Hitler Kalyana: ದುರ್ಗಾ ಮಾತಿಗೆ ಸೊಪ್ಪು ಹಾಕದ ಲೀಲಾ ಏಜೆ ಕೋಟೆಯನ್ನು ಉಳಿಸಲು ಮನೆಗೆ ಬರುತ್ತಾಳಾ?

By Poorva

ಹಿಟ್ಲರ್ ಕಲ್ಯಾಣ ಧಾರವಾಹಿ ಅದ್ಭುತವಾಗಿ ಮೂಡಿ ಬರುತ್ತಿದ್ದು ನೋಡುಗರ ಮನ ಸೆಳೆಯುವ ಹಾಗೆ ಮಾಡುತ್ತಿದೆ.. ಇದೀಗ ದುರ್ಗಾ ತಾನು ಮಾಡಿದ ತಪ್ಪಿಗೆ ಪಶ್ಚಾತಾಪ ಪಡುತ್ತಾ ಇದ್ದಾಳೆ.. ಯಾಕೆ ಹೀಗೆ ಆಯಿತು ಎಂದು ಬಹಳ ಬೇಸರ ವ್ಯಕ್ತ ಪಡುತ್ತಾ ಇರುತ್ತಾಳೆ .. ಪ್ರಾರ್ಥನಾ ಅಂತರ ಎಂದು ತಿಳಿದು ಮನೆಯವರೆಲ್ಲ ಮೋಸ ಹೋಗುತ್ತಾ ಇದ್ದಾರೆ.

ಹೀಗೆಯೇ ಬಿಟ್ಟರೆ ಏಜೇ ಮನೆ ಇಬ್ಬಾಗಾ ಆಗುವುದರಲ್ಲಿ ಸಂಶಯವಿಲ್ಲ ಎಂದು ಯೋಚನೆ ಮಾಡುತ್ತಾ ಇರುತ್ತಾರೆ.. ಇನ್ನೂ ದುರ್ಗಾ ಲೀಲಾ ಮನೆಗೆ ಹೋದರು ಅಲ್ಲಿ ಮಾತ್ರ ಕಿಮ್ಮತ್ತಿನ ಬೆಲೆ ಯಾರಿಂದಲೂ ಸಿಗುವುದಿಲ್ಲ.. ಅಷ್ಟು ಚಳಿಯಲ್ಲಿ ರಾತ್ರಿಯಲ್ಲಿ ಲೀಲಾ ಮನೆಯ ಎದುರು ನಿಂತು ಲೀಲಾಗಾಗಿ ದುರ್ಗಾ ಕಾಯುತ್ತಾ ಇರುವುದನ್ನು ಕಂಡ ಚಂದ್ರಶೇಖರ್ ಗೆ ದುರ್ಗಾ ಮೇಲೆ ಇದ್ದ ಕೋಪ ಹೊರಟು ಹೋಗುತ್ತದೆ..

Kannada serial Hitler Kalyana written update on 23rd August

ಯಾವತ್ತೂ ದುರ್ಗಾ ಯಾರನ್ನು ಬೇಡಿದವಳು ಅಲ್ಲ ಆದರೆ ಇದೀಗ ಯಾಕೆ ಹೀಗೆ ಲೀಲಾ ಬಳಿ ಕೇಳಿಕೊಳ್ಳುತ್ತ ಇದ್ದಾಳೆ ಎಂದು ಯೋಚನೆ ಮಾಡುತ್ತಾ ಇರುತ್ತಾರೆ.. ಲೀಲಾ ಗೆ ದುರ್ಗಾ ಚಳಿಯಲ್ಲಿ ನಡುಗುತ್ತಾ ಇರುವುದನ್ನು ಕಂಡು ಮನೆಯ ಒಳಗೆ ಕರೆಯುತ್ತಾಳೆ.. ದುರ್ಗಾ ನಿಜ ವಿಚಾರವನ್ನು ಲೀಲಾ ಬಳಿ ಹೇಳಿದರು ಲೀಲಾ ಮಾತ್ರ ಅಂತರ ಳನ್ನು ನಂಬುತ್ತಾರೆ.. ದೇವರಂತಹ ಅಂತರ ಅಕ್ಕನ ಮೇಲೆ ಆರೋಪ ಮಾಡಲು ಮನಸ್ಸು ಹೇಗೆ ಬರುತ್ತದೆ ಎಂದು ಜೋರಾಗಿ ಹೇಳುತ್ತ ಇರುತ್ತಾಳೆ..

ಆದರೆ ದುರ್ಗಾ ಮಾತ್ರ ಆಕೆ ಅಂತರ ಅಲ್ಲ ಆಕೆ ಪ್ರಾರ್ಥನಾ ಎಂದು ಎಷ್ಟೇ ಹೇಳಿದರೂ ಲೀಲಾ ಮಾತ್ರ ಆಕೆಯ ಮಾತನ್ನು ಕೇಳದೆ ಸುಮ್ಮನೆ ಇರುತ್ತಾಳೆ.. ಆ ಬಳಿಕ ದುರ್ಗಾ ಲೀಲಾ ಬಳಿ ಸೆರಗೊಡ್ಡಿ ಬೇಡುತ್ತಾಳೆ. ಆದರೂ ಲೀಲಾ ಮನಸ್ಸು ಕರಗದೆ ಇರುವುದನ್ನು ನೋಡಿದ ಲೀಲಾ ಮಾತ್ರ ಎನು ಮಾತನಾಡದೆ ಸುಮ್ಮನೆ ಇರುತ್ತಾಳೆ. ಇನ್ನೂ ದುರ್ಗಾ ವಿಧಿ ಇಲ್ಲದೆ ಅಲ್ಲಿಂದ ಮನೆಗೆ ಹೋಗುತ್ತಾಳೆ.

ಇನ್ನೂ ಚಂದ್ರ ಶೇಖರ್ ದೇವರ ಮನೆಯ ಬಳಿ ಬಂದು ಕುಳಿತುಕೊಂಡು ಯೋಚನೆ ಮಾಡುತ್ತಾ ಇರುವಾಗ ಲೀಲಾ ಬರುತ್ತಾಳೆ.. ಲೀಲಾ ಬಳಿ ಚಂದ್ರ ಶೇಖರ್ ತನ್ನ ಮನದಲ್ಲಿ ಮೂಡಿದ ಯೋಚನೆಯನ್ನು ಬಿಚ್ಚಿ ಇಡುತ್ತಾರೆ. ಇದೆಲ್ಲವನ್ನೂ ಕೇಳಿದ ಲೀಲಾ ಕೂಡ ತಂದೆಯ ಬಳಿ ಹೇಳುತ್ತಾರೆ.. ಹೌದು ಅಪ್ಪ.. ದುರ್ಗಾ ಯಾವತ್ತೂ ನನ್ನ ಬಳಿ ಎನು ಬೇಡಿಲ್ಲ.. ಇವತ್ತು ಸಹಾಯ ಬೇಕು ನಮ್ಮ ಮನೆಯನ್ನು ಉಳಿಸಿಕೊಳ್ಳೋಣ ಎಂದು ಹೇಳುತ್ತ ಇದ್ದಾರೆ ಇದನ್ನು ನಂಬಬೇಕ ಅಥವಾ ಬಿಡಬೇಕೆ ಎಂದು ತಿಳಿಯುತ್ತಇಲ್ಲ ಎಂದು ಬಹಳ ಬೇಸರ ಪಟ್ಟುಕೊಂಡು ಹೇಳುತ್ತಾಳೆ.

ಇನ್ನೂ ದುರ್ಗಾ ಮಾತ್ರ ತನ್ನ ಅತ್ತೆ ಲೀಲಾ ಬಗ್ಗೆ ಬಹಳ ಪ್ರೀತಿಯಿಂದ ಮಾತನಾಡಿಕೊಂಡು ಇರುತ್ತಾಳೆ.. ನನ್ನ ಅತ್ತೆ ಯಾವತ್ತೂ ಯಾರಿಗೂ ಕೆಟ್ಟದು ಬಯಸುವವರು ಅಲ್ಲ.. ಹಾಗೆಯೇ ಆಕೆ ಚೆನ್ನಾಗಿರಬೇಕು.. ಆಕೆಯನ್ನು ಬಿಟ್ಟು ಬೇರೆ ಯವರನ್ನು ಈ ಮನೆಗೆ ಕರೆದುಕೊಂಡು ಬಂದು ದೊಡ್ಡ ತಪ್ಪು ಮಾಡಿಬಿಟ್ಟೆ ಎಂದು ಯೋಚನೆ ಮಾಡುತ್ತಾ ಇರುತ್ತಾಳೆ.

More from Filmibeat

English summary
Kannada serial Hitler kalyana written updated on 23th August
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X