Don't Miss!
- News
ಲಂಪಿ ಸ್ಕಿನ್ ರೋಗ: ಪ್ರಾಣಿಗಳಿಗೆ ಲಸಿಕೆ ಹಾಕಲು ಆರಂಭಿಸಿದ ಪಂಜಾಬ್
- Automobiles
ಎಡಿಎಎಸ್ ಸೌಲಭ್ಯ ಹೊಂದಿರುವ ಹೊಸ ಹ್ಯುಂಡೈ ಟ್ಯೂಸಾನ್ ಎಸ್ಯುವಿ ಭಾರತದಲ್ಲಿ ಬಿಡುಗಡೆ
- Finance
ರಕ್ಷಾ ಬಂಧನ 2022: ಸಹೋದರಿಗೆ ಚಿನ್ನ ಉಡುಗೊರೆ ನೀಡುವುದು ಉತ್ತಮವೇ?
- Sports
ಆತನ ಅಲಭ್ಯತೆ ಏಷ್ಯಾಕಪ್ನಲ್ಲಿ ಭಾರತಕ್ಕೆ ದೊಡ್ಡ ಪೆಟ್ಟು ಎಂದ ಪಾಕ್ ಮಾಜಿ ಕ್ರಿಕೆಟಿಗ!
- Technology
ಕೈ ಗೆಟಕುವ ಬೆಲೆಯ ಈ ಗ್ಯಾಜೆಟ್ಸ್ಗಳನ್ನು ರಕ್ಷಾ ಬಂಧನಕ್ಕೆ ಗಿಫ್ಟ್ ಆಗಿ ನೀಡಬಹುದು!
- Lifestyle
ಮಂಕಿಪಾಕ್ಸ್: ಗುಣಮುಖರಾಗಿ ವಾರ ಕಳೆದರೂ ವೀರ್ಯದಲ್ಲಿರುತ್ತೆ ಮಂಕಿವೈರಸ್!
- Travel
ಭಾರತದಲ್ಲಿಯ 10 ಪ್ರಸಿದ್ದ ಹನುಮಂತ ದೇವರ ದೇವಾಲಯಗಳು
- Education
CAT 2022 Preparation Tips : ಕ್ಯಾಟ್ ಪರೀಕ್ಷೆಗೆ ಸಿದ್ಧತೆ ನಡೆಸಲು ಸಲಹೆಗಳು ಇಲ್ಲಿವೆ
ವರಮಹಾಲಕ್ಷ್ಮಿ ಹಬ್ಬದಂದು ಸುಹಾಸಿನಿ ವರ್ತನೆಯಲ್ಲಿ ಬದಲಾವಣೆ!
ವಸಿಷ್ಠ ಮನೆಯಲ್ಲಿ ವರಮಹಾಲಕ್ಷ್ಮೀ ಹಬ್ಬದ ಸಂಭ್ರಮ ಜೋರಾಗಿದೆ. ಸೊಸೆಯಂದಿರು, ಮಕ್ಕಳು, ತಾಯಂದಿರೆಲ್ಲಾ ಸೇರಿ ವರಮಹಾಲಕ್ಷ್ಮೀ ಹಬ್ಬಕ್ಕೆ ಸಿದ್ಧತೆ ಮಾಡಿದ್ದಾರೆ. ಆದರೆ ಈ ಹಬ್ಬದಲ್ಲಿ ಸುಹಾಸಿನಿಯ ಬದಲಾವಣೆ ಒಂದು ಕ್ಷಣ ಎಲ್ಲರಿಗೂ ಶಾಕ್ ನೀಡಿದೆ. ಆದರೆ ಅದರ ಹಿಂದಿನ ಸತ್ಯವೇ ಬೇರೆಯಾಗಿದೆ. ಸುಹಾಸಿನಿಯ ತಲೆ ಕೆಡಿಸಿದ್ದ ವಿಚಾರದಲ್ಲಿ ಪರಿಮಳ ಮನೆಯವರ ನಿರ್ಧಾರ ಬೇರೆಯಾಗಿರುವುದು ಸುಹಾಸಿನಿಯ ಸಂತಸಕ್ಕೆ ಕಾರಣವಾಗಿದೆ.
ನಾಡಿನೆಲ್ಲೆಡೆ ವರಮಹಾಲಕ್ಷ್ಮೀ ಹಬ್ಬದ ಸಂಭ್ರಮ ಕಳೆಗಟ್ಟಿದೆ. ಹಾಗೆ ವಸಿಷ್ಠ ಮನೆಯಲ್ಲೂ ವರಮಹಾಲಕ್ಷ್ಮೀ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ್ದಾರೆ. ಲಕ್ಷ್ಮಿಯನ್ನು ಕೂರಿಸಿ, ಅಲಂಕಾರ ಮಾಡಿ, ಇಡೀ ಮನೆಯನ್ನು ಸಿಂಗರಿಸಿ, ಮನೆ ಮಂದಿಯೆಲ್ಲಾ ಅದ್ಭುತವಾಗಿ ಕಾಣುವಂತಾ ರೆಡಿಯಾಗಿದ್ದಾರೆ. ಹಬ್ಬದ ದಿನ ಬೀಗರ ಮನೆಯವರನ್ನು ಕರೆದು, ಹಬ್ಬ ಆಚರಿಸಿದ್ದಾರೆ. ಇದೀಗ ಪರಿಮಳ ಹಾಗೂ ಸುಹಾಸಿನಿ ಇಬ್ಬರು ಸೇರಿ ಪೂಜೆ ಮಾಡಲು ಸಿದ್ಧರಾಗಿದ್ದಾರೆ. ಬನ್ನಿ ಪರಿಮಳ ಅವರೇ ಪೂಜೆ ಮಾಡೋಣ ಎಂದು ಸುಹಾಸಿನಿ ಕರೆದಿದ್ದಾಳೆ.

ಸುಹಾಸಿನಿ ಮೇಲೆ ಎಲ್ಲರಿಗೂ ಅನುಮಾನ
ಇದನ್ನು ಕೇಳಿದ ಪರಿಮಳಗೆ ಕೊಂಚ ಆತಂಕವಾಗುತ್ತೆ. ಹಬ್ಬದ ದಿನವೂ ಸುಹಾಸಿನಿ ಏನಾದರು ತಂದಿಡುವ ಕೆಲಸ ಮಾಡುತ್ತಾಳೆ ಏನೋ ಎಂದು ಭಯ ಗೊಂಡಿದ್ದಾರೆ ಎಲ್ಲರು. ಏನು ಹೇಳುತ್ತಿದ್ದೀರಿ ಸುಹಾಸಿನಿ ಅವರೇ ನಾನು ನಿಮ್ಮ ಜೊತೆ ಫೂಜೆ ಮಾಡುವುದಾ ಎನ್ನುತ್ತಾಳೆ ಪರಿಮಳ. ಅದಕ್ಕೆ ಸುಹಾಸಿನಿ ಹೇಳುತ್ತಾಳೆ ಯಾಕೆ ಮಾಡಬಾರದು ಅಂತ ಎನು ಇಲ್ಲ ಅಲ್ವಾ.. ಎನ್ನುತ್ತಾರೆ.

''ಇಬ್ಬರು ಮಹಾಲಕ್ಷ್ಮಿಯರು ಕೊಟ್ಟಿದ್ದೀರ''
''ಅಲ್ಲ ನಿಮ್ಮ ಮನೆಯಲ್ಲಿ ನಿಮ್ಮ ಜೊತೆ ಪೂಜೆ ಮಾಡುವುದು ನನಗೆ ಯಾಕೋ ಸರಿ ಕಾಣಿಸುತ್ತಿಲ್ಲ ಎನ್ನುತ್ತಾಳೆ ಪರಿಮಳ. ಅದಕ್ಕೆ ಸುಹಾಸಿನಿ, ''ಪರಿಮಳ ಅವರೇ ಮನುಷ್ಯರಿಗೆ ಬೇದ ಭಾವ ಇರಬಹುದು. ಆದರೆ ದೇವರಿಗೆ ಇಲ್ಲ. ನೀವು ನನ್ನ ಜೊತೆ ಪೂಜೇ ಮಾಡುವುದರಿಂದ ನನಗೇನು ತೊಂದರೆ ಇಲ್ಲ. ಅದು ಅಲ್ಲದೆ ಈ ಮನೆಗೆ ನೀವು ಇಬ್ಬರು ಮಹಾಲಕ್ಷ್ಮಿಯರನ್ನು ಕೊಟ್ಟಿದ್ದೀರಾ. ಈಗ ನೀವು ನಮ್ಮ ಕುಟುಂಬದವರೇ ಆಗುತ್ತಿರಾ ಎನ್ನುತ್ತಾರೆ.

ಇನ್ನೊಬ್ಬರನ್ನು ಕರೆದ ವೇದಾಂತ
ಬಳಿಕ ಸುಹಾಸಿನಿ ಹೇಳುತ್ತಾಳೆ ಅದು ಅಲ್ಲದೆ ನಿಮಗಿರೋ ಒಳ್ಳೆ ಮನಸಿಗೆ ಪುಜೆ ಮಾಡಿದರೆ ನನ್ನ ಮನೆಗೆ ನನ್ನ ಮಕ್ಕಳಿಗೆ ಎಲ್ಲರಿಗೂ ಒಳ್ಳೆದಾಗುತ್ತದೆ. ಪ್ಲೀಸ್ ಬನ್ನಿ ಪೂಜೆ ಶುರು ಮಾಡೋಣ ಎನುತ್ತಾರೆ ಆಗ ಅಜ್ಜಿ ಹೇಳುತ್ತಾರೆ ಪರಿಮಳ, ಸುಹಾಸಿನಿ ಹೇಳುತ್ತಿದ್ದಾಳಲ್ಲ ಹೋಗಿ ಪೂಜೆ ಮಾಡು ಎನ್ನುತ್ತಾರೆ. ಆಗ ವೇದಾಂತ ಹೇಳುತ್ತಾನೆ ಅಮ್ಮ ಒಂದು ನಿಮಿಷ ಅನ್ನುತ್ತಾನೆ ಆಗ ಸುಹಾಸಿನಿ ಕೇಳುತ್ತಾಳೆ ಯಾಕಪ್ಪ ವೇದಾಂತ. ಇನ್ನೊಬ್ಬರು ಇದ್ದಾರೆ. ಅವರನ್ನು ಸೇರಿಸಿಕೊಂಡು ಪೂಜೆ ಮಾಡಿ ಎಂದು ಹೇಳಿ ವೈದೇಹಿ ಯನ್ನು ಕರೆಯುತ್ತಾನೆ.

ಹಾಡು ಹಾಡಿ ಪೂಜೆ
ಬಳಿಕ ಮೂರು ಜನ ಸೇರಿ ಪೂಜೆ ಮಾಡುತ್ತಾರೆ ಭಾಗ್ಯದ ಲಕ್ಷ್ಮಿ ಬಾರಮ್ಮ ಎನ್ನುವ ಹಾಡಿನ ಮೂಲಕ ಲಕ್ಷ್ಮಿ ದೇವಿಯನ್ನು ಆರಾಧಿಸುತ್ತಾರೆ. ಬಳಿಕ ವೈದೇಹಿ ಎಲ್ಲರಿಗೂ ಆರತಿಯನ್ನು ನೀಡುತ್ತಾಳೆ. ಬಳಿಕ ಎಲ್ಲರಿಗೂ ಪ್ರಸಾದ ವಿತರಣೆ ಮಾಡಲಾಗುತ್ತದೆ. ಮೂರು ತಾಯಂದಿರು ವರ ಮಹಲಕ್ಷ್ಮೀ ಗೆ ಪೂಜೆ ಮಾಡಿರುವುದನ್ನು ನೋಡಿ ಮಕ್ಕಳಿಗೆ ಬಹಳ ಖುಷಿ ಆಯಿತು. ಲಕ್ಷ್ಮಿಗೆ ವಿವಿಧ ಅಲಂಕಾರದಿಂದ ಅಲಂಕರಿಸಿ ನೋಡುಗರಿಗೆ ಮುದವನ್ನು ನೀಡುವಂತಿತ್ತು. ಸುಹಾಸಿನಿ ನಡೆ ಕಂಡು ಅಮೂಲ್ಯಗೆ ಹಾಗೆ ವಿಕ್ರಾಂತ್ ಗೆ ಕೊಂಚ ಆಶ್ಚರ್ಯ ಆಯಿತು. ಮುಂದೇನು ನಡೆಯುತ್ತದೆ ನೋಡಬೇಕಿದೆ.