ಧ್ರುವನ ಹುಡುಗಿ ಯಾರೆಂಬ ವಿಚಾರ ವಿಕ್ರಾಂತ್‌ಗೆ ಗೊತ್ತಾಗುತ್ತಾ?
'ಗಟ್ಟಿಮೇಳ' ಧಾರಾವಾಹಿಯಲ್ಲಿ ದಿನಕ್ಕೊಂದು ಟ್ವಿಸ್ಟ್ ಎದುರಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಅಮ್ಮು ಮತ್ತು ಆರತಿ ಬಹಳ ಕ್ಲೋಸ್ ಆಗಿದ್ದಾರೆ. ಇದನ್ನು ಕಂಡ ಸುಹಾಸಿನಿ ಗೆ ಸಹಿಸಲಾಗುತ್ತಿಲ್ಲ. ಹೇಗಾದರೂ ಮಾಡಿ ಅಕ್ಕ ತಂಗಿಯನ್ನು ಬೇರೆ ಮಾಡಬೇಕು ಎಂದು ಕೊಂಡರೆ ಅವರಿಬ್ಬರೂ ಇನ್ನಷ್ಟು ಹತ್ತಿರವಾಗುತ್ತ ಇದ್ದಾರೆ. ಇದು ಸುಹಾಸಿನಿಗೆ ಸಂಕಟ ತಂದಿದೆ.
ಇದೀಗ ಮನೆಗೆ ಬಂದು ಧ್ರುವನ ಎಲ್ಲಾ ಸೇವೆ ಮಾಡುತ್ತಿರುವುದು ಅದಿತಿ ಎಂದು ಸುಹಾಸಿನಿಗೂ ಗೊತ್ತಾಗಿದೆ. ಧ್ರುವ, ಆದಿತಿನ ಇಷ್ಟಪಡುತ್ತಿದ್ದ ವಿಚಾರ ಇದೀಗ ಗೊತ್ತಾಗಿ ಪರಿಮಳ ಮೇಲೆ ಸುಹಾಸಿನಿ ಬೆಂಕಿ ಉಂಡೆ ಉಗುಳುತ್ತಿದ್ದಾಳೆ. ಪರಿಮಳ ಮೂರು ಹೆಣ್ಣು ಮಕ್ಕಳು ಇದೆ ಮನೆಗೆ ಬರುತ್ತಾರಲ್ಲ ಎಂದು ಚಡಪಡಿಸುತ್ತಾಳೆ. ಇತ್ತ ಅಮ್ಮು ಆಫೀಸಿನಲ್ಲಿ ದುಡಿದಿರೋದಕ್ಕೆ ಸಂಬಳ ತೆಗೆದುಕೊಳ್ಳುತ್ತಾಳೆ. ಈ ವಿಚಾರ ಗೊತ್ತಾಗಿ ಸುಹಾಸಿನಿ ಹೇಳುತ್ತಾಳೆ ಹಣಕ್ಕಾಗಿ ನೀನು ನನ್ನ ಮಗನ್ನ ಮದುವೆಯಾಗಿದ್ದು ಎಂದೆಲ್ಲ ಪ್ರಶ್ನೆ ಮಾಡುತ್ತಾಳೆ.

ಸುಹಾಸಿನಿ ವಿರುದ್ಧ ಅಕ್ಕ-ತಂಗಿಯರ ವಾಗ್ದಾಳಿ
ಇದನ್ನು ಕೇಳಿದ ಅಮ್ಮು ಅಕ್ಕ ಆರತಿಯನ್ನು ಕರೆದು ಹೇಳುತ್ತಾಳೆ ''ಅಕ್ಕ ನಾನು ನನ್ನ ದುಡಿದ ಹಣ ಕೇಳಿದರೆ ಏನೇನೋ ಹೇಳುತ್ತಾರೆ ಅತ್ತೆ'' ಎಂದಾಗ ಆರತಿಯೂ ಸರಿಯಾಗಿ ಸುಹಾಸಿಗೆ ಕ್ಲಾಸ್ ಕೊಡುತ್ತಾಳೆ. ಇನ್ನೂ ಇವರಿಬ್ಬರೂ ಜೊತೆ ಸೇರಿದರೆ ನಮ್ಮನ್ನು ಹುರಿದುಬಿಡುತ್ತಾರೆ ಎಂದು ಹೇಳಿ ಅಲ್ಲಿಂದ ಕಾಲ್ಕಿದ್ದಾಳೆ ಸುಹಾಸಿನಿ. ಇನ್ನೂ ಇವರಿಬ್ಬರನ್ನು ಮಟ್ಟ ಹಾಕಲು ಅದಿತಿಯನ್ನು ಅಸ್ತ್ರದ ರೀತಿ ಬಳಸಬೇಕು ಎಂದು ಯೋಚಿಸುತ್ತಾಳೆ. ಇತ್ತ ಆದ್ಯಾ, ಧ್ರುವ ಅಣ್ಣನ ಬಳಿ ಮಾತನಾಡುತ್ತಾ ಇರುತ್ತಾಳೆ.

ಅಣ್ಣನ ಹುಡುಗಿಯನ್ನು ಹೊಗಳುವ ಆದ್ಯಾ
ಅಣ್ಣ ನಿನ್ನ ಹುಡುಗಿ ನಿನ್ನ ಸ್ನಾನ ಮಾಡಿಸುತ್ತಾಳೆ, ಮಾತ್ರೆ ನೀಡುತ್ತಾಳೆ ನಿನ್ನ ಬೇಕು ಬೇಡಗಳನ್ನು ನೋಡಿಕೊಳ್ಳುತ್ತಾಳೆ. ಸೂಪರ್ ಸೆಲೆಕ್ಷನ್ ಅಣ್ಣ, ಒಳ್ಳೆ ಹುಡುಗಿ ಅವಳು. ಮಜಾ ಏನೆಂದರೆ ಒಂದೇ ಮನೆ ಹೆಣ್ಣು ಮಕ್ಕಳು ಒಂದೇ ಮನೆಗೆ ಸೊಸೆಯಾಗಿ ಹೋಗುತ್ತಿದ್ದಾರೆ. ಇದೊಂಥರಾ ವಿಚಿತ್ರ ಅನ್ನಿಸಲ್ವಾ ಅಣ್ಣ ಎಂದು ಹೇಳುತ್ತಾಳೆ. ಆರತಿ ಸೂಪರ್ ಅಮ್ಮು ಸೂಪರ್ ಡೂಪರ್, ನಿನ್ನ ಹುಡುಗಿ ಮಿಕ್ಸ್ಚರ್ ಚೆನ್ನಾಗಿದೆ ಕಣೋ ಕಾಂಬಿನೇಶನ್. ಹಾಗಿರಬೇಕು ಹೀಗಿರಬೇಕು ಎಂಬ ಕಾಲದಲ್ಲಿ ನಿನ್ನ ಹುಚ್ಚಿ ತರ ಪ್ರೀತಿ ಮಾಡುತ್ತಿದ್ದಾಳೆ. ನೀನು ತುಂಬಾ ಲಕ್ಕಿ ಆದರೆ ಅದು ಅದಿತಿ ಎಂದು ನನಗೆ ಗೊತ್ತಿರಲಿಲ್ಲ. ನೀನು ಕಳ್ಳ ಹೇಳೆ ಇಲ್ಲ ಅಲ್ವಾ. ನನಗೆ ಎಲ್ಲಾ ಗೊತ್ತಾಗಿದೆ ನಾನು ಎಲ್ಲರಿಗೂ ಟಾಮ್ ಟಾಮ್ ಮಾಡುತ್ತೇನೆ ಎಂದು ಹೇಳುತ್ತಾಳೆ. ಇದನ್ನು ಕೇಳಿಸಿಕೊಂಡ ವಿಕ್ರಾಂತ್ ಆದ್ಯಾ ಎಂದು ಕರೆಯುತ್ತಾನೆ.

ವಿಕ್ರಾಂತ್ ಮಾತ ಕೇಳಿ ಗಾಬರಿಯಾದ ಅದಿತಿ
ಏನು ಎಂದು ಹಿಂದಿರುಗಿ ನೋಡಿದಾಗ ಅಣ್ಣ ನಿಂತಿರುವುದನ್ನು ನೋಡಿ ಶಾಕ್ ಆಗುತ್ತಾಳೆ. ವಿಕ್ರಾಂತ್ ಕೇಳುತ್ತಾನೆ ಧ್ರುವ ಹುಡುಗಿ ನಿನಗೆ ಗೊತ್ತಾ ಎಂದು ಕೇಳುತ್ತಾನೆ. ಇದನ್ನು ಕೇಳಿ ಆದ್ಯಾಗೆ ಮಾತೇ ನಿಂತು ಹೋಗುತ್ತದೆ. ಇನ್ನೂ ಅದಿತಿಯನ್ನೂ ಇಬ್ಬರು ಗೂಂಡಾಗಳು ಸುತ್ತುವರೆದು ಕಾಟ ಕೊಡುತ್ತಿರುತ್ತಾರೆ. ಅದಿತಿ ಯ ಮೇಲೆ ಹೂವು ಹಾಕಿ ನೀನೇ ನನ್ನ ದೇವರು ಈ ಪೂಜೆ ಪುನಸ್ಕಾರ ಎಲ್ಲಾ ನಿನಗೆನೆ ಎಂದೆಲ್ಲಾ ಹೇಳುತ್ತಾರೆ.

ಯಾರು ಆ ಹುಡುಗ?
ಇದನ್ನು ಕೇಳಿದ ಅದಿತಿ ಏಯ್ ಏನೋ ನಿನಗೆ ಚೂರು ನಾಚಿಗೆ ಆಗಲ್ವಾ ನಿನ್ನ ಜನ್ಮಕ್ಕೆ ಬೆಂಕಿ ಹಾಕ ಎಂದು ಹೋಗಲು ಅಣಿಯಾದಾಗ ಗೂಂಡಾಗಳು ಅಡ್ಡಗಟ್ಟುತ್ತಾರೆ. ಬಳಿಕ ದುಪ್ಪಟವನ್ನು ಕಿತ್ತುಕೊಳ್ಳುತ್ತಾರೆ. ಅದಕ್ಕೆ ಅದಿತಿ ಏಯ್ ನನ್ನ ದುಪ್ಪಟ ಕೊಡೋ ಎಂದು ದುಪ್ಪಟವನ್ನು ಎಳೆದುಕೊಳ್ಳುತ್ತಾ ಇರುತ್ತಾಳೆ. ಇನ್ನೂ ಅದಿತಿಯನ್ನೂ ದೂರಕ್ಕೆ ನೂಕುತ್ತಾನೆ ಗೂಂಡಾ ಈ ವೇಳೆ ಒಬ್ಬ ವ್ಯಕ್ತಿ ಬೀಳುತ್ತಿದ್ದ ಆದಿತಿಯನ್ನು ಹಿಡಿದು ಕೊಳ್ಳುತ್ತಾನೆ. ಆದಿತಿಯನ್ನು ಗೂಂಡಾಗಳಿಂದ ಒಬ್ಬಾತ ಬಂದು ರಕ್ಷಣೆ ಮಾಡುತ್ತಾನೆ. ಆದರೆ ಆತ ಯಾರು ಏನು ಗೊತ್ತಿಲ್ಲ. ಅವನನ್ನು ನೋಡುತ್ತಾ ಅದಿತಿ ತನ್ನನ್ನು ತಾನೇ ಮರೆತುಬಿಡುತ್ತಾಳೆ. ಅದಿತಿ, ಧ್ರುವ ಪ್ರೀತಿ ಗೊತ್ತಾಗೋ ಟೈಮ್ ನಲ್ಲಿ ಅದಿತಿಗೆ ಇನ್ನೊಂದು ಹುಡುಗನೊಂದಿಗೆ ಲವ್ ಆಗುತ್ತಾ ಕಾದುನೋಡಬೇಕಿದೆ.


Click it and Unblock the Notifications