ಆಫೀಸ್‌ನಲ್ಲಿ ವೇದಾಂತ್‌ಗೆ ಮುತ್ತುಕೊಟ್ಟ ಅಮೂಲ್ಯ! ವೇದಾಂತ್‌ ಪ್ರತಿಕ್ರಿಯೆ ಏನು?

By ಪೂರ್ವ

'ಗಟ್ಟಿ ಮೇಳ' ಧಾರವಾಹಿಯಲ್ಲಿ ಇದೀಗ ಅಮೂಲ್ಯ ಮಾಡಿರುವ ಕೆಲಸ ಮೆಚ್ಚುಗೆಗೆ ಕಾರಣವಾಗಿದೆ. ಅಮೂಲ್ಯ, ಆಫೀಸ್ ಗೆ ರಿಸೆಪ್ಶನಿಸ್ಟ್ ಕೆಲಸಕ್ಕೆ ಮಂಗಳಮುಖಿಯನ್ನು ಕರೆದುಕೊಂಡು ಬಂದಿದ್ದಾರೆ.

ಮಂಗಳ ಮುಖಿಯರಿಗೆ ಕೆಲಸ ಕೊಡದೆ ಅವರನ್ನು ಬೇರೆಯೇ ದೃಷ್ಟಿಯಲ್ಲಿ ಸಮಾಜ ನೋಡುತ್ತಿದೆ. ಆದರೆ ಇದೀಗ ಅಮೂಲ್ಯಳ ಈ ಕೆಲಸಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ವೇದಾಂತ ಬಳಿ ಬಂದು ರಿಸೆಪ್ಷನಿಸ್ಟ್ ಕೆಲಸಕ್ಕೆ ಇವರನ್ನು ಕರೆದುಕೊಂಡು ಬಂದಿರುವುದು ಎಂದು ಹೇಳುತ್ತಾರೆ ಇದನ್ನು ಕೇಳಿದ ವೇದಾಂತ ನಾನು ಯಾವುದೇ ರಿಸೆಪ್ಷನಿಸ್ಟ್ ಕೆಲಸ ಇದೆ ಅಂತ ಯಾರ ಬಳಿ ಹೇಳಿರಲಿಲ್ಲ ಎಂದು ಹೇಳುತ್ತಾನೆ. ಅದಕ್ಕೆ ಅಮ್ಮು ಈ ಹಿಂದೆ ವೇದಾಂತ್ ಮಂಗಳಮುಖಿಯರಿಗೆ ಹಣ ಕೊಟ್ಟು ಸಹಾಯ ಮಾಡಿದ್ದನ್ನು ನೆನಪಿಸುತ್ತಾಳೆ.

ಹಳೆಯ ಘಟನೆ ನೆನಪಿಸುವ ಅಮೂಲ್ಯ

ಹಳೆಯ ಘಟನೆ ನೆನಪಿಸುವ ಅಮೂಲ್ಯ

ಬೇರೆಯವರು ಆದರೆ 50 ರು ಕೊಡುತ್ತಿದ್ದರು ಆದರೆ ನೀನು ಅಷ್ಟೊಂದು ದುಡ್ಡು ಕೊಟ್ಟು ಅವರಿಗೆ ಸಹಾಯ ಮಾಡುತ್ತಿದ್ದೆ. ಅದೇ ರೀತಿ ಅವರಿಗೆ ಕೆಲಸ ಕೊಟ್ಟರೆ ಏಷ್ಟು ಉತ್ತಮ ಅಲ್ವಾ ಎಂದೆಲ್ಲ ಹೇಳಿ ವೇದಾಂತ ಮನಸನ್ನು ಕರಗಿಸುತ್ತಾಳೆ. ಬಳಿಕ ಮಂಗಳಮುಖಿಯನ್ನು ಕೆಲಸಕ್ಕೆ ತೆಗೆದುಕೊಳ್ಳುತ್ತಾನೆ ವೇದಾಂತ್. ಅಮೂಲ್ಯ, ಆಫೀಸ್‌ನಲ್ಲಿ ನಡೆದುಕೊಂಡು ಹೋಗುವ ವೇಳೆ ಅಮ್ಮುಗೆ ಸಂಬಳ ಬರುತ್ತದೆ. ಇದನ್ನು ನೋಡಿದ ಅಮೂಲ್ಯ ಒಂದು ದಿನದ ಮುಂಚೆನೇ ಸಂಬಳ ಬಂತು ಆಹಾ ನನ್ನ ಗಂಡ ಎಷ್ಟು ಒಳ್ಳೆಯವರು. ನನ್ನ ಗಂಡ ನ ಹಾಗೆ ಎಲ್ಲಾ ಹೆಂಡತಿಯರಿಗೆ ಗಂಡ ಸಿಕ್ಕರೆ ಏಷ್ಟು ಚೆನ್ನಾಗಿರುತ್ತೆ ಅಲ್ವಾ ಎಂದು ಹೇಳುತ್ತಿರುತ್ತಾರೆ. ಈ ವೇಳೆ ಅಲ್ಲಿಗೆ ವೇದಾಂತ್ ಬರುತ್ತಾನೆ.

ಅಮ್ಮು ಮಾತು ಕೇಳಿಸಿಕೊಂಡ ವೇದಾಂತ್

ಅಮ್ಮು ಮಾತು ಕೇಳಿಸಿಕೊಂಡ ವೇದಾಂತ್

ಅಮೂಲ್ಯ ಮಾತುಗಳನ್ನ ಕೇಳಿಸಿಕೊಂಡ ವೇದಾಂತ್ ಹೇಳುತ್ತಾನೆ ಏನೋ ಗಂಡ ಅಂತ ಮಾತನಾಡಿದ ಹಾಗೆ ಕೇಳಿತು ಏನಾದರು ಹೇಳಿದ್ಯಾ? ಎಂದು ಕೇಳುತ್ತಾನೆ ಅದಕ್ಕೆ ಅಮೂಲ್ಯ ಇಲ್ಲಪ್ಪಾ ನಾನು ಏನು ಹೇಳಿಕೊಂಡಿಲ್ಲ ಎನ್ನುತ್ತಾನೆ. ಬಳಿಕ ವೇದಾಂತ್, ಅಮೂಲ್ಯ ಬಳಿ ಕೇಳುತ್ತಾನೆ ಇವತ್ತು ಏನಾದರು ಮೆಸೇಜ್ ಬಂತಾ ಎಂದು ಅದಕ್ಕೆ ಅಮೂಲ್ಯ ಹೇಳುತ್ತಾಳೆ ದಿನಕ್ಕೆ ಸಾವಿರ ಮೆಸೇಜ್ ಬರುತ್ತೆ ಅದನ್ನೆಲ್ಲ ಯಾರು ನೋಡುತ್ತಾರೆ ಎಂದು ವೇದಾಂತ್‌ಗೆ ಕಥೆ ಹೇಳುತ್ತಾಳೆ.

ಅಮ್ಮು ಮೇಲೆ ವೇದಾಂತ್‌ಗೆ ಹುಸಿ ಮುನಿಸು

ಅಮ್ಮು ಮೇಲೆ ವೇದಾಂತ್‌ಗೆ ಹುಸಿ ಮುನಿಸು

ಇದನ್ನು ಕೇಳಿದ ವೇದಾಂತ್‌ಗೆ ಕೊಂಚ ಕೋಪ ಬರುತ್ತದೆ. ಅದನ್ನೆಲ್ಲ ತಡೆದುಕೊಂಡು ಬಾಸ್ ಬಳಿ ಯಾರಾದರೂ ಹೀಗೆ ಮಾತನಾಡುತ್ತಾರಾ ಎಂದಾಗ ಅಮೂಲ್ಯ ಹೇಳುತ್ತಾಳೆ ನನ್ನ ಗಂಡ ವೇದಾಂತ್ ವಸಿಷ್ಠ ಎಂದು ಹೇಳುತ್ತಾಳೆ ಅದಕ್ಕೆ ವೇದಾಂತ ಅದು ಮನೆಯಲ್ಲಿ ಆಫೀಸ್ ನಲ್ಲಿ ನಾನು ಬಾಸ್ ನೀನು ನನ್ನ ಕೆಲಸದಾಕೆ ಎಂದು ಖಡಕ್ ಆಗಿ ಹೇಳುತ್ತಾನೆ. ಬಳಿಕ ಹೇಳುತ್ತಾನೆ ಬಾಸ್ ಅನ್ನು ಎಷ್ಟು ಚೆನ್ನಾಗಿ ನೋಡಿಕೊಳ್ಳಬೇಕು ನೀವು ಇದ್ದೀರಾ ಬಾಸ್ ನ ಹೋಗೋ ಬಾರೋ ಎಂದುಕೊಂಡು. ಬಾಸ್ ನ್ನೂ ಮುದ್ದಿನಿಂದ ಮಾತನಾಡಿಸಿದರೆ ಬಾಸ್ ಏಷ್ಟು ಖುಷಿ ಪಡುತ್ತಾರೆ ಎಂದು ಹೇಳುತ್ತಾನೆ.

ಆಫೀಸ್‌ನಲ್ಲಿ ವೇದಾಂತ್‌ಗೆ ಮುತ್ತು ಕೊಟ್ಟ ಅಮೂಲ್ಯ

ಆಫೀಸ್‌ನಲ್ಲಿ ವೇದಾಂತ್‌ಗೆ ಮುತ್ತು ಕೊಟ್ಟ ಅಮೂಲ್ಯ

ಈಗೇನು ಮುತ್ತು ಕೊಡಬೇಕು ತಾನೇ ಎಂದು ಹೇಳಿ ವೇದಾಂತನ ಕೆನ್ನೆ ಮೇಲೆ ಒಂದು ಸಿಹಿ ಮುತ್ತು ಕೊಡುತ್ತಾಳೆ. ಇದರಿಂದ ಕೊಂಚ ಶಾಕ್ ಆದ ವೇದಾಂತ್ ಆಫೀಸ್ ಸುತ್ತ ನೋಡಿದಾಗ ಎಲ್ಲರೂ ನಗುತ್ತಿರುವುದನ್ನು ಕಂಡು ಗಲಿಬಿಲಿ ಗೊಂಡ ಆತ ಅಮೂಲ್ಯ ಬಳಿ ಹೇಳುತ್ತಾನೆ ಏನಿದೆಲ್ಲ ಇದು ಆಫೀಸ್ ಮನೆ ಅಲ್ಲ. ಎಂದೆಲ್ಲ ಹೇಳಿದಾಗ ಅಮ್ಮು ಹೇಳುತ್ತಾಳೆ ನೀನೇ ಹೇಳಿದೆ ಅಲ್ವಾ ಮುದ್ದಾಗಿ ಇರಬೇಕು ಅಂತ ಅದಕ್ಕೆ ಮುತ್ತು ಕೊಟ್ಟೆ ಎನ್ನುತ್ತಾಳೆ ಇದನ್ನು ಕೇಳಿ ವೇದಾಂತ್ ಅಲ್ಲಿಂದ ಹೊರಡುತ್ತಾನೆ. ಬಳಿಕ ಅಮ್ಮು ನಗುತ್ತಾಳೆ. ಆಫೀಸ್ ಸುತ್ತ ನೋಡುತ್ತಾಳೆ ಎಲ್ಲರೂ ನಗುತ್ತಿರುತ್ತಾರೆ. ನಗುವುದು ಬಿಟ್ಟು ಕೆಲಸ ಮಾಡಿ ಎಂದು ಜೋರಾಗಿ ಹೇಳಿ ಅಲ್ಲಿಂದ ಹೋಗುತ್ತಾಳೆ.

More from Filmibeat

English summary
Kannada serial Gattimela written updated on 12th September. Know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X