Gattimela: ಮನದ ದುಃಖವನ್ನು ವೈದೇಹಿ ಬಳಿ ಹಂಚಿಕೊಂಡ ಅಮ್ಮು; ಧ್ರುವ - ಅದಿತಿಯನ್ನು ಒಂದು ಮಾಡ್ತಾಳಾ ವೈದೇಹಿ?

By ಪೂರ್ವ

ಅಮೂಲ್ಯ ವೇದಾಂತನ ಮೇಲೆ ಕೋಪ ಮಾಡಿಕೊಂಡು ಆದ್ಯ ರೂಮ್‌ಗೆ ಹೋಗುತ್ತಾಳೆ. ಇದನ್ನು ಕಂಡ ಸಾರ್ಥಕ್ ವೇದಾಂತನ ಬಳಿ ನೀನು ನಿನ್ನ ಹೆಂಡತಿ ಬಳಿ ಕ್ಷಮೆ ಕೇಳು ವೇದಾಂತ್ ಇಲ್ಲವಾದರೆ ನಾನು ನಿನ್ನ ಜೊತೆಗೆ ಯಾವತ್ತೂ ಇರಬೇಕಾಗುತ್ತದೆ ಎಂದು ಹೇಳುತ್ತಾನೆ. ಇದನ್ನು ಕೇಳಿದ ವೇದಾಂತ್ ನೀನು ಯಾಕೆ ನನ್ನ ಜೊತೆ ಇರುವುದು, ನಿನ್ನ ಹೆಂಡತಿ ಜೊತೆ ಇರು ಎಂದು ಹೇಳುತ್ತಾನೆ. ಇದನ್ನ ಕೇಳಿ ಸಾರ್ಥಕ್ ಬೇಡಿಕೊಳ್ಳುತ್ತಾನೆ.

ತನ್ನ ಹೆಂಡತಿ ರೂಮ್‌ಗೆ ಕೂಡ ಸೇರಿಸುವುದಿಲ್ಲ ದಯಮಾಡಿ ಕ್ಷಮೆ ಕೇಳು ಎಂದು ಹೇಳುತ್ತಾನೆ. ಇದನ್ನೆಲ್ಲ ಕೇಳಿದ ವೇದಾಂತ್ ಸರಿ ಆಯಿತು ಎಂದು ಹೇಳಿ ಬರುವಾಗ ಎಲ್ಲರೂ ನಿಂತುಕೊಂಡಿರುತ್ತಾರೆ. ಅಮ್ಮು ವೇದಾಂತ್ ನೋಡಿ ಮುಖ ತಿರುಗಿಸುತ್ತಾ ಇರುತ್ತಾಳೆ. ಇನ್ನು ಇಬ್ಬರು ವಾದ ಮಾಡುತ್ತಿರುವಾಗ ವೈದೇಹಿ ಜಡ್ಜ್ ಆಗಿ ಮಾತನಾಡುತ್ತಾಳೆ. ಹಾಗೆಯೇ ಆದ್ಯ ಹಾಗೂ ಸಾರ್ಥಕ್ ಲಾಯರ್ ಆಗಿ ಮಾತನಾಡುತ್ತಾರೆ.

 Kannada serial Gattimela written update on 9th march

ಹೀಗೆ ಏನೇನೋ ನಾಟಕಗಳನ್ನು ಮಾಡುತ್ತಾ ಇಬ್ಬರನ್ನು ಒಂದು ಮಾಡುತ್ತಾರೆ. ಇನ್ನು ಅಮೂಲ್ಯ ಸ್ನಾನ ಮಾಡಿ ತಲೆಕೂದಲನ್ನು ಒರೆಸುತ್ತಾ ಇರುವಾಗ ಹಿಂದಿನಿಂದ ರೊಮ್ಯಾಂಟಿಕ್ ಆಗಿ ಬಂದು ವೇದಾಂತ್ ತಬ್ಬಿಕೊಂಡು ಮಾತನಾಡುತ್ತಾನೆ. ಅಮ್ಮು ನೀನು ಯಾಕೆ ಹಾಗೆ ಹೇಳಿದೆ ಆ ಹುಡುಗಿನ ಹುಡುಕುವುದು ವ್ಯರ್ಥ ಎಂದು ಹೇಳಿದೆ ಅಲ್ವಾ ಅದು ಯಾಕೆ ಎಂದೆಲ್ಲ ಪ್ರಶ್ನೆ ಮಾಡುತ್ತಾನೆ.

ಅದನ್ನು ಕೇಳಿದ ಅಮೂಲ್ಯ ನನಗೆ ದ್ರುವನ ಪ್ರೀತಿ ಮಾಡುವ ಹುಡುಗಿ ಸಿಕ್ಕಿದ್ದಳು ಅವಳೇ ಹೇಳಿದಳು, ಅದಕ್ಕೆ ಹೇಳಿದೆ ಅವರನ್ನು ಹುಡುಕುವ ಪ್ರಯತ್ನ ಮಾಡುವುದು ಬೇಡ ಎಂದು ಹೇಳುತ್ತಾಳೆ. ಇದನ್ನು ಕೇಳಿದ ವೇದಾಂತ ಶಾಕ್ ಆಗುತ್ತಾನೆ. ಏನು ಆ ಹುಡುಗಿ ಸಿಕ್ಕಿದಳಾ ಆಕೆ ಯಾರು ಏನು ಎತ್ತ ಎಂದೆಲ್ಲ ಪ್ರಶ್ನೆ ಮಾಡುತ್ತಾನೆ. ಅದನ್ನು ಕೇಳಿದ ಅಮೂಲ್ಯ ಮದುವೆ ಆಗಲು ಆಕೆಯ ತಂದೆಗೆ ಇಷ್ಟ ಇಲ್ಲವೆಂದು ಆಕೆ ಹೇಳಿದಳು ಅದಕ್ಕೆ ನಾನು ಬೇಡ ಎಂದು ಹೇಳಿದೆ ಎಂದು ಹೇಳಿ ತನ್ನ ತಂದೆ ಹೇಳಿದ ಮಾತುಗಳನ್ನು ನೆನಪು ಮಾಡಿಕೊಳ್ಳುತ್ತಾಳೆ.

 Kannada serial Gattimela written update on 9th march

ಅಪ್ಪ ಯಾರ ಬಗ್ಗೆಯೂ ಹಾಗೆ ಮಾತನಾಡಿಲ್ಲ, ಯಾರ ಆಸೆಗೆ ಕೂಡ ಅಡ್ಡಿ ಬಂದವರಲ್ಲ, ಹಾಗಿದ್ದ ಮೇಲೂ ಹೀಗೆ ಯಾಕೆ ಆಡುತ್ತಿದ್ದಾರೆ ಎಂಬುವುದು ಅಮೂಲ್ಯಗೆ ಕೂಡ ತಿಳಿಯದಾಗುತ್ತದೆ. ಹಾಗೆಯೇ ಇದೆಲ್ಲವನ್ನು ಯಾರ ಬಳಿ ಹೇಳಬೇಕು ಎಂಬುವುದನ್ನು ತಿಳಿಯದೇ ಸುಮ್ಮನೆ ಇರುತ್ತಾಳೆ. ವೇದಾಂತ ಬಳಿ ವಿಚಾರವನ್ನು ಮುಚ್ಚಿಡುತ್ತಾಳೆ.

ಇನ್ನು ದ್ರುವನ ಬಳಿ ಬಂದ ಅಮ್ಮು ತನ್ನ ಮನದ ವೇದನೆಯನ್ನು ಹೊರ ಹಾಕುತ್ತಾಳೆ. ತನ್ನ ತಂದೆ ಹೇಳಿದ ಮಾತನ್ನು ಹೇಳುತ್ತಾಳೆ. ನಿಮ್ಮ ಹಾಗೂ ಅದಿತಿ ಮದುವೆ ಮಾಡಿಸಲು ಬಹಳ ಕಷ್ಟ ಪಡಬೇಕಿದೆ, ನನ್ನ ತಂದೆಗೆ ಕೂಡ ಮದುವೆ ಬಗ್ಗೆ ಚೂರು ಒಪ್ಪಿಗೆ ಇಲ್ಲ ಆ ಕಾರಣಕ್ಕೆ ಏನು ಮಾಡುವುದು ಎಂದು ತೋಚದೇ ಹಾಗೆ ಆಗಿದೆ ಎಂದು ಬೇಸರ ಹೊರ ಹಾಕುತ್ತಾಳೆ.

ಇದೇ ಸಮಯಕ್ಕೆ ಹಿಂದೆ ಇಂದ ಬಂದ ವೈದೇಹಿ ಅಮೂಲ್ಯ ನಿಮಗೆ ಏನು ಹೇಳಬೇಕು ಅನ್ನಿಸಿದರೂ ನನ್ನ ಬಳಿ ಹೇಳಿ ನಾನು ಯಾರ ಬಳಿಯೂ ಹೇಳುವುದಿಲ್ಲ ಎಂದಾಗ ಅಮ್ಮು ಕೊಂಚ ಹಿಂದೆ ಮುಂದೆ ಯೋಚನೆ ಮಾಡುತ್ತಾಳೆ. ವೈದೇಹಿ ಅಮ್ಮ ತಾಯಿಯ ಹಾಗೆಯೇ ಯಾರ ಬಳಿ ಏನು ಹೇಳಲು ಆಗದಿದ್ದರೂ ಇವರ ಬಳಿ ಇಂತಹ ವಿಚಾರ ಶೇರ್ ಮಾಡಬಹುದು ಎಂದು ಯೋಚನೆ ಮಾಡುತ್ತಾ ಇರುತ್ತಾಳೆ. ಬಳಿಕ ವೈದೇಹಿ ಬಳಿ ನನ್ನ ತಂಗಿ ಅದಿತಿಗೆ ರಾಜಣ್ಣನ ಕಂಡರೆ ಬಹಳ ಇಷ್ಟ ಎಂದು ಹೇಳುತ್ತಾಳೆ. ಇದನ್ನು ಕೇಳಿದ ವೈದೇಹಿಗೆ ಆಶ್ಚರ್ಯವೇನೂ ಆಗಲಿಲ್ಲ.

ನಾನು ಅದಿತಿ ದ್ರುವನ ಜೊತೆಯಲ್ಲಿ ಮಾತನಾಡುತ್ತ ಇದ್ದದ್ದನ್ನು ಹಾಗೂ ಅವರ ಹತ್ತಿರ ಇರುವುದನ್ನು ನೋಡಿದ್ದೇನೆ ಹಾಗಾಗಿ ನನಗೆ ಏನೂ ಆಶ್ಚರ್ಯ ಎಂದು ಅನ್ನಿಸುತ್ತಾ ಇಲ್ಲ ಎಂದು ಹೇಳುತ್ತಾಳೆ. ಇದನ್ನು ಕೇಳಿದ ಅಮೂಲ್ಯ ಸುಮ್ಮನೆ ಆಗುತ್ತಾಳೆ. ಆ ಬಳಿಕ ತನ್ನ ತಂದೆ ಹೇಳಿದ ಮಾತುಗಳನ್ನು ವೈದೇಹಿ ಬಳಿ ಹೇಳುತ್ತಾಳೆ. ಮುಂದೇನು ಕಾದು ನೋಡಬೇಕಿದೆ..

More from Filmibeat

English summary
Kannada serial gattimela written updated on 9th March
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X