Gattimela: ಧ್ರುವನ ಹುಡುಗಿ ಹುಡುಕಲು ಉಪಾಯ ಮಾಡಿದ ವೇದಾಂತ್
ಗಟ್ಟಿಮೇಳ ಧಾರವಾಹಿ ಅದ್ಭುತವಾಗಿ ಮೂಡಿ ಬರುತ್ತಿದ್ದು ನೋಡುಗರ ಮನ ಸೆಳೆಯುವ ಹಾಗೆ ಮಾಡುತ್ತಿದೆ. ಇದೀಗ ಸುಹಾಸಿನಿ ಆಟಕ್ಕೆ ತೆರೆ ಬೀಳುವ ಎಲ್ಲಾ ಲಕ್ಷಣ ಕಾಣುತ್ತಿದೆ. ಸುಹಾಸಿನಿ ತನ್ನ ಆರೋಗ್ಯ ಚೆನ್ನಾಗಿ ಇರಲಿ ಬೇರೆಯವರ ಆರೋಗ್ಯ ಹೇಗೆ ಬೇಕಾದರೂ ಇರಲಿ ಎಂದು ಗುಳಿಗೆಗಳನ್ನು ತಂದಿರುತ್ತಾಳೆ. ಹಾಗೆಯೇ ದ್ರುವ ಸತ್ತು ಹೋಗಲಿ ಎಂದು ಆತನಿಗೆ ಕೂಡ ಮಾತ್ರೆ ತಂದಿರುತ್ತಾಳೆ.
ಆದರೆ ಇದನ್ನೆಲ್ಲ ನೋಡಿದ ಅಜ್ಜಿ ಮಾತ್ರ ಅದನ್ನು ಬದಲಾಯಿಸಿ ಬಿಡುತ್ತಾಳೆ. ಸುಹಾಸಿನಿ ದ್ರುವನನ್ನು ಸಾಯಿಸಲು ತಂದಿದ್ದ ಮೆಡಿಸಿನ್ ಅನ್ನು ಆಕೆಯೇ ತಿನ್ನುವ ಹಾಗೆ ಮಾಡುತ್ತಾಳೆ. ಇದನ್ನೆಲ್ಲ ನೋಡಿದ ವೈದೇಹಿ ಅಮ್ಮ ನಿನಗೆ ಯಾಕೆ ಬೇಕು ಇಲ್ಲದ ಉಸಾಬರಿ, ಸುಮ್ಮನೆ ಇರು ಎಂದು ಹೇಳುತ್ತಾಳೆ. ಇದನ್ನು ಕೇಳಿದ ಆಕೆಯ ಅಮ್ಮ ಯಾವತ್ತೂ ಯಾರಿಗೂ ಕೆಟ್ಟದ್ದು ಮಾಡಬಾರದು ಆದಷ್ಟು ಒಳ್ಳೆಯದೇ ಮಾಡಬೇಕು ಇಲ್ಲವಾದರೆ ಸುಮ್ಮನೆ ಇರಬೇಕು ಎಂದು ಹೇಳುತ್ತಾಳೆ.

ಇದನ್ನು ಕೇಳಿದ ವೈದೇಹಿ ತಾಯಿಗೆ ಕೈ ಎತ್ತಿ ಮುಗಿಯುತ್ತಾಳೆ. ಅಮ್ಮ ನಿನಗೆ ಎಷ್ಟು ನನ್ನ ಮೇಲೆ ಪ್ರೀತಿ ಅಲ್ಲವೇ ಎಂದು ಹೇಳುತ್ತಾಳೆ. ಇದನ್ನು ಕೇಳಿದ ಆಕೆಯ ತಾಯಿಗೆ ದುಃಖ ಉಮ್ಮಳಿಸಿ ಬರುತ್ತದೆ. ಇನ್ನು ತನ್ನ ಆರೋಗ್ಯ ಚೆನ್ನಾಗಿ ಇರಲಿ ಎಂದು ಗುಳಿಗೆ ನುಂಗುತ್ತಾಳೆ. ಅದನ್ನು ನುಂಗುತ್ತಾ ಇರುವ ಹಾಗೆಯೇ ಆಕೆಗೆ ತಲೆ ಸುತ್ತು ಬರುವುದು ಕಣ್ಣು ಮಂಜಾಗುವುದು ಮುಂತಾದವು ಎಲ್ಲಾ ಆಕೆಗೆ ಆಗುತ್ತದೆ. ಅದನ್ನು ನೋಡಿದ ಆಕೆಯ ತಾಯಿ ಮರೆಯಲ್ಲಿ ನಿಂತು ಜೋರಾಗಿ ನಗುತ್ತಾಳೆ. ಹಾಗೆ ಆಗಬೇಕು ನಿನಗೆ ಎಂದು ಹೇಳುತ್ತಾಳೆ.
ಇನ್ನು ವೇದಾಂತ್‌ಗೆ ಬಹುದೊಡ್ಡ ಚಿಂತೆ ಕಾಡುತ್ತದೆ. ಅದು ಬೇರೇನೂ ಅಲ್ಲ ಧ್ರುವನ ಹುಡುಗಿ ಯಾರು ಎಂದೆಲ್ಲ ಪ್ರಶ್ನೆ ಉದ್ಭವ ಆಗುತ್ತದೆ. ದ್ರುವನ ಹುಡುಗಿಯನ್ನು ಹೇಗೆ ಹುಡುಕುವುದು ಎಂದೆಲ್ಲ ಆದ್ಯ ಬಳಿ ವೇದಾಂತ್ ಕೇಳುತ್ತಾ ಇರುತ್ತಾನೆ. ಇನ್ನು ಇನ್ಸ್ಟ್ರಾಗ್ರಂ ನಲ್ಲಿ ಸ್ಟೋರಿ ಬೇರೆ ಹಾಕುತ್ತಾರೆ. ಅದನ್ನೆಲ್ಲ ನೋಡಿಯಾದರೂ ದ್ರುವನ ಹುಡುಗಿ ಯಾರು ಅಂತಾದರೂ ನಮಗೆ ತಿಳಿಯುತ್ತಾ ಎಂದು ಯೋಚನೆ ಮಾಡುತ್ತಾ ಇರುತ್ತಾರೆ.
ಬಳಿಕ ವಿಕ್ರಾಂತ್ ಅಮೂಲ್ಯ ಆರತಿಯನ್ನು ಬಿಟ್ಟು ಎಲ್ಲರೂ ಹೊರಗೆ ಪಾರ್ಕ್ ಗೆ ಹೋಗುತ್ತಾರೆ. ಆದ್ಯ ಅಮೂಲ್ಯ ತಂಗಿಯನ್ನು ಕರೆಯುತ್ತಾಳೆ. ಬಾ ಇವತ್ತು ಪಾರ್ಕ್ ಗೆ ಹೋಗುತ್ತಾ ಇದ್ದೇವೆ ಅದು ಬೇರೆ ಅಣ್ಣ ಇದ್ದಾನೆ ಎಂದು ಹೇಳುತ್ತಾಳೆ. ಬಳಿಕ ಆದ್ಯ ಕಾಂತನಿಗೆ ವೇದಾಂತ್ ಕಳವು ಮಾಡಲು ಹೇಳುತ್ತಾಳೆ. ಆದರೆ ಕಾಂತ ಭಯದಿಂದ ಏನು ಮಾಡುವುದು ಎಂದು ತಿಳಿಯದೇ ಪಾರ್ಕ್ ಗೆ ಬರುತ್ತಾನೆ. ಇನ್ನು ಅದಿತಿ ಕೂಡ ದ್ರುವನ ಬಳಿ ಮಾತನಾಡಬೇಕು ಎಂದು ಆಲೋಚನೆ ಮಾಡುತ್ತಾ ಇರುತ್ತಾಳೆ. ಇದನ್ನೆಲ್ಲ ನೋಡಿದ ಆದ್ಯ ಅದಿತಿ ಬಳಿ ಸ್ವಲ್ಪ ಹೊತ್ತು ಕಾಯಿ ಎಂದೆಲ್ಲ ಹೇಳಿ ಆಕೆಯ ಮನವೊಲಿಸಿ ಬಿಡುತ್ತಾಳೆ.
ಆರತಿಗೆ ಸೀಮಂತ ಶಾಸ್ತ್ರ ಮಾಡುವ ಬಗ್ಗೆ ಮಾತನಾಡಿಕೊಂಡಿರುತ್ತಾರೆ. ಆರತಿಗೆ ಬಹಳ ಖುಷಿ ಆಗುತ್ತದೆ. ಯಾರನ್ನು ಸೀಮಂತ ಶಾಸ್ತ್ರ ಮಾಡಲು ಕರೆಯಬೇಕು ಎಂದು ಅಮ್ಮು ಹಾಗೂ ವಿಕ್ರಾಂತ್ ಆಲೋಚನೆ ಮಾಡುವ ವೇಳೆ ಅಲ್ಲಿಗೆ ಆರತಿ ತಂದೆ ತಾಯಿ ಬರುತ್ತಾರೆ. ಪರಿಮಳ ಹಾಗೂ ಮಂಜುನಾಥ್ ನೋಡಿ ಅಲ್ಲಿದ್ದವರು ಎಲ್ಲರೂ ಖುಷಿ ಪಡುತ್ತಾರೆ. ಆರತಿಗೆ ತಿನಿಸು ಕೊಡಲು ಒಂದು ಬುತ್ತಿ ತುಂಬಾ ಹಿಡಿದುಕೊಂಡು ಬರುತ್ತಾರೆ. ಇದನ್ನು ಕಂಡ ಅಮ್ಮು ನನಗೆ ಏನು ಇಲ್ವಾ ಎಂದು ಹೇಳುತ್ತಾಳೆ. ಪರಿಮಳ ನಿನಗೂ ಕೋಡುಬಳೆ ಇದೆ ಎಂದು ಹೇಳುತ್ತಾಳೆ. ಬಳಿಕ ಆಕೆಗೆ ಕೂಡ ತಿನ್ನಿಸುತ್ತಾರೆ. ಅವರು ಕೂಡ ಸೀಮಂತ ಶಾಸ್ತ್ರ ಮಾಡಬೇಕು ಎಂದು ಆಲೋಚನೆ ಮಾಡುತ್ತಾ ಆಕೆಯ ಗಂಡನ ಮನೆಯಲ್ಲಿ ಒಮ್ಮೆ ಮಾತನಾಡಿ ನೋಡೋಣ ಎಂದು ಬಂದಿರುತ್ತಾರೆ.


Click it and Unblock the Notifications











