Hitler kalyana: ಲೀಲಾ ಮಾತಿಗೆ ಬೆದರಿದ ಪ್ರಾರ್ಥನಾ, ನಿಜ ವಿಚಾರ ಮನೆಯವರಿಗೆ ತಿಳಿದರೆ ಅಷ್ಟೇ!
ಹಿಟ್ಲರ್ ಕಲ್ಯಾಣದಲ್ಲಿ ಪ್ರಾರ್ಥನಾ ಬಂಡವಾಳ ಲೀಲಾಗೆ ತಿಳಿದು ಹೋಗಿದೆ . ಆದರೆ ಪ್ರಾರ್ಥನಾ ಮಾತ್ರ ಲೀಲಾ ಗಮನಕ್ಕೆ ಇದ್ಯಾವುದೂ ಬಂದೆ ಇಲ್ಲ ಎಂದು ತಿಳಿದುಕೊಂಡಿದ್ದಾಳೆ. ಆದರೆ ಇತ್ತೀಚಿನ ದಿನಗಳಲ್ಲಿ ದುರ್ಗಾ ಕೂಡ ಮನೆಯಲ್ಲಿ ಕಾಣಿಸುತ್ತಿಲ್ಲ. ಇದಕ್ಕೆಲ್ಲ ಪ್ರಾರ್ಥನಾ ಕಾರಣ ಎಂದು ಅಭಿಮಾನಿಗಳಿಗೆ ಅನ್ನಿಸುತ್ತಿದೆ. ಲೀಲಾಗೆ ಒಳ್ಳೆಯದಾಗಲಿ ಆಕೆ ಚೆನ್ನಾಗಿ ಇರಲಿ ಎಂದು ದುರ್ಗಾ ಕಂಡ ಕಂಡ ದೇವರ ಬಳಿ ಕೇಳಿಕೊಳ್ಳುತ್ತಾ ಇದ್ದಳು.
ಆದರೆ, ಇದೀಗ ದುರ್ಗಾ ಮನೆಯಲ್ಲಿ ಇಲ್ಲ. ಆದರೆ ಲೀಲಾ ಮಾತ್ರ ಪ್ರಾರ್ಥನಾಳನ್ನು ಸರಿಯಾಗಿ ಆಟ ಆಡಿಸುತ್ತಾ ಇದ್ದಾಳೆ. ಈಗಾಗಲೇ ಪ್ರಾರ್ಥನಾ ರಾತ್ರಿ ಊಟ ಮಾಡದೇ ಏನನ್ನೋ ಯೋಚನೆ ಮಾಡಿಕೊಂಡು ಸೋಫಾ ಬಳಿ ಕುಳಿತುಕೊಂಡು ಇರುತ್ತಾಳೆ. ಆದರೆ ಲೀಲಾ ಹೇಗಾದರೂ ಮಾಡಿ ಕೋಪ ಭರಿಸಲೆಬೇಕು ಎಂದು ಯೋಚನೆ ಮಾಡುತ್ತಾ ಇರುತ್ತಾಳೆ.

ಇನ್ನೂ ಲೀಲಾ ಪ್ರಾರ್ಥನಾ ಬಳಿಗೆ ಬಂದು ಜೋರಾಗಿ ಮಾತನಾಡುತ್ತಾಳೆ. ಎನು ಈ ಮನೆಯಲ್ಲಿ ಯಾರೂ ಇಲ್ಲ ಎಂದುಕೊಂಡು ಇದ್ದೀರಾ? ನನಗೆ ಚೆನ್ನಾಗಿ ತಿಳಿದಿದೆ ಈ ಮನೆಯವರ ನೆಮ್ಮದಿ ಹಾಳು ಮಾಡಲು ಬಂದಿರುವವರನ್ನ ನಾನು ಸುಮ್ಮನೆ ಬಿಡುವುದು ಇಲ್ಲ ಎಂದು ಮಾತನಾಡುತ್ತಾ ಇರುತ್ತಾಳೆ. ಇದನ್ನು ಕೇಳಿಸಿಕೊಂಡ ಪ್ರಾರ್ಥನಾಗೆ ಮಾತೇ ಹೊರಡದ ಹಾಗಾಗಿದೆ.
ಪ್ರಾರ್ಥನಾ ಬಳಿ ಜೋರಾಗಿ ಮಾತನಾಡಿದ ಲೀಲಾ
ಇನ್ನೂ ಲೀಲಾ ಪ್ರಾರ್ಥನಾಳನ್ನು ನೋಡಿ ಎನು ನಾನು ಮಾತನಾಡಿದ್ದು ಸರಿಯಾಗಿ ಇದೆ ಅಲ್ವಾ..? ಈ ರೀತಿ ಮೊನ್ನೆ ನನ್ನ ಗೆಳತಿ ಬೈದೆ. ಆಕೆ ಮಾಡಿದ ತಪ್ಪಿಗೆ ನಾನು ಇಷ್ಟಕ್ಕೆ ಬಿಟ್ಟಿದ್ದು ಒಳ್ಳೆಯದು. ಇಲ್ಲವಾದರೆ ಇನ್ನೂ ಹೆಚ್ಚಾಗಿ ಮಾತನಾಡುತ್ತಾ ಇದ್ದೆ ಎಂದು ಹೇಳುತ್ತಾಳೆ. ಇದನ್ನು ಕೇಳಿಸಿಕೊಂಡ ಪ್ರಾರ್ಥನಾ ಸಮಾಧಾನದ ನಿಟ್ಟುಸಿರು ಬಿಟ್ಟಿದ್ದಾಳೆ.

ಲೀಲಾ ಮಾತಿಗೆ ಅವಾಕ್ಕಾದ ಪ್ರಾರ್ಥನಾ
ಸತ್ಯ ತಿಳಿದು ಹೋಯಿತೇ ಎಂದು ಅಂದುಕೊಂಡು ಇದ್ದೆ ಎಂದು ಯೋಚನೆ ಮಾಡಿ ಸುಮ್ಮನಾಗುತ್ತಾಳೆ. ಇನ್ನೂ ಲೀಲಾ ಮಾತ್ರ ಪ್ರಾರ್ಥನಾ ಬಳಿ ಈ ರೀತಿ ಕೂಗಾಡುವುದು ಕಿರುಚಾಡುವುದು ನಿಮಗೆ ಇಷ್ಟ ಇಲ್ಲ ಅಕ್ಕ. ನಿಮ್ಮಂತಹ ಸಾಫ್ಟ್ ಆಗಿ ಇರುವವರ ಬಳಿ ನಾನು ಹೀಗೆಲ್ಲ ಮಾತನಾಡಿದ ಬಿಟ್ಟೆನಲ್ಲ ಎಂದು ನನಗೆ ಬೇಜಾರು ಆಗಿ ಬಿಟ್ಟಿದೆ ಎನ್ನುತ್ತಾಳೆ.
ಪ್ರಾರ್ಥನಾ ಬಳಿ ಸಾರಿ ಕೇಳಿದ ಲೀಲಾ
ಸಾರಿ ಅಕ್ಕ ಎಂದು ಹೇಳಿದ ವೇಳೆ ಪ್ರಾರ್ಥನಾ ಮನದಲ್ಲಿಯೇ ಒಂದು ಕ್ಷಣ ಜೀವ ಬಾಯಿಗೆ ಬಂದು ಬಿಟ್ಟಿತು ... ಎಂದು ಮನದಲ್ಲಿ ಅಂದುಕೊಂಡು ಇದ್ದಳು ಇದನ್ನು ನೋಡಿದ ಲೀಲಾ ಆಕೆಯ ಗೆಳತಿ ಪ್ರಾರ್ಥನಾ ಮಾಡಿದ ತಪ್ಪಿಗೆ ಬಹಳ ಬೇಸರ ಮಾಡಿಕೊಂಡು ಇರುವ ಹಾಗೆ ನಟನೆ ಮಾಡಿಕೊಂಡಿದ್ದಾಳೆ. ಲೀಲಾ ಪ್ರಾರ್ಥನಾಗೆ ಇನ್‌ಡೈರೆಕ್ಟ್ ಆಗಿ ಟಕ್ಕರ್ ಕೊಟ್ಟಿದ್ದಾಳೆ. ಆದರೆ ನಿಜ ಏನಾದರು ಲೀಲಾ ಈ ರೀತಿ ಮಾತನಾಡಿ ಬಿಟ್ಟರೆ ಪ್ರಾರ್ಥನಾ ಗತಿಯನ್ನು ದೇವರೇ ಕಾಪಾಡಬೇಕು ಅಷ್ಟೇ.


Click it and Unblock the Notifications











