twitter
    For Quick Alerts
    ALLOW NOTIFICATIONS  
    For Daily Alerts

    ಅಪ್ಪನ ಆತ್ಮಗೌರವ ಉಳಿಸಲು ನಿಂತ ಮಗಳು

    By ಪೂರ್ವ
    |

    'ಗಟ್ಟಿ ಮೇಳ' ಧಾರವಾಹಿ ಚೆನ್ನಾಗಿ ಮೂಡಿ ಬರುತ್ತಿದೆ. ಮಕ್ಕಳು ತಂದೆ, ಪತಿ ಪತ್ನಿ, ಅಕ್ಕ ತಂಗಿಯರ ನಡುವಿನ ಪ್ರೇಮದ ಬಗ್ಗೆ ನಿರ್ದೇಶಕರು ಗಮನ ಹರಿಸಿ ಹೊಸ ಹೊಸ ಎಪಿಸೋಡುಗಳನ್ನು ಕಟ್ಟುತ್ತಿದ್ದಾರೆ.

    ಸುಹಾಸಿನಿ ವಾಚ್ ಮ್ಯಾನ್ ಅನ್ನು ಕರೆಯುತ್ತಾಳೆ. ಬಳಿಕ ಎಲ್ಲರ ಎದುರು ಮಾಸ್ಕ್ ತೆಗೆಯಲು ಹೇಳುತ್ತಾಳೆ. ಇದನ್ನು ಕಂಡ ಅಮ್ಮುಗೆ ಅಪ್ಪನ ಪರಿಸ್ಥಿತಿ ಕಂಡು ಬೇಸರವಾಗುತ್ತದೆ. ವಾಚ್ ಮ್ಯಾನ್ ಮಾಸ್ಕ್ ತೆಗೆಯಲು ಹಿಂದೂ ಮುಂದು ನೋಡುತ್ತಿರುತ್ತಾನೆ ಇದನ್ನು ಕಂಡ ಮನೆಯವರಿಗೆ ಸಂಶಯ ಬರುತ್ತದೆ.

    ನಾನು ನಿಮ್ಮ ಜೊತೆ ಇರೋವರೆಗೂ ನೀವು ಯಾರಿಗೂ ಹೆದರಿಕೊಳ್ಳುವ ಅಗತ್ಯ ಇಲ್ಲ ಅಪ್ಪ ಎಂದು ಅಮೂಲ್ಯ ಹೇಳುತ್ತಾಳೆ. ಅಪ್ಪ ಅಷ್ಟಕ್ಕೂ ನೀವು ಮಾಡಬಾರದ ತಪ್ಪೇನು ಮಾಡಿಲ್ಲ. ನೀಚ ಕೆಲಸ ಮಾಡೋರು ತಲೆ ಎತ್ತಿ ಮೆರೆಯುತ್ತಿರುತ್ತಾರೆ. ಹಾಗಿರುವಾಗ ನೀವು ಯಾಕೆ ಅಪ್ಪ ತಲೆ ಕೆಡಿಸಿಕೊಳ್ಳಬೇಕು. ಧೈರ್ಯವಾಗಿ ಮಾಸ್ಕ್ ತಗಿ ಎಂದು ಅಮೂಲ್ಯ ಹೇಳುತ್ತಾಳೆ. ಇದನ್ನು ಕೇಳಿದ ಅಮೂಲ್ಯ ತಂದೆ ಮಾಸ್ಕ್ ತೆಗೆಯುತ್ತಾರೆ. ಇದನ್ನು ಕಂಡ ಮನೆಯವರಿಗೆ ಶಾಕ್ ಆಗುತ್ತದೆ.

    ಆರತಿಗೆ ಗಾಬರಿಯಾಗುತ್ತದೆ

    ಆರತಿಗೆ ಗಾಬರಿಯಾಗುತ್ತದೆ

    ಅಪ್ಪನನ್ನು ನೋಡಿದ ಆರತಿ ಅಪ್ಪ.... ಎಂದು ಕರೆಯುತ್ತಾಳೆ. ಬಳಿಕ ಸುಹಾಸಿನಿ ಹೇಳುತ್ತಾಳೆ ವಸಿಷ್ಠ ಫ್ಯಾಮಿಲಿ ಅಂದರೆ ಸಮಾಜದಲ್ಲಿ ಒಂದು ಘನತೆ ಗೌರವ ಇದೆ. ಊರಲ್ಲಿ ಒಳ್ಳೆ ಹೆಸರಿದೆ. ನೀವು ಇಂಥಹ ಕೆಲಸ ಮಾಡಿ ನಮಗೆ ಕೆಟ್ಟ ಹೆಸರು ತರಬೇಡಿ ಕೆಲಸಕ್ಕೆ ಬಾರದೆ ಇರೋರು ಆಡಿಕೊಳ್ಳುವ ಹಾಗೆ ಮಾಡಬೇಡಿ ನಾಳೆ ರೋಡಿನಲ್ಲಿ ಹೋಗುತ್ತಾ ಜನ ನಮ್ಮನ್ನ ನಿಮ್ಮ ಬೀಗರು ನಿಮ್ಮ ಮನೆಯಲ್ಲಿ ವಾಚ್ ಮ್ಯಾನ್ ಕೆಲಸ ಮಾಡುತ್ತಾರೆ ಅಂದರೆ ಹೌದು ಅನಬೇಕಾ ಅಥವಾ ಇಲ್ಲಾ ಅಂಥ ಹೇಳಬೇಕಾ ಎಂದು ಕೇಳುತ್ತಾಳೆ.

    ಅಮ್ಮೂ ಮಾತಿಗೆ ತಲೆ ಬಗ್ಗಿಸಿದ ಅಪ್ಪ

    ಅಮ್ಮೂ ಮಾತಿಗೆ ತಲೆ ಬಗ್ಗಿಸಿದ ಅಪ್ಪ

    ಬಳಿಕ ಹೇಳುತ್ತಾಳೆ ಹೆಣ್ಣು ಮಕ್ಕಳು ಸೇರಿರೋ ಮನೆಯಲ್ಲಿ ಅಪ್ಪನೇ ವಾಚ್ ಮ್ಯಾನ್ ಕೆಲಸ ಮಾಡುತ್ತಿರುವುದು. ನನಗಂತೂ ಇದು ಅರ್ಥ ಆಗ್ತಿಲ್ಲ. ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಅನ್ಸುತ್ತೆ . ಇನ್ನೊಂದು ಸಲ ಇತಿಹಾಸ ನಿರ್ಮಾಣ ಮಾಡಬೇಕೆಂದು ಅಂದುಕೊಂಡಿದ್ದೀರಿ ಅಲ್ವಾ ಬೀಗರೆ ಎಂದು ಕೇಳುತ್ತಾಳೆ. ಇದು ಅಮೂಲ್ಯಳ ತಂದೆಗೆ ಬಹಳ ನೋವು ನೀಡುತ್ತದೆ. ಅಮ್ಮೂ ಮಾತಿಗೆ ತಲೆ ಬಗ್ಗಿಸಿಕೊಂಡು ನಿಂತುಬಿಡುತ್ತಾರೆ.

    ಅಪ್ಪನ ಪರ ನಿಲ್ಲುವ ಅಮೂಲ್ಯ

    ಅಪ್ಪನ ಪರ ನಿಲ್ಲುವ ಅಮೂಲ್ಯ

    ಅದಕ್ಕೆ ಅಮೂಲ್ಯ ಹೇಳುತ್ತಾಳೆ ಹೌದು ಅತ್ತೆ ನಮ್ಮ ಅಪ್ಪ ನಮಗೆ ಕಾವಲುಗಾರನೆ. ನಾನು ಅದನ್ನು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ. ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ ಅಂತಾ ಕೈ ತೊಳೆದುಕೊಳ್ಳುವವರೆ ಜಾಸ್ತಿ. ಅಂಥದ್ರಲ್ಲಿ ನಮ್ಮ ಅಪ್ಪ ಮದುವೆ ಆದ ಮೇಲೆ ಕಾವಲು ಕಾಯುತ್ತಿದ್ದಾರೆ ಅಂದರೆ ಅದು ನಮ್ಮ ಅದೃಷ್ಟ ಅಲ್ವಾ ನೀವು ಇನ್ನೊಂದು ಮಾತು ಹೇಳಿದಿರಿ ಅತ್ತೆ ಊರವರ ಮುಂದೆ ಎಲ್ಲಾ ನಿಮ್ಮ ಅಪ್ಪ ಮರ್ಯಾದೆ ತೆಗೆದರು ಅಂತ. ನಮ್ಮ ಅಪ್ಪ ಮರ್ಯಾದೆ ತೆಗೆಯೋ ಕೆಲಸ ಏನು ಮಾಡಿಲ್ಲ ಅತ್ತೆ. ಅವರು ನಿಮ್ಮ ಮನೆಯಲ್ಲಿ ಕಳ್ಳ ತನ ಮಾಡಿಲ್ಲ ದರೋಡೆ ಮಾಡಿಲ್ಲ. ಅಥವಾ ಯಾರ ತಲೇನೂ ಓದೆದಿಲ್ಲ. ಅವರು ನ್ಯಾಯವಾಗಿ ದುಡಿದು ತಿನ್ನುತ್ತಿದ್ದಾರೆ. ಇಷ್ಟು ವಯಸ್ಸಾಗಿದ್ದರು ಕಷ್ಟ ಪಡುತ್ತಿದ್ದಾರೆ. ಸಮಾಜದಲ್ಲಿ ಗೌರವ ದಿಂದ ಬದುಕುತ್ತಿದ್ದಾರೆ ಎಂದು ಹೇಳುತ್ತಾಳೆ.

    ಆರತಿ ಸಹ ಅಪ್ಪನ ಪರ

    ಆರತಿ ಸಹ ಅಪ್ಪನ ಪರ

    ಬಳಿಕ ಹೇಳುತ್ತಾಳೆ ಹೀಗೆಲ್ಲ ಇರಬೇಕಾದರೆ ಅವರು ಯಾರದೋ ಮುಂದೆ ತಲೆತಗ್ಗಿಸಿಕೊಂಡು ಇರಬೇಕು ಎನ್ನುತ್ತಾಳೆ. ಬಳಿಕ ಅಪ್ಪನನ್ನು ನೋಡಿ ಅಪ್ಪ ನೀವು ಅಷ್ಟೇ ಮಾಡಬಾರದ ತಪ್ಪು ಮಾಡಿದ್ದೇನೆ ಅನ್ನೋ ತರ ತಲೆ ತಗ್ಗಿಸಿಕೊಂಡು ನಿಂತು ಕೊಳ್ಳಬೇಡಿ. ಹೆಮ್ಮೆಯಿಂದ ತಲೆ ಎತ್ತಿ ನಿಂತುಕೊಳ್ಳಿ. ಎಂದು ಹೇಳುತ್ತಾಳೆ. ಬಳಿಕ ವೇದಾಂತ ಹೇಳುತ್ತಾನೆ ಅಮ್ಮ ಮಂಜು ಅಪ್ಪ ನಮ್ಮ ಮನೆಯಲ್ಲಿ ವಾಚ್ ಮ್ಯಾನ್ ಕೆಲಸ ಮಾಡಿರುವುದು ಅವಮಾನ ವಾಗುತ್ತೆ ಅಥವಾ ನಿಮ್ಮ ಗೌರವ ಕ್ಕೆ ಧಕ್ಕೆ ಬರುತ್ತೆ ಅಂತ ಯೋಚನೆ ಮಾಡೋದು ತಪ್ಪಾಮ್ಮ ಯಾಕೆ ಎಂದರೆ ಅವರು ನಮಗೆ ಯಾರಿಗೂ ಮೋಸ ಮಾಡಿಲ್ಲ. ಈ ಮನೆಯಲ್ಲಿ ಕಳ್ಳತನ ಮಾಡಿಲ್ಲ. ನ್ಯಾಯವಾಗಿ ಬದುಕಿದ್ದಾರೆ. ಸ್ವಾಭಿಮಾನದಿಂದ ಕಷ್ಟಪಟ್ಟು ದುಡಿದಿದ್ದಾರೆ ಎಂದು ಹೇಳುತ್ತಾನೆ ಮಗನ ಮಾತು ಕೇಳಿ ಸುಹಾಸಿನಿಗೆ ಎನು ಹೇಳಬೇಕೋ ತಿಳಿಯುವುದಿಲ್ಲ. ಇನ್ನೇನೆಲ್ಲ ಆಗುತ್ತೆ ಅಂತ ಕಾದುನೋಡಬೇಕಿದೆ.

    English summary
    Kannada serial gattimela written updated on 22th July. Know more about the episode.
    Saturday, July 23, 2022, 18:35
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X