Gattimela: ಸುಹಾಸಿನಿ ಸೊಕ್ಕಡಗಿಸಿದ ಅಜ್ಜಿ- ವೈದೇಹಿ, ಸುಹಾಸಿನಿ ಸ್ಥಿತಿ ನೋಡಿ ಅಮ್ಮುಗೆ ಶಾಕ್!
ಗಟ್ಟಿಮೇಳ ಧಾರಾವಾಹಿಯಲ್ಲಿ ವೈಜಯಂತಿ ಅಜ್ಜಿ ಹಾಗೂ ವೈದೇಹಿ ಸುಹಾಸಿನಿಯನ್ನು ಸರಿಯಾಗಿ ಗೋಳು ಹೊಯ್ದುಕೊಳ್ಳುತ್ತಿದ್ದಾರೆ. ಸುಹಾಸಿನಿಗೆ ಏನು ಮಾಡುವುದು ಎಂದು ತಿಳಿಯದೇ ಅವರಿಬ್ಬರ ಮೇಲೆ ಅತಿಯಾದ ಕೋಪ ಬಂದರೂ ಕಂಟ್ರೋಲ್ ಮಾಡಿಕೊಂಡಿದ್ದಾಳೆ.
ಇತ್ತ ವೇದಾಂತ ಅವರ ತಂದೆಗೆ ತನ್ನ ಮಗನ ನೆನಪಾಗಿ ಬಿಟ್ಟಿದೆ. ಅಗ್ನಿಯ ಕಪಿ ಮುಷ್ಟಿಯಲ್ಲಿ ಇರುವ ಅವರು ತನ್ನನ್ನು ಇವರಿಂದ ಹೇಗೆ ರಕ್ಷಣೆ ಮಾಡಿಕೊಳ್ಳುವುದು ಎಂದು ಯೋಚನೆ ಮಾಡಿಡುತ್ತಿದ್ದಾರೆ. ವೇದಾಂತ ಹೇಳಿದ್ದು ಎಲ್ಲವೂ ಆತನಿಗೆ ನೆನಪಿಗೆ ಬರುತ್ತದೆ.

ಇತ್ತ, ಮಹಡಿ ಮೇಲಿನಿಂದ ಸುಹಾಸಿನಿ ಮೆತ್ತಗೆ ಕೆಳಗಿಳಿದು ಬರುತ್ತಾ ಇರುವಾಗ ಅಜ್ಜಿ ತನ್ನ ಕೈಯಲ್ಲಿ ಇದ್ದ ಜ್ಯೂಸ್ ಅನ್ನು ನೆಲಕ್ಕೆ ಸುರಿಯುತ್ತಾರೆ. ಆದರೆ ಇದನ್ನೆಲ್ಲ ಗಮನಿಸದ ಸುಹಾಸಿನಿ ಮೆಟ್ಟಿಲು ಇಳಿಯುತ್ತಲೇ ಇದ್ದಾಳೆ. ಆ ವೇಳೆ ಸುಹಾಸಿನಿ ತಾಯಿ ಜೋರಾಗಿ ಕಿರುಚಿ, ಆಕೆಗೆ ಸಹಾಯ ಮಾಡುವಂತೆ ಜ್ಯೂಸ್ ಚೆಲ್ಲಿದೆ ಎಂದು ಹೇಳುತ್ತಾಳೆ.
ನೆಲದ ಮೇಲೆ ಜ್ಯೂಸ್ ಚೆಲ್ಲಿದ ಅಜ್ಜಿ
ಆ ಬಳಿಕ ಆಕೆಗೆ ಜ್ಯೂಸ್ ಚೆಲ್ಲಿರುವುದನ್ನು ಆಕೆಗೆ ಹೇಳಿದಾಗ ಕೋಪಗೊಂಡ ಸುಹಾಸಿನಿ ಅದನ್ನು ಕ್ಲೀನ್ ಮಾಡಲು ಆಗುವುದಿಲ್ಲವಾ? ಹೀಗೆ ನೆಲದಲ್ಲಿ ಚೆಲ್ಲಿ ಬಿಟ್ಟರೆ ಯಾರಾದರೂ ಬಿದ್ದರೆ ಎಂದು ಗಟ್ಟಿ ಧ್ವನಿಯಲ್ಲಿ ಹೇಳಿದಾಗ ವೈದೇಹಿ ಹೇಳುತ್ತಾಳೆ. ಸುಹಾಸಿನಿ ಅದೆಲ್ಲವನ್ನೂ ಅಮ್ಮನಿಗೆ ಯಾಕೆ ಹೇಳುತ್ತ ಇದ್ದೀಯಾ ನಿನಗೆ ಮಾಡಬಹುದು ಅಲ್ವಾ ಎಂದು ಹೇಳುತ್ತಾರೆ.

ಸುಹಾಸಿನಿಗೆ ಸರಿಯಾಗಿ ಬುದ್ದಿ ಕಲಿಸಿದ ವೈದೇಹಿ
ಇನ್ನೂ ಸುಹಾಸಿನಿ ಸರಿ ನಾನು ಕ್ಲೀನ್ ಮಾಡುತ್ತೇನೆ ಎಂದು ಚೆಲ್ಲಿದ್ದ ಜ್ಯೂಸ್ ಅನ್ನು ಒರೆಸುತ್ತಾಳೆ. ಇನ್ನೂ ವೈದೇಹಿ ಹಾಗೂ ಅಜ್ಜಿ ಸುಹಾಸಿನಿ ಪರಿಸ್ಥಿತಿ ಕಂಡು ನಗುತ್ತಾರೆ. ಇನ್ನೂ ಸುಹಾಸಿನಿ ಒರೆಸುತ್ತಾ ಇರುವುದನ್ನು ಕಂಡ ವೈದೇಹಿ, ಹೀಗೆ ನೆಲ ಒರೆಸಿದರೆ ಜ್ಯೂಸ್ ಅಂಟು ಹೋಗಲ್ಲ ಸ್ವಲ್ಪ ಜೋರಾಗಿಯೇ ನೆಲ ಒರೆಸಿ ಬಿಡು ಎಂದು ಹೇಳುತ್ತಾಳೆ. ಇದನ್ನು ಕೇಳಿದ ಸುಹಾಸಿನಿಗೆ ಸಿಟ್ಟು ಬಂದರೂ ಮೆತ್ತಗೆ ನೆಲ ಒರೆಸುತ್ತಾಳೆ.
ಸುಹಾಸಿನಿ ಸ್ಥಿತಿ ಕಂಡು ನಕ್ಕ ತಾಯಿ
ಇನ್ನೂ ನೆಲ ಒರೆಸುವುದನ್ನು ನೋಡಿದ ಅಜ್ಜಿ ಮಾತ್ರ ನನಗೆ ಬಹಳ ಖುಷಿ ಆಗುತ್ತಿದೆ ಎಂದು ನಗುತ್ತಾರೆ. ಆಗ ಅಲ್ಲಿಗೆ ಬಂದ ಅಮ್ಮುಗೆ ಶಾಕ್ ಆಗುತ್ತದೆ. ಅರೆರೆ ಇದೇನಿದು ಅತ್ತೆ ನೀವು ನೆಲ ಒರೆಸುವುದಾ ಎಂದು ಹೇಳಿ ಶಾಕ್ ಆಗುತ್ತಾಳೆ.


Click it and Unblock the Notifications











