ಮತ್ತೆ ಪವಿತ್ರಾಳ ಕೊಲ್ಲುವ ಯತ್ನ, ಏಜೆ ಕೈಗೆ ಸಿಕ್ಕಿ ಹಾಕಿಕೊಂಡನಾ ದೇವ್?
ಹಿಟ್ಲರ್ ಕಲ್ಯಾಣ ಧಾರವಾಹಿ ಅದ್ಭುತವಾಗಿ ಮೂಡಿ ಬರುತ್ತಿದೆ. ಲೀಲಾಗೆ ರೇವತಿ ಮನದಲ್ಲಿ ಇನ್ನೂ ದೇವ್ ಇದ್ದಾನೆ ಎಂಬ ಬಲವಾದ ಸಂಶಯ ಕಾಡುತ್ತಿದೆ. ಅವಳಾಗಿಯೆ ನನ್ನ ಗಂಡ ಖಡಕ್ ಆಗಿರಬೇಕು ಎಲ್ಲರೂ ಅವರನ್ನು ರೆಸ್ಪೆಕ್ಟ್ ಮಾಡಬೇಕು, ಅವರು ಎಲ್ಲಿಗಾದರೂ ಹೋದರೆ ರೆಸ್ಪೆಕ್ಟ್ ಇರಬೇಕು ಅವರನ್ನು ಕಂಡರೆ ಹೆದರಬೇಕು ಎಂದೆಲ್ಲ ಹೇಳಿದ್ದಾಳೆ.
ಅವನ ಹಿಂದಿನ ಜೀವನ ಹೇಗೆ ಇರಲಿ ಆದರೆ ಮದುವೆ ಆದ ಬಳಿಕ ನನ್ನನ್ನು ತುಂಬಾ ಪ್ರೀತಿಸಬೇಕು ಹೀಗೆ ಅನೇಕ ವಿಚಾರಗಳನ್ನು ಹೇಳಿದಾಗ ಲೀಲಾ, ರೇವತಿ ಬಳಿ ಕೇಳುತ್ತಾಳೆ 'ಇದೆಲ್ಲಾ ದೇವ್ ಗೆ ಹೇಳಿದ ಹಾಗಿದೆ ರೇವತಿ ಎಂದು ಹೇಳಿದಾಗ ರೇವತಿ ಸುಮ್ಮನಾಗುತ್ತಾಳೆ. ದೇವ್ ಒಳ್ಳೆಯವನಲ್ಲ. ಅದಕ್ಕಾಗಿ ನಿನಗೆ ಇಷ್ಟು ಬುದ್ಧಿವಾದ ಹೇಳುತ್ತಿದ್ದೇನೆ ಎಂದು ಲೀಲಾ ಹೇಳುತ್ತಾಳೆ.
ನಂತರ ಲೀಲಾ ಹಾಗೂ ಏಜೆ ಕೌಸಲ್ಯಾ ಮನೆಗೆ ಹೋಗುತ್ತಾರೆ ಅಳಿಯ ಮಗಳನ್ನೂ ಕಂಡ ಕೌಸಲ್ಯಾ ಗೊಳೋ ಎಂದು ಅಳುತ್ತಾಳೆ ಅದಕ್ಕೆ ಲೀಲಾ ಈ ಡ್ರಾಮಾಕ್ಕೆ ಏನು ಕಮ್ಮಿ ಇಲ್ಲ ಅಲ್ವಾ. ಅಳದೆ ಮಾತೇ ಬರಲ್ಲ ಅಲ್ವಾ ಎಂದಾಗ ಕೌಸಲ್ಯ ಹೇಳುತ್ತಾಳೆ, ನೋಡಮ್ಮ ಲೀಲಾ ನಿನ್ನನ್ನು ರೇವತಿಗಿಂತ ಅಕ್ಕರೆಯಿಂದ ಬೆಳೆಸಿದ್ದೇನೆ. ಏನೋ ನಿನಗೆ ಒಳ್ಳೆದಾಗಲಿ ಅಂತ ಈ ರೀತಿ ಕೆಲಸ ಮಾಡಿಬಿಟ್ಟೆ. ಬೇಕಿದ್ರೆ ಹೇಳಮ್ಮ ನಿನ್ನ ಕಾಲಿಗೆ ಬೇಕಾದ್ರೂ ಬೀಳುತ್ತೇನೆ ಎಂದಾಗ ಲೀಲಾ, ಅಮ್ಮಾ ಎಂದು ದೂರ ಸರಿಯುತ್ತಾರೆ. ಮಗಳನ್ನು ಅಳಿಯನಿಂದ ಹೇಗಾದರೂ ದೂರ ಮಾಡಬೇಕು ಹಣ ಮಾಡಬೇಕು ಎನ್ನುವ ದೂರಾಲೋಚನೆಯಿಂದ ಕೌಸಲ್ಯಾ ಡ್ರಾಮಾ ಮಾಡಲು ಶುರು ಹಚ್ಚಿಕೊಂಡಿದ್ದಾಳೆ.

ಏಜೆ ಬಳಿ ಕ್ಷಮೆ ಕೇಳುವ ಕೌಸಲ್ಯ
ಇದನ್ನು ಲೀಲಾ ಕೂಡ ನಿಜ ಎಂದು ನಂಬಿದ್ದಾಳೆ. ಅಮ್ಮ ಅಳುತ್ತಿರುವುದನ್ನು ಕಂಡು ಲೀಲಾ ಅಮ್ಮನನ್ನು ಅಪ್ಪಿಕೊಳ್ಳುತ್ತಾಳೆ. ಅಮ್ಮ ಅಳಬೇಡ ನೀನು ಮಾಡಿದ್ದನ್ನು ನಾವು ಮನಸಲ್ಲಿ ಇಟ್ಟುಕೊಳ್ಳಲ್ಲ ಎಂದು ಹೇಳುತ್ತಾಳೆ. ಬಳಿಕ ಹೇಳುತ್ತಾಳೆ ನನಗೆ ನೋವಾದರೆ ನಾನು ತಡೆದುಕೊಳ್ಳುತ್ತೇನೆ. ಆದರೆ ಈಗ ನೋವಾಗಿರುವುದು ಏಜೆ ಮನೆಯವರಿಗೆ. ಹಂಗೂ ನೀನು ಕ್ಷಮೆ ಕೇಳಬೇಕು ಅಂದರೆ ನೀನು ಏಜೆ ಬಳಿ ಕೇಳಬೇಕು ಎಂದಾಗ ಏಜೆ ಬಳಿ ಬಂದ ಕೌಸಲ್ಯ 'ಅಳಿಯಂದಿರೆ ನಾನು ಮಾಡಿದ ಕೆಲಸದಿಂದ ಬೇಸರವಾದರೆ ಕ್ಷಮಿಸಿ ಬಿಡಿ' ಎಂದು ಹೇಳುತ್ತಾಳೆ.

ಅಮ್ಮನನ್ನು ಅಪ್ಪಿಕೊಳ್ಳುವ ರೇವತಿ, ಲೀಲಾ
ಅದಕ್ಕೆ ಏಜೆ, 'ನಿಮ್ಮ ತಪ್ಪನ್ನು ತಿದ್ದಿಕೊಂಡು ಮುಂದೆ ಆ ರೀತಿ ಮಾಡಲಿಲ್ಲವಾದರೆ ಅಷ್ಟೇ ಸಾಕು' ಎಂದು ಹೇಳುತ್ತಾರೆ. ಅದಕ್ಕೆ ಕೌಸಲ್ಯ 'ನಾನೇ ಹಾಳಾದವಳು ಅವತ್ತು ನನ್ನ ತಲೆಗೆ ಎನು ಬಡಿದಿತ್ತೋ ಏನೋ ನಾನು ಮಾಡಿದ ಪಾಪಕ್ಕೆ ಕೊನೆಗಾಲದಲ್ಲಿ ಎನಾದರು ಕಾಯಿಲೆ ಬಂದು ಸಾಯುತ್ತೇನೆ ಬಿ'ಡಿ ಎಂದಾಗ ಲೀಲಾ ಹಾಗೂ ರೇವತಿ ಜೋರಾಗಿ ಕಿರುಚಿಕೊಂಡು ಅಮ್ಮನನ್ನು ಅಪ್ಪಿಕೊಳ್ಳುತ್ತಾರೆ. ಇನ್ನೂ ರೇವತಿ, ಲೀಲಾ ಬಳಿ ಹೇಳುತ್ತಾಳೆ 'ಅಕ್ಕ ನೀನು ಏಷ್ಟು ಲಕ್ಕಿ ನಿನಗೆ ಒಳ್ಳೆಯ ಗಂಡ ಸಿಕ್ಕಿದ್ದಾರೆ. ನಿನ್ನನ್ನು ಅರ್ಥ ಮಾಡಿಕೊಳ್ಳುತ್ತಾರೆ, ಹಾಗೆ ಪ್ರೀತಿಸುತ್ತಾರೆ. ನೀನು ತುಂಬಾ ಲಕ್ಕಿ' ಎಂದೆಲ್ಲ ಹೇಳುತ್ತಾಳೆ.

ಮತ್ತೆ ಪವಿತ್ರಾಳನ್ನು ಕೊಲ್ಲುವ ಯತ್ನದಲ್ಲಿ ದೇವ್
ಏಜೆ ಮನೆಯಲ್ಲಿ ಇಲ್ಲದನ್ನು ಕಂಡ ದೇವ್ ಪವಿತ್ರ ಬಳಿ ಬಂದು ಹತ್ಯೆಗೆ ಸಂಚು ರೂಪಿಸುತ್ತಾರೆ. ಏಯ್ ಪವಿತ್ರ ಇವತ್ತು ಯಾರು ಇಲ್ಲ ನಿನ್ನ ಕಾಪಡಕ್ಕೆ ಎಂದೆಲ್ಲ ಹೇಳಿ ಸುಮಾರು ಬಾರಿ ಆಕೆಯನ್ನು ಎತ್ತಿ ಬೆಡ್ ಗೆ ಬಿಡುತ್ತಿದ್ದ ಆದರೂ ಪವಿತ್ರಾ, ದೇವ್ ನ ಹಿಂಸೆ ಅವಳ ಕಣ್ಣಿನಲ್ಲಿ ಕಾಣಿಸುತ್ತಿತ್ತು. ಇಂದು ನನಗೆ ಉಳಿಗಾಲವಿಲ್ಲ ಎಂದು ಅಂದುಕೊಂಡಳು ಪವಿತ್ರಾ.

ಅಡಗಿಕೊಳ್ಳುವ ದೇವ್
ಇತ್ತ ದೇವ್ ಪವಿತ್ರ ಬಳಿ ಬಂದು ಇವತ್ತು ನಿನ್ನ ಕೊನೆ ದಿನ ಕಣೆ ನಿನೊಂತರ ಗಟ್ಟಿ ಪಿಂಡ ಬೇಗ ಸಾಯೋದಿಲ್ಲ ಎಂದೆಲ್ಲ ಹೇಳಿ ರೂಮಿನಿಂದ ಹೊರ ಕರೆದುಕೊಂಡು ಹೋಗುತ್ತಾನೆ. ಇತ್ತ ಏ ಜೇ ಹಾಗೂ ಲೀಲಾ ತವರು ಮನೆಯಿಂದ ಬರುತ್ತಾರೆ. ತವರು ಮನೆಯಿಂದ ಬಂದ ಲೀಲಾ ನೇರವಾಗಿ ಪವಿತ್ರ ರೂಮ್ ಬಳಿಗೆ ಹೋದಾಗ ಪವಿತ್ರ ಇಲ್ಲದನ್ನು ಗಟ್ಟಿಯಾಗಿ ಹೇಳುತ್ತಾಳೆ. ಇತ್ತ ಪವಿತ್ರಾಳನ್ನು ದೇವ್ ಸ್ವಿಮ್ಮಿಂಗ್ ಪೂಲ್ ಬಳಿ ಕರೆದುಕೊಂಡು ಹೋಗುತ್ತಿರುತ್ತಾನೆ. ಲೀಲಾ ಕಿರುಚಿದ್ದನ್ನು ನೋಡಿದ ದೇವ್ ಪವಿತ್ರಾಳನ್ನು ಸ್ವಿಮ್ಮಿಂಗ್ ಪೂಲ್ ಬಳಿ ಬಿಟ್ಟು ಅಡಗಿ ಕುಳಿತಿದ್ದಾನೆ. ಏಜೆ ಹಾಗೂ ಲೀಲಾ ಪಾವಿತ್ರಳನ್ನು ಸ್ವಿಮ್ಮಿಂಗ್ ಪೂಲ್ ಬಳಿ ನೋಡಿ ಶಾಕ್ ಆಗುತ್ತದೆ. ಮುಂದೇನಾಗುತ್ತದೆ ಕಾದು ನೋಡಬೇಕಿದೆ.


Click it and Unblock the Notifications











