'ಈ ಮನಸ್ಸು ಒಂಥರಾ ವಿಚಿತ್ರ' ಎಂದು ಫೋಟೋ ಹಂಚಿಕೊಂಡ ರಜನಿ: ಬಿಗ್ ಬಾಸ್‌ಗೆ ಯಾವಾಗ ಎಂಟ್ರಿ ಎಂದ ಫ್ಯಾನ್ಸ್!

By Poorva

ನೋಡಲು ಅದ್ಭುತವಾದ ಚೆಲುವೆ, ನೆಗೆಟಿವ್ ಪಾತ್ರ ಹಾಗೂ ಪಾಸಿಟಿವ್ ಪಾತ್ರದಲ್ಲಿ ಕೂಡ ನಟನೆ ಮಾಡುವ ಅಭಿನಯತ್ರಿ, ಅವರೇ ರಜಿನಿ, ನಗಿಸುವುದಕ್ಕು ಸೈ, ಅಳಿಸುವುದಕ್ಕು ಸೈ ಅಂತಹ ಅದ್ಭುತ ನಟನೆಯನ್ನು ರಜಿನಿ ಮಾಡುತ್ತಾರೆ. ಅಮೃತವರ್ಷಿಣಿ ಧಾರಾವಾಹಿಯ ಮೂಲಕ ಎಲ್ಲರ ಮನಗೆದ್ದ ನಟಿ ರಜಿನಿ. ರಜಿನಿ ಎಲ್ಲರ ಮುದ್ದು ಸೊಸೆಯಾಗಿ ಮೊದಲ ಬಾರಿಗೆ ಈ ಧಾರವಾಹಿಯಲ್ಲಿ ಕಾಣಿಸಿಕೊಂಡರು. ಇವರ ನಟನೆಯನ್ನು ಹಲವಾರು ಜನ ಮೆಚ್ಚಿಕೊಂಡರು ಕೂಡ.

ಅದಾದ ಬಳಿಕ ರಜಿನಿ ಪಾಲಿಗೆ ಭಾಗ್ಯದ ಬಾಗಿಲು ತೆರೆದಿದೆ ಎಂದರೆ ತಪ್ಪಾಗದು. ಇನ್ನು ಧಾರಾವಾಹಿಗಳಿಂದ ಸಾಕಷ್ಟು ಅಂತರ ಕಾಯ್ದುಕೊಂಡು ಇದ್ದ ಈಕೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುವ ಹಿಟ್ಲರ್ ಕಲ್ಯಾಣ ಧಾರಾವಾಹಿ ಮೂಲಕ ಕಿರುತೆರೆಗೆ ಮತ್ತೆ ಎಂಟ್ರಿ ನೀಡಿದರು. ಹಿಟ್ಲರ್ ಕಲ್ಯಾಣ ಧಾರಾವಾಹಿಯಲ್ಲಿ ವಿಲನ್ ಪಾತ್ರದಲ್ಲಿ ರಜಿನಿ ಎಂಟ್ರಿ ನೀಡಿದ್ದಾರೆ. ಹೀರೋಯಿನ್ ಕ್ಯಾರೆಕ್ಟರ್‌ನಲ್ಲಿ ಬಹಳ ಅದ್ಭುತವಾಗಿ ಮಿಂಚಿದ ಈಕೆ ವಿಲನ್ ಪಾತ್ರದಲ್ಲಿ ನಟನೆ ಮಾಡಿ ಸೈ ಎನಿಸಿಕೊಂಡಿದ್ದಾರೆ.

Kannada Serial Hitler Kalyana Actress Rajini shares new photos

ರಜಿನಿ ಅವರು ಮಜಾ ಟಾಕೀಸ್, ಡ್ಯಾನ್ಸಿಂಗ್ ಸ್ಟಾರ್ ಸೇರಿ ಹಲವು ಶೋಗಳಲ್ಲಿ ಕಾಣಿಸಿಕೊಂಡಿದ್ದರು. ರಜಿನಿ ಇದೀಗ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ರಜಿನಿ ಫೋಟೋ ನೋಡಿದ ಅನೇಕ ಮಂದಿ ಸೋ ಕ್ಯೂಟ್ ಎಂದು ಹೇಳಿದ್ದಾರೆ. ಹಾಗೆಯೇ ರಜಿನಿ ಅವರೇ ಬಿಗ್ ಬಾಸ್ ಗೆ ಯಾವಾಗ ಎಂಟ್ರಿ ನೀಡಲಿದ್ದಿರಿ ಎನ್ನುವ ಪ್ರಶ್ನೆ ಮಾಡಿದ್ದಾರೆ. ರಜಿನಿ ನೋಟಕ್ಕೆ ನಗುವಿಗೆ ಅನೇಕ ಜನ ಫಿದಾ ಆಗಿದ್ದಾರೆ.

ರಜಿನಿ ಫೋಟೋ ನೋಡಿ ವಾವ್ ಎಂದ ಅಭಿಮಾನಿಗಳು

ರಜಿನಿ ಬಿಳಿ ಹಾಗೂ ಕಪ್ಪು ಬಣ್ಣದ ಬಟ್ಟೆ ತೊಟ್ಟು ಅದ್ಭುತವಾಗಿ ಕಾಣಿಸುತ್ತಿದ್ದಾರೆ. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ಫೋಟೋಗಳಿಗೆ "ಮನಸ್ಸು ಮೂಕವಾದಾಗ ಮಾತು ಮೌನವಾಗುತ್ತೆ ... ಮನಸ್ಸಿಗೆ ಸಂತಸವಾದಾಗ ಮಾತು ನಗುವಾಗುತ್ತೆ ... ಮನಸ್ಸಿಗೆ ದುಃಖವಾದಾಗ ಮಾತು ಕಣ್ಣೀರಾಗುತ್ತೆ .. ಮನಸ್ಸಿಗೆ ದುಗುಡವಾದಾಗ ಮಾತು ಗದ್ಗದಿತವಾಗುತ್ತೆ... ಈ ಮನಸ್ಸು ಒಂಥರಾ ವಿಚಿತ್ರ ಬೆಲೆ ಕಟ್ಟಲಾಗದ ಪ್ರೀತಿಯನ್ನು ವಾತ್ಸಲ್ಯಭರಿತ ಸಂಬಂಧವನ್ನು ಇರುವ ಆತ್ಮೀಯತೆಯನ್ನು ಗುರುತಿಸದೇ ಇಲ್ಲದ ಕಡೆಯಲೆಲ್ಲಾ ಹುಡುಕಾಡಿ ನರಳುತ್ತೆ ... ಶುಭ ದಿನ" ಎಂದು ಬರೆದುಕೊಂಡಿದ್ದಾರೆ.

Kannada Serial Hitler Kalyana Actress Rajini shares new photos

ಸಿನಿಮಾದಲ್ಲಿ ನಟನೆ ಮಾಡಿದ ರಜಿನಿ

ರಜಿನಿ ಹಂಚಿಕೊಂಡು ಇರುವ ಫೋಟೋಗಳಿಗೆ ಕಾಮೆಂಟ್‌ಗಳು ಬರುತ್ತಿದೆ. ಇನ್ನು ರಜಿನಿ ಹಲವು ಸಿನಿಮಾಗಳಲ್ಲಿ ಕೂಡ ನಟನೆ ಮಾಡುತ್ತಿದ್ದಾರೆ. ಹಾಗೆಯೇ ಹಿಟ್ಲರ್ ಕಲ್ಯಾಣ ಧಾರಾವಾಹಿಯಲ್ಲಿ ಅಂತರಾ ಪಾತ್ರದಲ್ಲಿ ಕಾಣಿಸಿಕೊಂಡ ಈಕೆ ನೋಡಲು ಮುದ್ದು ಮುದ್ದಾಗಿದ್ದಾರೆ. ರಜಿನಿ ಬಣ್ಣದ ಲೋಕಕ್ಕೇ ಕಾಲು ಇಡುವ ಮುನ್ನ ಆರ್ಕೆಸ್ಟ್ರಾಗಳಲ್ಲಿ ಹಾಡು ಹೇಳುತ್ತಾ ಕಷ್ಟದ ಜೀವನ ನಡೆಸಿದವರು.

More from Filmibeat

English summary
Hitler Kalyana Actress Rajini shares new photos.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X