ದ್ರುವನ ಮದುವೆ ಈಗ ಹತ್ತಿರದಲ್ಲಿ ಇದೆ ನಾನು ಹೊಸ ಬಟ್ಟೆ ಖರೀದಿ ಮಾಡಬೇಕು, ನನಗೆ ದುಬಾರಿ ಸೀರೆ ಬೇಕು ಎಂದೆಲ್ಲ ಹಟ ಹಿಡಿಯುತ್ತಾಳೆ. ಇದನ್ನು ಕೇಳಿ ವೇದಾಂತ ದುಬಾರಿ ಸೀರೆ ಬೇಡ ಅದರ ಬದಲು ಸಣ್ಣ ಮೊತ್ತದ ಸೀರೆ ತೆಗಿ ಉಳಿದ ಹಣದಿಂದ ಅನಾಥ ಆಶ್ರಮಕ್ಕೆ ಏನಾದರು ಕೊಡೋಣ ಎಂದು ಹೇಳುತ್ತಾನೆ.

Kannada serial Gattimela written update on 6th march

ಅದನ್ನು ಕೇಳಿದ ಅಮ್ಮು ಅನಾಥ ಆಶ್ರಮಕ್ಕೆ ಕೊಡೋಣ ಹಾಗೆಯೇ ನನಗೆ ಸೀರೆ ಬೇಕೇ ಬೇಕು ಎಂದು ಹಠ ಹಿಡಿಯುತ್ತಾಳೆ. ಬಳಿಕ ಆಯಿತು ಎಂದು ಒಪ್ಪಿಕೊಳ್ಳುತ್ತಾನೆ. ಇನ್ನು ಅದಿತಿಗೆ ದ್ರುವ ಹತ್ತಿರ ಬಂದು ಕುಳಿತು ಇರುವ ಹಾಗೆ ಭಾಸ ಆಗುತ್ತದೆ. ಆತ ಮುತ್ತಿನ ಮಳೆಯನ್ನು ನೀಡಿದ ಹಾಗೆ ಬಾಸ ಆಗುತ್ತದೆ. ಆದರೆ ಎದುರಲ್ಲಿ ಇದ್ದ ಅನನ್ಯ ಅದಿತಿ ಮಾಡುತ್ತಿರುವುದನ್ನು ನೋಡಿ ಶಾಕ್ ನಲ್ಲಿ ಜೋರಾಗಿ ಕಿರುಚುತ್ತ ಇರುವುದನ್ನು ನೋಡಿ ಅದಿತಿ ವಾಸ್ತವಕ್ಕೆ ಬರುತ್ತಾಳೆ. ಬಳಿಕ ಅದಿತಿ ಮಲಗಿ ಬಿಡುತ್ತಾಳೆ

ಅದಿತಿಯನ್ನು ನೋಡಿ ಜೋರಾಗಿ ನಗುತ್ತಲೇ ಮಲಗುತ್ತಾಳೆ ಅನನ್ಯ. ಇನ್ನು ಅದಿತಿ ಟಿವಿಯಲ್ಲಿ ಬರುತ್ತಾ ಇದ್ದಾಳೆ ಎಂದು ಆಕೆಯ ಗೆಳತಿ ಅಮ್ಮುಗೆ ಕರೆ ಮಾಡಿ ಹೇಳುತ್ತಾಳೆ. ಗೆಳತಿಯ ಮಾತು ಕೇಳಿ ಟಿವಿ ನೋಡಿದ ಅಮೂಲ್ಯಗೆ ಶಾಕ್ ಕಾದಿತ್ತು. ಅದಿತಿ ಆಕೆ ಲವ್ ಮಾಡುತ್ತಾ ಇರುವ ಹುಡುಗನ ಬಗ್ಗೆ ಹೇಳುತ್ತ ಇರುತ್ತಾಳೆ. ದ್ರುವನ ನೋಡಲು ಅದಿತಿ ವೇದಾಂತನ ಮನೆಗೆ ಬರುತ್ತಾಳೆ. ಅದಿತಿಯನ್ನು ನೋಡಿದ ಮನೆ ಮಂದಿಗೆ ಸರ್ಪ್ರೈಸ್ ಆಗುತ್ತದೆ. ಯಾರು ಇಲ್ಲದ ವೇಳೆ ಅದಿತಿ ದ್ರುವನಿಗೆ ಮುತ್ತು ಕೊಡುತ್ತಾ ಇರುತ್ತಾಳೆ. ಬಳಿಕ ಎಲ್ಲರೂ ಬರುತ್ತಾರೆ.

ದ್ರುವನಿಗೆ ಇದ್ಯಾರು ಮುತ್ತು ಕೊಟ್ಟಿದ್ದು ಎಂದು ಶಾಕ್ ಆಗುತ್ತದೆ. ಬಳಿಕ ಇದನ್ನೆಲ್ಲ ನೋಡಿ ಅಮ್ಮು ಅದಿತಿಯನ್ನು ಕರೆದುಕೊಂಡು ಹೋಗುತ್ತಾಳೆ. ಅಮ್ಮು ಅದಿತಿ ಬಳಿ ನೀನು ಪ್ರೀತಿ ಮಾಡುತ್ತಾ ಹುಡುಗ ಯಾರು ಎಂದೆಲ್ಲ ಜೋರಾಗಿ ಕೇಳುತ್ತಾಳೆ. ಅದನ್ನು ಕೇಳಿ ಅದಿತಿ ದ್ರುವನ ಹೆಸರು ಬಾಯಿ ಬಿಡುತ್ತಾಳೆ. ಮುಂದೇನು ಕಾದು ನೋಡಬೇಕಿದೆ.

More from Filmibeat

English summary
Kannada serial gattimela written updated on 6th March.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X