Don't Miss!
- Lifestyle
ಪುರುಷರಿಗಿಂತ ಮಹಿಳೆಯರಿಗೆ ತೂಕ ಇಳಿಕೆ ತುಂಬಾ ಕಷ್ಟ, ಏಕೆ?
- Automobiles
2030 ರ ವೇಳೆಗೆ EV ವಾಹನ ಮಾರಾಟ 1 ಕೋಟಿ ಯೂನಿಟ್ಗಳನ್ನು ಮುಟ್ಟಲಿದೆ: ಆರ್ಥಿಕ ಸಮೀಕ್ಷೆ
- News
ಚಿಮ್ಮನಹಳ್ಳಿ ದುರ್ಗಾಂಬಿಕೆ ರಥೋತ್ಸವ: ಜನರ ಮನಸ್ಸು ಬದಲಾಗಲಿ, ರೈತರಿಗೆ ಕನ್ಯೆ ಕೊಡಲಿ, ವೈರಲ್
- Sports
ಆತನಿಗೆ ನೀಡಿದ ಜವಾಬ್ಧಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ: ತ್ರಿಪಾಠಿ ಪ್ರದರ್ಶನಕ್ಕೆ ಬಂಗಾರ್ ಹರ್ಷ
- Finance
ಉದ್ಯೋಗಿಗಳಿಗೆ ಟೊಯೋಟಾ ಗ್ಲಾನ್ಜಾ ಗಿಫ್ಟ್ ನೀಡಿದ ರಮೇಶ್ ಮರಂದ್ ಯಾರು?
- Technology
ಮಾರುಕಟ್ಟೆಗೆ ಎಂಟ್ರಿ ಕೊಟ್ಟ ವಾಯರ್ಲೆಸ್ ಚಾರ್ಜಿಂಗ್ ಬೆಂಬಲಿಸುವ ಸ್ಮಾರ್ಟ್ವಾಚ್!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಅಜ್ಜಿಯ ಉಪವಾಸ ಸತ್ಯಾಗ್ರಹದಿಂದ ಇಕ್ಕಟ್ಟಿಗೆ ಸಿಲುಕಿದ ಏಜೆ-ಲೀಲಾ
ಅಜ್ಜಿ ಹಠದ ಮುಂದೆ ಏಜೆ-ಲೀಲಾ ಸೋತು ಹೋಗಿದ್ದಾರೆ. ಇದೀಗ ವಿಶ್ವರೂಪ ಹೇಳಿದ ರೀತಿಯಲ್ಲಿ ಲೀಲಾ ಕೇಳುತ್ತಿದ್ದಾಳೆ. ಅಜ್ಜಿಯ ಮನಸ್ಸು ಹೇಗೆ ಗೆಲ್ಲುವುದು ಎಂದು ಯೋಚಿಸುತ್ತಿದ್ದಾಳೆ. ಇತ್ತ ವಿಶ್ವರೂಪ ಬಳಿ ಅಜ್ಜಿ ನಾನು ಉಪವಾಸ ಸತ್ಯಾಗ್ರಹ ನಡೆಸುತ್ತೇನೆ ಎಂದು ಹೇಳಿದ್ದಾರೆ. ಇದನ್ನು ವಿಶ್ವರೂಪ ಲೀಲಾ ಕಿವಿಗೆ ಹಾಕಿದ್ದಾನೆ. ''ಲೀಲಾ ಮೇಡಂ ನೀವು ಮತ್ತು ಏಜೆ ಇಬ್ಬರು ಒಬ್ಬರಿಗೊಬ್ಬರು ತುತ್ತು ತಿನ್ನಿಸುತ್ತಾ ಊಟ ಮಾಡಬೇಕಂತೆ ಇಲ್ಲವಾದರೆ ಅಜ್ಜಿ ಊಟ ಮಾಡುವುದಿಲ್ಲ ಎಂದು ಹಠ ಹಿಡಿದಿದ್ದಾರೆ'' ಎಂದು ಹೇಳಿದ್ದಾನೆ ವಿಶ್ವರೂಪ.
ವಿಶ್ವರೂಪ ಮಾತಿಗೆ ಲೀಲಾ ಭಯಪಟ್ಟುಕೊಳ್ಳುತ್ತಾಳೆ. ಏನು ಏಜೆ ಮತ್ತು ನಾನು ಒಟ್ಟಿಗೆ ಊಟ ಮಾಡಬೇಕಾ ಇದು ನನ್ನ ಕೈ ಯಿಂದ ಸಾದ್ಯ ಇಲ್ಲ. ಮೊದಲೇ ಏಜೆ ನ ಕಂಡರೆ ಭಯವಾಗುತ್ತದೆ. ಆದರೆ ಇದೀಗ ಹೇಗೆ ಏಜೆ ಬಳಿ ಇದನ್ನು ಹೇಳಲಿ ಎಂದು ವಿಶ್ವರೂಪ ಬಳಿ ಹೇಳಿದಾಗ ಮೇಡಂ ಏನಾದರು ಮಾಡಿ ಏಜೆನಾ ಊಟಕ್ಕೆ ಕರೆದುಕೊಂಡು ಬನ್ನಿ ಇಲ್ಲವಾದರೆ ಅಜ್ಜಿ ಊಟನೆ ಮಾಡಲ್ಲ ಎಂದು ಹೇಳಿ ಹೋಗುತ್ತಾನೆ.
ಏಜೆ,
ಲೀಲಾಳನ್ನು
ಒಂದು
ಮಾಡುತ್ತಾರಾ
ಅಜ್ಜಿ?
ಇತ್ತ ಲೀಲಾ, ಹೇಗಪ್ಪ ಏಜೆನಾ ಒಪ್ಪಿಸೋದು ಎಂದು ತಡಕಾಡುತ್ತಿರುತ್ತಾಳೆ. ಇತ್ತ ಏಜೆ ಏನೋ ಕೆಲಸ ಮಾಡುತ್ತಿರುತ್ತಾರೆ. ಮೆಲ್ಲಗೆ ಬಂದ ಲೀಲಾ ಏಜೆ ಪ್ರೀ ಇದ್ದೀರಾ ಎಂದು ಕೇಳುತ್ತಾಳೆ.. ಲೀಲಾಳನ್ನೂ ಕಂಡ ಏಜೆ ಎನು ಹೇಳು ಎಂದು ಹೇಳುತ್ತಾರೆ. ಒಂದು ಪ್ರಶ್ನೆ ಇತ್ತು ಅದನ್ನು ಕೇಳಿ ಕ್ಲಿಯರ್ ಮಾಡಿಕೊಂಡು ಹೋಗೋಣ ಅಂತ ಬಂದೆ ಎಂದು ಹೇಳುತ್ತಾಳೆ.

ಅವರಿಗೆ ಬೇಕಾದ್ದು ಕೊಟ್ಟು ಊಟ ಮಾಡಿಸಬೇಕು ಎನ್ನುವ ಏಜೆ
ಅದಕ್ಕೆ ಏಜೆ ಎನು ಎಂದು ಕೇಳುತ್ತಾರೆ. ಅದಕ್ಕೆ ಲೀಲಾ ಅಲ್ಲ ಏಜೆ ಮಕ್ಕಳು ಊಟ ಮಾಡಕ್ಕೆ ಹಠ ಮಾಡಿದ್ರೆ ಎನು ಮಾಡಬೇಕು ಎಂದು ಪ್ರಶ್ನೆ ಕೇಳುತ್ತಾಳೆ ಲೀಲಾ. ಅದಕ್ಕೆ ಏಜೆ ತುಂಬಾ ಪುಟ್ಟ ಮಕ್ಕಳಾದರೆ ಅವರಿಗೆ ಎನು ಬೇಕೋ ಅದನ್ನು ಮಾಡಬೇಕು ಎಂದು ಹೇಳುತ್ತಾರೆ ಅದಕ್ಕೆ ಲೀಲಾ ಕೇಳುತ್ತಾಳೆ ವಯಸ್ಸಾದವರು ಹಠ ಮಾಡಿದರೆ ಎನು ಮಾಡಬೇಕು ಎಂದು ಕೇಳುತ್ತಾಳೆ ಅದಕ್ಕೆ ಏಜೆ ಮಕ್ಕಳು ವಯಸ್ಸಾದವರು ಇಬ್ಬರು ಒಂದೇ ಕೆಟಗರಿ. ಅವರಿಗೂ ಎನು ಬೇಕೋ ಅದನ್ನು ಕೊಟ್ಟು ಊಟ ಮಾಡಿಸಬೇಕು ಎಂದು ಹೇಳುತ್ತಾರೆ ಏಜೆ.

ಊಟಕ್ಕೆ ಬರಬೇಕೆಂದು ಬಲವಂತ ಮಾಡುವ ಲೀಲಾ
ಅದಕ್ಕೆ ಲೀಲಾ ಕರೆಕ್ಟ್ ಅಲ್ವಾ ಅದಕ್ಕೆ ನಿಮ್ಮನ್ನು ಊಟಕ್ಕೆ ಕರಿಯೋಣ ಅಂತ ಬಂದೆ ಎನ್ನುತ್ತಾಳೆ. ಅದನ್ನು ಕೇಳಿಸಿಕೊಂಡ ಏಜೆಗೆ ಅರ್ಥ ಆಗೋದಿಲ್ಲ. ಅವರು ಹೇಳುತ್ತಾರೆ ನಿನ್ನ ಪ್ರಶ್ನೆಗೂ ಉತ್ತರಕ್ಕೂ ಸಂಬಂದನೆ ಇಲ್ಲ. ನಂಗೆ ಊಟ ಬೇಡ ನೀನು ಹೋಗು ಎಂದು ಹೇಳುತ್ತಾರೆ ಅದಕ್ಕೆ ಲೀಲಾ ಇಲ್ಲ ಏಜೆ ನೀವು ಊಟಕ್ಕೆ ಬರಲೇ ಬೇಕು ಎಂದು ಹಠ ಮಾಡುತ್ತಾಳೆ. ಅದಕ್ಕೆ ಏಜೆ ಒಂದು ಸಲ ಹೇಳಿದರೆ ಅರ್ಥ ಆಗುವುದಿಲ್ಲ ನಿನಗೆ ಎನ್ನುತ್ತಾನೆ.ಅದಕ್ಕೆ ಲೀಲಾ ಆಗಲ್ಲ ಬನ್ನಿ ಊಟ ಮಾಡೋಣ ಆಮೇಲೆ ನೀವು ಏನು ಬೇಕಾದರೂ ಮಾಡಿಕೊಳ್ಳಿ ಎಂದು ಹೇಳುತ್ತಾಳೆ. ಇದನ್ನು ಕೇಳಿದ ಏಜೆಗೆ ಬಹಳ ಕೋಪ ಬರುತ್ತದೆ.

ಏಜೆಯನ್ನು ಒಪ್ಪಿಸಿದ ಲೀಲಾ
ಲೀಲಾಳನ್ನೂ ಕೆಕ್ಕರಿಸಿ ನೋಡುತ್ತಾನೆ. ಅದಕ್ಕೆ ಲೀಲಾ ಹೇಳುತ್ತಾಳೆ ನಾನೇನು ಒತ್ತಾಯ ಮಾಡುತ್ತಿಲ್ಲ ಇದು ಅಜ್ಜಿ ಆರ್ಡರ್. ನಾವಿಬ್ಬರೂ ಊಟ ಮಾಡೋದನ್ನು ನೊಡಬೇಕಂತೆ ನೋಡಿದರೆ ಮಾತ್ರ ಊಟ ಮಾಡುತ್ತಾರಂತೆ. ನೀವೇ ಹೇಳಿದ್ದೀರಿ ತಾನೇ ವಯಸ್ಸಾದವರಿಗೆ ಎನು ಬೇಕೋ ಅದನ್ನು ಕೊಟ್ಬಿಟ್ಟು ಊಟ ಮಾಡಿಸಬೇಕು ಅಂತ ನಾನು ನಿಮಗೆ ಫೋರ್ಸ್ ಮಾಡುತ್ತಿಲ್ಲ ಬನ್ನಿ ಏಜೆ ಎಂದು ಕರೆಯುತ್ತಾಳೆ. ಅದಕ್ಕೆ ಏಜೆ ಆಯ್ತು ಎಂದು ಒಪ್ಪಿಕೊಳ್ಳುತ್ತಾನೆ.

ಉಪವಾಸ ಸತ್ಯಾಗ್ರಾಹಕ್ಕೆ ಕೂತ ಅಜ್ಜಿ
ಇನ್ನೂ ಅಜ್ಜಿ ಉಪವಾಸ ಸತ್ಯಾಗ್ರಹದ ಬ್ಯಾನರ್ ಹಿಡಿದು ಟೆಂಟ್ ಬಳಿ ಕುಳಿತಿರುತ್ತಾಳೆ. ಅಜ್ಜಿ ಬಳಿಗೆ ಲೀಲಾ ಬರುತ್ತಾಳೆ. ಅವಳು ಅಜ್ಜೀನ ಬಳಿ ಕೇಳುತ್ತಾಳೆ ಅಜ್ಜಿ ತಿನ್ನಿಸಲೇಬೇಕಾ. ಅದಕ್ಕೆ ಅಜ್ಜಿ ಹಾ ಅದೇನು ಮಾಡುತ್ತೀಯಾ ನೋಡಮ್ಮ. ವಯಸ್ಸಾದ ಮುದುಕಿ ನಿನ್ನಿಂದ ಉಪವಾಸ ಬೀಳಬೇಕೊ ಬೇಡವೋ ಯೋಚನೆ ಮಾಡಮ್ಮಾ ಅನ್ನುತ್ತಾಳೆ. ಅಜ್ಜಿ ಎಂದು ಲೀಲಾ ಕರೆಯುತ್ತಾ ಹತ್ತಿರ ಬರುತ್ತಾಳೆ. ಅದಕ್ಕೆ ಅಜ್ಜಿ ಮುಟ್ಟುಬೇಡ ಎಂದು ಹೇಳುತ್ತಾಳೆ.

ಏಜೆಗೆ ತುತ್ತು ತಿನ್ನಿಸುವ ಲೀಲಾ
ಅದಕ್ಕೆ ಲೀಲಾ ಅಜ್ಜಿ ಏನಾಯ್ತು ಎಂದು ಕೇಳಿದಾಗ ಅಜ್ಜಿ ಹೇಳುತ್ತಾರೆ ಏನೂಂತ ''ಹೊಟ್ಟೆ ಹಸಿವಮ್ಮ ವಯಸ್ಸಾದ ಮೇಲೆ ದೇಹ ಸವೆಯುತ್ತಾ, ಸವಿಯುತ್ತಾ ಹೋಗುತ್ತದೆ. ಅದರಿಂದ ಹೀಗೆ ತಾನೇ ಆಗೋದು. ನನ್ನ ಹಣೆಯಲ್ಲಿ ಇದೆ ಬರೆದಿದೆ. ನಾನು ಏನು ತಾನೇ ಮಾಡಕ್ಕಾಗತ್ತೆ. ಅದಕ್ಕೆ ಲೀಲಾ ಹಾಗೆಲ್ಲ ಹೇಳಬೇಡ ಅಜ್ಜಿ ನನ್ನ ಕರಳು ಚುರುಕ್ ಅನ್ನುತ್ತೆ ಎಂದು ಹೇಳುತ್ತಾಳೆ. ಅದಕ್ಕೆ ಅಜ್ಜಿ ಹಾಗೆ ಅನ್ನಸುತ್ತಲ್ವಾ ಮತ್ತೆ ತಿನ್ನಿಸು , ಈಗ್ಲೆ ಹೇಳುತ್ತಿದ್ದೇನೆ ನೆನಪಿಟ್ಟುಕೊ ನೀನು ಅಲ್ಲಿ ಒಂದು ತುತ್ತು ತಿನ್ನಿಸಿದರೆ ನಾನು ಇಲ್ಲಿ ಒಂದು ತುತ್ತು ತಿನ್ನೋದು ಎಂದು ಹೇಳುತ್ತಾರೆ ಅಜ್ಜಿ ಬಳಿಕ ಟೆಂಟ್ ಒಳಗೆ ಹೋಗುತ್ತಾರೆ. ಇನ್ನೂ ಊಟಕ್ಕೆ ಎಲ್ಲಾ ಅರೇಂಜ್ ಮೆಂಟ್ ಅನ್ನು ವಿಶ್ವರೂಪ ಮಾಡುತ್ತಾರೆ. ಏಜೆ ಮತ್ತು ಲೀಲಾ ಊಟದ ಬಳಿ ಆಗಮಿಸುತ್ತಾರೆ. ಬಳಿಕ ಊಟ ಮಾಡುತ್ತಿರುವಾಗ ಲೀಲಾ ಏಜೆಗೆ ತುತ್ತು ತಿನ್ನಿಸುತ್ತಾಳೆ. ಇದನ್ನು ನೋಡಿದ ಅಜ್ಜಿಗೆ ಬಹಳ ಖುಷಿಯಾಗುತ್ತದೆ.