Hitler Kalyana: 400 ಸಂಚಿಕೆ ಪೂರೈಸಿದ ಎಜೆ- ಲೀಲಾ ಕಥೆ: ಸಂಭ್ರಮಾಚರಣೆ ಮಾಡಿದ ತಂಡ

By ಪ್ರಿಯಾ ದೊರೆ

'ಹಿಟ್ಲರ್ ಕಲ್ಯಾಣ' ಧಾರಾವಾಹಿಯಲ್ಲಿ ಧಾರಾವಾಹಿಯಲ್ಲಿ ಎಜೆ ಮತ್ತು ಲೀಲಾ ದೂರ ಆಗಿದ್ದಾರೆ. ಒಂದೇ ಮನೆಯಲ್ಲಿದ್ದರೂ ಎಜೆ ಲೀಲಾಳನ್ನು ಹೆಚ್ಚು ಎಂಟರ್ಟೈನ್ ಮಾಡುತ್ತಿಲ್ಲ. ಅವಳ ಬಗ್ಗೆ ಕೇರ್ ಕೂಡ ಮಾಡುತ್ತಿಲ್ಲ.

ಇದರಿಂದ ಸೊಸೆಯಂದಿರು ಖುಷಿಯಲ್ಲಿದ್ದಾರೆ. ಆದರೆ, ಮನದೊಳಗೆ ಎಜೆಗೆ ಲೀಲಾ ಬಗ್ಗೆ ಕೊಂಚ ಒಲವು ಮೂಡುತ್ತಿದೆ. ಲೀಲಾ ತಪ್ಪೇನು ಇಲ್ಲ ಎನಿಸಲು ಶುರುವಾಗಿದೆ. ಆದರೆ ಸತ್ಯದ ಅರಿವು ಯಾವಾಗ ಆಗುತ್ತೋ ಗೊತ್ತಿಲ್ಲ.

ಲೀಲಾಗೆ ಅಜ್ಜಿ ಯಾವಾಗಲೂ ಫುಲ್ ಸಪೋರ್ಟ್ ಕೊಡುತ್ತಾರೆ. ಲೀಲಾ ಏನೇ ಮಾಡಿದರೂ ಸೈ ಎನ್ನುತ್ತಾರೆ. ಎಜೆ ಅಮ್ಮನ ಮಾತಿಗೆ ಏನನ್ನೂ ಮಾತನಾಡುವುದಿಲ್ಲ.

ಸಂಭ್ರಮಿಸಿದ ಧಾರಾವಾಹಿ ತಂಡ

ಸಂಭ್ರಮಿಸಿದ ಧಾರಾವಾಹಿ ತಂಡ

ಧಾರಾವಾಹಿ ಈಗ 400 ಸಂಚಿಕೆಗಳನ್ನು ಪೂರೈಸಿದೆ. ನಿನ್ನೆ ಧಾರಾವಾಹಿ ತಂಡ ಸಂಭ್ರಮಿಸಿದೆ. ಸೋಶಿಯಲ್ ಮೀಡಿಯಾದಲ್ಲಿ ಲೈವ್ ಬಂದಿದ್ದ ತಂಡ 400 ಸಂಚಿಕೆಗಳನ್ನು ಪೂರೈಸಿದ ಖುಷಿಯಲ್ಲಿತ್ತು. 2021 ರ ಆಗಸ್ಟ್ 6 ರಂದು ಜೀ ಕನ್ನಡ ವಾಹಿನಿಯಲ್ಲಿ ಪ್ರಾರಂಭವಾದ 'ಹಿಟ್ಲರ್ ಕಲ್ಯಾಣ' ಧಾರಾವಾಹಿ ಯಶಸ್ವಿಯಾಗಿ 400 ಸಂಚಿಕೆಯನ್ನು ಪೂರೈಸಿದೆ. ಧಾರಾವಾಹಿಯಲ್ಲಿ ನಟಿಸಿದ ಪ್ರತಿಯೊಬ್ಬರೂ ತಮ್ಮ ಪಾತ್ರಗಳನ್ನು ಅದ್ಭುತವಾಗಿ ನಿಭಾಯಿಸಿಕೊಂಡು ಹೋಗುತ್ತಿದ್ದಾರೆ. ಲೀಲಾ ಪಾತ್ರವನ್ನು ನಟಿ ಮಲೈಕಾ ಟಿ ವಾಸುಪಾಲ್ ಅದ್ಭುತವಾಗಿ ನಿಭಾಯಿಸುತ್ತಿದ್ದಾರೆ. ಲೀಲಾ ಪಾತ್ರಕ್ಕೆ ಸಾಕಷ್ಟು ಅಭಿಮಾನಿಗಳು ಇದ್ದಾರೆ.

ಎಜೆ ಒಲಿಸುಕೊಳ್ಳುವ ಯತ್ನದಲ್ಲಿ ಲೀಲಾ

ಎಜೆ ಒಲಿಸುಕೊಳ್ಳುವ ಯತ್ನದಲ್ಲಿ ಲೀಲಾ

ಇನ್ನು ಲೀಲಾ ಕುತ್ತಿಗೆಯಲ್ಲಿರುವ ತಾಳಿಯನ್ನು ಎಜೆ ಕಿತ್ತಾಕಿದ ಮೇಲೆ ಲೀಲಾ ಸೀರೆಯಲ್ಲಿ ಮಿಂಚುತ್ತಿದ್ದಾಳೆ. ಸಿಂಪಲ್ ಆದ ಸೀರೆಯನ್ನು ಉಟ್ಟರೂ, ಚೆನ್ನಾಗಿ ಕಾಣುತ್ತಿದ್ದಾಳೆ. ಲೀಲಾಳನ್ನು ಸೀರೆಯಲ್ಲಿ ನೋಡುವುದೇ ಒಂದು ಚೆಂದಾ ಎಂಬಂತಾಗಿದೆ. ಲೀಲಾಗೆ ಸೀರೆ ಚೆನ್ನಾಗಿ ಒಪ್ಪುತ್ತಿದೆ. ಕಪ್ಪು, ಕೆಂಪು, ನೀಲಿ, ಹಸಿರು ಬಣ್ಣದ ಸೀರೆಗಳನ್ನು ಉಟ್ಟು ಮಿಂಚುತ್ತಿದ್ದಾರೆ. ಪ್ರೇಕ್ಷಕರು ಕೂಡ ಲೀಲಾಳನ್ನು ಸೀರೆಯಲ್ಲಿ ನೋಡುವುದಕ್ಕೆ ಇಷ್ಟ ಪಡುತ್ತಿದ್ದಾರೆ.

ಆಫೀಸ್ ಗೆ ಹೊರಟ ಲೀಲಾ

ಆಫೀಸ್ ಗೆ ಹೊರಟ ಲೀಲಾ

ಇನ್ನು ತನ್ನ ಸೊಸೆ ಲೀಲಾ ಜೀವನ ಚೆನ್ನಾಗಿರಬೇಕು ಎಂದು ಅಜ್ಜಿ ಹೊಸ ನಿರ್ಧಾರವನ್ನು ತೆಗೆದುಕೊಂಡಿದ್ದಾಳೆ. ಹಾಗಾಗಿ ತನ್ನ ನಂತರ ಲೀಲಾಳನ್ನು ಉತ್ತರಾಧಿಕಾರಿಯನ್ನಾಗಿ ಮಾಡಿದ್ದಾಳೆ. ಲೀಲಾಗೆ ಈಗ ಆ ಮನೆಯಲ್ಲಿ ಹಾಗೂ ಎಜೆ ಕಂಪನಿಯಲ್ಲಿ ಅರ್ಧ ಶೇರು ಬಂದಿದೆ. ಈ ನಿರ್ಧಾರವನ್ನು ಕೇಳಿ ಲೀಲಾಗೆ ಬೇಸರವಾಗಿದೆ. ಆದರೆ, ಅಜ್ಜಿ ಇದೆಲ್ಲವೂ ನಿನ್ನ ಒಳ್ಳೆಯದಕ್ಕಾಗಿಯೇ ಮಾಡಿರುವುದು. ಇವತ್ತಲ್ಲ ನಾಳೆ ಇದರಿಂದ ನಿನಗೆ ಒಳ್ಳೆಯದಾಗುತ್ತೆ ಎಂದು ಹೇಳಿದ್ದಾಳೆ. ಲೀಲಾ ಮೊದಲ ದಿನ ಆಫೀಸಿಗೆ ಹೋಗಲು ಕಪ್ಪು ಸೀರೆ ಉಟ್ಟು ಹೊರಟಿದ್ದಾಳೆ.

ಲೀಲಾ ವಿರುದ್ಧ ದುರ್ಗಾ ಪ್ಲ್ಯಾನ್

ಲೀಲಾ ವಿರುದ್ಧ ದುರ್ಗಾ ಪ್ಲ್ಯಾನ್

ಲೀಲಾಗೆ ಎಲ್ಲಾ ಅಧಿಕಾರ ಹೋಯ್ತಲ್ಲ ಎಂದು ಬೇಸರಗೊಂಡಿರುವ ಸೊಸೆಯಂದಿರು, ಫುಲ್ ಫೀಲಿಂಗ್ ನಲ್ಲಿದ್ದಾರೆ. ಆದರೆ, ದುರ್ಗಾ ಲೀಲಾಳನ್ನು ಕಿಡ್ನ್ಯಾಪ್ ಮಾಡಿಸಲು ಮುಂದಾಗಿದ್ದಾಳೆ. ಇದಕ್ಕಾಗಿ ದುರ್ಗಾ ಕೆಂಪು ಬಣ್ಣದ ಸೀರೆಯನ್ನು ಲೀಲಾ ಉಡಲಿ ಎಂದು ನೀಡಿದ್ದಾಳೆ. ಆದರೆ ಆ ಸೀರೆಯನ್ನು ಲಕ್ಷ್ಮಿ ಉಟ್ಟುಕೊಂಡಿದ್ದಾಳೆ. ಈಗ ಲೀಲಾಳೇ ಕಿಡ್ನ್ಯಾಪ್ ಆಗುತ್ತಾಳಾ ಇಲ್ಲ ಲಕ್ಷ್ಮಿಗೆ ತೊಂದರೆಯಾಗುತ್ತಾ.? ಇದರಿಂದ ದುರ್ಗಾ ಮುಂದೇನು ನಿರ್ಧಾರ ತೆಗೆದುಕೊಳ್ಳುತ್ತಾಳೆ ಎಂಬ ಕುತೂಹಲ ಮೂಡಿದೆ.

More from Filmibeat

English summary
Kannada serial Hitler Kalyana serial recently completed its 400 episodes and the team celebrated the special occasion.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X