ಆದ್ಯಗೆ ನಿಜ ವಿಚಾರ ತಿಳಿಸಿದ ಅಜ್ಜಿ, ಆದ್ಯ ಮೇಲೆ ಕೈ ಎತ್ತಿದ ವೇದಾಂತ

By ಪೂರ್ವ

'ಗಟ್ಟಿಮೇಳ' ಧಾರವಾಹಿ ಚೆನ್ನಾಗಿ ಮೂಡಿ ಬರುತ್ತಿದ್ದು, ಹಲವು ಸ್ಫೋಟಕ ಸತ್ಯಗಳು ಇದೀಗ ಅಧ್ಯಾಗೆ ತಿಳಿಯುತ್ತಿವೆ. ಆದ್ಯ ಇದೀಗ ಸತ್ಯ ತಿಳಿದುಕೊಳ್ಳುವ ಪ್ರಯತ್ನದಲ್ಲಿ ಇದ್ದಾಳೆ. ಅಮ್ಮು ಹಾಗೂ ವಿಕ್ರಾಂತ್ ಮಾತನಾಡುತ್ತಿರುವುದನ್ನು ಕೇಳಿಸಿಕೊಂಡ ಆದ್ಯ ನೇರವಾಗಿ ಅಜ್ಜಿ ಬಳಿಗೆ ಬರುತ್ತಾಳೆ. ಅಜ್ಜಿ, ನನ್ನ ಅಮ್ಮಾ ಅಪ್ಪ ಬೇರೆ ಯಾರಾದರೂ ಇದ್ದಾರಾ. ಸುಹಾಸಿನಿ ಅಮ್ಮ ನನ್ನ ನಿಜವಾದ ಅಮ್ಮ ಅಲ್ವಾ ಎಂದೆಲ್ಲ ಪ್ರಶ್ನೆಗಳನ್ನು ಒಂದೊಂದಾಗಿ ಅಜ್ಜಿ ಮುಂದೆ ಇಡುತ್ತಾಳೆ.

ಹಿಂದೆ ಒಂದು ಸಲ ನಿಮ್ಮ ಬಳಿ ಈ ಬಗ್ಗೆ ಕೇಳಿದಾಗ ನೀವು ಸುಳ್ಳು ಹೇಳಿದಿರಿ ಆದರೆ ಈ ಬಾರಿಯಾದರೂ ನಿಜ ಹೇಳಿ ಎಂದು ಪರಿ ಪರಿಯಾಗಿ ಆದ್ಯಾ ಬೇಡಿಕೊಳ್ಳುತ್ತಾಳೆ. ಇದನ್ನು ಕೇಳಿಸಿಕೊಂಡ ಅಜ್ಜಿಗೆ ಏನು ಹೇಳಬೇಕು ಎಂದು ತಿಳಿಯದೆ ನಡೆದ ಘಟನೆಗಳನ್ನು ಹೇಳುತ್ತಾರೆ. ನಿಜಾಂಶವನ್ನು ತಿಳಿದ ಆದ್ಯಾಗೆ ಬರ ಸಿಡಿಲು ಬಂದು ಎರಗಿದಂತೆ ಆಗುತ್ತದೆ. ಅಣ್ಣಂದಿರು ನನ್ನ ಬಳಿ ಸುಳ್ಳು ಹೇಳಿದರಲ್ಲ, ನನ್ನ ಮೋಸಗೊಳಿಸಿದರು ಎಂದೆಲ್ಲಾ ಹೇಳುತ್ತಾಳೆ. ನನ್ನ ಅಮ್ಮ ಸುಹಾಸಿನಿ ಅಲ್ಲ ವೈದೇಹಿ ಅನ್ನೋ ಸತ್ಯ ತಿಳಿದ ಆದ್ಯಾ ಗೆ ನೋವಾಗುತ್ತದೆ. ತನ್ನ ಮಗಳು ಹಾಗೂ ಅಳಿಯ ಬೆಂಕಿಯಲ್ಲಿ ಬಿದ್ದು ಸತ್ತರು ಅವರನ್ನು ನಾನೇ ನೋಡಿಲ್ಲ ಎಂದು ತನ್ನ ದುಃಖವನ್ನು ತೋಡಿಕೊಳ್ಳುತ್ತಾರೆ.

ವಿಕ್ರಾಂತ್ ಗೆ ಸಿಕ್ಕಿದೆ ಬಹುದೊಡ್ಡ ಅಸ್ತ್ರ

ವಿಕ್ರಾಂತ್ ಗೆ ಸಿಕ್ಕಿದೆ ಬಹುದೊಡ್ಡ ಅಸ್ತ್ರ

ಇನ್ನೂ ವಿಕ್ರಾಂತ್ ಹಾಗೂ ಲಕ್ಷ್ಮಿ ಕಾಂತ ಅದಿತಿಯನ್ನು ಮದುವೆ ಆಗುತ್ತೇನೆ ಎಂದು ಬಂದ ಹುಡುಗನ ಮನೆ ಸರ್ಚ್ ಮಾಡುತ್ತಾರೆ. ಆತ ಡಾಕ್ಟರ್ ಅಲ್ಲ ಎಂಬ ಸತ್ಯ ಗೊತ್ತಾಗೊ ದಿನ ಮಾತ್ರ ಹತ್ತಿರ ಬಂದಂತೆ ಕಾಣುತ್ತಿದೆ. ಇಲ್ಲೂ ಸುಹಾಸಿನಿ ತನ್ನ ಆಟವನ್ನು ಪ್ರಯೋಗಿಸಿರಬಹುದು ಎಂಬ ಸಂಶಯ ಕೂಡ ಮೂಡಿದೆ. ಇದೀಗ ಕಾಂತ ಹಾಗೂ ವಿಕ್ರಾಂತ್ ಅದಿತಿ ಮದುವೆ ಹುಡುಗನ ಮನೆಗೆ ಕದ್ದು ಎಂಟ್ರಿ ನೀಡಿದ್ದಾರೆ. ಅಲ್ಲಿ ಏನೂ ಡಾಕ್ಯುಮೆಂಟ್ ಸಿಗದೇ ಬರಿ ಗೈಯಲ್ಲಿ ವಾಪಸ್ ಆಗಿದ್ದಾರೆ. ಆತನ ಮನೆ ನೋಡಿದಾಗ ಏನೋ ಕಳ್ಳಾಟ ನಡೆಯುತ್ತಿದೆ ಎಂದು ಸ್ಪಷ್ಟವಾಗಿ ಗೋಚರ ಆಗುತ್ತಿತ್ತು. ಇನ್ನೂ ಮನೆ ಹೊರಗೆ ಬಂದ ಕಾಂತ ವಿಕ್ರಾಂತ್ ಗೆ ಒಂದು ಚೀಟಿ ಕೊಡುತ್ತಾನೆ. ಅದು ಆತನ ಆಧಾರ್ ಕಾರ್ಡ್ ಆಗಿರುತ್ತೆ. ಇದನ್ನು ಆಧರಿಸಿ ಆತನ ಹಿನ್ನೆಲೆ ತೆಲಿದುಕೊಳ್ಳುವ ಪ್ರಯತ್ನವನ್ನು ವಿಕ್ರಾಂತ್ ಖಂಡಿತ ಮಾಡುತ್ತಾನೆ.

ಅಣ್ಣನ ಕುರುಡು ಪ್ರೇಮಕ್ಕೆ ಕುಪಿತ ಗೊಂಡ ವಿಕ್ರಾಂತ್

ಅಣ್ಣನ ಕುರುಡು ಪ್ರೇಮಕ್ಕೆ ಕುಪಿತ ಗೊಂಡ ವಿಕ್ರಾಂತ್

ವೇದಾಂತ ವಿಕ್ರಾಂತ್ ಗೆ ಕರೆ ಮಾಡಿ ಸುಹಾಸಿನಿ ಪೌಂಡೇಶನ್ ಗೆ 25 ಲಕ್ಷ ಹಣ ಕೊಡುವಂತೆ ಹೇಳುತ್ತಾನೆ. ಸುಹಾಸಿನಿ ಈ ಬಗ್ಗೆ ವೇದಾಂತನ ಕಿವಿ ಊದಿದ್ದಾಳೆ ಎಂಬುವುದು ಸ್ಪಷ್ಟ ವಾಗಿ ವಿಕ್ರಾಂತ್ ಗೆ ಗೊತ್ತಾಗುತ್ತದೆ. ಬಳಿಕ ನಾಳೆ ಹಣ ಹಾಕುತ್ತೇನೆ ನಾನು ಬ್ಯುಸಿ ಇದ್ದೀನಿ ಎಂದು ಕರೆ ಕಟ್ ಮಾಡುತ್ತಾನೆ. ಇತ್ತ ಅದಿತಿ ಹಾಗೂ ಅದಿತಿ ಮದುವೆ ಆಗುವ ಗಂಡು ಮಾತನಾಡುತ್ತಾ ಇರುತ್ತಾಳೆ. ಅದಿತಿ ಈ ಮದುವೆನಾ ಮನೆಯವರ ಒತ್ತಾಯಕ್ಕೆ ಆಗುತ್ತಿರುವುದು ನನಗೆ ಇಷ್ಟ ಇಲ್ಲ ಎಂದು ಎಷ್ಟೇ ಒತ್ತಿ ಒತ್ತಿ ಹೇಳಿದರು ಅದನ್ನು ಕಿವಿಗೆ ಹಾಕಿಕೊಳ್ಳುತ್ತಿಲ್ಲ ಆತ. ಆತ ಹೇಳುವುದು ಒಂದೇ ನಾನು ಯಾವುದೇ ರಿಸ್ಕ್ ತೆಗೆದುಕೊಳ್ಳುವುದಿಲ್ಲ. ನಿನಗೋಸ್ಕರ ನಾನು ಕಾಯುತ್ತೇನೆ ಆದರೆ ನಿಮ್ಮ ಅಮ್ಮ ಇದಕ್ಕೆಲ್ಲ ಒಪ್ಪಬೇಕಲ್ಲ. ಇದನ್ನೆನಾದರು ನಿಮ್ಮ ಅಮ್ಮನ ಬಳಿ ಹೇಳಿದರೆ ಆದಷ್ಟು ಬೇಗ ಮದುವೆ ಮಾಡುತ್ತಾರೆ ಎನ್ನುತ್ತಾನೆ.

ಸಂಕಷ್ಟದಲ್ಲಿ ಅದಿತಿ

ಸಂಕಷ್ಟದಲ್ಲಿ ಅದಿತಿ

ನನಗೂ ಅದು ಒಪ್ಪಿಗೆ ಎಂದು ಹೇಳಿದಾಗ ಎನು ಮಾಡಬೇಕು ಎಂದು ಅದೀತಿಗೆ ತಿಳಿಯಾದಾಗುತ್ತದೆ. ವೇದಾಂತ ಕರೆಯೊಂದರಲ್ಲಿ ಮಾತನಾಡುತ್ತಾ ನಿರತ ನಾಗಿರುತ್ತನೆ. ಆದ್ಯ ವೇದಾಂತ ಅನ್ನು ಕರೆಯುತ್ತಾಳೆ. ನನ್ನ ಅಮ್ಮ ಬೇರೆ ಯಾರಾದರೂ ಇದ್ದಾರಾ ಎಂದು ಕೇಳುತ್ತಾಳೆ. ವೇದಾಂತ ಗೆ ಶಾಕ್ ಆಗುತ್ತದೆ ಇಷ್ಟು ದಿನ ಅಮ್ಮನ ಬಗ್ಗೆ ಕೇಳದ ಈಕೆ ಇದೇನು ಒಮ್ಮಿಂದೊಮ್ಮೆಲೆ ಕೇಳುತ್ತಾ ಇದ್ದಾಳಲ್ಲ ಎಂದು ಮನದಲ್ಲಿ ಅಂದುಕೊಳ್ಳುತ್ತಾ ಈ ಬಗ್ಗೆ ಯಾರೂ ಅಮ್ಮು ಹಾಗೂ ವಿಕ್ರಾಂತ್ ಹೇಳಿದ್ನಾ ಎಂದು ಕೇಳಿದಾಗ ಅದ್ಯಾ ನಾನೇ ನಿನ್ನ ಬಳಿ ಕೇಳುತ್ತಿರುವುದು ನನ್ನ ಅಮ್ಮ ಬೇರೆ ಯಾರಾದ್ರೂ ಇದ್ದಾರಾ ಎಂದು ಎಂದು ಕೇಳಿದಾಗ ವೇದಾಂತ ಆಫೀಸಿಗೆ ಹೋಗಲು ರೆಡಿಯಾಗುತ್ತಾನೆ.

ಆದ್ಯ ಪ್ರಶ್ನೆಗೆ ಶಾಕ್ ಆದ ವೇದಾಂತ

ಆದ್ಯ ಪ್ರಶ್ನೆಗೆ ಶಾಕ್ ಆದ ವೇದಾಂತ

ಬಳಿಕ ಹೇಳುತ್ತಾನೆ ನನ್ನ ಅಮ್ಮ ಸುಹಾಸಿನಿ ಬೇರೆ ಯಾರೂ ಅಲ್ಲ ಎಂದು ಹೇಳುತ್ತಾನೆ ವೇದಾಂತ್. ಆ ವೇಳೆ ಆದ್ಯ ಹಾಗಾದರೆ ವೈದೇಹಿ ಅಂದರೆ ಯಾರೂ ಎಂದು ಕೇಳುತ್ತಾಳೆ. ಈ ಮಾತನ್ನು ಕೇಳಿದ ಕೂಡಲೇ ವೇದಾಂತ ಗೆ ಹಿಂದಿನ ನೆನಪಾಗುತ್ತದೆ. ಒಂದು ಬಾರಿ ಸ್ತಬ್ಧನಾಗುತ್ತಾನೆ. ಬಳಿಕ ಆದ್ಯ ಮಾತು ಮುಂದುವರಿಸುತ್ತಾಳೆ. ಅಮ್ಮ ಬದುಕಿದ್ದಾರೆ ಎಂಬ ಮಾಹಿತಿ ನಿನಗೆ ಗೊತ್ತಿದ್ದರೂ ಒಂದು ಬಾರಿ ಹುಡುಕುವ ಪ್ರಯತ್ನ ಮಾಡಿದ್ದೀಯಾ ಎಂದೆಲ್ಲ ತುಂಬಾ ಕಟುವಾಗಿ ಮಾತನಾಡುತ್ತಾಳೆ. ಇದನ್ನು ನೋಡಿದ ಅಮ್ಮು, ವಿಕ್ರಾಂತ್ ಗೆ ಶಾಕ್ ಆಗುತ್ತದೆ. ಆದ್ಯ ಪ್ರಶ್ನೆಗೆ ಕುಪಿತಗೊಂಡ ವೇದಾಂತ ಆದ್ಯ ಮೇಲೆ ಕೈ ಎತ್ತುತ್ತಾನೆ. ಮುಂದೇನಾಗುತ್ತದೆ ಕಾದು ನೋಡಬೇಕಿದೆ

English summary
Kannada serial Gattimela written updated on 23th August. Know more about the episode.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X