Gattimela: ತಂದೆ ಬಳಿ ಪ್ರಮಾಣ ಮಾಡಿದ ಅಮೂಲ್ಯ ಅದಿತಿ ಧ್ರುವನನ್ನು ದೂರ ಮಾಡ್ತಾಳ?
ಅಮೂಲ್ಯ ಅದಿತಿ ಬಳಿ ಮಾತನಾಡಬೇಕು ಎಂದು ಮನೆಗೆ ಕರೆಯಿಸುತ್ತಾಳೆ. ಅದಿತಿ ಮನೆಗೆ ಬಂದು ತನ್ನ ಅಕ್ಕನನ್ನು ಕರೆಯುತ್ತಾಳೆ. ಆದರೆ ಯಾರು ಮನೆಯಿಂದ ಹೊರ ಬರುವುದಿಲ್ಲ. ಆಗ ಅದಿತಿಗೆ ದ್ರುವ ಎದುರಲ್ಲೇ ಕುಳಿತಿರುವುದು ಕಂಡು ದ್ರುವ ಬಳಿ ಮಾತನಾಡಿಸಿ ಆತನ ಕೆನ್ನೆಯ ಮೇಲೆ ಮುತ್ತನ್ನು ನೀಡುತ್ತಾಳೆ. ಆ ವೇಳೆ ಅಲ್ಲಿಗೆ ಆದ್ಯ ದ್ರುವನಿಗೆ ನೀರು ತೆಗೆದುಕೊಂಡು ಬರುತ್ತಾಳೆ. ಆದ್ಯ ಅದುತಿಯನ್ನು ಕಂಡು ಕಾಲು ಎಳೆಯುತ್ತಾಳೆ. ಏನು ದ್ರುವನ ನೋಡಬೇಕು ಅನ್ನಿಸಿ ಬಿಟ್ಟಿತಾ ಅದಿತಿ ಅದಕ್ಕೆ ಬಂದಿಯಾ ಎಂದು ಕೇಳುತ್ತಾಳೆ.
ಅದನ್ನು ಕೇಳಿ ಅದಿತಿ ಹಾಗೇನೂ ಇಲ್ಲ ಅಕ್ಕ ನನ್ನ ಬಳಿ ಏನೋ ಮಾತನಾಡಬೇಕು ಎಂದು ಕರೆದಳು ಅದಕ್ಕೆ ಬಂದೆ ಎಂದು ಹೇಳುತ್ತಾಳೆ. ಇದನ್ನು ಕೇಳಿದ ಆದ್ಯ ಸುಮ್ಮನೆ ಆಗುತ್ತಾಳೆ. ಅಷ್ಟರಲ್ಲಿ ಅಲ್ಲಿಗೆ ವೇದಾಂತ ಹಾಗೂ ಅಮೂಲ್ಯ ಬರುತ್ತಾರೆ. ವೇದಾಂತ ಬರುವಾಗಲೇ ಗೊಣಗುತ್ತ ಬರುತ್ತಾನೆ. ಈ ಬಾರಿ ಹೇಗಾದರೂ ದ್ರುವನ ಹುಡುಗಿನ ಹುಡುಕಬೇಕಿದೆ ಎಂದೆಲ್ಲ ಹೇಳುವಾಗ ದ್ರುವನ ಕೆನ್ನೆಯ ಮೇಲೆ ಮುತ್ತಿನ ಗುರುತು ಕಾಣುತ್ತದೆ.

ಇದೇನು ಆದ್ಯ ಇಲ್ಲಿಗೆ ಕೂಡ ದ್ರುವ. ಹುಡುಗಿ ಬಂದೇ ಬಿಟ್ಟಳಾ ಎಂದಾಗ ಆದ್ಯ ತಾನೇ ಮುತ್ತುಕೊಟ್ಟಿದ್ದು ಎಂದು ಸುಳ್ಳು ಹೇಳುತ್ತಾಳೆ. ಇದನ್ನು ನೋಡಿದ ಅದಿತಿ ಬೆವರು ಒರೆಸಿಕೊಳ್ಳುತ್ತಾ ಇರುತ್ತಾಳೆ. ಇದನ್ನು ನೋಡಿದ ಅಮೂಲ್ಯ ಅದಿತಿಯನ್ನು ಒಳಗೆ ಕರೆಯುತ್ತಾಳೆ. ರೂಂನಲ್ಲಿ ಕುಳಿತಿದ್ದ ಅದಿತಿಗೆ ಆಕೆ ಲವ್ ಬಗ್ಗೆ ಮಾತನಾಡಿದ ವಿಡಿಯೋ ತೋರಿಸಿ ಇದೇನಿದು ಅದಿತಿ ಎಂದಾಗ ಅದಿತಿ ತಾನು ದ್ರುವನನ್ನು ಇಷ್ಟ ಪಡುತ್ತಿರುವ ವಿಚಾರವನ್ನು ಹೇಳುತ್ತಾಳೆ.
ಆಗ ಅಮ್ಮುಗೆ ಬಹಳ ಖುಷಿ ಆಗುತ್ತದೆ. ಆ ವೇಳೆ ಅಮ್ಮುಗೆ ತಂದೆಯ ಕರೆಯು ಬರುತ್ತದೆ. ಮಂಜುನಾಥ್ ಬಳಿ ಆತನ ಗೆಳೆಯ ಬಂದು ಏನು ಮಂಜುನಾಥ್ ಹೇಗಿದ್ದಿ, ನಿನ್ನ ಮೂರನೇ ಮಗಳು ಅದಿತಿ ದ್ರುವ ಎನ್ನುವ ಹುಡುಗನ ಒಟ್ಟಿಗೆ ಓಡಾಡುತ್ತಾ ಇದ್ದಳು ಎಂದು ಹೇಳಿರುತ್ತಾನೆ. ಇದನ್ನು ಕೇಳಿದ ಮಂಜುನಾಥ್ ಅಮ್ಮುಗೆ ಕರೆ ಮಾಡಿ ಮಾತನಾಡಬೇಕು ನನಗೆ ಸಿಗುತ್ತಿಯಾ ಎಂದು ಹೇಳುತ್ತಾನೆ. ಆಯಿತು ಎಂದು ಅಮ್ಮು ಒಪ್ಪಿಕೊಳ್ಳುತ್ತಾಳೆ.

ಆ ಬಳಿಕ ಅದಿತಿ ಬಳಿ ಅಮ್ಮು ದ್ರುವ ಹಾಗೂ ನಿನ್ನ ಒಂದು ಮಾಡೇ ಮಾಡುತ್ತೇನೆ ಎಂದು ಹೇಳಿ ಕಳುಹಿಸಿ ತಂದೆಯನ್ನು ನೋಡಲು ಹೋಗುತ್ತಾಳೆ. ಇನ್ನು ಮಂಜುನಾಥ್ ತನ್ನ ಮಗಳ ಬಳಿ ಮಾತನಾಡಲು ಬರುತ್ತಾನೆ. ಅದು ಬೇರೆ ಏನು ವಿಚಾರ ಅಲ್ಲ ಅದಿತಿ ಮದುವೆ ವಿಚಾರ ಅದಿತಿ ನಮ್ಮ ಅಂತಸ್ತಿಗೆ ಸರಿ ಸಮಾನವಾಗಿ ಇರುವ ಹುಡುಗ ಬೇಕು ದೊಡ್ಡ ಅಂತಸ್ತಿನ ಹುಡುಗ ಬೇಡ ನಮಗೆ ಈಗಾಗಲೇ ಇಬ್ಬರು ಮಕ್ಕಳನ್ನು ಅಲ್ಲಿಗೆ ಕೊಟ್ಟಿದೆ ಎಂದೆಲ್ಲ ಹೇಳುತ್ತಾನೆ. ಅಮೂಲ್ಯ ಹೇಳುವ ಯಾವ ಮಾತುಗಳನ್ನು ಮಂಜುನಾಥ್ ಕೇಳಿಸಿಕೊಳ್ಳುವುದಿಲ್ಲ.
ಮಂಜುನಾಥ ನನ್ನ ಮಗಳಿಗೆ ಅಂತಹ ಹುಡುಗನನ್ನ ನೋಡಿ ಮದುವೆ ಮಾಡುತ್ತೀಯಾ ಅಲ್ವಾ ಅಮ್ಮು ಎಂದು ಹೇಳುತ್ತಾರೆ. ಆದರೆ ತಂದೆಯ ಮಾತಿಗೆ ಏನು ಹೇಳಬೇಕು ಎಂದು ತಿಳಿಯದೇ ಸುಮ್ಮನೆ ಆಗುತ್ತಾಳೆ. ಇತ್ತ ಸುಹಾಸಿನಿ ವೈದೇಹಿಗೆ ಸಿಕ್ಕಾಪಟ್ಟೆ ಕಾಟ ಕೊಡುತ್ತಾ ಇದ್ದಾಳೆ. ತೊಳೆದ ಪಾತ್ರೆಗಳನ್ನು ಮತ್ತೆ ಮತ್ತೆ ತೊಳೆಸಿ ವೈದೇಹಿಯನ್ನ ಸುಮ್ಮನೆ ಕುಳಿತುಕೊಳ್ಳಲು ಬಿಡದೆ ಸತಾಯಿಸುತ್ತ ಇದ್ದಾಳೆ.
ಬಳಿಕ ಅಗ್ನಿಗೆ ಕರೆ ಮಾಡಿದ ಸುಹಾಸಿನಿ ವೈದೇಹಿಗೆ ಇಷ್ಟೆಲ್ಲ ಕಾಟ ಯಾಕೆ ಕೊಡಬೇಕು ಆಕೆ ಆರಾಮವಾಗಿ ಇರಲಿ ಎಂದು ಹೇಳಿದರು. ಅದಕ್ಕೆ ಅಗ್ನಿ ಸುಹಾಸಿನಿ ಆಕೆ ಮಕ್ಕಳ ಜೊತೆ ಅತಿಯಾಗಿ ಬೆರೆಯುವುದು ಬೇಡ ಅದು ನನಗೆ ಕಂಟಕ ಎಂದು ಹೇಳುತ್ತಾನೆ. ಇದನ್ನು ಕೇಳಿದ ಸುಹಾಸಿನಿ ವೈದೇಹಿಗೆ ಇನ್ನೂ ಹೆಚ್ಚು ಕೆಲಸ ಕೊಡಲು ಶುರು ಮಾಡುತ್ತಾಳೆ. ಇತ್ತ ವೈದೇಹಿ ಕೆಲಸ ಮಾಡಿ ಸುಸ್ತು ಆಗಿರುತ್ತಾಳೆ. ಇನ್ನು ಇದನ್ನೆಲ್ಲ ನೋಡಿದ ಆಕೆಯ ತಾಯಿ ಸುಹಾಸಿನಿಗೆ ಬಯ್ಯುತ್ತಾರೆ. ಬಳಿಕ ನಿಜ ಹೇಳಲು ಬರುತ್ತಾರೆ. ಅದನ್ನು ಕೇಳಿದ ವೈದೇಹಿ ಕಣ್ಣು ಸನ್ನೆಯಿಂದ ತನ್ನ ತಾಯಿಗೆ ಸುಮ್ಮನೆ ಇರುವಂತೆ ಕೈ ಮುಗಿಯುತ್ತಲೇ ಇರುತ್ತಾಳೆ. ಇದನ್ನು ನೋಡಿದ ಅಜ್ಜಿ ಅಲ್ಲಿಂದ ಹೋಗುತ್ತಾರೆ.


Click it and Unblock the Notifications











