ಗಟ್ಟಿಮೇಳ: ವೈದೇಹಿ ಅಸ್ತಿತ್ವವನ್ನೆ ಅಳಿಸಿದ ಸುಹಾಸಿನಿ!

By ಪೂರ್ವ

'ಗಟ್ಟಿಮೇಳ' ಧಾರವಾಹಿ ಚೆನ್ನಾಗಿ ಮೂಡಿ ಬರುತ್ತಿದ್ದು ನೋಡುಗರ ಮನ ಸೆಳೆಯುತ್ತಿದೆ. ಇತ್ತೀಚಿನ ದಿನಗಳಲ್ಲಿ ಹಲವು ಟ್ವಿಸ್ಟ್‌ಗಳ ಮೂಲಕ ಈ ಧಾರಾವಾಹಿಯ ವೀಕ್ಷಕರ ಕುತೂಹಲ ಹೆಚ್ಚು ಮಾಡಿದೆ. ವೇದಾಂತ ತನ್ನ ಅಮ್ಮನನ್ನು ಹುಡುಕ ಬೇಕು ಎಂದು ಪ್ರಯತ್ನ ಆರಂಭಿಸಿದ್ದಾನೆ. ವೇದಾಂತ್‌ಗೆ ಇದೀಗ ಅಮ್ಮ ಸಿಗುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ.

ಆದರೆ ಸುಹಾಸಿನಿಯ ಕೈವಾಡದಿಂದ ಅಮ್ಮನ ಸುಳಿವು ಸಿಗದೇ ಹೋಗುವ ಅಪಾಯವೂ ಇದೆ. ಆದರೆ ಇದೆಲ್ಲದಕ್ಕೂ ಸುಹಾಸಿನಿಯೆ ಕಾರಣ ಎಂದು ವಿಚಾರ ವೇದಾಂತ್‌ಗೆ ತಿಳಿಯುತ್ತಿಲ್ಲ. ಧ್ರುವ, ಆಫೀಸ್‌ನಲ್ಲಿ ಅಮ್ಮನ ವಿಡಿಯೋ ಕಂಡು ಇಷ್ಟು ದಿನ ಅಮ್ಮ ನಮ್ಮೊಂದಿಗೆ ಇದ್ದರೂ ಆದರೆ ಆಕೆಯನ್ನು ಗುರುತಿಸಲು ನಮ್ಮಿಂದ ಆಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿ ಅಲ್ಲಿಂದ ಅಮ್ಮ ನನ್ನು ನೋಡಲು ಹೊರಟಿದ್ದ ಆದರೆ ಅಷ್ಟರಲ್ಲಿ ಆಗಲೇ ಆಗಬಾರದ್ದು ನಡೆದು ಹೋಗಿ ಆಗಿತ್ತು.

ಆದರೆ ನಿಜವಾದ ಅಮ್ಮನನ್ನು ನೋಡಿದ್ದು ಮಾತ್ರ ಧ್ರುವ. ಆ ಸತ್ಯ ತಿಳಿದುಕೊಂಡಿರುವುದು ಇದೀಗ ಆತನ ಪ್ರಾಣಕ್ಕೆ ಸಂಚಕಾರ ತಂದೊಡ್ಡಿದೆ. ಆದರೆ ಇದನ್ನೆಲ್ಲ ನೋಡಿದ ಧ್ರುವ ಮಾತ್ರ ಏನು ಹೇಳದ ಸ್ಥಿತಿಯಲ್ಲಿ ಇದ್ದಾನೆ. ಇದೀಗ ಪೆನ್ ಡ್ರೈವ್ ಸಿಕ್ಕಿದೆ ಇದರಿಂದ ನಮ್ಮ ಅಮ್ಮ ನಮಗೆ ದೊರಕಿ ಬಿಟ್ಟರು ಎಂಬ ಖುಷಿಯಲ್ಲಿ ವಸಿಷ್ಠ ಕುಟುಂಬ ಇದ್ದರೆ ಸುಹಾಸಿನಿ ಮಾತ್ರ ಬಹಳ ಖುಷಿಯಲ್ಲಿ ಇದ್ದಾಳೆ.

ಅಮ್ಮನನ್ನು ತಬ್ಬಿಕೊಂಡ ವಿಕ್ರಾಂತ್

ಅಮ್ಮನನ್ನು ತಬ್ಬಿಕೊಂಡ ವಿಕ್ರಾಂತ್

ವೈದೇಹಿಯ ಅಸ್ತಿತ್ವ ಇಲ್ಲದ ಹಾಗೆ ಮಾಡಿ ವೈದೇಹಿಗೆ ಶಾಕ್ ನೀಡುತ್ತಾಳೆ ಸುಹಾಸಿನಿ. ತಮ್ಮ ಮಕ್ಕಳ ಬಳಿ ತಾನೇ ನಿಮ್ಮ ಹೆತ್ತ ತಾಯಿ ಎಂದು ಹೇಳಿಕೊಳ್ಳಲು ಆಗದ ಸ್ಥಿತಿ ವೈದೇಹಿಯದ್ದು. ಅದನ್ನೇ ಬಂಡವಾಳವಾಗಿ ಬಳಸಿಕೊಂಡ ಸುಹಾಸಿನಿ ಮಾತ್ರ ಮಕ್ಕಳ ಮನಸ್ಸಿನ ಜೊತೆ ಆಟವಾಡಲು ಪ್ರಯತ್ನ ಮಾಡುತ್ತಿದ್ದಾಳೆ. ವೈದೇಹಿ ಈಕೆ ಎಂದು ಬೇರೆಯವರನ್ನು ತೋರಿಸಿ ಬಿಂಬಿಸುತ್ತಿದ್ದಾರೆ. ಧ್ರುವ ನೋಡಿದ ಪೆನ್ ಡ್ರೈವ್ ಸಿಕ್ಕಿತು ಎಂಬ ಖುಷಿಯಲ್ಲಿ ಇದ್ದ ವಸಿಷ್ಠ ಕುಟುಂಬ ಪೆನ್ ಡ್ರೈವ್ ಟಿವಿ ಗೆ ಸಿಕ್ಕಿಸಿ ಅಮ್ಮ ಯಾರೆಂದು ನೋಡುತ್ತಾರೆ.

ವೈದೇಹಿ ಬದಲು ಬೇರಾರೋ ಬರುತ್ತಾರೆ

ವೈದೇಹಿ ಬದಲು ಬೇರಾರೋ ಬರುತ್ತಾರೆ

ಅಮ್ಮ ಸಿಕ್ಕಳು ಎಂದು ಅಮ್ಮನನ್ನೆ ಬಿಗಿದಪ್ಪಿ ಕೊಳ್ಳುತ್ತಾನೆ ವಿಕ್ರಾಂತ್ ಇದನ್ನು ನೋಡಿದ ವೈದೇಹಿ ಮಾತ್ರ ನಾನೇ ನಿನ್ನ ಅಮ್ಮ ಎಂದು ಹೇಳುವಷ್ಟರಲ್ಲಿ ಟಿವಿಯಲ್ಲಿ ದೀಪ ಹಿಡಿದು ಯಾರೋ ಬೇರೆಯವರು ಬರುವುದನ್ನು ನೋಡಿದ ವೈದೇಹಿಗೆ ಶಾಕ್ ಆಗುತ್ತದೆ. ಸುಹಾಸಿನಿ, ವೈದೇಹಿಯ ಅಸ್ತಿತ್ವವನ್ನು ಅಳಿಸಿ ಹಾಕುವ ಎಲ್ಲಾ ಪ್ರಯತ್ನ ಮಾಡಿದ್ದಾಳೆ ಎಂದು ವೈದೇಹಿ ಗೆ ಸ್ಪಷ್ಟ ವಾಗಿ ತಿಳಿಯುತ್ತದೆ.

ವೈದೇಹಿ ಗೆ ಶಾಕ್ ನೀಡಿದ ಸುಹಾಸಿನಿ

ವೈದೇಹಿ ಗೆ ಶಾಕ್ ನೀಡಿದ ಸುಹಾಸಿನಿ

ಟಿವಿಯಲ್ಲಿ ದೀಪ ಹಿಡಿದು ಬರುವ ಆಕೆಯೇ ನಮ್ಮ ಅಮ್ಮ ಎಂದು ಎಲ್ಲರೂ ಖುಷಿಯಿಂದ ನೋಡುತ್ತಿರುತ್ತಾರೆ. ಅಜ್ಜಿಗೆ ಕಣ್ಣು ಕಾಣಿಸದ ಹಿನ್ನೆಲೆ ಏನು ತಿಳಿಯುವುದಿಲ್ಲ. ಇದೀಗ ಮನೆಯವರೆಲ್ಲರೂ ಖುಷಿಯಲ್ಲಿ ತೇಲಾಡುತ್ತಿದ್ದಾರೆ. ನನ್ನ ಅಮ್ಮ ಸಿಕ್ಕಿ ಬಿಟ್ಟರು ಎಂದು ವಿಕ್ರಾಂತ್, ವೇದಾಂತ ಖುಷಿ ಪಡುತ್ತಾರೆ. ಮನೆಯಲ್ಲಿ ಮರೆಯಲ್ಲಿ ಅಳುತ್ತಿದ್ದ ವೈದೇಹಿಯನ್ನೂ ನೋಡಿದ ವಿಕ್ರಾಂತ್, ವೈದೇಹಿ ಹತ್ತಿರಕ್ಕೆ ಬರುತ್ತಾನೆ. ಆಕೆಯ ಕಣ್ಣಿನಲ್ಲಿ ಖುಷಿ ಹಾಗೂ ದುಃಖದ ಕಾರ್ಮೋಡ ಕವಿದಿರುತ್ತದೆ.

ಅಮ್ಮನನ್ನು ನೋಡಲು ಕಾತರಗೊಂಡ ವೇದಾಂತ

ಅಮ್ಮನನ್ನು ನೋಡಲು ಕಾತರಗೊಂಡ ವೇದಾಂತ

ಇದನ್ನೆಲ್ಲ ನೋಡಿದ ವಿಕ್ರಾಂತ್ ಕೂಡ ವೈದೇಹಿ ಬಳಿ ಬಂದು ವೈದೇಹಿಯನ್ನೂ ತಬ್ಬಿಕೊಂಡು ಜೋರಾಗಿ ಅಳುತ್ತಾನೆ. ಇದನ್ನು ಕಂಡ ವೈದೇಹಿ ಕೂಡ ಜೋರಾಗಿ ಅಳುತ್ತಾಳೆ. ಬಳಿಕ ವೈದೇಹಿಯನ್ನೂ ವಿಕ್ರಾಂತ್ ಕರೆದುಕೊಂಡು ಬರುತ್ತಾನೆ. ಇದನ್ನೆಲ್ಲ ನೋಡಿದ ಅಮ್ಮು ವೇದಾಂತನಿಗೂ ಅಳು ಬರುತ್ತದೆ. ಟಿವಿಯನ್ನು ತೋರಿಸಿ ಅಮ್ಮ ನನಗೆ ನಮ್ಮಮ್ಮ ಸಿಕ್ಕಿ ಬಿಟ್ಟರು ಅವರೇ ನನ್ನ ಅಮ್ಮ ಎಂದು ಹೇಳುತ್ತ ಅಳುತ್ತಾನೆ. ಟಿವಿ ನೋಡಿ ವೈದೇಹಿಗೆ ಶಾಕ್ ಆದರೂ ಮಕ್ಕಳಿಗೆ ಖುಷಿಯಾಗುತ್ತದೆ.

More from Filmibeat

English summary
Kannada serial Gattimela written updated on 19th September know more about episode.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X