ವೇದಾಂತ್ ಕಿಡ್ನಾಪ್? ಮೋಸದ ಜಾಲದಲ್ಲಿ ಸಿಲುಕಿರುವ ಮನೆ ಮಂದಿ
ವೇದಾಂತ್ ಕಿಡ್ನಾಪ್ ಆಗಿರುವ ಎಲ್ಲಾ ಲಕ್ಷಣಗಳು ಕಾಣುತ್ತಿದೆ. ಪ್ರಜ್ವಲ್ ಮೇಲೆ ಅಟ್ಯಾಕ್ ಮಾಡಿ ವೇದಾಂತ್‌ನನ್ನು ಅಪಹರಿಸಿದ್ದಾರೆ ಅಗ್ನಿ. ಅಗ್ನಿಯ ಕುತಂತ್ರದಿಂದ ವೇದಾಂತ ಜೀವಕ್ಕೆ ಅಪಾಯ ಬಂದೊದಗಿದೆ. ವಿಕ್ರಾಂತ್ ಪೊಲೀಸ್ ಸ್ಟೇಶನ್‌ಗೆ ತೆರಳಿ ಕಂಪ್ಲೇಂಟ್ ನೀಡುತ್ತಾನೆ. ಇತ್ತ ಅಮೂಲ್ಯಗೆ ವಿಕ್ರಾಂತ್ ಈಗಾಗಲೇ ಪೊಲೀಸ್ ಸ್ಟೇಶನ್‌ಗೆ ಹೋಗಿದ್ದಾರೆ ಯಾಕೆ ಇನ್ನೂ ಕರೆ ಮಾಡಿಲ್ಲ ಎಂದು ಆಲೋಚಿಸುತ್ತಾ ಇರುತ್ತಾಳೆ.
ಬಳಿಕ ತಾನೇ ಕರೆ ಮಾಡಿ ಕೇಳುತ್ತೇನೆ ಎಂದು ವಿಕ್ರಾಂತ್ ಗೆ ಕರೆ ಮಾಡುತ್ತಾಳೆ. ಅಮೂಲ್ಯ ಕರೆ ಸ್ವೀಕರಿಸಿ ಮಾತನಾಡಿದ ವಿಕ್ರಾಂತ್ ಹಲೋ ಎಂದು ಹೇಳಿದಾಗಲೇ ಅಮೂಲ್ಯ ಗಾಬರಿಯಿಂದ ಹಲೋ ಬಾವ ಸ್ಟೇಶನ್‌ಗೆ ತಲುಪಿದಿರಾ ಅಲ್ಲಿ ಏನಾದರು ಗೊತ್ತಾಯಿತಾ ಎಂದೆಲ್ಲ ಒಂದೇ ಸಮ ಕೇಳಿದಾಗ ವಿಕ್ರಾಂತ್ ಹೇಳುತ್ತಾನೆ ವೇದಾಂತ ಎಲ್ಲಿ ಹೋಗಿದ್ದಾನೆ ಗೊತ್ತಾಗುತ್ತಿಲ್ಲ ಎಂದಾಗ ಅಮೂಲ್ಯಾಗೆ ಬಹಳ ಭಯ ಆಗುತ್ತದೆ.
ಈ ವೇಳೆ ಪ್ರಜ್ವಲ್‌ಗೆ ಕರೆ ಮಾಡಲು ಅಮ್ಮು ಹೇಳುತ್ತಾಳೆ. ಬಳಿಕ ವಿಕ್ರಾಂತ್, ಪ್ರಜ್ವಲ್‌ಗೆ ಕರೆ ಮಾಡುತ್ತಾನೆ. ಈ ವೇಳೆ ಪ್ರಜ್ವಲ್‌ನನ್ನು ಯಾರೋ ಹೊಡೆದು ನಡು ರಸ್ತೆಯಲ್ಲಿ ಎಸೆದು ಹೋಗಿರುತ್ತಾರೆ. ಆ ವೇಳೆ ಅಲ್ಲಿಗೆ ಬಂದಾ ಒಬ್ಬರು ಸರ್ ಸರ್ ಎಂದು ಕರೆಯುತ್ತಾರೆ. ಬಳಿಕ ಪ್ರಜ್ವಲ್ ಜೇಬಿನಿಂದ ಮೊಬೈಲ್ ತೆಗೆದು ಕರೆ ಮಾಡುತ್ತಾರೆ. ಈ ವೇಳೆ ಪ್ರಜ್ವಲ್ ಮೊಬೈಲ್ ಕರೆ ಕಂಡು ಪ್ರಜ್ವಲ್ ಕರೆ ಮಾಡಿದ್ದಾನೆ ಎಂದುಕೊಂಡು ಕರೆ ಸ್ವೀಕರಿಸುತ್ತಾನೆ. ಆದರೆ ಅತ್ತ ಕಡೆಯಿಂದ ಮಾತನಾಡುತ್ತಿರುವ ಧ್ವನಿ ಬೇರೆ ಕಂಡು ಹಲೋ ಸರ್ ಅವರು ಮಾತನಾಡುವ ಸ್ಥಿತಿಯಲ್ಲಿ ಇಲ್ಲ ಎಂದು ಹೇಳಿದಾಗ ವಿಕ್ರಾಂತ್‌ಗೆ ಶಾಕ್ ಆಗುತ್ತದೆ.

ಪ್ರಜ್ವಲ್ ಸ್ಥಿತಿ ಕಂಡು ವಿಕ್ರಾಂತ್ ಶಾಕ್
ಬಳಿಕ ಆತ ಹೇಳಿದ ಅಡ್ರೆಸ್ ಕಡೆಗೆ ಹೋಗುತ್ತಾನೆ. ಮನೆಯಲ್ಲಿ ಎಲ್ಲರೂ ಗಾಬರಿಯಲ್ಲಿ ಇದ್ದಾರೆ. ವೇದಾಂತ ಎಲ್ಲಿ ಕಾಣಿಸುತ್ತಿಲ್ಲ ಎಲ್ಲಿಗೆ ಹೋಗಿರಬೇಕು ಎಂದು ಆಲೋಚಿಸುತ್ತಾ ಇರುತ್ತಾರೆ. ಇದೀಗ ಪ್ರಜ್ವಲ್ ಅನ್ನು ವಿಕ್ರಾಂತ್ ಕರೆದುಕೊಂಡು ಬಂದಿದ್ದಾನೆ. ಪ್ರಜ್ವಲ್ ಬಳಿ ಅಗ್ರಜ ಎಲ್ಲಿದ್ದಾನೆ ಎಂದು ಕೇಳುತ್ತಿದ್ದಾನೆ ವಿಕ್ರಾಂತ್ ಆದರೆ ಪ್ರಜ್ವಲ್ ಮಾತ್ರ ಕೇಡಿಗಳು ಹೊಡೆದ ರಭಸಕ್ಕೆ ಮಾತನಾಡಲು ಸಹ ಆಗುತ್ತಿಲ್ಲ. ವಿಕ್ರಾಂತ್ ಮಾತಿಗೆ ತೊದಲುತ್ತಾ ಇರುತ್ತಾನೆ. ಇದನ್ನು ನೋಡಿ ಇನ್ನೂ ಆತಂಕ ಪಟ್ಟ ವಿಕ್ರಾಂತ್ ಪ್ರಜ್ವಲ್ ಪ್ರಜ್ವಲ್ ಎಂದು ಕರೆಯುತ್ತಾನೆ.

ಅಮೂಲ್ಯಾಗೆ ಗೊತ್ತಾಯ್ತು ವೇದಾಂತ್ ಅಪಹರಣದ ವಿಷಯ!
ಆ ವೇಳೆ ಪ್ರಜ್ವಲ್ ಹೇಳುತ್ತಾನೆ, ವೇದಾಂತ್ ಸರ್ ಕಿಡ್ನಾಪ್ ಆಗಿದ್ದಾರೆ ಎಂದು ಇದನ್ನು ಕೇಳಿದ ಅಮೂಲ್ಯಾಗೆ ಶಾಕ್ ಆಗುತ್ತದೆ. ಬಳಿಕ ವೈದೇಹಿಗೆ ಕೂಡ ಭಯ ಆಗುತ್ತದೆ. ವಿಕ್ರಾಂತ್ ಅನುಮಾನ ನಿಜ ಆಯಿತು ಕೂಡ. ಇತ್ತ ಸುಹಾಸಿನಿ ಹಾಗೂ ವೈದೇಹಿ ಎಂದು ಹೇಳಿಕೊಂಡು ಮನೆ ಸೇರಿರುವಾಕೆ ಇಬ್ಬರು ಸೇರಿ ಜಗಳ ಮಾಡುತ್ತಾರೆ. ಸುಹಾಸಿನಿಯಂತೂ ಕುಪಿತಗೊಂಡು ನನ್ನ ಅವಳು ಇವಲೆಂದು ಕರೆಯಬೇಡ ಮರ್ಯಾದೆ ಕೊಟ್ಟು ಮಾತನಾಡು ಇಲ್ಲ ಎಂದರೆ ಎಚ್ಚರಿಕೆ ಎಂದು ಖಡಕ್ ಆಗಿ ಹೇಳುತ್ತಾಳೆ.

ಇಕ್ಕಟ್ಟಿಗೆ ಸಿಲುಕಿರುವ ನಕಲಿ ವೈದೇಹಿ
ಆ ವೇಳೆ ಕುಪಿತಗೊಂಡ ಚಂದ್ರಕಲಾ, ಏನು ಇಲ್ಲ ಎಂದರೆ ನಿನಗೆ ನಾನು ಯಾಕೆ ಮಾರ್ಯದೆ ಕೊಡಬೇಕು. ನನ್ನ ಗಂಡ ನಿನ್ನನ್ನು ಮನೆ ನೋಡಿಕೊಳ್ಳಲು ಇಟ್ಟಿದ್ದಾರೆ. ನಿನ್ನ ಲೆಕ್ಕಕ್ಕೆ ವೈದೇಹಿ ಮಾತ್ರ ಮನೆ ಕೆಲಸದವಳು. ನೀನು ಮನೆ ಕೆಲಸದವಳು ಎಂದು ಹೇಳಿದಾಗ ಸುಹಾಸಿನಿ ಏನು ವಿಚಾರ ಎಂದು ಡೈರೆಕ್ಟ್ ಆಗಿ ಕೇಳುತ್ತಾಳೆ. ಇದನ್ನು ಕೇಳಿ ಚಂದ್ರಕಲಾ ಹೇಳುತ್ತಾಳೆ. ಆ ಮುದುಕಿ ಕೈ ಒತ್ತು ಕಾಲು ಒತ್ತು ಎಂದು ಟಾರ್ಚರ್ ನೀಡುತ್ತಿದ್ದಾರೆ, ಆಶ್ರಮಕ್ಕೆ ಕರೆದುಕೊಂಡು ಹೋಗು ಅಲ್ಲಿ ಇರುವವರನ್ನು ನನಗೆ ಪರಿಚಯಿಸು ಎಂದು ಹೇಳುತ್ತಿದ್ದಾಳೆ. ನೋಡು ನೀನು ಏನು ಮಾಡುತ್ತೀಯಾ ಗೊತ್ತಿಲ್ಲ. ಆ ಮುದುಕಿ ನನ್ನ ಆಶ್ರಮಕ್ಕೆ ಕರೆದುಕೊಂಡು ಹೋಗಬಾರದು ಹಾಗೆ ಮಾಡು ಎಂದು ಹೇಳುತ್ತಾಳೆ. ಮುಂದೆ ಕುತಂತ್ರಿ ಚಂದ್ರಕಲಾ ಹಾಗೂ ಅಗ್ನಿ ಯೋಜನೆ ಏನು ಎಂಬುವುದೇ ಗೌಪ್ಯವಾಗಿದೆ.


Click it and Unblock the Notifications











