ದೇವ್‌ ಆಟ ಮುಗಿದಿದೆ, ಲೀಲಾ ಮೇಲೆ ಏಜೆಗೆ ಲವ್ ಆಗಿದೆ?

By ಪೂರ್ವ

ಹಿಟ್ಲರ್ ಕಲ್ಯಾಣ ಧಾರಾವಾಹಿಯಲ್ಲಿ ದೇವ್ ದುಷ್ಟತನ ಏಜೆ ಜೀವಕ್ಕೆ ಸಂಚಕಾರ ತಂದೊಡ್ಡುತ್ತಾ ಎನ್ನುವ ಪ್ರಶ್ನೆ ಸೀರಿಯಲ್ ಪ್ರೇಮಿಗಳನ್ನು ಕಾಡುತ್ತಿದೆ. ಇದೀಗ ಪವಿತ್ರನಿಗೆ ಹಿಂದಿನದ್ದೆಲ್ಲ ನೆನಪಿಗೆ ಬಂತು ಎಂದು ದೇವ್ ಗೆ ಈಗಾಗಲೇ ಭಯ ಕಾಡುತ್ತಿದೆ. ಇದರ ಜೊತೆಗೆ ದೇವ್ ಮನದಲ್ಲಿ ವಿಷಯವೊಂದು ಓಡುತ್ತಿದೆ.

ಹೇಗಾದರೂ ಮಾಡಿ ಪವಿತ್ರಳನ್ನು ಸಾಯಿಸಲೇ ಬೇಕು ಎಂದು ಪಣ ತೊಟ್ಟಿದ್ದಾನೆ ದೇವ್. ಇನ್ನೂ ಪವಿತ್ರ ರೂಮಿನ ಬಳಿಗೆ ದೇವ್ ಬರುತ್ತಾನೆ. ಪವಿತ್ರಾಳನ್ನು ನೋಡಿ ವಿಚಿತ್ರವಾಗಿ ನಕ್ಕು, ದೇವಸ್ಥಾನಕ್ಕೆ ಹೋಗಿರುವ ರೀತಿ ನಟನೆ ಮಾಡುತ್ತಾ ತೀರ್ಥವನ್ನು ಪವಿತ್ರ ಬಳಿಗೆ ತೆಗೆದುಕೊಂಡು ಬರುತ್ತಾನೆ. ಇನ್ನೂ ತೀರ್ಥವನ್ನು ಒಂದು ಚಮಚದಲ್ಲಿ ತೆಗೆದು ನೋಡುತ್ತಾ ಅದನ್ನು ಹಾಗೆಯೇ ಪಾತ್ರೆಗೆ ಚೆಲ್ಲುತ್ತಾ ಪವಿತ್ರಳನ್ನು ನೋಡುತ್ತಾ ಮುಗುಳು ನಗುತ್ತಾನೆ. ಬಳಿಕ ಹೇಳುತ್ತಾನೆ ನೀನು ಎಷ್ಟೆಲ್ಲಾ ದೇವರಿಗೆ ಪೂಜೆ ಮಾಡುತ್ತಿದ್ದೆ.

ಆದರೆ ನಾನು ಯಾಕಪ್ಪ ಹೀಗೆಲ್ಲ ಮಾಡುತ್ತಿದ್ದಾಳೆ ಎಂದುಕೊಳ್ಳುತ್ತ ಇದ್ದೆ. ಆದರೆ ಆ ಭಗವಂತ ಕೊನೆಗೂ ಒಂದು ಫಲ ಕೊಟ್ಟುಬಿಟ್ಟ. ಏನು ಗೊತ್ತಾ ನಿನಗೆ ನೀನು ಯಾವಾಗ ಸಾಯುತ್ತಿಯಾ ಅಂತ ಗೊತ್ತಿತ್ತು. ನೀನು ವೇರಿ ಲಕ್ಕಿ. ಜಗತ್ತಿನಲ್ಲಿ ಯಾರಿಗಾದರೂ ನಾನು ನಾಳೆ ಸಾಯುತ್ತೇನೆ ಇವತ್ತು ಸಾಯುತ್ತೇನೆ ಎಂದು ಗೊತ್ತಿರತ್ತಾ ಎಂದು ಪವಿತ್ರ ನೋಡಿಕೊಂಡು ಹೇಳುತ್ತಾನೆ. ದೇವ್ ಮುಖ ನೋಡಿದ ಪವಿತ್ರಾ ಗಾಬರಿಗೊಳ್ಳುತ್ತಾಳೆ. ಈ ವೇಳೆ ದೇವ್ ಲಕ್ಕಿ ಗರ್ಲ್ ಎಂದು ಹೇಳುತ್ತಾನೆ.

ಪವಿತ್ರಾಗೆ ವಿಷ ಕುಡಿಸಲು ಬಂದ ದೇವ್

ಪವಿತ್ರಾಗೆ ವಿಷ ಕುಡಿಸಲು ಬಂದ ದೇವ್

ನೀನು ಸತ್ತ ಮೇಲೆ ನನ್ನ ಗಂಡ ನನ್ನ ಬಾಯಿಗೆ ಒಂದು ಹನಿ ನೀರು ಬಿಟ್ಟಿಲ್ಲ ಅಲ್ವಾ ಎಂದು ಹೇಳಿ ಕೊರಗಬಾರದು ಅಲ್ವಾ ಅದಕ್ಕೆ ತೀರ್ಥ ಬಿಡುವುದನ್ನು ತಂದಿದ್ದೇನೆ ಎಂದು ಹೇಳುತ್ತಾನೆ. ನಿನಗೋಸ್ಕರ ನಿನ್ನ ಜೀವನದ ಕೊನೆಯ ಹನಿ ಎಂದು ಹೇಳುತ್ತಾ ನೀರು ಕುಡಿಸಲು ಮುಂದಾಗುತ್ತಾನೆ. ಒಂದೊಂದು ವಿಷದ ಹನಿಯೂ ತುಂಬಾ ಇಂಪಾರ್ಟೆಂಟ್. ಹೇಳಿ ಕೇಳಿ ಗಟ್ಟಿ ಪಿಂಡ ಅಲ್ವಾ ನೀನು, ಹಾ.... ಮುದ್ದು ಮರಿ ಅಲ್ವಾ ನೀನು , ಜಾಣ ಮರಿ ಇರೋದು ಒಂದೇ ಸ್ಪೂನ್ ಕಣ್ಣು ಮುಚ್ಚಿಕೊಂಡು ಗುಳುಮ್ ಮಾಡು ಪರ್ಮನೆಂಟ್ ಆಗಿ ಕಣ್ಣು ಮುಚ್ಚುತ್ತಿಯಾ ಯಾಕೆ ಹೇಳು ಏಷ್ಟು ಕಷ್ಟ ಆದ್ರೂ ಗಂಡನ ಹೆಸರು ಬಾಯಲ್ಲಿ ಬಂದಿರಲಿಲ್ಲ ನೋಡು ಅದಕ್ಕೆ ಈ ಗಿಫ್ಟ್ ಎಲ್ಲಿ ಕಂದಾ ಆ ಅನ್ನು ಎಂದು ಹೇಳುತ್ತಾನೆ. ಪವಿತ್ರ ಬಾಯಿ ತೆಗೆಯದ್ದನ್ನು ಕಂಡು ಬಾಯಿ ತೆಗಿಯಲೆ ಎಂದು ಹೇಳುತ್ತಾನೆ. ಬಾಯಿ ತೆಗಿ ಎಂದು ಒತ್ತಾಯದಲ್ಲಿ ಕುಡಿಸಲು ಹೋಗುತ್ತಾನೆ. ಆಗ ಏಜೆ ಬರುತ್ತಾನೆ.

ದೇವ್‌ ತಂದಿರುವ ದ್ರವ ಕುಡಿಯಲು ಮುಂದಾದ ಏಜೆ

ದೇವ್‌ ತಂದಿರುವ ದ್ರವ ಕುಡಿಯಲು ಮುಂದಾದ ಏಜೆ

ಪವಿತ್ರಾ ಗೆ ಏನೋ ಕುಡಿಸುತ್ತಿರುವುದನ್ನು ಕಂಡು ದೇವ್ ಎಂದು ಕೂಗುತ್ತಾನೆ. ಇದನ್ನು ಕಂಡು ದೇವ್ ಭಯ ದಿಂದ ನಿಂತುಕೊಳ್ಳುತ್ತಾನೆ. ಏಜೆ ಕೇಳುತ್ತಾರೆ ಎನು ಮಾಡುತ್ತಿದ್ದಿಯಾ ಅಂದಾಗ ದೇವ್ ಹೇಳುತ್ತಾನೆ ಪುರೋಹಿತರು ತೀರ್ಥ ಕೊಟ್ಟರು ಅದನ್ನು ಕುದಿಸುತ್ತಿದ್ದೆ ಎಂದು ಹೇಳುತ್ತಾನೆ. ಪವಿತ್ರ ಇದನ್ನು ಕುಡಿದು ಸರಿ ಹೋಗುತ್ತಾಳೆ ಅಂದ್ರೆ ಮೊದಲು ನಾನು ಕುಡಿತಿನಿ ಎಂದು ದೇವ್ ಕೈಯಿಂದ ಆ ನೀರು ತೆಗೆದುಕೊಳ್ಳುತ್ತಾನೆ. ಏಜೆ, ಲೀಲಾ ಅಜ್ಜಿ ಮಾತನಾಡುತ್ತಾ ಇರುತ್ತಾರೆ. ಅಜ್ಜಿ ಹೇಳುತ್ತಾರೆ. ಏನಮ್ಮ ಲೀಲಾ ಕರ್ಪೂರ ಯಾರಾದ್ರೂ ಬರಿ ಕೈ ನಲ್ಲಿ ಹಿಡಿದುಕೊಳ್ಳುತ್ತಾರ ಯಾಕೆ ಹಾಗೆ ಮಾಡಿದೆ ಎಂದು ಕೇಳುತ್ತಾರೆ. ಅದಕ್ಕೆ ಲೀಲಾ ಹೇಳುತ್ತಾಳೆ ಮನೆಗೆ ಒಳ್ಳೆದಾಗುತ್ತೇ ಅಂತ ಹಾಗೆ ಮಾಡಿದೆ ಎಂದು ಹೇಳುತ್ತಾಳೆ. ಇತ್ತ ಏಜೆ, ಲೀಲಾ ಕೈಗೆ ಮುಲಾಮು ಹಚ್ಚುತ್ತಿರುತ್ತಾನೆ. ಲೀಲಾ ಹೇಳೋದನ್ನು ಕೇಳಿ ಅಜ್ಜಿಗೆ ಏಜೆಗೆ ಬಹಳ ಬೇಸರವಾಗುತ್ತದೆ.

ಯಾರು ಮಾಡಲು ಹೇಳಿದ್ದು: ಏಜೆ ಪ್ರಶ್ನೆ

ಯಾರು ಮಾಡಲು ಹೇಳಿದ್ದು: ಏಜೆ ಪ್ರಶ್ನೆ

ಅದಕ್ಕೆ ಏಜೆ ಹೇಳುತ್ತಾರೆ ಈ ತರಹ ಮಾಡಿಕೊಂಡು ಒಳ್ಳೆದಾಗಿಗುತ್ತೆ ಅಂತ ಯಾರೂ ಹೇಳಿದ್ದು ಎಂದು ಕೇಳುತ್ತಾನೆ. ಅದಕ್ಕೆ ಲೀಲಾ ಯೋಚನೆ ಮಾಡುತ್ತಾಳೆ. ಬೇಡಪ್ಪಾ ನಿಜ ಹೇಳಿದರೆ ಎಡವಟ್ಟು ಜೊತೆಗೆ ಇಷ್ಟು ಸಣ್ಣ ವಿಚಾರ ಗೊತ್ತಿಲ್ಲ ಅಲ್ವಾ ಎಂದುಕೊಳ್ಳುತ್ತಾರೆ. ಎಂದುಕೊಂಡಿರುವಾಗ ಏಜೆ ಜೋರಾಗಿ ನಿನ್ನೆ ಕೇಳುತ್ತಿರುವುದು ಯಾರು ಹಾಗೆ ಹೇಳಿದರು ಎಂದು ಕೇಳುತ್ತಾನೆ. ಅದಕ್ಕೆ ಲೀಲಾ ಯಾರು ಇಲ್ಲ, ನಾನೇ ಮಾಡಿದ್ದು. ಈ ಮನೆಗೆ ಒಳ್ಳೇದಾಗುತ್ತೆ ಎಂದರೆ ಎನು ಮಾದಕ್ಕು ರೆಡಿ ಎಂದು ಹೇಳುತ್ತಾಳೆ ಇದನ್ನು ಕೇಳಿದ ಏಜೆ ಲೀಲಾ ಮೇಲೆ ಇನ್ನೂ ಪ್ರೀತಿ ಹೆಚ್ಚಾಗಿರುವ ಹಾಗೆ ಕಾಣುತ್ತದೆ. ಅದಕ್ಕೆ ಏಜೆ ಹೇಳುತ್ತಾರೆ ಇನ್ನೊಂದು ಸಲ ಯಡವಟ್ಟು ಮಾಡಿದರೆ ಎಂದಾಗ ಅಜ್ಜಿ ಏಜೆನಾ ತಡೆಯುತ್ತಾರೆ.

ಲೀಲಾಳ ಆರೈಕೆ ಮಾಡುವ ಏಜೆ

ಲೀಲಾಳ ಆರೈಕೆ ಮಾಡುವ ಏಜೆ

ಅಜ್ಜಿ ಹೇಳುತ್ತಾರೆ ಕೆಲವೊಂದು ಬಾರಿ ನಮಗೆ ಎಲ್ಲಾ ಗೊತ್ತಿರುತ್ತೆ ಅಂದುಕೊಳ್ಳುತ್ತೇವೆ ಆದರೆ ಆ ಭಗವಂತ ಕೋಟಿ ಕೋಟಿ ರಹಸ್ಯನಾ ತನ್ನೊಳಗಡೆ ಬಚ್ಚಿ ಹಿಡಿದುಕೊಂಡು ಇರುತ್ತಾನೆ. ನಮ್ಮ ನಮ್ಮ ಅನುಭವಕ್ಕೆ ಬಂದಾಗ ನಂಬಕ್ಕೆ ಶುರು ಮಾಡುತ್ತೇವೆ. ಆದರೆ ಅನುಭವಕ್ಕೆ ಬರದೊರು ಇದು ಯಾಕೆ ಅದು ಯಾಕೆ ಎಂದು ಪ್ರಶ್ನೆ ಮಾಡುತ್ತಾರೆ ನನ್ನ ಪ್ರಕಾರ ಈ ಶಾಸ್ತ್ರ ಸಂಪ್ರದಾಯ ನಿಜನೆ ನನ್ನ ಜೀವನದಲ್ಲಿ ನಾನು ತುಂಬಾ ಚಮತ್ಕಾರ ನೋಡುಬಿಟ್ಟಿದ್ದೇನೆ. ನಾನೇ ಈ ಮನೆಗೆ ಒಳ್ಳೆ ಸೊಸೆ ಸಿಗಲಿ ಎಂದು ಬೇಡಿಕೊಂಡಿದ್ದೆ ಹಾಗೆ ಆಗಿದೆ ಕೂಡ. ಅನುಭವಕ್ಕೆ ಬರೋವರೆಗು ಎಲ್ಲಾ ಮೂಡ ನಂಬಿಕೆ. ಅನುಭವಕ್ಕೆ ಬಂದ ಮೇಲೆ ಅದು ನಂಬಿಕೆ ಆಗುತ್ತೆ ಆದ್ರೂ ಲೀಲಾ ನೀನು ಮೊದಲೇ ಸೂಕ್ಷ್ಮ ಹೀಗೆ ಮಾಡಬಾರದಿತ್ತು ಎಂದು ಹೇಳಿದಾಗ ಏಜೆ ಹೇಳುತ್ತಾರೆ ಕೈ ಗೆ ನೀರು ತಾಗಿಸಬೇಡ ಯಾವ ಕೆಲಸನು ಮಾಡಬೇಡ ಎಂದು ತಾಕೀತು ಮಾಡಿ ಹೋಗುತ್ತಾನೆ. ಮುಂದೇನಾಗುತ್ತದೆ ಎಂಬುವುದನ್ನು ಕಾದು ನೋಡಬೇಕಿದೆ.

English summary
Kannada serial Hitler kalyana written updated on 11th July. Know more about the episode.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X