ಇನ್ನೆಷ್ಟು ದಿನ ಅಜ್ಜಿಯ ಉಪವಾಸ: ಮನವೊಲಿಸುತ್ತಾನಾ ಏಜೆ?

By ಪೂರ್ವ

ಹಿಟ್ಲರ್ ಕಲ್ಯಾಣ ಧಾರವಾಹಿ ಚೆನ್ನಾಗಿ ಮೂಡಿಬರುತ್ತಿದೆ. ಲೀಲಾ-ಏಜೆಯನ್ನು ಒಂದು ಮಾಡಲು ತುದಿಗಾಲಿನಲ್ಲಿ ನಿಂತಿದ್ದಾರೆ ಅಜ್ಜಿ.

ಅಜ್ಜಿಯ ಹಠಕ್ಕೆ ತಲೆಬಾಗಿ ಲೀಲಾ-ಏಜೆ ಒಟ್ಟಿಗೆ ಊಟ ಮಾಡಿದ್ದಾಯಿತು. ಇದೀಗ ಒಟ್ಟಿಗೆ ಸಿನಿಮಾಕ್ಕೂ ಹೋಗಿ ಬಂದರು ಕಾರಿನಿಂದ ಇಳಿಯುವ ವೇಳೆ ಲೀಲಾ ಹೇಳುತ್ತಾಳೆ ಏಜೆ ಥಾಂಕ್ಸ್ ತುಂಬಾ ದಿನದ ಮೇಲೆ ಫಿಲಂ ಗೆ ಕರೆದುಕೊಂಡು ಹೋಗಿದ್ದಕ್ಕೆ ಎಂದು ಹೇಳುತ್ತಾಳೆ. ಇನ್ನೂ ಇದನ್ನು ಏಜೆ ಕೇಳಿದರು ಕೇಳಿಸಿಕೊಳ್ಳದ ಹಾಗೆ ಹೋಗುತ್ತಾರೆ. ಏಜೆ ಅಜ್ಜಿ ಬಳಿ ಬಂದಾಗ ಅಜ್ಜಿ ಅಳುತ್ತಿರುವುದನ್ನು ಕಂಡು ಏಜೆ ಆತಂಕಕ್ಕೆ ಒಳಗಾಗಿದ್ದಾರೆ. ಏನಾಯ್ತಮ್ಮ ನಿನಗೆ ಅಳುತ್ತಿದ್ದಿಯಾ ಯಾಕೆ ನಾವಿಬ್ಬರೂ ಫಿಲಂ ಗೂ ಹೋಗಿ ಬಂದೆವು ಆದರೂ ನಿನಗೆ ನಂಬಿಕೆ ಬರುತ್ತಿಲ್ವಾ ಎಂದು ಕೇಳುತ್ತಾನೆ.

ಬಳಿಕ ಲೀಲಾಳು ಹೇಳುತ್ತಾಳೆ ನಿಜ ಅಜ್ಜಿ ಏಜೆ ಮತ್ತು ನಾನು ಫಿಲಂ ಗೆ ಹೋಗಿದ್ದೆವು ನನಗೆ ಪಾಪ್ ಕಾರ್ನ್ ಎಲ್ಲಾ ಕೊಡಿಸಿದರು ಎಂದು. ಅದನ್ನು ಕೇಳಿದ ಅಜ್ಜಿ ಆದರೂ ಅಳು ನಿಲ್ಲಿಸದೆ ಇದ್ದಿದ್ದನ್ನು ಕಂಡು ಇಬ್ಬರು ಆತಂಕಿತರಾಗುತ್ತಾರೆ. ಇತ್ತ ದುರ್ಗಾ ಆತಂಕದಿಂದ ಏಜೆ.. ಏಜೆ ಎಂದು ಕೂಗಿಕೊಂಡು ಬರುತ್ತಾಳೆ. ಇದನ್ನು ಕಂಡ ಏಜೆ ಎನಾಯ್ತು ದುರ್ಗಾ ಅಮ್ಮ ಯಾಕೆ ಅಳುತ್ತಿದ್ದಾರೆ ಎಂದು ಕೇಳುತ್ತಾರೆ ಅದಕ್ಕೆ ದುರ್ಗಾ ಹೇಳುತ್ತಾಳೆ ಅದು ಅದು ಎಂದು ಅದನ್ನು ಕಂಡ ಏಜೆಗೆ ಇನ್ನೂ ಕೋಪ ಬರುತ್ತದೆ.

ದುರ್ಗಾ ನಿನ್ನನ್ನೇ ಕೇಳುತ್ತಿರುವುದು ಹೇಳು ಎಂದು ಜೋರಾಗಿ ಹೇಳುತ್ತಾಳೆ. ಇದನ್ನು ಕಂಡ ದುರ್ಗಾ ಹೇಳುತ್ತಾಳೆ ಅಜ್ಜಿ ಅಳುತ್ತಿರುವುದು ಟಿವಿಯಲ್ಲಿ ಅತ್ತೆಯನ್ನು ಮನೆಯಿಂದ ಹೊರ ಹಾಕಿದ ಸೊಸೆ ಎಂದೆಲ್ಲಾ ಬರುತ್ತಿದೆ ಎಂದು ಹೇಳುತ್ತಾಳೆ ಇದನ್ನು ಕೇಳಿ ಏಜೆಗೆ ಲೀಲಾ ಗೆ ಸ್ವಲ್ಪ ಶಾಕ್ ಆಗುತ್ತದೆ. ಆ ಮೇಲೆ ಸಮಾಧಾನಿಸಿ ಕೊಂಡು ಹೇಳುತ್ತಾನೆ ಅಮ್ಮಾ ಮೀಡಿಯಾದವರಿಗೆ ಮಾಡಲು ಕೆಲಸವಿಲ್ಲ. ಈ ಥರ ಸುಳ್ಳು ಸುದ್ದಿ ಹಬ್ಬಿದೆ. ಇದಕ್ಕೆಲ್ಲಾ ನೀನು ತಲೆ ಕೆಡಿಸಿಕೊಳ್ಳಬೇಡ ಎಂದು ಹೇಳುವಾಗ ಲೀಲಾಗೆ ಕೌಸಲ್ಯಾ ಕರೆ ಮಾಡುತ್ತಾಳೆ.

ಲೀಲಾಗೆ ಕೌಸಲ್ಯ ಕರೆ

ಲೀಲಾಗೆ ಕೌಸಲ್ಯ ಕರೆ

ಕರೆಯನ್ನು ಸ್ವೀಕರಿಸಲು ಅಲ್ಲಿಂದ ಸ್ವಲ್ಪ ದೂರ ಹೋಗಿ ಕರೆ ಸ್ವೀಕರಿಸಿ ಏನಮ್ಮ ಎಂದು ಕೇಳುತ್ತಾಳೆ ಅದಕ್ಕೆ ಕೌಸಲ್ಯಾ ಹೇಳುತ್ತಾಳೆ ಗೀತಾ ಎಂಥಾ ನ್ಯೂಸ್ ಬರುತ್ತಿದೆಯೇ ಟಿವಿಯಲ್ಲಿ. ಎಲ್ಲರೂ ನನ್ನ ಬಳಿ ಕರೆ ಮಾಡಿ ಮಾಡಿ ವಿಚಾರಿಸುತ್ತಿದ್ದಾರೆ. ಒಂದೇ ದಿನಕ್ಕೆ ಏಷ್ಟು ಪೇಮಸ್ ಆದೆ ನೀನು ಎಂದೆಲ್ಲ ಹೇಳುತ್ತಾರೆ. ಇದನ್ನು ಕೇಳಿದ ಲೀಲಾ ಹೇಳುತ್ತಾಳೆ . ಏನಮ್ಮ ಮಾತನಾಡುತ್ತಿದ್ದಿಯಾ ನಿನಗೆ ನಾನು ಮತ್ತೆ ಕರೆ ಮಾಡುತ್ತೇನೆ ಎಂದು ಕರೆಯನ್ನು ಅರ್ಧದಲ್ಲಿಯೇ ಕಟ್ ಮಾಡುತ್ತಾಳೆ. ಇನ್ನೂ ಅಜ್ಜಿ ಅಳುತ್ತಾನೆ ಇರುತ್ತಾಳೆ.

ಅವಾರ್ಡ್ ಕೊಡುವವರು ಹಿಂದೆ ಸರಿದಿದ್ದಾರೆ!

ಅವಾರ್ಡ್ ಕೊಡುವವರು ಹಿಂದೆ ಸರಿದಿದ್ದಾರೆ!

ಬಳಿಕ ದುರ್ಗಾ ಹೇಳುತ್ತಾಳೆ ಅಜ್ಜಿ ಅಳುವಿಗೆ ಕಾರಣ ಬೇರೆಯೇ ಇದೆ. ಅದು ನಿಮಗೆ ಅವಾರ್ಡ್ ಕೊಡಲು ಬಂದವರು ಹಿಂದೆ ಸರಿದಿದ್ದಾರೆ. ಅವಾರ್ಡ್ ಕೊಡಲು ಬಂದವರು ಈ ನ್ಯೂಸ್ ಕಂಡು ಹಿಂದೆ ಸರಿದಿದ್ದಾರೆ. ಈ ವಿಚಾರವನ್ನು ಮನೆಗೆ ಬಂದು ತಿಳಿಸಿಬಿಟ್ಟು ಹೋದರು ಈ ಬಗ್ಗೆ ಅವರಿಗೆ ಬಹಳ ಬೇಸರವಿದೆ. ಅದಕ್ಕಾಗಿ ಅಳುತ್ತಿದ್ದಾರೆ ಎಂದು ಹೇಳುತ್ತಾರೆ. ಅದಕ್ಕೆ ಏಜೆ ಹೇಳುತ್ತಾರೆ ಅದಕ್ಕೆಲ್ಲ ಬೇಸರಪಟ್ಟುಕೊಂಡರೆ ಎನು ಆಗುವುದಿಲ್ಲ ಅಮ್ಮ ಅವಾರ್ಡ್ ಹೋದರೆ ಇನ್ನೊಂದು ಬರುತ್ತದೆ ನೀನು ಬೇಸರ ಮಾಡಿಕೊಳ್ಳಬೇಡ ಅಮ್ಮ ಎಂದು ಸಮಾಧಾನ ಮಾಡುತ್ತಾನೆ.

ದುರ್ಗಾ ಪ್ಲಾನ್ ಕೆಲಸ ಮಾಡಿದೆ!

ದುರ್ಗಾ ಪ್ಲಾನ್ ಕೆಲಸ ಮಾಡಿದೆ!

ಇತ್ತ ದುರ್ಗಾ ಪ್ಲಾನ್ ವರ್ಕ್ ಆಗಿದೆ. ಏಜೆ ತಲೆ-ಬಿಸಿ ಇನ್ನೂ ಹೆಚ್ಚಾಗಿದೆ ಈ ಬಾರಿ ಅಮ್ಮನನ್ನು ಹೇಗಾದರೂ ಮಾಡಿ ಮನೆಗೆ ಕರೆ ತರಬೇಕು ಎಂದು ನಿರ್ಧರಿಸುತ್ತಾನೆ. ಇತ್ತ ಅಂತರನ ಬಳಿ ಹೇಳುತ್ತಾನೆ. ಅಂತರ ನನ್ನ ಮನದಲ್ಲಿ ಎಂದಿಗೂ ನೀನೇ ಇರುತ್ತೀಯಾ ಆದರೆ ಅಮ್ಮನ ವಿಚಾರದಲ್ಲಿ ನಾನು ನಿಸ್ಸಹಾಯಕ ಆದರಿಂದ ನಾನು ಇಂತಹ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗಿದೆ ಎಂದು ಲೀಲಾಳ ಬಳಿ ಮಾತನಾಡಲು ಹೋಗುತ್ತಾರೆ. ಲೀಲಾ ಬಳಿ ಹೇಳುತ್ತಾರೆ ಅಮ್ಮನನ್ನು ಮನೆಗೆ ಕರೆ ತರಲು ಈ ರೀತಿಯ ನಾಟಕ ಮಾಡಲೇ ಬೇಕಾಗುತ್ತದೆ. ನೀನು ನನಗೆ ಸಪೋರ್ಟ್ ಮಾಡು ಎಂದು ಅಮ್ಮ ಇದ್ದಲ್ಲಿಗೆ ಕರೆದುಕೊಂಡು ಹೋಗುತ್ತಾನೆ.

ಪ್ರಜ್ಞೆ ತಪ್ಪಿದ ಸ್ಥಿತಿಯಲ್ಲಿ ಅಜ್ಜಿ!

ಪ್ರಜ್ಞೆ ತಪ್ಪಿದ ಸ್ಥಿತಿಯಲ್ಲಿ ಅಜ್ಜಿ!

ಅಲ್ಲಿ ನಿಂತು ಹೇಳುತ್ತಾನೆ ಅಮ್ಮನಿಗೆ ಇಲ್ಲಿ ನಿಂತು ಮಾತನಾಡಿದರೆ ಎಲ್ಲಾ ಕೆಳಿಸುತ್ತೆ ಎಂದು ಹೇಳಿ ಪ್ರೀತಿ ಬಂದವನ ಹಾಗೆ ನಟನೆ ಮಾಡುತ್ತಾನೆ ಇದಕ್ಕೆ ಅಮ್ಮನ ಪ್ರತಿಕ್ರಿಯೆ ಯಾವುದು ಇಲ್ಲದೆ ಇರುವುದನ್ನು ಕಂಡು ಅಮ್ಮ ಇರುವ ಬಳಿ ಬಂದಾಗ ಅಮ್ಮ ಪ್ರಜ್ಞಾ ಹೀನ ಸ್ಥಿತಿಯಲ್ಲಿ ಇರುತ್ತಾರೆ. ಮುಂದೇನು ಮಾಡುತ್ತಾರೆ ಏಜೆ ಕಾದು ನೋಡಬೇಕಿದೆ.

More from Filmibeat

English summary
Kannada serial Hitler kalyana written updated on 6th July. Hitler and Leela getting closer for Ajji.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X