For Quick Alerts
  ALLOW NOTIFICATIONS  
  For Daily Alerts

  ಹುಟ್ಟು ಹಬ್ಬದ ಸಂಭ್ರಮದಲ್ಲಿ ಹಿರಿಯ ನಟಿ ವಿದ್ಯಾ ಮೂರ್ತಿ

  By ಪೂರ್ವ
  |

  ಹಿಟ್ಲರ್ ಕಲ್ಯಾಣ ಧಾರಾವಾಹಿಯಲ್ಲಿ ಏಜೆ ತಾಯಿಯಾಗಿ ನಟನೆ ಮಾಡುತ್ತಿರುವ ಹಿರಿಯ ಕಲಾವಿದರು ವಿದ್ಯಾ ಮೂರ್ತಿ. ಇವರ ಇಂದು ಹುಟ್ಟು ಹಬ್ಬದ ಸಂಭ್ರಮದಲ್ಲಿ ಇದ್ದಾರೆ. ಇವರು ಹಿಟ್ಲರ್ ಕಲ್ಯಾಣ ಧಾರಾವಾಹಿಯಲ್ಲಿ ಸರೋಜಿನಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇವರ ಅದ್ಭುತ ನಟನೆಯನ್ನು ಜನ ಮೆಚ್ಚಿಕೊಂಡಿದ್ದಾರೆ. ಇವರು ಅನೇಕ ಸಿನಿಮಾದಲ್ಲಿ ಧಾರಾವಾಹಿಗಳಲ್ಲಿ ಬಣ್ಣ ಹಚ್ಚಿದ್ದಾರೆ.

  ಕನ್ನಡ ಭಾಷೆಯ ಕಿರುತೆರೆಯಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ವಿದ್ಯಾ ಮೂರ್ತಿ ಅವರು ನಟಿಸಿದ ಪ್ರಮುಖ ಧಾರವಾಹಿ ಮಾಯ ಮೃಗ, ಬದುಕು, ಮುಕ್ತ ಮುಕ್ತ, ಕೃಷ್ಣ ತುಳಸಿ, ಪಾಪ ಪಾಂಡು, ಮತ್ತು ಇತ್ತೀಚಿಗೆ ಟಿ.ಏನ್.ಸೀತಾರಾಂ ನಿರ್ದೇಶಿಸುತ್ತಿರುವ ಮಗಳು ಜಾನಕಿಯಲ್ಲಿ ದೇವಕಿಯ ಪಾತ್ರವನ್ನು ನಿರ್ವಹಿಸಿದ್ದರು.

  ವಿದ್ಯಾ ಮೂರ್ತಿಯವರು, ಈಗಾಗಲೇ ಸುಮಾರು 35 ಧಾರಾವಾಹಿಗಳಲ್ಲಿ ಅಭಿನಯಿಸಿ ಜನರ ಮನಸ್ಸು ಗೆದ್ದಿದ್ದಾರೆ. ಹೆಚ್ಚಾಗಿ ಇವರು ಕನ್ನಡ ಚಿತ್ರಗಳಲ್ಲೂ ನಟಿಸಿದ್ದಾರೆ. ವಿದ್ಯಾ ಮೂರ್ತಿ ಅವರು ಕೊಡಗು ಜಿಲ್ಲೆಯ ಪರ್ವತ ಧಾಮ, ಮಡಿಕೇರಿಯವರು.

  ಚಿಕ್ಕಂದಿನಿಂದಲೂ ಸಾಹಿತ್ಯ, ಕಲೆಯಲ್ಲಿ ಆಸಕ್ತಿ

  ಚಿಕ್ಕಂದಿನಿಂದಲೂ ಸಾಹಿತ್ಯ, ಕಲೆಯಲ್ಲಿ ಆಸಕ್ತಿ

  ವಿದ್ಯಾ ಮೂರ್ತಿ ಅವರಿಗೆ ಚಿಕ್ಕಂದಿನಿಂದಲೂ ಸಾಹಿತ್ಯ, ಕಲೆಯಲ್ಲಿ ಆಸಕ್ತಿವಹಿಸಿದ್ದವು. ಇವರು ಪದವಿ ಮುಗಿದ ಬಳಿಕ ಮೆಚ್ಚಿದ ಹುಡುಗ ಹೆರಗು ನರಸಿಂಹ ಮೂರ್ತಿಯವರನ್ನು ಮದುವೆಯಾದರು. ಇವರಿಬ್ಬರ ಪ್ರೀತಿಯ ದ್ಯೋತಕವಾಗಿ ದಂಪತಿಗೆ ಒಬ್ಬ ಮಗನಿದ್ದಾನೆ.

  ವಿದ್ಯಾ ಮುರ್ತಿ ಲೇಖಕಿ ಸಹ

  ವಿದ್ಯಾ ಮುರ್ತಿ ಲೇಖಕಿ ಸಹ

  ವಿದ್ಯಾ ಮೂರ್ತಿ ಖ್ಯಾತ ಲೇಖಕಿ ಕೂಡ. ಕವನಗಳು ಮತ್ತು ಸಣ್ಣ ಕಥೆಗಳಲ್ಲಿ ಅವರು ಕೃಷಿ ಮಾಡಿದ್ದಾರೆ. ವಿದ್ಯಾಮೂರ್ತಿ ಅವರಿಗೆ ಅಭಿನಯ ಅಂದರೆ ಪಂಚ ಪ್ರಾಣ. ತಮ್ಮ ಶಾಲಾ ಕಾಲೇಜಿನ ದಿನಗಳಿಂದಲೇ ಅಭಿನಯವನ್ನು ಮಾಡುತ್ತಾ ಬೆಳೆದು ಬಂದಿದ್ದರು. ಇದಕ್ಕೆ ಮನೆಯವರ ಒಪ್ಪಿಗೆ ಕೂಡ ಸಿಕ್ಕಿತ್ತು. ವಿದ್ಯಾ ಮೂರ್ತಿ ಅವರಿಗೆ ಸ್ವರ್ಗವೇ ಅಂಗಯ್ಯಲಿ ಸಿಕ್ಕಿದ ಹಾಗೆ ಆಗಿತ್ತು. ಎನ್.ಎಂ.ಕೆ.ಆರ್.ವಿ.ಕಾಲೇಜಿನ ವಿದ್ಯಾರ್ಥಿನಿಯಾಗಿದ್ದರು. ಅಭಿನಯದಲ್ಲಿ ವಿಪರೀತ ಆಸಕ್ತಿ ಮೂಡಿಸಿಕೊಂಡಿದ್ದ ವಿದ್ಯಾರವರು ಮದುವೆಯಾದ ಬಳಿಕ ಅಭಿನಯಿಸಬೇಕು ಎಂದುಕೊಂಡು ಇದ್ದರು.

  ಪತಿಯ ಮನೆಯಲ್ಲಿ ಆರಂಭದಲ್ಲಿ ಸಿಗಲಿಲ್ಲ ಪ್ರೋತ್ಸಾಹ

  ಪತಿಯ ಮನೆಯಲ್ಲಿ ಆರಂಭದಲ್ಲಿ ಸಿಗಲಿಲ್ಲ ಪ್ರೋತ್ಸಾಹ

  ಆದರೆ ಇವರಿಗೆ ಗಂಡನ ಮನೆಯಲ್ಲಿ ಅಭಿನಯಕ್ಕೆ ಯಾವ ಪ್ರೋತ್ಸಾಹವಿರಲಿಲ್ಲ. ಸುಮಾರು 15 ವರ್ಷಗಳ ಕಾಲ ವಿದ್ಯಾಮೂರ್ತಿಯವರು ಸಿನಿಮಾರಂಗದ ಕಡೆ ಚಿತ್ತ ಹರಿಸಲಿಲ್ಲ. ವಿದ್ಯಾರವರ ಪ್ರಥಮ ಕನ್ನಡ ಚಿತ್ರ ಗೋರೂರು ರಾಮಸ್ವಾಮಿ ಅಯ್ಯಂಗಾರ್ ಬರೆದ 'ಊರ್ವಶಿ' ಚಲನ ಚಿತ್ರ. ಈ ಸಿನಿಮಾದಲ್ಲಿ ಅದ್ಭುತವಾಗಿ ನಟಿಸಿದರು ವಿದ್ಯಾ ಮೂರ್ತಿ. ವಿದ್ಯಾರವರ ಮನೆಯಲ್ಲೂ ಒಂದು ರೀತಿಯ ಸಾಂಸ್ಕೃತಿಕ ವಾತಾವರಣವೇ. ಅಣ್ಣ ಭರತನಾಟ್ಯ ಪಟು, ಒಳ್ಳೆಯ ನಟ, ಮತ್ತೊಬ್ಬ ಅಣ್ಣ ಹಾಡುಗಾರ, ತಂದೆ ಕನ್ನಡ ಪಂಡಿತರು, ಕಾವ್ಯವಾಚನ ಮಾಡುತ್ತಿದ್ದರು. ಆಗ ವಿದ್ಯಾ ಮನೆಗಳಲ್ಲಿ ಹೆಣ್ಣುಮಕ್ಕಳಿಗೆ ಕಡ್ಡಾಯವೆಂಬಂತೆ ಸಂಗೀತ ಪಾಠಕ್ಕೆ ಕಳಿಸುತ್ತಿದ್ದರು. ಜೊತೆಗೆ ಮನೆಯಲ್ಲೇ ಇದ್ದ ನೃತ್ಯಪಟುವಿನಿಂದ ಭರತನಾಟ್ಯದ ಬೋಧನೆ.

  ಅಣ್ಣನಿಗೆ ಹೊಡೆದು ನೃತ್ಯ ಬಿಟ್ಟಿದ್ದ ವಿದ್ಯಾಶ್ರೀ

  ಅಣ್ಣನಿಗೆ ಹೊಡೆದು ನೃತ್ಯ ಬಿಟ್ಟಿದ್ದ ವಿದ್ಯಾಶ್ರೀ

  ವಿದ್ಯಾ ಅವರ ಅಣ್ಣ ಕಲಿಸುವಾಗ ಕಾಲಿನ ಗಿಣ್ಣಿಗೆ, ತಾಳ ತಟ್ಟುವ ಕೋಲಿನಿಂದ ಹೊಡೆದಿದ್ದಕ್ಕೆ ವಿದ್ಯಾ ವಾಪಸ್ ಅದೇ ಕೋಲಿನಿಂದ ಅವನಿಗೆ ಹೊಡೆದು ನೃತ್ಯದಿಂದಲೇ ವಿಮುಖರಾದ್ರಂತೆ. ಊರ್ವಶಿ, ಸ್ಪರ್ಷ, ಮತದಾನ, ಮೈಲಾರಿ, ವಂಶಿ, ಪೃಥ್ವಿ, ಚಾರ್ಮಿನಾರ್, ಕಿಚ್ಚ ಹುಚ್ಚ, ಚಂದ್ರು, ದಿಲ್ ಹೇಳಿದೆ ನೀ ಬೇಕಂತ, ಅಬ್ಬಾ ಆ ಹುಡುಗಿ, ದುಂಬಿ, ಬಾ ನನ್ನ ಪ್ರೀತಿಸು, ....ರೆ, ಬೇರು, ಪ್ರಪಾತ, ಮಾಲ್ಗುಡಿ ಡೇಸ್, ಶಿವಾಜಿ ಸೂರತ್ಕಲ್. ಅಣ್ಣಾಬಾಂಡ್ ಇತ್ಯಾದಿ ಚಿತ್ರದಲ್ಲಿ ನಟಿಸಿದ್ದಾರೆ. ಇನ್ನೂ ಉತ್ತಮ ಪಾತ್ರಗಳು ಇವರನ್ನು ಅರಸಿ ಬರಲೆಂದು ನಮ್ಮ ಆಶಯ.

  English summary
  Kannada serial Hitler kalyana actress Vidha Murthi birth day. She is well known actress in Kannada serial and movie.
  Monday, July 18, 2022, 21:06
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X