Gattimela: ಅದಿತಿ ಕಂಡು ಶಾಕ್ ಆದ ಸುಹಾಸಿನಿ; ತಲೆಕೆಳಗಾದ ಸುಹಾಸಿನಿ ಪ್ಲಾನ್!
ಗಟ್ಟಿಮೇಳ ಧಾರವಾಹಿ ಅದ್ಭುತವಾಗಿ ಮೂಡಿ ಬರುತ್ತಿದ್ದು ನೋಡುಗರ ಮನ ಸೆಳೆಯುವ ಹಾಗೆ ಮಾಡುತ್ತಿದೆ. ಇದೀಗ ಸುಹಾಸಿನಿ ತಮ್ಮೆಲ್ಲರ ಜೊತೆ ಆಟ ಆಡುತ್ತಿದ್ದಾಳೆ ಎಂಬುದು ಅಮೂಲ್ಯಗೆ ತಿಳಿದು ಹೋಗಿದೆ. ಮನೆಯವರು ಒಟ್ಟು ಸೇರಿ ಅದಿತಿಯೇ ದ್ರುವನನ್ನು ಇಷ್ಟ ಪಡುತ್ತಾ ಇರುವ ವಿಚಾರವನ್ನು ವೇದಾಂತನ ಬಳಿ ಹೇಳಬೇಕು ಇಲ್ಲವಾದರೆ ಬಹಳ ಕಷ್ಟ ಆಗುತ್ತದೆ ಎಂದು ಮನದಲ್ಲಿ ಯೋಚನೆ ಮಾಡುತ್ತಾ ಇರುತ್ತಾರೆ.
ಇನ್ನು ಸುಹಾಸಿನಿ ವೇದಾಂತನನ್ನು ಕರೆದು ನನಗೆ ತಿಳಿದಿದೆ ದ್ರುವನನ್ನು ಯಾರು ಇಷ್ಟ ಪಡುತ್ತಾ ಇದ್ದಾರೆ ಎಂದಾಗ ವೇದಾಂತ್ ಶಾಕ್ ಆಗುತ್ತಾನೆ. ಯಾರು ಎಂದಾಗ ಮಾತ್ರ ಸುಹಾಸಿನಿ ನಾಟಕೀಯವಾಗಿ ಆಕೆ ಒಂದು ಜಾಗವನ್ನು ವೇದಾಂತನಿಗೆ ಹೇಳುತ್ತಾಳೆ. ವೇದಾಂತ ಅಲ್ಲಿಗೆ ಹೋಗಲು ರೆಡಿ ಆಗುತ್ತಾನೆ. ಇದನ್ನು ನೋಡಿದ ಅಮೂಲ್ಯ ಏನು ಮಾಡುವುದು ಎಂದು ತಿಳಿಯದೇ ದ್ರುವನ ಹುಡುಗಿ ನೋಡಲು ಹೋಗುವ ವೇಳೆ ವೇದಾಂತನ ಬಳಿ ಮಾತನಾಡುತ್ತಾಳೆ.

ವೇದಾಂತ ನನಗೆ ಒಂದು ವಿಚಾರ ತಿಳಿದಿದೆ ಅದು ಏನೆಂದರೆ ರಾಜಣ್ಣನ ಯಾರು ಲವ್ ಮಾಡುತ್ತಾ ಇದ್ದಾರೆ ಎಂಬುವುದು ನಾನು ಒಂದು ಲೊಕೇಶನ್ ಕಳುಹಿಸುತ್ತೇನೆ ಅಲ್ಲಿಗೆ ಹೋಗಿ ಎಂದು ಹೇಳಿ ವೇದಾಂತನನ್ನು ಕಳುಹಿಸಿ ಕೊಡುತ್ತಾರೆ. ಇನ್ನು ವೇದಾಂತ ಸುಹಾಸಿನಿ ಹೇಳಿದ ಮಾತನ್ನು ಕೇಳಿಕೊಂಡು ಹುಡುಗಿ ನೋಡಲು ಹೋಗುತ್ತಾನೆ. ಆದರೆ ಈ ವಿಚಾರ ತಿಳಿದ ಅಮ್ಮು ವೇದಾಂತನಿಗೆ ಕರೆ ಮಾಡಿ ಹೇಳುತ್ತಾಳೆ ಲೊಕೇಶನ್ ಚೇಂಜ್ ಆಗಿದೆ. ನಾನು ಅದನ್ನು ಸೆಂಡ್ ಮಾಡಿದ್ದೇನೆ ಎಂದು ಹೇಳುತ್ತಾಳೆ.
ಇದನ್ನು ಕೇಳಿದ ವೇದಾಂತ ಅಮೂಲ್ಯ ಹೇಳಿದ ಜಾಗಕ್ಕೆ ಹೋಗುತ್ತಾನೆ . ಇನ್ನು ವೇದಾಂತ ಎಂದು ಗೊತ್ತಿಲ್ಲದೆ ಅದಿತಿ ವೇದಾಂತನ ಬಳಿ ಮಾತು ಶುರು ಮಾಡುತ್ತಾಳೆ. ನೀವು ವೇದಾಂತ ಅವರಿಗೆ ಬಹಳ ಹತ್ತಿರದ ಪರಿಚಯದವರು ಎಂದು ಕೊಂಡಿದ್ದೇನೆ ಅದಕ್ಕೆ ನಿಮ್ಮ ಬಳಿ ದ್ರುವ ಹಾಗೂ ನನ್ನ ಲವ್ ಸ್ಟೋರಿ ಹೇಳುತ್ತ ಇದ್ದೇನೆ. ದಯಮಾಡಿ ನನ್ನ ಪ್ರೀತಿಯನ್ನು ಉಳಿಸಿಕೊಡಿ ಎಂದು ಅಂಗಲಾಚುತ್ತಾಳೆ.

ಆಗ ವೇದಾಂತ ಹಿಂದೆ ತಿರುಗಿ ನೋಡಿದಾಗ ಅದು ಅದಿತಿ ಆಗಿರುವುದನ್ನು ನೋಡಿ ಇನ್ನೂ ಖುಷಿ ಪಡುತ್ತಾನೆ. ಅದಿತಿ ನೀನಾ ಎಂದು ಉದ್ಗಾರದಿಂದ ಕೇಳುತ್ತಾನೆ. ಅದಕ್ಕೆ ಅದಿತಿ ನಾನೇ ಎಂದು ಹೇಳಿದಾಗ ವೇದಾಂತ ಬಹಳ ಖುಷಿ ವ್ಯಕ್ತ ಪಡಿಸುತ್ತಾನೆ. ಬಳಿಕ ಯಾವಾಗಿನಿಂದ ಪ್ರೀತಿ ಶುರುವಾಯಿತು ಎಂದು ಪ್ರಶ್ನೆ ಮಾಡಿದ ವೇಳೆ ಅದಿತಿ ಎಲ್ಲಾ ವಿಚಾರವನ್ನು ಆತನ ಮುಂದೆ ಬಿಚ್ಚಿಡುತ್ತಾಳೆ. ಜೊತೆಗೆ ತನ್ನ ತಂದೆ ತಾಯಿಗೆ ಈ ಮದುವೆ ಇಷ್ಟ ಇಲ್ಲ ಎಂದು ಹೇಳುತ್ತಾಳೆ.
ಇದನ್ನು ಕೇಳಿದ ವೇದಂತನಿಗೆ ಕೊಂಚ ಶಾಕ್ ಆದ್ರೂ ಸುಮ್ಮನೆ ಇರುತ್ತಾನೆ. ಹೇಗಾದರೂ ಮಾಡಿ ಮಾವನನ್ನು ಒಪ್ಪಿಸುವ ಭರವಸೆ ನೀಡುತ್ತಾನೆ. ಇನ್ನು ಮನೆಗೆ ಬಂದ ವೇದಾಂತ ನೋಡಿ ಸುಹಾಸಿನಿ ಬಹಳ ಖುಷಿಯಲ್ಲಿ ಇರುತ್ತಾಳೆ. ವೇದಾಂತ ಎಲ್ಲರನ್ನೂ ಕರೆದು ಕಣ್ಣು ಮುಚ್ಚುವ ಹಾಗೆ ಮಾಡುತ್ತಾನೆ. ಬಳಿಕ ಅದಿತಿಯನ್ನು ಕರೆದುಕೊಂಡು ಮನೆಗೆ ಬರುತ್ತಾನೆ
ಮನೆ ಮಂದಿಗೆ ಅದಿತಿ ಕಂಡು ಬಹಳ ಕುತೂಹಲ. ಎಲ್ಲರೂ ಖುಷಿ ಆದರೆ ಸುಹಾಸಿನಿ ಶಾಕ್ ಆಗುತ್ತಾಳೆ.


Click it and Unblock the Notifications











