ಕೊಲ್ಲಲು ಬಂದ ಆಗ್ನಿಯಿಂದ ಧ್ರುವನನ್ನು ಕಾಪಾಡಿಕೊಳ್ಳುತ್ತಾಳಾ ವೈದೇಹಿ?
'ಗಟ್ಟಿ ಮೇಳ' ಧಾರಾವಾಹಿ ಅದ್ಭುತವಾಗಿ ಮೂಡಿ ಬರುತ್ತಿದ್ದು ನೋಡುಗರ ಗಮನ ಸೆಳೆಯುತ್ತಿದೆ. ಇದೀಗ ವಸಿಷ್ಠ ಕುಟುಂಬದ ಮೇಲೆ ಹಗೆ ಸಾಧಿಸುತ್ತಿರುವ ಅಗ್ನಿ ಇದೀಗ ವಸಿಷ್ಠ ಮನೆಗೆ ಆಗಮಿಸುತ್ತಾರೆ. ಇನ್ನೂ ಈ ವೇಳೆ ಚಂದ್ರಕಲಾ ಹಾಗೂ ಆಗ್ನಿ ಧ್ರುವನನ್ನು ಹೇಗಾದರೂ ಮಾಡಿ ಕೊಲೆ ಮಾಡಬೇಕು ಎಂದು ಅಂದುಕೊಳ್ಳುತ್ತಾ ಇರುತ್ತಾರೆ.
ಈ ವೇಳೆ ಅಲ್ಲಿಗೆ ಬಂದ ಸುಹಾಸಿನಿಯನ್ನು ನೋಡಿದ ಅಗ್ನಿ ಕೇಳುತ್ತಾನೆ, 'ಎಲ್ಲಿ ಆ ವೀಲ್ ಚೇರ್‌ನಲ್ಲಿರುವ ಧ್ರುವ. ನಾನು ಇವತ್ತು ಬಂದಿರುವುದೇ ಅವನನ್ನು ಸಾಯಿಸಲು ಎಂದು ಹೇಳುತ್ತಾನೆ. ಇದನ್ನು ಕೇಳಿದ ಸುಹಾಸಿನಿಗೆ ಶಾಕ್ ಆಗುತ್ತದೆ. ಇದಕ್ಕೂ ಮುಂಚೆ ವೈದೇಹಿ ಬಳಿ ಬಂದ ಚಂದ್ರಕಲಾ ಮಾತ್ರೆ ತೆಗೆದುಕೊಂಡು ಬಾ ಎಂದು ಕಳುಹಿಸುತ್ತಾಳೆ. ಇದನ್ನು ಕೇಳಿಸಿಕೊಂಡ ಆಕೆ ಉಮ್ಮಳಿಸಿ ಬರುತ್ತಿರುವ ಅಳುವನ್ನು ಕಂಡು ಅಲ್ಲಿಂದ ಹೋಗುತ್ತಾಳೆ. ಇತ್ತ ಅಮೂಲ್ಯ ತನ್ನ ತಾಯಿ ಬಳಿಯೂ ದುಃಖವನ್ನು ತೋಡಿಕೊಳ್ಳಲು ಆಗದೆ ತಾನೇ ಎಲ್ಲವನ್ನೂ ನುಂಗಿ ಕೊಂಡು ಅಮ್ಮನ ಬಳಿ ಏನೂ ನಡೆದೇ ಇಲ್ಲದ ಹಾಗೆ ಇರುತ್ತಾಳೆ.

ಅಮ್ಮನ ಕರೆಯನ್ನು ಸ್ವೀಕರಿಸದ ಅಮ್ಮು
ಇದನ್ನು ನೋಡಿದ ಪರಿಮಳ, ಮಗಳಿಗೆ ಏನೋ ಸಮಸ್ಯೆ ಆಗಿದೆ ಇಲ್ಲ ಎಂದರೆ ಈ ರೀತಿ ನನ್ನ ಮಗಳು ಸಪ್ಪೆ ಮುಖ ಮಾಡಿಕೊಂಡು ಇರುವುದು ಇಲ್ಲ ಎಂದು ಕೊಂಡು ಪರಿಮಳ ಹೇಳುತ್ತಾಳೆ 'ಏನು ವಿಚಾರ ಎಂಬುವುದನ್ನು ನನ್ನ ಬಳಿ ಹೇಳು' ಎಂದು ಹೇಳುತ್ತಾಳೆ. ಆಗ ಅಮೂಲ್ಯ ದುಃಖ ತಾಳಲು ಆಗದೆ ಅಮ್ಮ ನಾನು ತುಂಬಾ ಕೆಲಸ ಮಾಡುತ್ತಾ ಇದ್ದೇನೆ ಒಂದು ಹತ್ತು ನಿಮಿಷ ನನಗೆ ಸಮಯ ಕೊಡು ನಾನು ಆಮೇಲೆ ಕರೆ ಮಾಡುತ್ತೇನೆ' ಎನ್ನುತ್ತಾಳೆ.

ಪರಿಮಳಗೆ ಅಮ್ಮು ಮಾತಿನಿಂದ ಬೇಸರ
ಆಗ ಪರಿಮಳ ಹೇ ಅಮ್ಮು ಯಾಕೆ ಇಷ್ಟು ಅರ್ಜೆಂಟ್ ಮಾಡುತ್ತಿದ್ದಿಯ ನೀನು. ಎರಡು ನಿಮಿಷ ನನ್ನ ಬಳಿ ಮಾತನಾಡಲು ನಿನಗೆ ಪುರುಸೊತ್ತು ಇಲ್ವಾ ಎಂದು ಪರಿಮಳ ಕೇಳಿದಾಗ ಅಮ್ಮು ಬೇಸರದಿಂದ ಸರಿ ಅಮ್ಮ. ಏನು ಹೇಳು ಎಂದು ಹೇಳುತ್ತಾಳೆ ಅದಕ್ಕೆ ಪರಿಮಳ, ಅಮ್ಮು ನಿನ್ನ ಮನಸ್ಸು ಚೆನ್ನಾಗಿಲ್ಲ ಎಂದು ಅನ್ನಿಸುತ್ತಾ ಇದೆ. ನನ್ನಿಂದ ಏನೋ ಮುಚ್ಚಿಡುತ್ತಾ ಇದ್ದೀಯಾ. ನನ್ನ ಬಳಿ ಆದರೂ ಹೇಳಬೇಕು ಅಲ್ವಾ ಎಂದು ಹೇಳುತ್ತಾಳೆ.

ಅಮ್ಮು ಬಾಯಿ ಬಿಡಿಸಲು ಪರಿಮಳ ಪ್ರಯತ್ನ
ಅದಕ್ಕೆ ಅಮ್ಮು, ಅಮ್ಮ ಏನು ಇಲ್ಲ ಅಮ್ಮ ನೀನು ಅದರ ಬಗ್ಗೆ ಯೋಚನೆ ಮಾಡಬೇಡ. ಏನು ಇಲ್ಲ ಅಂಥದ್ದು ಎಂದು ಹೇಳುತ್ತಾಳೆ. ಇದನ್ನು ಕೇಳಿದ ಪರಿಮಳ, ನೀನು ಬಾಯಿ ಮಾತಿಗೆ ಹೀಗೆ ಹೇಳುತ್ತಾ ಇದ್ದೀಯಾ ನನಗೆ ಗೊತ್ತು. ನಾನು ನಿನ್ನ ಅಮ್ಮ ನೆನಪಲ್ಲಿ ಇಟ್ಟುಕೋ. ನಿನ್ನ ಮನದಲ್ಲಿ ಏನು ಓಡುತ್ತಾ ಇದೆ ಎಂಬುವುದು ನನಗೆ ಮಾತಿನಲ್ಲಿ ಗೊತ್ತಾಗುತ್ತಾ ಇದೆ. ಸುಮ್ಮನೆ ಏನಾಗಿದೆ ಹೇಳು ಚಿಕ್ಕ ಮಕ್ಕಳ ರೀತಿ ಆಡಬೇಡ ಎಂದು ಹೇಳುತ್ತಾಳೆ.

ವೇದಾಂತನ ನೆನೆದು ಬೇಸರ
ಇದನ್ನು ಕೇಳಿ ಅಮ್ಮು ಜೋರಾಗಿ ಹೇಳುತ್ತಾಳೆ. ಅಮ್ಮ ಪ್ಲೀಸ್ ಅಮ್ಮ ನಮ್ಮದೇ ಸಾವಿರಾರು ಸಮಸ್ಯೆ ಇದೆ ಎಲ್ಲದನ್ನೂ ನಿನ್ನ ಬಳಿ ಹೇಳಲು ಆಗುವುದಿಲ್ಲ ಹೇಳಿದರು ಅದನ್ನು ನಿನ್ನ ಕೈಯಿಂದ ಬಗೆ ಹರಿಸಲು ಸಾಧ್ಯ ಆಗುವುದಿಲ್ಲ. ನೀನು ಯೋಚನೆ ಮಾಡಬೇಡ ಆರಾಮವಾಗಿ ಇರು ಪ್ಲೀಸ್ ಎಂದು ಹೇಳುತ್ತಾಳೆ. ಆದರೆ ಪರಿಮಳ ಮಾತ್ರ ಏನೋ ಆಗಬಾರದು ನಡೆದು ಹೋಗಿದೆ ಅದಕ್ಕೆ ಹೀಗೆ ಆಡುತ್ತಿದ್ದಾರೆ ಎಂದು ಮನದಲ್ಲಿ ಅಂದುಕೊಳ್ಳುತ್ತಾ ಇರುತ್ತಾಳೆ. ಬಳಿಕ ಪರಿಮಳ ಬೇಸರದಿಂದ, 'ಅಮ್ಮು ನೀನು ಯಾಕೆ ಇಷ್ಟು ಜೋರಾಗಿ ಮಾತನಾಡುತ್ತಾ ಇದ್ದೀಯಾ. ಅದೇನು ಆಯ್ತು ಎಂದು ನನ್ನ ಬಳಿ ಹೇಳು, ನಾನು ನಿನ್ನ ತಾಯಿ ನನ್ನ ಜೋತೆನು ನಿನಗೆ ಹೇಳಲು ಇಷ್ಟ ಇಲ್ವಾ ಎಂದು ಕೇಳುತ್ತಾಳೆ. ಈ ವೇಳೆ ಅಮ್ಮನ ಬಳಿ ಹೇಳುತ್ತಾಳೆ.. ಎನು ಅಂತ ಹೇಳಲಿ ಅಮ್ಮ ವೇದಾಂತ ಕಿಡ್ನಾಪ್ ಆಗಿದ್ದಾನೆ ಎಂದು ಹೇಳಲಾ, ಎಂದಾಗ ಪರಿಮಳ ಗೆ ಶಾಕ್ ಆಗುತ್ತದೆ. ಮುಂದೇನಾಗುತ್ತದೆ ನೋಡಬೇಕಿದೆ.


Click it and Unblock the Notifications











