Gattimela: ಮದುವೆ ಚಪ್ಪರಕ್ಕೆ ಬೆಂಕಿ ಇಟ್ಟ ಮಂಜುನಾಥ್.. ಮಗಳ ಮಾತಿಗೆ ಉತ್ತರ ಕೊಡಲಾಗದೆ ಕಕ್ಕಾಬಿಕ್ಕಿ

By ಪೂರ್ವ

'ಗಟ್ಟಿಮೇಳ' ಧಾರಾವಾಹಿ ದಿನದಿಂದ ದಿನಕ್ಕೆ ವೀಕ್ಷಕರನ್ನು ಸೆಳೆಯುತ್ತಿದೆ. ಈಗ ತೇಜಸ್ ಕುತಂತ್ರಕ್ಕೆ ಇದೀಗ ಅಂಜಲಿ ಸಿಕ್ಕಿಕೊಂಡಿದ್ದಾರೆ. ಮಂಜುನಾಥ್ ಕೂಡ ತೇಜಸ್ ಕೈ ಗೊಂಬೆ ಆಗಿದ್ದಾರೆ. ತನ್ನ ಮಗಳ ಮದುವೆ ಕಾರ್ಯ ನಿರ್ವಿಘ್ನವಾಗಿ ಆಗಲಿ ಎಂಬುವುದು ಎಲ್ಲರ ಆಸೆಯಾಗಿತ್ತು. ಹಾಗೇ ಮಂಜುನಾಥ್ ಕೂಡ ತನ್ನ ಮಗಳು ಅದಿತಿ ಖುಷಿ ಆಗಿರಬೇಕು ಎಂಬುವುದಾಗಿತ್ತು. ಆದರೆ ಅವರೆಲ್ಲರ ಖುಷಿಗೆ ಕೊಳ್ಳಿ ಇಡಲು ತೇಜಸ್ ಕಾಯುತ್ತಾ ಇದ್ದಾನೆ.

ಇದೀಗ ಮನೆಯ ಎದುರು ಚಪ್ಪರ ಹಾಕಿ ಸಿಂಗಾರ ಮಾಡಿರುವುದನ್ನು ಬೆಂಕಿ ಹಾಕಿ ಸುಡಲು ಹೇಳುತ್ತಾನೆ ತೇಜಸ್. ಆ ಪ್ರಕಾರ ಮಂಜುನಾಥ್ ಭಾರವಾದ ಮನಸ್ಸಿನಿಂದಲೇ ಬೆಂಕಿ ಹಚ್ಚುತ್ತಾರೆ. ಇದನ್ನು ನೋಡುತ್ತಿದ್ದ ತೇಜಸ್ ಮಾತ್ರ ನಗುತ್ತಾ ಇರುತ್ತಾನೆ. ಯಾಕೆ ಅಂಜಲಿ ಆತನ ಕೆನ್ನೆಗೆ ಹೊಡೆದು ಅವಮಾನ ಮಾಡಿದ್ದಾಳೆ. ಜೊತೆಗೆ ಅದಿತಿ ತನ್ನ ಮದುವೆ ಆಗಬೇಕು ಎಂಬ ಸ್ವಾರ್ಥ,

Kannada serial Gattimela written update on May 4th

ತೇಜಸ್ ಕೆಂಗಣ್ಣಿಗೆ ಗುರಿ ಆದ ಮಂಜು

ಇದೇ ಕಾರಣಕ್ಕೆ ದ್ವೇಷ ಬೇರೆ ಹುಟ್ಟಿಕೊಂಡಿದೆ. ಚಪ್ಪರ ಹೊತ್ತಿ ಉರಿಯುತ್ತ ಇರುವ ವೇಳೆ ಅಲ್ಲಿಗೆ ಅಮೂಲ್ಯ ಬರುತ್ತಾಳೆ. ಅಮೂಲ್ಯ ಮೆತ್ತಗೆ ಅಪ್ಪ ಎಂದು ಹೇಳುತ್ತಾಳೆ. ಬಳಿಕ ಬೆಂಕಿ ನೋಡಿ ಜೋರಾಗಿ ಚೀರಿಕೊಂಡ ವೇಳೆ ಮನೆ ಒಳಗೆ ಇದ್ದವರು ಎಲ್ಲರೂ ಸೇರಿ ಬೆಂಕಿ ಆರಿಸುತ್ತಾರೆ. ಆ ಬಳಿಕ ತನ್ನ ಮಾವನ ಬಳಿಗೆ ಬಂದ ವೇದಾಂತ "ಏನಾಗಿಲ್ಲ ಅಲ್ವಾ ನಿಮಗೆ ಎಂದು" ವಿಚಾರಿಸಿಕೊಳ್ಳುತ್ತಾನೆ.

ಆದರೆ, ಮಂಜುನಾಥ್ ಮಾತ್ರ ನಿಂತಲ್ಲೇ ಕಲ್ಲಾಗಿ ಹೋಗುತ್ತಾರೆ. ಎಲ್ಲರೂ ಹೋದ ಬಳಿಕ ಅಮೂಲ್ಯ ತಂದೆಯ ಜೊತೆ ಇರುತ್ತಾಳೆ. ಬಳಿಕ ಮೆತ್ತಗೆ ತಂದೆಯ ಬಳಿ ಕೇಳುತ್ತಾಳೆ. "ಯಾಕೆ ಅಪ್ಪ ಈ ರೀತಿ ಮಾಡಿದಿರಿ, ಏನಾಯಿತು" ಎಂದು ವಿಚಾರಿಸುತ್ತಾಳೆ.

Kannada serial Gattimela written update on May 4th

ಮಗಳ ಮಾತು ಕೇಳಿ ಮಂಜು ಶಾಕ್

ಮಗಳು ಹೇಳಿದ್ದನ್ನು ಕೇಳಿ ಮಂಜುಗೆ ಕೊಂಚ ಶಾಕ್ ಆಗುತ್ತದೆ. ಮಾತು ಮುಂದುವರೆಸಿದ ಅಮೂಲ್ಯ ಮಾತ್ರ ಮೆತ್ತಗೆ ಕೇಳುತ್ತಾಳೆ. "ಅಪ್ಪ ನೀವೇ ನನ್ನ ಒಡವೆಯನ್ನು ಕದ್ದಿದ್ದು" ಎಂದು ನನಗೆ ತುಂಬಾ ಚೆನ್ನಾಗಿ ತಿಳಿದಿದೆ. ಆದರೆ ನಾನು ಆ ಬಗ್ಗೆ ನಿಮ್ಮ ಬಳಿ ಏನು ಕೇಳಿಲ್ಲ. ನೀವೇನೇ ಮಾಡಿದರು ಅದಕ್ಕೆ ಬಲವಾದ ಕಾರಣವಿದೆ ಎಂದು ನಂಬಿದವಳು. ಈಗ ಕೂಡ ನೀವು ಈ ರೀತಿ ಮಾಡಿದ್ದಕ್ಕೆ ಕಾರಣ ಏನು ಎಂಬುವುದನ್ನು ಹೇಳಿ ಅಪ್ಪ. ನಿಮ್ಮೊಳಗೆ ಏನು ನಡೆಯುತ್ತಿದೆಯೋ ಅದನ್ನಾದರೂ ದಯಮಾಡಿ ಹೇಳಿ" ಎಂದು ತನ್ನ ಬೇಸರ ಹೊರ ಹಾಕುತ್ತಾಳೆ.

ಆದರೂ ಮಂಜುನಾಥ್ ಏನು ಹೇಳದೆ ಸುಮ್ಮನೆ ಆಗುತ್ತಾರೆ. ಅಮೂಲ್ಯ ಆ ಬಳಿಕ ತಂದೆಯ ಮಡಿಲಿನಲ್ಲಿ ಮಲಗುತ್ತಾಳೆ. ಆಗ ಮಂಜುನಾಥ್ ಆಕೆಯ ತಲೆ ನೇವರಿಸಿ ಮಾತು ಮುಂದುವರೆಸಬೇಕು ಎಂದು ಅಂದುಕೊಳ್ಳುತ್ತಾ ಇರುವಾಗ ತೇಜಸ್ ಮಾತು ನೆನಪಾಗಿ ಸುಮ್ಮನೆ ಇರುತ್ತಾರೆ. ಇನ್ನು ತೇಜಸ್ ಮಾತ್ರ ಅಂಜಲಿ ಮೇಲಿನ ಕೋಪಕ್ಕೆ ಆಕೆಗೆ ಕೂಡ ವಿಡಿಯೋ ಕಳುಹಿಸುತ್ತಾನೆ.

ಅಂಜಲಿ ವಿಡಿಯೋ ಕಳುಹಿಸಿದ ತೇಜಸ್

ಅಂಜಲಿ ಆ ವಿಡಿಯೋ ನೋಡಿ ಶಾಕ್ ಆಗುತ್ತಾಳೆ. "ತಾನು ಬಟ್ಟೆ ಬದಲಾಯಿಸುತ್ತಿದ್ದ ವಿಡಿಯೋ ಹೇಗೆ ಚಿತ್ರೀಕರಣ ಮಾಡಿದರು. ಇದೇನಾದರೂ ನಾಲ್ಕು ಜನರಿಗೆ ತಿಳಿದರೆ ನನ್ನ ಮರ್ಯಾದೆ ಏನಾದೀತು ಎಂದು ಹೇಳಿ ಆ ನಂಬರ್‌ಗೆ ಕರೆ ಮಾಡುತ್ತಾಳೆ. ಆಗ ಅತ್ತ ಕಡೆಯಿಂದ ಯಾವ ರೆಸ್ಪಾನ್ಸ್ ಬಾರದೆ ಇರುವುದನ್ನು ಕಂಡು ಇನ್ನೂ ಭಯ ಹೆಚ್ಚು ಆಗುತ್ತದೆ.

ಈ ವೇಳೆ ಅದಿತಿ ಅಲ್ಲಿಗೆ ಬರುತ್ತಾಳೆ. ಬೆವರುತ್ತಾ ಇರುವ ಅಂಜು ಮುಖ ನೋಡಿ, ಅದಿತಿ ಯಾಕೆ ಏನಾಯಿತು ಎಂದೆಲ್ಲ ಕೇಳಿದಾಗ, ಅಂಜಲಿ ಮಾತ್ರ ಏನು ಇಲ್ಲವೆಂಬಂತೆ ತಲೆ ಅಲ್ಲಾಡಿಸಿದ್ದಾಳೆ. ಇನ್ನು ವೇದಾಂತ ಮತ್ತು ಅಮೂಲ್ಯ ಕೋಳಿ ಜಗಳ ಇದ್ದಿದ್ದೇ. ಆದರೆ ಈ ವಿಚಾರವನ್ನು ತನ್ನ ಗಂಡನ ಬಳಿ ಹೇಳದೆ ಮುಚ್ಚಿತ್ತಿದ್ದಾಳೆ ಅಮೂಲ್ಯ. ಮುಂದೇನು ಅನ್ನೋದು ಮುಂದಿನ ಸಂಚಿಕೆಯಲ್ಲಿ ರಿವೀಲ್ ಆಗಲಿದೆ.

More from Filmibeat

English summary
Kannada serial Gattimela written update on May 4th, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X