ತಪ್ಪಿತು ಬಹು ದೊಡ್ಡ ಗಂಡಾಂತರ ಅದಿತಿ ನಿರಾಳ?

By ಪೂರ್ವ

ಗಟ್ಟಿಮೇಳ ಧಾರಾವಾಹಿಯಲ್ಲಿ ಇದೀಗ ಅದಿತಿ ದೊಡ್ಡ ಗಂಡಾಂತರದಿಂದ ಪಾರಾಗಿದ್ದಾಳೆ. ಮಗಳಿಗೆ ಬೇಗ ಮದುವೆ ಮಾಡಬೇಕು ಎಂದು ಮಗಳ ಜೀವನವೇ ಹಾಳಾಗುವ ರೀತಿ ಮಾಡ ಹೊರಟಿದ್ದಳು ಪರಿಮಳ. ಸುಹಾಸಿನಿಯ ದೊಡ್ಡ ಉಪಾಯವನ್ನು ವಿಕ್ರಾಂತ್ ಎಲ್ಲರ ಮುಂದೆ ಬಯಲು ಮಾಡುವ ಮುನ್ನ ಸುಹಾಸಿನಿ ಬಣ್ಣ ಬದಲಾಯಿಸಿದ್ದಾಳೆ.

ಸುಹಾಸಿನಿ ಬಣ್ಣ ಬದಲಿಸಿದ್ದನ್ನು ಕಂಡ ವಿಕ್ರಾಂತ್ ಗೆ ಕೊಂಚ ಆಘಾತವಾಗುತ್ತದೆ. ನಿಶ್ಚತಾರ್ಥವನ್ನು ಹೇಗಾದರೂ ಮಾಡಿ ನಿಲ್ಲಿಸಬೇಕು ಎಂದು ವಿಕ್ರಾಂತ್ ತರಾತುರಿಯಲ್ಲಿ ಓಡಿ ಬರುತ್ತಾರೆ. ಇದನ್ನು ಕಂಡ ಸುಹಾಸಿನಿ. ತೇಜಸ್ ನ ಬಣ್ಣ ಬಯಲು ಮಾಡಿದ್ದಾಳೆ. ತೇಜಸ್‌ಗೆ ಈಗ ಎಲ್ಲವು ಅರ್ಥ ಆಗಿರಬೇಕು. ಸುಹಾಸಿನಿ ತೇಜಸ್ ನ ಬಳಿ ಬಂದು ಈ ನಿಶ್ಚಿತಾರ್ಥ ರದ್ದು ಮಾಡಲು ಹೇಳುತ್ತಾಳೆ. ಅದಿತಿ ಮನಸಿಲ್ಲದೆ ಈ ಸಿಶ್ಚಿತಾರ್ಥಕ್ಕೆ ಒಪ್ಪಿಗೆ ಕೂಡ ಸೂಚಿಸಿದ್ದಳು ಇದೀಗ ಕೊಂಚ ನಿರಾಳ ಆಗಿದ್ದಾಳೆ.

ಆದರೆ ಆಕೆಗೆ ಧ್ರುವನನ್ನು ಕಂಡು ಅವಳಿಗೆ ದುಃಖ ಉಮ್ಮಳಿಸಿ ಬಂತು. ಸುಹಾಸಿನಿ ತೇಜಸ್ ಬಳಿ ನೀನಿನ್ನೂ ಡಾಕ್ಟರ್ ಸ್ಥಾನ ದಿಂದ ಸಸ್ಪೆಂಡ್ ಆಗಿಲ್ವಾ, ನೀನಾಗಿ ನಿಜ ಒಪ್ಪಿಕೊಂಡರೆ ಸರಿ ಇಲ್ಲವಾದರೆ ಇಲ್ಲಿ ಆಗುವುದೇ ಬೇರೆ ಎಂದು ಹೇಳುತ್ತಾಳೆ. ಅದಕ್ಕೆ ತೇಜಸ್ ಸಿಟ್ಟಿನಿಂದ ಯಾರು ನಾನು ಡಾಕ್ಟರ್ ಅಲ್ಲ ಎಂದವರು. ಎಂದೆಲ್ಲ ಕೇಳಿದಾಗ ವಿಕ್ರಾಂತ್ ಕೂಡ ಹೇಳುತ್ತಾನೆ ಇದೀಗ ಪೊಲೀಸರನ್ನು ಕರೆಸುತ್ತೇನೆ ಆಗ ಎಲ್ಲಾ ಬಾಯಿ ಬಿಡುತ್ತಿಯಾ ಎನ್ನುತ್ತಾನೆ.

ತೇಜಸ್ ಕೆನ್ನೆಗೆ ಹೊಡೆವ ವೇದಾಂತ್

ತೇಜಸ್ ಕೆನ್ನೆಗೆ ಹೊಡೆವ ವೇದಾಂತ್

ಆಗ ತೇಜಸ್, ನಾನು ಎಂಬಿಬೀಎಸ್ ಮಾಡಿದ್ದೇನೆ ಸರ್ಟಿಫಿಕೇಟ್ ತೋರಿಸಲಾ ಎಂದೆಲ್ಲ ಹೇಳುತ್ತಾನೆ ಇನ್ನೂ ತೇಜಸ್ ಸುಳ್ಳು ಹೇಳುತ್ತಿದ್ದಾನೆ ಎಂಬ ವಿಚಾರ ವೇದಾಂತನಿಗೆ ತಿಳಿದು ಹೋಯಿತು. ಇದನ್ನೆಲ್ಲ ಕಂಡ ವೇದಾಂತ ಜೋರಾಗಿ ತೇಜಸ್ ಬಳಿ ಪ್ರಶ್ನೆ ಮಾಡುತ್ತಾನೆ, ಅದಕ್ಕೆ ತೇಜಸ್ ಉತ್ತರಿಸದೆ ಸುಹಾಸಿನಿ ಬಗ್ಗೆ ಮಾತನಾಡುತ್ತಾನೆ ಇದನ್ನು ಕಂಡ ವೇದಾಂತ ಆತನ ಕೆನ್ನೆಗೆ ಬಾರಿಸುತ್ತಾರೆ.

ಕಪಾಳ ಮೋಕ್ಷ ಮಾಡಿದ ಅಮ್ಮ

ಕಪಾಳ ಮೋಕ್ಷ ಮಾಡಿದ ಅಮ್ಮ

ಇನ್ನು ಅಧಿತಿಗೆ ಇದನ್ನೆಲ್ಲ ಕಂಡು ಬೇಸರವಾಗುತ್ತದೆ. ಇರುಳು ಕಂಡ ಬಾವಿಗೆ ಹಗಲು ನನ್ನ ಮಗಳನ್ನೆ ತಳ್ಳುತ್ತಿದ್ದೇನೆ ಅಲ್ವಾ ಎಂದೆಲ್ಲಾ ಯೋಚನೆ ಮಾಡುತ್ತಾನೆ ಅದಿತಿ ತಂದೆ. ಪರಿಮಳ ಮಗಳ ಸ್ಥಿತಿ ಕಂಡು ದುಃಖ ತಪ್ತಲಾಗುತ್ತಾಳೆ. ಇತ್ತ ಅದಿತಿ ಕೊನೆಗೆ ಹೋಗಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನ ಮಾಡುತ್ತಾಳೆ. ಇದನ್ನು ಕಂಡ ಅಮೂಲ್ಯ ಆಕೆಯನ್ನು ಎಳೆದು ಏನಿದು ಅದಿತಿ ಎಂದು ನಿದ್ದೆ ಗುಳಿಗೆಯನ್ನು ತೋರಿಸುತ್ತಾ ಹೇಳುತ್ತಾಳೆ. ಆದರೆ ಅದಿತಿ ಮೌನ ವಹಿಸುತ್ತಾರೆ. ಬೇಸರದಿಂದ ಅಳುತ್ತಾಳೆ.

ಮುಂದೇನು ಮಾಡುತ್ತಾಳೆ?

ಮುಂದೇನು ಮಾಡುತ್ತಾಳೆ?

ಆಕೆಯ ಬಳಿ ಅಮೂಲ್ಯ ಕಾರಣ ಕೇಳಿ ಏನು ಹೇಳದೆ ಇರುವುದು ಅಮೂಲ್ಯಗೆ ಇನ್ನೂ ತಲೆ ನೋವು ತರಿಸುತ್ತದೆ ಅಲ್ಲಿಗೆ ಬಂದ ಪರಿಮಳ ಅದಿತಿ ಆತ್ಮಹತ್ಯೆಗೆ ಯತ್ನಿಸಿದಳು ಎಂಬ ಸುದ್ದಿ ಕೇಳಿ ಸಿಟ್ಟುಗೊಂಡು ಮಗಳಿಗೆ ಏರ್ರಾ ಬರ್ರಿ ಹೊಡಿಯುತ್ತಾಳೆ. ಇದನ್ನು ಕಂಡ ಅಮೂಲ್ಯ ಅಮ್ಮನನ್ನು ತಡೆಯುತ್ತಾರೆ. ಏನಮ್ಮ ಇವಳನ್ನು ಹೀಗೆ ಹೊಡೆದು ಸಾಯಿಸುತ್ತಿಯಾ ಎಂದು ಬೈಯ್ಯುತ್ತಾಳೆ, ಅದಕ್ಕೆ ಪರಿಮಳ, ''ಈಕೆಯನ್ನು ನಾವು ಕೊಂದರೆ ಸ್ವಲ್ಪ ಬೇಸರ ಕಡಿಮೆ ಆಗುತ್ತದೆ ಅವಳಾಗಿ ಸತ್ತರೆ ನಮಗೆ ಇನ್ನೂ ಬೇಸರ ಆಗುತ್ತದೆ'' ಎಂದೆಲ್ಲಾ ಹೇಳುತ್ತಾ ಅಳುತ್ತಾಳೆ.

ಅಮ್ಮನಿಗೆ ಸಾಂತ್ವನ ಹೇಳಿದ ಅಮ್ಮು

ಅಮ್ಮನಿಗೆ ಸಾಂತ್ವನ ಹೇಳಿದ ಅಮ್ಮು

ಅಮ್ಮನಿಗೆ ಅಮ್ಮು ಸಾಂತ್ವನ ಹೇಳುತ್ತಾಳೆ. ಅದಿತಿ ಮದುವೆ ನಾನು, ವೇದಾಂತ ಮಾಡುತ್ತೇವೆ ನಿಶ್ಚಿಂತೆ ಯಿಂದ ನೀವಿರಿ ಎಂದು ಹೇಳುತ್ತಾಳೆ. ಇತ್ತ ಅದಿತಿ ಮನಸ್ಸು ಸ್ವಲ್ಪ ಹಗುರ ಆಗಿದೆ ಆದರೆ ಧ್ರುವ ಮೊದಲಿನ ರೀತಿ ಆದರೆ ಅಷ್ಟೇ ಸಾಕಪ್ಪ ಎಂದು ದೇವರಲ್ಲಿ ಬೇಡಿಕೊಳ್ಳುತ್ತಿದ್ದಾಳೆ. ಇನ್ನೂ ಅಮ್ಮುವನ್ನು ನೋಡಿದರೆ ಪರಿಮಳಾಗೆ ತನ್ನ ಅಮ್ಮನ ನೆನಪಾಗುತ್ತದೆ. ಇದನ್ನು ಆಕೆಯ ಬಳಿಯೂ ಹೇಳುತ್ತಾಳೆ ಇದನ್ನು ಕೇಳಿದ ಅಮ್ಮು ಅಮ್ಮನನ್ನು ಚೇಡಿಸುತ್ತಾಳೆ. ಇತ್ತ ವೇದಾಂತ ಮಾತ್ರ ಬಹಳ ಬೇಸರದಲ್ಲಿದಾನೆ. ಅದಿತಿ ಮದುವೆ ಹಾಗೆ ಮಾಡಬೇಕು ಹೀಗೆ ಮಾಡಬೇಕು ಎಂದುಕೊಂಡಿದ್ದ ವೇದಾಂತಗೆ ತೇಜಸ್ ನ ನಿಜ ಬಣ್ಣ ಗೊತ್ತಾಗಿ ಇದೀಗ ಬಹು ದೊಡ್ಡ ಗಂಡಾಂತರ ತಪ್ಪಿತು ಎಂದು ಸಮಾಧಾನ ಪಟ್ಟುಕೊಳ್ಳುತ್ತಾರೆ. ಅಮ್ಮು ವೇದಾಂತ ಗೆ ಅಮ್ಮನಿಗೆ ಅಪ್ಪನಿಗೆ ಸಮಾಧಾನ ಮಾಡುತ್ತಾಳೆ. ಅಮ್ಮನ ಬಳಿ ಅದಿತಿ ಬಳಿ ಸ್ವಲ್ಪ ಸಮಯ ಕಳೆಯಲಿ ಆ ಬಳಿಕ ಮಾತನಾಡುತ್ತೇನೆ ಎಂದು ಸಮಾಧಾನ ಮಾಡುತ್ತಾಳೆ ಮುಂದೇನು ಎಂಬುವುದನ್ನು ಕಾದು ನೋಡಬೇಕಿದೆ.

More from Filmibeat

English summary
Kannada serial Gattimela written updated on 5th September. Know more about the episode.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X