For Quick Alerts
  ALLOW NOTIFICATIONS  
  For Daily Alerts

  ಧ್ರುವ ಪ್ರಾಣಕ್ಕೆ ಸಂಚಕಾರ: ತಿಳಿಯದೆ ತಪ್ಪು ಮಾಡಿದ ವೇದಾಂತ!

  By ಪೂರ್ವ
  |

  'ಗಟ್ಟಿ ಮೇಳ' ಧಾರಾವಾಹಿ ಚೆನ್ನಾಗಿ ಮೂಡಿ ಬರುತ್ತಿದ್ದು ನೋಡುಗರ ಗಮನ ಸೆಳೆಯುತ್ತಿದೆ. ಇದೀಗ ಚಂದ್ರಕಲಾ ಧ್ರುವನಿಗೆ ಕಾಟ ಕೊಡಲು ಶುರು ಮಾಡಿದ್ದಾಳೆ. ಅಮೂಲ್ಯ ತನ್ನ ಮೈಧುನನ್ನು ಮಗನ ಹಾಗೆ ನೋಡಿಕೊಳ್ಳುತ್ತಿದ್ದಾರೆ. ಇದನ್ನೆಲ್ಲ ನೋಡಿದ ವೈದೇಹಿಗೆ ಕೊಂಚ ಸಮಾಧಾನವಾಗುತ್ತದೆ. ತನ್ನ ಮಗನನ್ನು ಯಾವಾಗ ಸುಹಾಸಿನಿ ಸಾಯಿಸಿ ಬಿಡುತ್ತಾಳೋ ಎಂಬ ಆತಂಕದಲ್ಲಿ ಇರುವ ವೈದೇಹಿಗೆ ಅಮೂಲ್ಯಳ ಹಾಗೆ ಒಳ್ಳೆಯ ಸೊಸೆ ಇರುವುದನ್ನು ನೋಡಿ ಕೊಂಚ ನೆಮ್ಮದಿ.

  ಇನ್ನು ವೇದಾಂತ ಹಾಗೂ ಅಮೂಲ್ಯ ಮಧ್ಯೆ ಸಣ್ಣ-ಪುಟ್ಟ ಜಗಳ ಇದ್ದಿದ್ದೆ. ಆದರೆ ಇದೀಗ ಧ್ರುವಾಗೆ ಜೂಸ್ ಕೂಡಿಸುವ ನೆಪದಲ್ಲಿ ಜಗಳ ನಡೆಯುತ್ತಿದೆ. ಇವರಿಬ್ಬರ ಕಿತ್ತಾಟ ನೋಡಿ ಕೊಂಚ ಭಯಗೊಂಡ ಮನೆ ಮಂದಿ ಏನು ಮಾಡಬೇಕು ಎಂದು ತಿಳಿಯದೇ ಮುಖ-ಮುಖ ನೋಡುತ್ತಾ ಇರುತ್ತಾರೆ. ಧ್ರುವನಿಗೆ ನಾನೇ ಹಾಲು ಕುಡಿಸುವುದು ಎಂದು ಅಮೂಲ್ಯ ಪಟ್ಟು ಹಿಡಿದರೆ ವೇದಾಂತ ನಾನು ಧ್ರುವನಿಗೆ ಜ್ಯೂಸ್ ಕುಡಿಸುತ್ತೇನೆ ಎಂದು ಹಠ ಹಿಡಿಯುತ್ತಾನೆ. ಇದನ್ನು ನೋಡಿದ ವಿಕ್ರಾಂತ್ ರೌಡಿ, ನಾದಿನಿ ನೀವು ಹುಷಾರು ಎಂದು ಹೇಳುತ್ತಾನೆ.

  ಅಮೂಲ್ಯ, ವೇದಾಂತ್ ಜಗಳ

  ಅಮೂಲ್ಯ, ವೇದಾಂತ್ ಜಗಳ

  ಇದನ್ನು ನೋಡಿದ ಚಂದ್ರಕಲಾ ಮನದಲ್ಲಿ ಚೆಲ್ಲಬೇಡಿ ಕಣ್ರೋ ನಾನು ಮಾಡಿದ ಪ್ಲಾನ್ ಫ್ಲಾಪ್ ಆಗುತ್ತೆ ಎಂದು ಕೊಳ್ಳುತ್ತಾಳೆ. ಚಂದ್ರಕಲಾ, ಧ್ರುವನನ್ನು ಸಾಯಿಸಲು ಹಾಲಿನಲ್ಲಿ ವಿಷ ಬೆರೆಸಿರುತ್ತಾಳೆ. ಆದರೆ ಈ ವಿಚಾರ ವೈದೇಹಿಗೆ ತಿಳಿದಿರುವುದಿಲ್ಲ. ಆದರೆ ವೇದಾಂತ ಹಾಗೂ ಅಮೂಲ್ಯ ಮಾತ್ರ ಯಾರು ಹೇಳಿದರು ತಮ್ಮ ಕಿತ್ತಾಟವನ್ನು ಮುಂದುವರೆಸಿದ್ದಾರೆ.

  ಧ್ರುವನಿಗೆ ಹಾಲು ಕುಡಿಸಿದ ವೇದಾಂತ

  ಧ್ರುವನಿಗೆ ಹಾಲು ಕುಡಿಸಿದ ವೇದಾಂತ

  ಇನ್ನು ತಡೆಯಲಾರದೆ ಚಂದ್ರಕಲಾ ಹೇಳುತ್ತಾಳೆ, ಅಮ್ಮು, ವೇದಾಂತ ಯಾಕೆ ಹಠ ಮಾಡುತ್ತಾ ಇದ್ದೀರಿ ಅದು ಧ್ರುವನಿಗೆ ತಂದ ಹಾಲು ಚೆಲ್ಲಿ ಹೋಗಲ್ವ ಎಂದು ಮೆತ್ತಗೆ ಹೇಳುತ್ತಾಳೆ. ಬಳಿಕ ಹೇಳುತ್ತಾಳೆ ಧ್ರುವ ಎಂದರೆ ಎಲ್ಲರಿಗೂ ಪ್ರೀತಿ ಇದೆ ಯಾರಾದರೂ ಒಬ್ಬರು ಹಾಲು ಕುಡಿಸಿ ಎನ್ನುತ್ತಾಳೆ. ಇನ್ನು ಹಾಲು ತೆಗೆದುಕೊಂಡ ವೇದಾಂತ ಧ್ರುವನಿಗೆ ಕುಡಿಸುತ್ತಾನೆ. ಇದನ್ನೆಲ್ಲ ನೋಡಿದ ಚಂದ್ರಕಲಾ ಮನದಲ್ಲಿ ಮುಸಿ ಮುಸಿ ನಗುತ್ತಾಳೆ.

  ಮನದಲ್ಲೇ ಮಂಡಿಗೆ ತಿಂದ ಚಂದ್ರಕಲಾ

  ಮನದಲ್ಲೇ ಮಂಡಿಗೆ ತಿಂದ ಚಂದ್ರಕಲಾ

  ಬಳಿಕ ಮನದಲ್ಲಿ ಮಾತನಾಡುತ್ತಾ, ಧ್ರುವ, ಅದೃಷ್ಟ ಅಂದರೆ ನಿಂದೆ ಕಣೋ. ಅಮ್ಮ ಮಾಡಿಕೊಂಡು ಬಂದಿರೋ ಔಷಧಿ ಅನ್ನು ಅಣ್ಣ ಕುಡಿಸುತ್ತಾ ಇದ್ದಾನೆ. ಒಂದು ಲೆಕ್ಕದಲ್ಲಿ ನಿನ್ನ ಸಾವಿಗೆ ಇಬ್ಬರು ಪಾಲಾದರು. ಕುಡಿ ಕುಡಿ ಇನ್ನೊಂದು ಐದು ನಿಮಿಷಕ್ಕೆ ಶಿವನ ಪಾದ ಸೇರಿಕೊಳ್ಳುತ್ತಿಯಾ. ಇದೆಲ್ಲ ಹಾಲು ಕುಡಿಸುತ್ತಿರುವ ವೇದಾಂತ್‌ಗೆ ತಿಳಿಯಲೇ ಇಲ್ಲ. ಇನ್ನು ಅಮೂಲ್ಯ ತವರು ಮನೆಯಲ್ಲಿ ಆಕೆಯ ತಂದೆ ತಾಯಿ ಸೈಟ್ ಬಗ್ಗೆ ಮಾತನಾಡುತ್ತಾ ಇದ್ದಾರೆ. ಮನೆಯ ಬಾಡಿಗೆ ಕಟ್ಟಲು ಕಷ್ಟ ಪಡುತ್ತಿದ್ದ ನಾವು ದಿಢೀರ್ ಆಗಿ ಸೈಟು ತೆಗೆದುಕೊಂಡು ಬಿಟ್ಟರೆ ನಂಬಲು ಆಗುತ್ತಾದ ಎಂದು ಮಾತಮಾಡುತ್ತಾ ಇರುತ್ತಾರೆ.

  ಅಮೂಲ್ಯ ಮನೆಯಲ್ಲಿ ಸೈಟಿನ ಮಾತುಕತೆ

  ಅಮೂಲ್ಯ ಮನೆಯಲ್ಲಿ ಸೈಟಿನ ಮಾತುಕತೆ

  ಈ ಬೆಂಗಳೂರಿನಲ್ಲಿ ನಮಗೂ ಒಂದು ಸೈಟು ಇದೆ ಎಂದು ನಂಬಲು ತುಂಬಾ ದಿನ ಬೇಕು ಎಂದು ಹೇಳುತ್ತಿರುತ್ತಾರೆ ಪರಿಮಳ. ಇದನ್ನು ಕೇಳಿದ ಅಮ್ಮು ತಂದೆ, ಪರಿ ನಮ್ಮ ಖುಷಿ ಹೇಗಿದೆ ಅಂದರೆ ಅಂಬೇ ಗಾಲು ಇಡುತ್ತಿದ್ದ ಮಗು ದಿಢೀರ್ ಆಗಿ ನಡೆಯುವುದಕ್ಕೆ ಶುರು ಮಾಡುತ್ತೆ ಅಲ್ವಾ ಆ ತರ ಇದೆ ಎಂದು ಖುಷಿ ಪಡುತ್ತಾರೆ. ಇನ್ನು ಅಂಜು ಅಪ್ಪ ಅಮ್ಮನ ಖುಷಿ ನೋಡಿ ದೇವರೇ ಅಪ್ಪ ಅಮ್ಮ ತುಂಬಾ ಖುಷಿ ಇದ್ದಾರೆ ಅವರನ್ನು ಯಾವತ್ತೂ ಖುಷಿಯಾಗಿ ಇಟ್ಟಿರಪ್ಪ ಎಂದು ಪ್ರಾರ್ಥನೆ ಮಾಡಿಕೊಳ್ಳುತ್ತಾಳೆ. ಇನ್ನು ಅಂಜು ಇದೀಗ ಪಾರ್ಟ್ ಟೈಮ್ ಕೆಲಸಕ್ಕೆ ಹೋಗುತ್ತಿದ್ದಾಳೆ. ಇಲ್ಲಿ ವಿವೇಕ್ ಅನ್ನೋ ಹುಡುಗ ಪರಿಚಯ ಆಗಿದ್ದಾನೆ. ಆತ ಅಂಜಲಿಯನ್ನು ಅಂಜು ಅಂಜು ಎಂದು ಕರೆದು ಅಂಜಲಿ ಗೆ ಕೋಪ ಬರುವ ಹಾಗೆ ಮಾಡುತ್ತಿದ್ದ ಕೊನೆಗೆ ಕ್ಷಮೆ ಕೇಳುತ್ತಿದ್ದ. ಇನ್ನು ತನ್ನನ್ನು ಪ್ರೀತಿಸು ಎಂದೆಲ್ಲ ತೊಂದರೆ ಕೊಡುತ್ತಿದ್ದ ಮುಂದೇನು ಎಂಬುವುದನ್ನು ಕಾದು ನೋಡಬೇಕಿದೆ .

  English summary
  Kannada serial Gattimela written updated on 21th October episode. Know more about it.
  Saturday, October 22, 2022, 17:32
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X