Gattimela: ತೇಜಸ್‌ನ ಕಂಡು ಬೆಚ್ಚಿ ಬಿದ್ದ ಅಂಜಲಿ .. ಮದುವೆ ಆಗಲು ಅದಿತಿಯನ್ನು ಒಪ್ಪಿಸುತ್ತಾಳಾ?
'ಗಟ್ಟಿಮೇಳ' ನಿನ್ನೆಯ (ಮೇ 4) ಸಂಚಿಕೆ. ಇದೀಗ ಅಂಜಲಿ ಹಾಗೂ ಅದಿತಿ ಒಟ್ಟಿಗೆ ನಿದ್ದೆ ಮಾಡುತ್ತಾ ಇರುತ್ತಾರೆ. ಈ ವೇಳೆ ಅಂಜಲಿಗೆ ತಾನು ಬಟ್ಟೆ ಬದಲಾಯಿಸುವ ವಿಡಿಯೋ ಯಾರೋ ಮಾಡಿದ್ದಾರೆ ಎಂಬುವುದು ಮಾತ್ರ ಬಹಳ ಕಾಡುತ್ತಾ ಇರುತ್ತದೆ.
ಆ ವೇಳೆ ತೇಜಸ್ ಆಕೆಗೆ ಮೆಸೇಜ್ ಮಾಡುತ್ತಾನೆ. ಇದನ್ನು ನೋಡಿದ ಅಂಜಲಿ ಮಾತ್ರ ಯಾರು ಈತ ನನಗೆ ಯಾಕೆ ಹೀಗೆ ಕರೆ ಮಾಡುತ್ತಾ ಇದ್ದಾನೆ ಎಂದೆಲ್ಲ ಹೇಳಿಕೊಂಡು ಮೆತ್ತಗೆ ಎದ್ದು ಹೋಗುತ್ತಾಳೆ. ಆಗ ಅದಿತಿ ಮೆತ್ತಗೆ ಎದ್ದು ಯಾಕೆ ಈ ಅಂಜು ಹೊರಗೆ ಅಡ್ಡಾಡುತ್ತಿದ್ದಾಳೆ ಎಂದು ಯೋಚನೆ ಮಾಡುತ್ತಾ ಇರುತ್ತಾಳೆ. ಅಂಜಲಿ ಹೊರಗೆ ಬಂದು ಆ ನಂಬರ್‌ಗೆ ಕರೆ ಮಾಡುತ್ತಾನೆ.

ತೇಜಸ್‌ನ ಭೇಟಿಯಾದ ಅಂಜು
ಆಗ ತೇಜಸ್ ಆ ಕಾಲ್ ರಿಸೀವ್ ಮಾಡಿ ನಾನು ಯಾರೆಂದು ನಿನಗೆ ಗೊತ್ತಾಗಬೇಕಾದರೆ ಮನೆಯ ಹೊರಗೆ ಬಾ ಎಂದೆಲ್ಲ ಕರೆಯುತ್ತಾನೆ. ಇದನ್ನು ಕೇಳಿದ ಅಂಜು ಮಾತ್ರ "ನಾನು ಯಾಕೆ ಬರಲಿ. ನಾನು ಬರುವುದು ಇಲ್ಲ" ಎಂದು ಖಡಕ್ ಆಗಿ ಹೇಳುತ್ತಿದ್ದಾಳೆ. ಇದನ್ನು ಕೇಳಿದ ತೇಜಸ್ ಮಾತ್ರ "ನೀನು ಬರಬೇಕು ಬರುತ್ತೀಯ" ಎಂದು ಹೇಳಿ ಫೋನ್ ಕಟ್ ಮಾಡುತ್ತಾನೆ. ಅಂಜು ಮೆತ್ತಗೆ ಎದ್ದು ಹೋಗುತ್ತಾಳೆ.
ಕಷ್ಟ ಹೇಳಿಕೊಳ್ಳದೆ ತೊಳಲಾಡಿದ ಅಂಜಲಿ
ಇನ್ನು ಅಂಜಲಿ ಹೊರಗೆ ಬಂದು ಹೇಳುತ್ತಾಳೆ, "ನೀನು ಯಾರು ನನಗೆ? ಯಾಕೆ ಇಷ್ಟು ಹಿಂಸೆ ಕೊಡುತ್ತಾ ಇದ್ದೀಯಾ? ಇದು ನನ್ನ ಮಾನ ಮರ್ಯಾದೆ ಪ್ರಶ್ನೆ. ದಯಮಾಡಿ ನನಗೆ ಯಾರು ನೀವು ಹೇಳಿ ಎಂದಾಗ ತೇಜಸ್, ಒಮ್ಮೇಲೆ ಅಂಜಲಿ ಕಡೆ ತಿರುಗುತ್ತಾನೆ. ತೇಜಸ್ ನೋಡಿದ ಅಂಜಲಿಗೆ ಶಾಕ್ ಆಗುತ್ತದೆ . "ನೀನಾ .. ನೀನಾ ಹೀಗೆ ಮಾಡಿರುವುದು. ಯಾಕೆ ಹೀಗೆ ಮಾಡಿದೆ ನೀನು ಎಂದೆಲ್ಲ ಕೊಂಚ ಜೋರಾಗಿ" ಕೇಳುತ್ತಾಳೆ

ತೇಜಸ್ ಜೊತೆ ಕ್ಷಮೆಯಾಚಿಸಿದ ಅಂಜು
ಇದನ್ನು ಕೇಳಿದ ತೇಜಸ್ ಮಾತ್ರ ಕೋಪದಿಂದ ನಗುತ್ತಾ ಹೇಳುತ್ತಾನೆ. "ನಾನೇ ಕಣೆ.. ಅಂದು ನೀನು ನನ್ನ ಕೆನ್ನೆಗೆ ಹೊಡೆದೆ ಅಲ್ವಾ? ಈಗ ಮಾತನಾಡು ಎಂದು" ಹೇಳುತ್ತಾರೆ. ಇದನ್ನು ಕೇಳಿದ ಅಂಜಲಿ ಮಾತ್ರ ಹೇಳುತ್ತಾಳೆ. "ನಿನಗೆ ಯಾರು ಅಕ್ಕ ತಂಗಿ ಇಲ್ವಾ..? ಅವರೊಂದಿಗೆ ನೀನು ಬೆಳೆದಿಲ್ವ" ಎಂದೆಲ್ಲ ಹೇಳುತ್ತಾಳೆ . "ನನಗೆ ಒಂದೇಟು ಹೊಡಿ.. ಆದರೆ "ಆ ವಿಡಿಯೋ ಡಿಲೀಟ್ ಮಾಡಿ ಬಿಡು" ಎಂದೆಲ್ಲ ಹೇಳುತ್ತಾಳೆ.
ಅಂಜಲಿ, "ನೀನು ನನ್ನ ಅದಿತಿನ ಒಂದು ಮಾಡುತ್ತೇನೆ ಎಂದು ಮಾತು ಕೊಡು, ಆಗ ಈ ಮೆಸೇಜ್ ಡಿಲೀಟ್ ಮಾಡುತ್ತೇನೆ" ಎಂದು ಹೇಳುತ್ತಾನೆ. ಇದನ್ನು ಕೇಳಿದ ಅಂಜಲಿ ಒಪ್ಪುವುದೇ ಇಲ್ಲ. ಆದರೆ ತೇಜಸ್ ಆಕೆ ಒಪ್ಪುವವರೆಗೂ ಬಿಡಲಿಲ್ಲ. ಅಂಜಲಿಗೆ ಏನು ಮಾಡಬೇಕು ಎಂದು ದಿಕ್ಕು ತೋಚದೆ ಆಗುತ್ತದೆ. ಮದುವೆಗೆ ಎರಡು ದಿನ ಇರಬೇಕಾದರೆ ಇದೇನಪ್ಪ ಹೊಸದು ಎಂದು ಬೇಸರ ವ್ಯಕ್ತ ಪಡಿಸುತ್ತಾರೆ. ಇನ್ನು ವಿಕ್ರಾಂತ್ ಮಾತ್ರ ಆರತಿ ತನ್ನ ತವರಿಗೆ ಹೋಗುತ್ತಾಳೆ ಎಂದು ಕೊಂಚ ಬೇಸರ ಮಾಡಿಕೊಂಡಿದ್ದಾನೆ.
ಬಾಣಂತನಕ್ಕೆ ತವರಿಗೆ ಹೊರಟ ಆರತಿ
ಕೊನೆಗೆ ತನ್ನ ಹೆಂಡತಿಯ ಆಸೆಯಂತೆ ತವರಿಗೆ ಕಳುಹಿಸಲು ಸಿದ್ಧನಾಗುತ್ತಾನೆ. ಬಾಣಂತನ ಮುಗಿಸಿ ಬರುತ್ತೇನೆ ಎಂದು ಗಂಡನ ಬಳಿ ಬಹಳ ನಾಜೂಕಿನಿಂದ ಕೇಳಿಕೊಳ್ಳುತ್ತಾರೆ ಆರತಿ. ಅಮೂಲ್ಯ ತನ್ನ ತಂಗಿ ಮದುವೆಗೆ ಯಾವುದೆಲ್ಲ ಸೀರೆ ಉಡಬೇಕು . ಅರಶಿನ ಶಾಸ್ತ್ರಕ್ಕೆ ಹೇಗೆಲ್ಲ ಇರಬೇಕು ಎಂಬುವುದನ್ನು ಯೋಚನೆ ಮಾಡುತ್ತಾ ಇರುವಾಗ ತನ್ನ ಮದುವೆಗೆ ಆದ ಸಂದರ್ಭವನ್ನು ಯೋಚನೆ ಮಾಡುತ್ತಾ ಇರುತ್ತಾಳೆ.
ಇನ್ನು ಅರಿಶಿನ ಶಾಸ್ತ್ರಕ್ಕೆ ಎಲ್ಲ ಅಲಂಕಾರಗಳನ್ನೂ ಮಾಡಿ ಬಹಳ ಖುಷಿಯಿಂದ ಇರುತ್ತಾರೆ. ಆಗ ಅಮೂಲ್ಯ ಹಾಗು ಆರತಿ ಇಬ್ಬರು ಬಂದು ಮದುವೆ ಮನೆಯ ಎಲ್ಲಾ ಕೆಲಸಗಳನ್ನೂ ಪೂರ್ತಿ ಗೊಳಿಸುತ್ತಾರೆ.


Click it and Unblock the Notifications











