ಗಟ್ಟಿಮೇಳ: ಧರ್ಮ ಸಂಕಟಕ್ಕೆ ಸಿಲುಕಿದ ಅದಿತಿ, ಮುಂದೇನು ಮಾಡುತ್ತಾಳೆ?
'ಗಟ್ಟಿಮೇಳ' ಧಾರವಾಹಿ ಅತ್ಯುತ್ತಮವಾಗಿ ಮೂಡಿಬರುತ್ತಿದೆ. ಇದೀಗ ಅದಿತಿ ಧರ್ಮ ಸಂಕಟದಲ್ಲಿ ಸಿಲುಕುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ. ಅದಿತಿಗೆ ದೇವರ ಸನ್ನಿಧಿಯಲ್ಲಿ ಪೋಲಿಗಳು ಸುತ್ತುವರೆದು ಕಾಟ ಕೊಡುತ್ತಿರುತ್ತಾರೆ. ಆದರೆ ಅದನ್ನು ನೋಡಿದ ಒಬ್ಬಾತ ದುಷ್ಟರ ಜೊತೆ ಫೈಟ್ ಮಾಡಿ ಅವರನ್ನು ಓಡಿಸಿ ಬಿಡುತ್ತಾನೆ.
ಇದನ್ನು ನೋಡಿದ ಅದಿತಿ ಥಾಂಕ್ಸ್ ಎಂದು ಹೇಳುತ್ತಾಳೆ. ಇದೆಲ್ಲವನ್ನೂ ನೋಡಿದ ಪರಿಮಳಗೆ ಬಹಳ ಖುಷಿಯಾಗುತ್ತದೆ. ಆತನ ಕೈಯಲ್ಲಿ ರಕ್ತ ಸುರಿಯುತ್ತಿರುವುದನ್ನು ಕಂಡು ಪರಿಮಳ ಕರವಸ್ತ್ರವನ್ನೂ ಕೊಟ್ಟು ಕಟ್ಟಿಕೊಳ್ಳುವಂತೆ ಹೇಳುತ್ತಾಳೆ.
ಇತ್ತ ಅದಿತಿಯನ್ನು ರಕ್ಷಿಸಿದ ಹುಡುಗನ ತಂದೆ ತಾಯಿ ತಮ್ಮ ಮಗನಿಗೆ ಒಳ್ಳೆಯ ಹುಡುಗಿ ಸಿಗಲಿ ಎಂದು ಪೂಜೆ ಮಾಡಿಸಲು ಬಂದಿರುತ್ತಾರೆ. ಅದಕ್ಕೆ ಅರ್ಚಕರು ಒಳ್ಳೆಯ ಹುಡುಗನನ್ನು ನೋಡೋಣ ನಿಮ್ಮ ಹುಡುಗ ಡಾಕ್ಟರ ಅಲ್ಲವೇ ಬಹಳ ಇಚ್ಛೆ ಇಟ್ಟುಕೊಂಡಿರುವ ಹಾಗೆ ಕಾಣಿಸುತ್ತದೆ ಎಂದು ಹೇಳುತ್ತಾರೆ. ಅದಕ್ಕೆ ಹುಡುಗನ ತಾಯಿ ಅಯ್ಯೋ ಇಲ್ಲ. ನಮಗೆ ವರದಕ್ಷಿಣೆ ಕೊಡೋದು ತೆಗೆದುಕೊಳ್ಳುವುದರ ಬಗ್ಗೆ ಆಸೆ ಇಲ್ಲ. ಅವರು ಕೊಡುತ್ತೇವೆ ಎಂದರು ನಾವು ತೆಗೆದುಕೊಳ್ಳುವುದಿಲ್ಲ ಎನ್ನುತ್ತಾರೆ.
ಅದಕ್ಕೆ ಹುಡುಗನ ತಂದೆ ಹೇಳುತ್ತಾರೆ. ನಮಗೆ ಹಣ ಮುಖ್ಯ ಅಲ್ಲ ಗುರುಗಳೇ ಗುಣ ಮುಖ್ಯ. ಗುಣದಲ್ಲಿ ಶ್ರೀಮಂತಿಕೆ ಇರಬೇಕು. ನಮ್ಮ ಮನೆಗೆ ಹೊಂದಿಕೊಂಡು ಹೋಗಬೇಕು. ಜೊತೆಗೆ ಗುರು ಹಿರಿಯರನ್ನು ಗೌರವಿಸಬೇಕು ಆ ಥರದ ಹುಡುಗ ಇದ್ದರೆ ಹೇಳಿ. ಗುರುಗಳೇ ಒಂದೊಳ್ಳೆ ಸಂಬಂಧ ಇದ್ದರೆ ಹೇಳಿ ಎಂದಾಗ ಪರಿಮಳ ಖುಷಿಯಾಗಿ ಅದಿತಿ ಕಡೆಗೆ ನೋಡುತ್ತಾಳೆ.

ಸಂಕಷ್ಟಕ್ಕೆ ಸಿಲುಕುತ್ತಿದ್ದಾಳಾ ಅದಿತಿ
ಅದಿತಿ ಮುಖ ಸಿಂಡರಿಸುತ್ತಾಳೆ. ಹುಡುಗನ ತಂದೆ ಹೇಳುತ್ತಾರೆ ನಮಗೆ ಇರೋನು ಒಬ್ಬನೇ ಮಗ ಅವನನ್ನು ಬರೋ ಹುಡುಗಿ ಚೆನ್ನಾಗಿ ನೋಡಿಕೊಳ್ಳಬೇಕು ಅಷ್ಟೇ. ವರದಕ್ಷಿಣೆ ವರೋಪಚಾರ ನಮಗೇನು ಬೇಕಾಗಿಲ್ಲ. ನಿಮ್ಮ ಹುಡುಗ ವಿನಯತೆ, ಸುಸಂಸ್ಕೃತ ಇಂಥ ಹುಡುಗನ ಮದುವೆಯಾಗುವುದಕ್ಕೆ ಚಿನ್ನದಂತಹ ಹುಡುಗ ಸಿಕ್ಕೆ ಸಿಗುತ್ತಾನೆ. ಹುಡುಗಿ ಕೂಡ ಅದೃಷ್ಟವಂತಳಾಗಿರಬೇಕು. ಬೇಗ ನಿನಗೆ ಮದುವೆ ಆಗಲಿ ಎಂದು ಅರ್ಚಕರು ಹಾರೈಸುತ್ತಾರೆ.

ಮದುವೆ ಮಾಡಿಸಿ ಎಂದ ಅರ್ಚಕ
ಬಳಿಕ ಜಾತಕ ತೆಗೆದು ಹುಡುಗನ ತಂದೆ ನೋಡುವಾಗ ಅದು ಬೇರೆಯವರ ಜಾತಕವಾಗಿರುತ್ತದೆ. ಅದಕ್ಕೆ ಹೇಳುತ್ತಾರೆ ಗುರುಗಳೇ ಇದು ಬೇರೆ ಜಾತಕ ನನ್ನ ಮಗನದ್ದು ಅಲ್ಲ ಎಂದು ಹೇಳುತ್ತಾರೆ. ಇತ್ತ ಪರಿಮಳ ಕೂಡ ನೋಡುತ್ತಾಳೆ. ಅದಕ್ಕೆ ಅರ್ಚಕರು ಹೇಳುತ್ತಾರೆ. ಇವರಿಬ್ಬರ ಜಾತಕಾನು ಅದಲುಬದಲು ಆಗಿದೆ. ಇದರಿಂದ ಇವರಿಬ್ಬರಿಗೂ ಮದುವೆ ಮಾಡಿದರೆ ಒಳ್ಳೆದಾಗುತ್ತದೇ ಎಂದಾಗ ಅದಿತಿಗೆ ಶಾಕ್ ಆಗುತ್ತದೆ.

ಮದುವೆಗೆ ಒಪ್ಪುತ್ತಾಳಾ ಅದಿತಿ?
ಬಳಿಕ ಅರ್ಚಕರು ಹೇಳುತ್ತಾರೆ. ಈ ರೀತಿ ಜಾತಕ ಹೊಂದಾಣಿಕೆ ಆಗುವುದು ತುಂಬಾ ಅಪರೂಪ ಲಕ್ಷದಲ್ಲಿ ಒಂದೋ ಎರಡೋ ಅಷ್ಟೆ. ಇವರಿಬ್ಬರ ಜಾತಕ ಹೊಂದಾಣಿಕೆ ಆಗಿದೆ. ಇವರಿಬ್ಬರ ಜಾತಕ ಹೊಂದಾಣಿಕೆ ಆಗುತ್ತಿದೆ ಎಂದರೆ ಇವರಿಬ್ಬರ ಮದುವೆ ಮಾಡಿ ಮುಗಿಸೋದು ಉತ್ತಮ. ಆ ಭಗವಂತ ಇಬ್ಬರಿಗೂ ಒಳ್ಳೇದು ಮಾಡಲಿ ಎಂದು ಆಶಿರ್ವಾದ ಮಾಡುತ್ತಾರೆ. ಇನ್ನೂ ಅದಿತಿ ಮನಸಲ್ಲಿ ಧ್ರುವ ಇದ್ದಾನೆ. ಈಕೆ ಮದುವೆಗೆ ಒಪ್ಪಿಕೊಳ್ಳುತ್ತಾಳ ಅಥವಾ ತನ್ನ ಪ್ರೀತಿನ ಮನೆಯವರ ಬಳಿ ಹೇಳುತ್ತಾಳ ಎಂಬುವುದನ್ನು ಕಾದುನೋಡಬೇಕಿದೆ.

ಟೀ ಗಾಗಿ ಜಗಳ ಮಾಡಿದ ವೇದಾಂತ-ಅಮ್ಮು
ಇತ್ತ ವೇದಾಂತ ಹಾಗೂ ಅಮ್ಮು ಟೀ ಗಾಗಿ ಹಾಗೂ ಜಗಳ ಮಾಡುತ್ತಿದ್ದಾರೆ. ಅಮ್ಮು ಹೇಳುತ್ತಾಳೆ 10 ರೂಪಾಯಿ ಟೀ ಕುಡಿದರೆ ಅದರ ದುಡ್ಡು ಮಾತ್ರ ವಸೂಲಿ ಮಾಡೋದೆ ಎಂದು ಖಾದಾಖಂಡಿತವಾಗಿ ಹೇಳುತ್ತಾಳೆ. ಇದಕ್ಕೆ ಕೋಪಗೊಂಡ ವೇದಾಂತ ಹೇ. ಇದೆಲ್ಲಾ ನನಗೆ ಆಗೋದಿಲ್ಲ ಎಂದು ವಾರ್ನಿಂಗ್ ಮಾಡಿದಾಗ ಅಮ್ಮು ಹೇಳುತ್ತಾಳೆ ನನಗೂ ಎನು ಗೊತ್ತಿಲ್ಲ. ನನಗೆ ಹಣ ಕೊಡು ಎಂದಾಗ ವೇದಾಂತ ಚೀಟಿ ತೆಗೆದು ನೋಡುತ್ತಾನೆ ಬಳಿಕ ಹೇಳುತ್ತಾನೆ 425 ರೂಪಾಯಿ ಆಯ್ತಾ ಒಂದು ಟೀ ಗೆ ಅಂದಾಗ ಶಾಕ್ ಆಗುತ್ತಾನೆ. ಇವರಿಬ್ಬರ ಜಗಳ ಯಾವಾಗ ಕೊನೆಯಾಗುತ್ತೋ. ಜಗಳ ಗಂಟಿ ಅಮ್ಮು ಕೈಗೆ ಸಿಕ್ಕಿದ ವೇದಾಂತ ನಲುಗಿ ಹೋಗಿದ್ದಾನೆ.


Click it and Unblock the Notifications











