Hitler kalyana: ಲೀಲಾಗೆ ಮರು ಮದುವೆ ಮಾಡಲು ದುರ್ಗಾ ಪ್ರಯತ್ನ
ಅಂತರಾಗೆ ಲೀಲಾ ಮೇಲೆ ಹಲವು ಬಾರಿ ಅನುಮಾನ ಬಂದರೂ ಏನಾದರು ಸುಳ್ಳು ಹೇಳಿ ಮ್ಯಾನೇಜ್ ಮಾಡಿಕೊಂಡು ಬರುತ್ತಿದ್ದಾಳೆ ಲೀಲಾ. ಆದರೆ ಇದೀಗ ದುರ್ಗಾ ಹಾಕಿದ ಹೊಸ ಬಾಂಬ್ ಮಾತ್ರ ಲೀಲಾಳನ್ನೇ ಸುಡಲು ಬರುತ್ತಿದೆ. ಆದರೆ ಈ ವಿಚಾರ ಅಂತರಾಗೆ ಅಷ್ಟಾಗಿ ತಿಳಿದಿಲ್ಲ. ಲೀಲಾ ಮಾತನ್ನು ಬಿಟ್ಟು ಅಂತರಾ ಅಷ್ಟಾಗಿ ಯಾರ ಮಾತನ್ನೂ ನಂಬಲ್ಲ.
ದುರ್ಗಾ ಮಾತ್ರ ಅಂತರಾ ತನ್ನ ಮಾತು ನಂಬುವಂತೆ ಮಾಡಲು ಯತ್ನಿಸುತ್ತಿರುತ್ತಾಳೆ. ಈಗ ಲೀಲಾಳನ್ನು ಮನೆಯಿಂದ ಹೊರ ಹಾಕಲು ದುರ್ಗಾ ನೋಡುತ್ತಿದ್ದಾಳೆ. ಅದೇ ಆಕೆಯ ಉದ್ದೇಶ ಆಗಿದೆ. ಆದರೆ ನಮ್ಮೆಲ್ಲರಿಗೂ ಚಿಕ್ಕವಳಾಗಿ ಇರುವ ಲೀಲಾ ಮಾತ್ರ ನಮ್ಮ ಅತ್ತೆ ಆಗಲು ಸಾಧ್ಯವಿಲ್ಲ, ಇದಕ್ಕೆ ನಾನು ಬಿಡುವುದು ಇಲ್ಲ ಎಂಬುವುದು ದುರ್ಗಾ ಮಾತು. ಸರೂ ಬಳಿ ದುರ್ಗಾ ಆಗಾಗ ಈ ಬಗ್ಗೆ ಹೇಳುತ್ತಾ ಇರುತ್ತಾಳೆ.

ದುರ್ಗಾ ಪ್ಲ್ಯಾನ್ ವರ್ಕ್ ಆಗುತ್ತಾ?
ಇನ್ನು ದುರ್ಗಾ ಪ್ಲ್ಯಾನ್‌ನಲ್ಲಿ ಕೌಸಲ್ಯ ಕೂಡ ಸೇರಿಕೊಂಡು ಇದ್ದಾಳೆ ಎನ್ನುವುದು ವಿಶೇಷ . ಹಣಕ್ಕಾಗಿ ಬಾಯಿ ಬಿಡುತ್ತಿರುವ ಕೌಸಲ್ಯಗೆ ತನ್ನ ಮಗಳಿಗಿಂತ ಹಣ ಇಂಪಾರ್ಟೆಂಟ್. ಹಣ ಇಲ್ಲದೇ ಏನೇನು ಇಲ್ಲ ಎಂದು ಅಂದುಕೊಂಡು ಇರುತ್ತಾಳೆ. ಇದನ್ನು ನೋಡಿದ ದುರ್ಗಾ ಕೂಡ ಸಹಾಯ ಮಾಡುವುದನ್ನು ನಿಲ್ಲಿಸಿ ಬಿಡುತ್ತಾಳೆ. ಆಗ ಕೌಸಲ್ಯಾ ತಾನಾಗಿಯೇ ತನ್ನ ಗಂಡನ ಬಳಿ ಬಂದು ಲೀಲಾಗೆ ಇನ್ನೊಂದು ಮದುವೆ ಯಾಕೆ ಮಾಡಬಾರದು ಎಂದೆಲ್ಲ ಪ್ರಸ್ತಾಪ ಮಾಡುತ್ತಾಳೆ.
ಕೌಸಲ್ಯ ಮಾತಿಗೆ ನಕ್ಕ ದುರ್ಗಾ
ಆಗ ಕೋಪಗೊಂಡ ಲೀಲಾ ತಂದೆ ಹಾಗೂ ಕೌಸಲ್ಯ ನಡುವೆ ದೊಡ್ಡ ಜಗಳವೇ ನಡೆಯುತ್ತದೆ. ಇದೆಲ್ಲವನ್ನೂ ಕರೆ ಮಾಡಿ ದುರ್ಗಾಗೆ ಹೇಳುತ್ತಾಳೆ. ದುರ್ಗಾಗೆ ಕೂಡ ಅದೇ ಬೇಕಾಗಿ ಇತ್ತು. ತಾನು ಹೇಳಿದ ಹಾಗೆ ಕೇಳಿಕೊಂಡು ಇರುವಾಕೆ ಬೇಕಿತ್ತು. ಆದರೆ ಕೌಸಲ್ಯಗೆ ಮಾತ್ರ ಇದು ಅರ್ಥ ಆದರೂ ದುಡ್ಡಿನ ಮುಂದೆ ಏನು ಇಲ್ಲ ಅನ್ನುವ ಹಾಗೆ ನಡೆದುಕೊಂಡು ಬಿಟ್ಟಳು.

ಕೌಸಲ್ಯ ಬಳಿ ದರ್ಪದ ಮಾತು ಆಡಿದ ದುರ್ಗಾ
ಇನ್ನು ದರ್ಪದ ಮಾತುಗಳನ್ನು ಆಡಿದ ದುರ್ಗಾ ಮಾತ್ರ ಫೋನ್ ಕಟ್ ಮಾಡುತ್ತಾಳೆ. ಫೋನ್ ಕಟ್ ಆದ ಬಳಿಕ ಮೆತ್ತಗೆ ಸರು ಬಳಿ ಹೇಳುತ್ತಾಳೆ, ಆಕೆಯನ್ನು ಹೀಗೆ ನಡೆಸಿಕೊಂಡರೆ ಮಾತ್ರ ಆಕೆಗೆ ನಮ್ಮಿಂದ ಏನು ತೆಗೆದುಕೊಳ್ಳಲು ಆಗುವುದಿಲ್ಲ. ಆಗ ನಮ್ಮ ದಾರಿಗೆ ಆಕೆ ಬಂದೇ ಬರುತ್ತಾಳೆ ಎನ್ನುವುದಕ್ಕೆ ಇದೆ ಸಾಕ್ಷಿ ಎನ್ನುತ್ತಾಳೆ. ಇದನ್ನು ಕೇಳಿದ ಸರೂ ಮಾತ್ರ ದುರ್ಗಾ ಮಾತಿಗೆ ಮೆಚ್ಚಿಕೊಳ್ಳುತ್ತಾಳೆ. ದುರ್ಗಾ ಏನೇ ಮಾಡಿದರೂ ಒಳ್ಳೆಯದಕ್ಕೇ ಎನ್ನುವುದು ಸರೂ ತಲೆಯಲ್ಲಿ ಈಗಾಗಲೇ ಬಂದಿದೆ.
ಅಂತರಾ ಮನದಲ್ಲಿ ಮೂಡಿದೆ ಅನುಮಾನ
ಇನ್ನು ಕೌಸಲ್ಯ, ಲೀಲಾಗೆ ಇನ್ನೊಂದು ಮದುವೆ ಮಾಡಬೇಕು ಎಂದು ಹೇಳಿದ್ದನ್ನು ಹೇಳುತ್ತಾ ಇರುತ್ತಾಳೆ. ಇದನ್ನು ಅಂತರಾ ಅತ್ತೆ ಕಿವಿಗೆ ಹಾಕಿದರೆ ಹೇಗೆ ಎಂದೆಲ್ಲ ಯೋಚನೆ ಮಾಡುತ್ತಾ ಇರುವಾಗ ಆಕೆಗೆ ಒಂದು ಪ್ಲ್ಯಾನ್ ಹೊಳೆಯುತ್ತದೆ. ಅನಂತರ ಬಳಿಗೆ ನೇರವಾಗಿ ಹೋದ ದುರ್ಗಾ ಏನೋ ಮಾತನಾಡುತ್ತಾ ಬಹಳ ಖುಷಿ ಪಡುತ್ತಾ ಇರುತ್ತಾಳೆ.
ಅಂತರಾ ಬಳಿ ಮೆತ್ತಗೆ ಲೀಲಾ ಬಾಳಲ್ಲಿ ಬಹಳ ದೊಡ್ಡ ಅಚಾತುರ್ಯ ಆಗಿದೆ. ಅವಳ ಜೀವನದಲ್ಲಿ ನಡೆದ ಘಟನೆ ಬೇರೆಯವರ ಜೀವನದಲ್ಲಿ ನಡೆಯಬಾರದು ಎಂದು ಹೇಳುತ್ತಾಳೆ. ಆ ಮಾತನ್ನು ಕೇಳಿದ ಅಂತರಗೆ ಏನಪ್ಪಾ ದುರ್ಗಾ ಈ ರೀತಿ ಮಾತುಗಳನ್ನು ಆಡುತ್ತಾ ಇದ್ದಾಳೆ ಅಲ್ವಾ ಎಂದೆಲ್ಲ ಯೋಚನೆ ಮಾಡುತ್ತಾಳೆ. ಮುಂದೇನು ಕಾದು ನೋಡಬೇಕಿದೆ.


Click it and Unblock the Notifications











