ನಿಜ ತಾಯಿ ಎದುರಿದ್ದರು ಗುರುತಿಸದೆ ನಕಲಿ ತಾಯಿಯನ್ನು ಒಪ್ಪಿಕೊಂಡ ಮಕ್ಕಳು!
ಸುಹಾಸಿನಿ ಇದೀಗ ವೈದೇಹಿಯ ಮಕ್ಕಳ ಮನಸಿಗೆ ಗಾಯ ಮಾಡಲು ಹೊರಟಿದ್ದಾಳೆ. ಬೇರೆ ಯಾರನ್ನೋ ಅಮ್ಮ ಎಂದು ತೋರಿಸಿ ಮಕ್ಕಳ ಪ್ರೀತಿ ವಿಚಾರದಲ್ಲಿ ಆಟ ಆಡುತ್ತಿದ್ದಾಳೆ. ಇದನ್ನೆಲ್ಲ ನೋಡಿದ ವೈದೇಹಿ ಮನಸು ಛಿದ್ರಗೊಂಡಿದೆ. ಅದೆಷ್ಟೇ ಬೇಸರ ಆದರೂ ಅದನ್ನೆಲ್ಲ ತಡೆದುಕೊಂಡು ಮಕ್ಕಳ ಮೊಗದಲ್ಲಿ ನಗು ನೋಡಿ ಖುಷಿ ಪಡುತ್ತಿದ್ದಾಳೆ. ಇದೀಗ ಬಂದ ಕಪಟ ತಾಯಿ ಚಂದ್ರ ಕಲಾಳ ಮಾತಿಗೆ ಮರುಳಾದ ಮಕ್ಕಳು ಆಕೆ ಹೇಳಿದ ಹಾಗೆ ಕೇಳುತ್ತಿದ್ದಾರೆ.
ಸುಹಾಸಿನಿಯನ್ನು ಕೂಡ ಚಂದ್ರಕಲಾ ತನ್ನ ಕಪಿ ಮುಷ್ಟಿಯಲ್ಲಿ ಹಿಡಿದು ಎಲ್ಲರನ್ನೂ ಆಟ ಆಡಿಸುವ ಪ್ರಯತ್ನ ಮಾಡುತ್ತಾಳೇನೋ ಎನ್ನಿಸುತ್ತಿದೆ ಧಾರಾವಾಹಿ ವೀಕ್ಷಕರಿಗೆ. ಸನ್ನಿವೇಶವೊಂದರಲ್ಲಿ ಮಕ್ಕಳೆಲ್ಲರೂ ಟೇಬಲ್ ಮುಂದೆ ಊಟಕ್ಕೆ ಕುಳಿತಿದ್ದರು ಈ ವೇಳೆ ಮಕ್ಕಳಿಗೆ ಊಟ ಬಡಿಸಲು ಚಂದ್ರಕಲಾ ಬರುತ್ತಾಳೆ. ಆ ವೇಳೆ ವಿಕ್ರಾಂತ್, ವೈದೇಹಿ ಅಮ್ಮ ಪಾಯಸ ಮಾಡಿದ್ದಾರೆ ಎಂದು ಹೇಳುತ್ತಿರುತ್ತಾನೆ ಪಾಯಸ ಬಡಿಸಿ ಎಂದು ಎಲ್ಲರೂ ಹೇಳಿದಾಗ ಚಂದ್ರ ಕಲಾ ಅದಕ್ಕೆ ಒಪ್ಪದೇ ಪಾಯಸ ತಿನ್ನಬಾರದು. ರಾತ್ರಿ ಹೊತ್ತು ಮಿತ ವಾಗಿ ಊಟ ಮಾಡಿ ಇದರಿಂದ ನಿಮ್ಮ ಆರೋಗ್ಯ ಇನ್ನೂ ವೃದ್ಧಿ ಆಗುತ್ತದೆ ಎಂದು ಹೇಳುತ್ತಾರೆ ಇದನ್ನು ಕೇಳಿದ ಬಳಿಕ ಆದರೂ ಪಾಯಸ ಬೇಕು ಎಂದು ಹೇಳುತ್ತಾನೆ ವಿಕ್ರಾಂತ್ ಅದಕ್ಕೆ ವೇದಾಂತ ಹೇಳುತ್ತಾನೆ ವಿಕ್ರಾಂತ್ ಸುಮ್ಮನಿರು ಅಮ್ಮ ನೀನೇನು ಹೇಳಿದರು ಅದು ಸರಿಯಾಗಿ ಇರುತ್ತದೆ ಎಂದು ಹೇಳುತ್ತಾರೆ. ಬಳಿಕ ಎಲ್ಲರೂ ಊಟ ಮಾಡಲು ರೆಡಿ ಆಗುತ್ತಾರೆ.

ಮಕ್ಕಳಿಗೆ ಊಟ ಮಾಡಿಸಿದ ಚಂದ್ರಕಲಾ
ಆ ವೇಳೆ ವೇದಾಂತ ಅಮ್ಮ ನೀನೇ ನನಗೆ ಕೈ ತುತ್ತು ನೀಡುತ್ತೀರಾ ಎಂದು ಕೇಳಿದಾಗ ಚಂದ್ರಕಲಾ ವೇದಾಂತ್‌ಗೆ ಊಟ ಮಾಡಿಸುತ್ತಾಳೆ. ಇದನ್ನು ನೋಡಿ ವಿಕ್ರಾಂತ್ ಹಾಗೂ ಆದ್ಯ ಕೂಡ ಅಮ್ಮ ನಮಗೂ ತಿನ್ನಿಸಿ ಎಂದು ಹೇಳುತ್ತಾರೆ. ಅವರಿಗೂ ಕೈ ತುತ್ತು ನೀಡಿದ ಚಂದ್ರಕಲಾ ಎಲ್ಲರ ಎದುರು ಚೆನ್ನಾಗಿರುವ ಹಾಗೆ ನಟಿಸಿ ಸೈ ಏನಿಸಿಕೊಳ್ಳುತ್ತಾಳೆ. ವೈದೇಹಿ ಮರೆಯಲ್ಲಿ ನಿಂತು ಇದನ್ನೆಲ್ಲ ನೋಡುತ್ತಾ ಇರುತ್ತಾಳೆ. ಅಮ್ಮನಾಗಿ ಏನೂ ಮಾಡಲಾಗದ ಸ್ಥಿತಿ ಅವಳದ್ದು. ಬಳಿಕ ಧ್ರುವನ ಬಳಿ ಬಂದ ವೈದೇಹಿ ಹೇಳುತ್ತಾರೆ. ಧ್ರುವ ನಿನಗೆ ಮಾತ್ರ ಗೊತ್ತು ನಾನೇ ನಿನ್ನ ತಾಯಿ ಎಂದು ಆದರೆ ಬೇರೆಯವರಿಗೆ ಯಾರಿಗೂ ತಿಳಿದಿಲ್ಲ. ನಾನು ಮಾಡಿದ ಪಾಯಸವನ್ನು ನನ್ನ ಮಕ್ಕಳಿಗೆ ತಿನ್ನಲು ಬಿಡಲಿಲ್ಲ ಆ ಕಪಟಿ. ಇನ್ನೂ ಆಕೆ ನಾನೇ ಇವರನ್ನು ನೋಡಿಕೊಳ್ಳುತ್ತೇನೆ ನಿನ್ನ ಅವಶ್ಯಕತೆ ಇಲ್ಲ ಎಂದು ಹೇಳಿ ಬಿಟ್ಟರೆ ಏನು ಮಾಡಲಿ ನಾನು. ನಾನು ಎಲ್ಲಿಗೆ ಹೋಗಲಿ ಎಂದು ಹೇಳುತ್ತ ಅಳುತ್ತಾಳೆ.

ಮರೆಯಲ್ಲಿ ನಿಂತು ಮಕ್ಕಳ ಖುಷಿ ನೋಡುತ್ತಿರುವ ವೈದೇಹಿ
ಆದರೆ ಅಮ್ಮ ಅಳುತ್ತಿರುವುದು ಕಾಣಿಸಿದರು ಏನೂ ಮಾಡಲು ಸಾಧ್ಯ ಆಗದೆ ಸುಮ್ಮನಿರುತ್ತಾರೆ. ಇತ್ತ ಮೆತ್ತಗೆ ವಿಕ್ರಾಂತ್ ವೈದೇಹಿ ಅಮ್ಮ ಮಾಡಿದ ಪಾಯಸ ಸವಿಯಲು ಬರುತ್ತಾನೆ. ಬಳಿಕ ಫ್ರಿಡ್ಜ್ ನಿಂದಾ ಮೆತ್ತಗೆ ಪಾಯಸವನ್ನು ತೆಗೆದುಕೊಂಡು ಸವಿಯುತ್ತಾರೆ. ಎಂಥ ಅಧ್ಬುತ ವಾದ ಪಾಯಸ ಎಂದುಕೊಳ್ಳುತ್ತಾ ಸವಿಯುತ್ತಾ ಮೈ ಮರೆಯುತ್ತಾನೆ. ಆ ವೇಳೆ ಆಕೆಯ. ಭುಜ ಮುಟ್ಟಿದ ಆದ್ಯಳನ್ನು ಕಂಡು ಭಯ ಭೀತ ಗೊಳ್ಳುತ್ತಾನೆ.

ಅಮ್ಮ ಮಾಡಿದ ಪಾಯಸ ಸವಿಯಲು ಬಂದ ಮಕ್ಕಳು
ಆದ್ಯ ಕೂಡ ಪಾಯಸು ತಿನ್ನಲು ಬಂದಿರುತ್ತಾಳೆ. ಅದೇ ಸಮಯಕ್ಕೆ ವೇದಾಂತ ಕೂಡ ಅಲ್ಲಿಗೆ ಮೆತ್ತಗೆ ಬರುತ್ತಾನೆ ಪಾಯಸವನ್ನು ತಿನ್ನುತ್ತಿರುವ ವೇಳೆ ಆದ್ಯ ಹೇಳುತ್ತಾಳೆ ಅಣ್ಣ ನಮಗೆ ಹೇಳಿ ಅವನೆ ಪಾಯಸ ತಿನ್ನುತ್ತಿದ್ದಾರೆ ಎಂದು ಹೇಳುತ್ತಾರೆ. ಬಳಿಕ ವಿಕ್ರಾಂತ್, ವೇದಾಂತ್‌ನ ಭುಜ ಮೆತ್ತಗೆ ಹಿಡಿಯುತ್ತಾನೆ ಇದನ್ನು ನೋಡಿದ ವೇದಾಂತ ಶಾಕ್ ಆಗುತ್ತಾನೆ. ಬಳಿಕ ಮೂರು ಜನರು ಕೂಡ ಮೆತ್ತಗೆ ಪಾಯಸವನ್ನು ಸವಿಯುತ್ತಿರುವ ವೇಳೆ ಅಲ್ಲಿಗೆ ವೈಜಯಂತಿ ಬರುತ್ತಾರೆ. ಯಾರಿದಿರಾ ಬನ್ನಿ ಹೊರಗಡೆ ಎಂದು ಹೇಳುತ್ತಾರೆ.

ವೈ ಜಯಂತಿ ಅಮ್ಮನನ್ನು ನೋಡಿ ಖುಷಿ ಪಟ್ಟ ಮಕ್ಕಳು
ಎಷ್ಟೇ ಕರೆದರೂ ಹೊರಗಡೆ ಬಾರದ ಮಕ್ಕಳನ್ನು ಕಂಡು ವೈ ಜಯಂತಿ ಹೇಳುತ್ತಾಳೆ ನೀವು ಬರುತ್ತೀರಾ ಅಥವಾ ನಾನೇ ಬರ ಬೇಕೋ ಎಂದು ಹೇಳುತ್ತಾಳೆ ಬಳಿಕ ಮೇಲೆದ್ದ ಮಕ್ಕಳು ಪಾಯಸ ತಿನ್ನಲು ಇಷ್ಟೆಲ್ಲ ಕಷ್ಟ ಪಡಬೇಕಾ ಎಂದು ಯೋಚಿಸುತ್ತಾ ನಗು ಬರುತ್ತದೆ ಬಳಿಕ ಆ ಮೂವರನ್ನೂ ತಬ್ಬಿಕೊಂಡು ನಗುತ್ತಾಳೆ. ಇನ್ನೂ ಆಮ್ಮುವನ್ನು ನೋಡಿದ ವೇದಾಂತ ಹೇಳುತ್ತಾನೆ ಥಾಂಕ್ಸ್ ಅಮೂಲ್ಯ ನಿನ್ನಿಂದ ನನ್ನ ಅಮ್ಮ ನನಗೆ ಸಿಕ್ಕರೂ ನನಗೆ ಬಹಳ ಖುಷಿ ಆಯಿತು ಯಾವತ್ತೂ ಮರೆಯಲ್ಲ ನಿನ್ನ ಈ ಉಪಕಾರವನ್ನು ಎಂದು ಹೇಳಿ ಪತ್ನಿ ಗೆ ಮುತ್ತಿನ ಸುರಿ ಮಳೆಯನ್ನು ಸುರಿಸುತ್ತಾನೆ.


Click it and Unblock the Notifications











