Hitler Kalyana: ಏಜೆಯನ್ನು ಎದುರು ಹಾಕಿಕೊಂಡ ಲೀಲಾ ?
ಪ್ರಾರ್ಥನಾಳಿಂದ ಕೊಂಚ ಬೇಸರ ಆದರೂ ಅದೆಲ್ಲವನ್ನು ಸಹಿಸಿಕೊಂಡು ಯಾವಾಗ ಏಜೆ- ಲೀಲಾ ಒಂದಾಗುತ್ತಾರೆ ಎಂದು ವೀಕ್ಷಕರು ಕಾಯುತ್ತಿದ್ದಾರೆ. ಆದರೆ ಲೀಲಾ ತಂದೆ ಚಂದ್ರಶೇಖರ್ ಹಾಗೂ ಕೌಸಲ್ಯ ಇಬ್ಬರೂ ಕೂಡ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರವನ್ನು ಮಾಡುತ್ತಿದ್ದಾರೆ.
ತನ್ನ ಮಕ್ಕಳು ಚೆನ್ನಾಗಿರಬೇಕು. ಅವರಿಗೆ ನಮ್ಮಿಂದ ಯಾವ ನೋವು ಹಾಗೂ ತೊಂದರೆ ಆಗಬಾರದು ಎಂದುಕೊಂಡು ತಮ್ಮ ಜೀವವನ್ನು ತ್ಯಾಗ ಮಾಡಲು ಹೊರಟಿದ್ದಾರೆ. ತನ್ನ ಮಗಳು ರೇವತಿ ವಿಡಿಯೋ ಎಲ್ಲೆಡೆ ವೈರಲ್ ಆದರೆ ಆಕೆ ಜೀವಂತವಾಗಿ ಇರುವುದಿಲ್ಲ ಅದಕ್ಕಿಂತ ಮುಂಚಿತವಾಗಿಯೇ ನಾವು ಸತ್ತು ಹೋಗಿ ಬಿಡಬೇಕು ಎಂದು ಯೋಚನೆ ಮಾಡುತ್ತಾರೆ. ಏಜೆ ಮನೆಗೆ ಬ್ಯಾಂಕ್ ಗೆ ಬಂಡವಾಳ ಹೂಡಿ ಇರುವವರು ಬಂದು ಗಲಾಟೆ ಮಾಡಿದಾಗ ಏಜೆಗೆ ಬಹಳ ಕೋಪ ಬರುತ್ತದೆ .

ಇನ್ನು ಏಜೆ ಬಳಿಗೆ ಬಂದ ಹೂಡಿಕೆದಾರರು ಕಂಪ್ಲೇಂಟ್ ಮಾಡುತ್ತಾರೆ. ಬ್ಯಾಂಕ್‌ನಲ್ಲಿದ್ದ ಎಲ್ಲಾ ಹಣವನ್ನು ಚಂದ್ರಶೇಖರ್ ಬೇರೆ ಯಾರಿಗೋ ವರ್ಗಾವಣೆ ಮಾಡಿದ್ದಾರೆ. ಇದೀಗ ಏನು ಮಾಡಬೇಕು ಎಂದು ತೋಚುತ್ತಿಲ್ಲ, ನಮಗೆ ನೀವೇ ನ್ಯಾಯ ಕೊಡಬೇಕು, ನಿಮ್ಮನ್ನು ನಂಬಿ ನಾವು ಬಂಡವಾಳ ಹೂಡಿಕೆ ಮಾಡಿದ್ದೇವೆ ಇದೀಗ ನಮಗೆ ಮೋಸ ಆಗುತ್ತಿದೆ ಎಂದು ಹೇಳುತ್ತಾರೆ. ಬ್ಯಾಂಕ್‌ನಿಂದ ಹಣ ಬೇರೆ ಕಡೆ ವರ್ಗಾವಣೆ ಎಂದು ಅವರೆಲ್ಲಾ ಹೇಳಿದಾಗ ಏಜೆಗೆ ಏನು ಮಾಡಬೇಕು ಎಂದು ದಿಕ್ಕು ತೋಚದಂತಾಗುತ್ತದೆ.
ಚಂದ್ರಶೇಖರ್ ಮೇಲೆ ಏಜೆ ಗರಂ
ಅಂದಹಾಗೆ ಚಂದ್ರಶೇಖರ್ ಅವರನ್ನ ನಂಬಿ ಏಜೆ ಬ್ಯಾಂಕ್ ಅಧಿಕಾರವನ್ನು ಕೊಟ್ಟಿರುತ್ತಾರೆ. ಆದರೆ ಚಂದ್ರಶೇಖರ್, ಪ್ರಾರ್ಥನಾ ಕುತಂತ್ರಕ್ಕೆ ಮಣಿದು ಇದೀಗ ಹಣವನ್ನು ಬೇರೆಡೆಗೆ ವರ್ಗಾಯಿಸಿದ್ದಾನೆ. ಈ ವಿಚಾರ ಏಜೆಗೆ ಗೊತ್ತಾದರೆ ನಮಗೆ ಕಂಟಕ ಗ್ಯಾರಂಟಿ ಎಂದು ಚಂದ್ರಶೇಖರ್ ಅಂದುಕೊಂಡಿರುತ್ತಾನೆ. ಏಜೆ ಮನೆತನಕ ಬಂದು ಮಾತನಾಡುತ್ತಾರೆ ಎಂದು ಚಂದ್ರಶೇಖರ್ ಅಂದುಕೊಂಡಿರಲಿಲ್ಲ.
ಉರಿಯುವ ಬೆಂಕಿಗೆ ತುಪ್ಪ ಸುರಿದ ಪ್ರಾರ್ಥನಾ
ಇನ್ನು ಅಂತರಾ ರೂಪದಲ್ಲಿ ಪ್ರಾರ್ಥನಾ, ಏಜೆ ಮನೆಗೆ ಬಂದಿದ್ದಾಳೆ. ಏಜೆಯ ಮನೆಯನ್ನು ಹೇಗಾದರೂ ಮಾಡಿ ತನ್ನದಾಗಿಸಿಕೊಳ್ಳಬೇಕು ಎಂದು ಹೊಂಚು ಹಾಕುತ್ತಿರುವ ಗುಳ್ಳೆ ನರಿ ಎಂದರೆ ತಪ್ಪಾಗದು. ಏಜೆಯ ಮಗನನ್ನೇ ದೂರ ಮಾಡಿದ ಪ್ರಾರ್ಥನೆಗೆ ಲೀಲಾಳನ್ನು ದೂರ ಮಾಡುವುದು ಅಷ್ಟೇನೂ ಕಷ್ಟದ ವಿಚಾರ ಆಗಿರುವುದಿಲ್ಲ.

ತಂದೆ ಮೇಲಿನ ಆಪಾದನೆ ತೊಡೆದು ಹಾಕ್ತಾಳ ಲೀಲಾ
ಪ್ರಾರ್ಥನಾ, ಲೀಲಾ ತಂದೆಯ ಮೇಲೆ ಅಪವಾದ ಬರುವ ಹಾಗೆ ಮಾಡಿ ಏಜೆ ಕೋಪಗೊಳ್ಳುವ ಹಾಗೆ ಕೆಲವು ನಾಟಕೀಯ ಮಾತುಗಳನ್ನು ಆಡಿ ಉರಿಯುತ್ತಿರುವ ಬೆಂಕಿಗೆ ಮತ್ತಷ್ಟು ತುಪ್ಪ ಸುರಿಯುವ ಪ್ರಯತ್ನ ಮಾಡುತ್ತಾಳೆ. ಏಜೆ ಕೂಡ ಪ್ರಾರ್ಥನಾಳ ಮಾತುಗಳನ್ನು ಕೇಳಿ ಚಂದ್ರಶೇಖರ್ ಮನೆಗೆ ಹೋಗುತ್ತಾನೆ. ಆದರೆ ಚಂದ್ರಶೇಖರ್ ಹಾಗೂ ಕೌಸಲ್ಯ ಚಿತ್ರಾನ್ನ ಮಾಡಿ ಅದಕ್ಕೆ ವಿಷವನ್ನು ಬೆರೆಸಿ ಇಟ್ಟಿರುತ್ತಾರೆ. ಸಾಯುವ ಮುನ್ನ ಗಂಡ ಹೆಂಡತಿ ಕೊಂಚ ಮಾತನಾಡುತ್ತಾ ಇರುತ್ತಾರೆ. ಕೌಸಲ್ಯಾಗೆ ತನ್ನ ಮಕ್ಕಳ ಭಯ ಎಲ್ಲಾದರೂ ಪ್ರಾರ್ಥನಾ ರೇವತಿಯ ವಿಡಿಯೋ ವೈರಲ್ ಮಾಡಿದರೆ ಏನು ಗತಿ ಎಂದು ತನ್ನ ಗಂಡನ ಬಳಿ ಹೇಳುತ್ತಾ ಇರುತ್ತಾಳೆ.
ಕೌಸಲ್ಯಗೆ ಧೈರ್ಯ ನೀಡಿದ ಚಂದ್ರಶೇಖರ್
ಇನ್ನು ಚಂದ್ರಶೇಖರ್ ತನ್ನ ಹೆಂಡತಿಗೆ ಧೈರ್ಯ ಹೇಳುತ್ತಾನೆ. ಅದೆಲ್ಲ ಸಾಧ್ಯವೇ ಇಲ್ಲ, ಯಾಕೆಂದರೆ ನಾವು ಬರೆದಿಡುವ ಪತ್ರ ಏಜೆ ಕೈಗೆ ಸಿಕ್ಕರೆ ನಮ್ಮ ಎಲ್ಲಾ ಪ್ರಾಬ್ಲಮ್‌ಗೆ ನಮ್ಮ ಅಳಿಯಂದಿರು ಪರಿಹಾರ ನೀಡುತ್ತಾರೆ. ಅಂತರ ರೂಪದಲ್ಲಿರುವ ಪ್ರಾರ್ಥನಾ ಬಂಡವಾಳ ಕೂಡ ಕಳಚಿ ಬೀಳುತ್ತದೆ ಎಂದು ಸಮಾಧಾನವನ್ನು ಹೇಳುತ್ತಾರೆ. ಆ ಬಳಿಕ ಚಂದ್ರಶೇಖರ್‌ಗೆ ಒಂದು ಫೋನ್ ಕರೆ ಬರುತ್ತದೆ. ಕರೆ ಸ್ವೀಕರಿಸಿ ಮಾತನಾಡಿದ ಚಂದ್ರಶೇಖರ್ ಬಹಳ ಗಾಬರಿಯಿಂದ ಮನೆಯಿಂದ ಹೊರಗೆ ಓಡಿ ಬರುತ್ತಾರೆ.
ಲೀಲಾ ಮನೆ ಮುಂದೆ ಬಂದು ಕೂಗಾಡಿದರು ಏಜೇ
ಅಷ್ಟರಲ್ಲಿ ಮನೆ ಮುಂದೆ ಏಜೆ ಕಾರು ಬಂದು ನಿಲ್ಲುತ್ತದೆ. ಏಜೆಯನ್ನು ನೋಡಿ ಚಂದ್ರಶೇಖರ್‌ಗೆ ಬಹಳ ಗಾಬರಿಯಾಗುತ್ತದೆ. ಚಂದ್ರಶೇಖರನ ನೋಡುತ್ತಿದ್ದ ಹಾಗೆ ಎಜೆ ಜೋರಾಗಿ ಕೂಗಾಡಿ ಬಿಡುತ್ತಾರೆ. ಇದನ್ನೆಲ್ಲಾ ಕೇಳಿ ಅಕ್ಕಪಕ್ಕದ ಮನೆಯವರೆಲ್ಲ ಓಡಿ ಬರುತ್ತಾರೆ .ಇನ್ನು ಚಂದ್ರಶೇಖರ್ ಬಗ್ಗೆ ಹೆಚ್ಚಾಗಿ ಬೈಯುತ್ತಿದ್ದ ಏಜೆಗೆ ಲೀಲಾ ಕೆಲವು ಬುದ್ಧಿ ಮಾತುಗಳನ್ನ ಹೇಳುತ್ತಾಳೆ. ಹಾಗೆಯೇ ತಂದೆಯ ವಿರುದ್ಧ ನಿಂತಿರುವುದನ್ನು ಕಂಡು ಸತ್ಯವನ್ನ ಒಮ್ಮೆ ಪಾರಮರ್ಶಿಸಿ ನೋಡಿ ಮತ್ತೆ ನನ್ನ ತಂದೆಯ ಬಗ್ಗೆ ಮಾತನಾಡಿ ಎಂದು ಖಡಕ್ ವಾರ್ನಿಂಗ್ ಕೊಟ್ಟಿದ್ದಾಳೆ.
ಲೀಲಾಗೆ ಪ್ರಾರ್ಥನಾ ವಾರ್ನಿಂಗ್
ನೀನು ಇನ್ನು ಮುಂದೆ ಈ ಮನೆಗೆ ಬರುವುದಿಲ್ಲ ಕಡೆಯದಾಗಿ ಈ ಮನೆಯನ್ನೂ ಮತ್ತೊಮ್ಮೆ ನೋಡಿಕೋ ಎಂದು ಪ್ರಾರ್ಥನಾ, ಲೀಲಾಗೆ ಆಕೆ ಕಿವಿಗೊಡದೆ ಅಲ್ಲಿಂದ ತನ್ನ ತಂದೆಯನ್ನು ರಕ್ಷಣೆ ಮಾಡಲು ಹೊರಡುತ್ತಾಳೆ. ಆ ಬಳಿಕ ಪ್ರಾರ್ಥನಾ ಮೂವರು ಏಜೆಯ ಸೊಸೆಯರನ್ನ ನೋಡಿ ಲೀಲಾ ಮನೆಯಿಂದ ಹೊರಗೆ ಹೋಗಿ ಆಯಿತು. ಇನ್ನು ನನ್ನ ಟಾರ್ಗೆಟ್ ನೀವೇ ಎಂದು ಹೇಳುತ್ತಾಳೆ. ಇದನ್ನು ಕೇಳಿದ ದುರ್ಗಾ, ಸರು ಹಾಗೂ ಲಕ್ಷ್ಮೀಗೆ ಬಹಳ ಶಾಕ್ ಆಗುತ್ತದೆ.


Click it and Unblock the Notifications











