ಮನೆಗೆ ಬಂದ ಅಜ್ಜಿ, ಮಾತಾಡಿದ ಪವಿತ್ರ! ಆದರೆ ದೇವ್‌ಗೆ ಭಯ ಶುರು

By ಪೂರ್ವ

'ಹಿಟ್ಲರ್ ಕಲ್ಯಾಣ' ಧಾರವಾಹಿಯಲ್ಲಿ ಕೊನೆಗೂ ಅಜ್ಜಿ ಮನೆ ಒಳಗೆ ಬಂದೆ ಬಿಟ್ಟರು. ಏಜೆ ಅಜ್ಜಿಯನ್ನು ಮನೆಯೊಳಗೆ ಕರೆತರುವಲ್ಲಿ ಸಫಲರಾಗಿದ್ದಾರೆ. ದುರ್ಗಾಳ ಮಾಸ್ಟರ್ ಪ್ಲಾನ್ ವರ್ಕ್ ಆಗಿದೆ ಆದರೆ ಇದರಿಂದ ಏಜೆಗೆ ಅಜ್ಜಿಗೆ ಮುಖಭಂಗವಾಗಿದೆ. ಇದರಿಂದ ಅಜ್ಜಿ ಮನಸ್ಸಿಗೆ ನೋವಾಗಿದೆ.

ಇತ್ತ ಲೀಲಾ ಏಜೆಗೆ ಅದೆಷ್ಟೇ ಹತ್ತಿರ ಆಗಲು ಪ್ರಯತ್ನಿಸಿದರು ಕೂಡಾ ಅದು ಸಾಧ್ಯವಾಗದೆ ಬೇಸರಪಟ್ಟುಕೊಂಡಿದ್ದಾಳೆ. ಏಜೆ ಆಫೀಸ್ ಗೆ ಹೊರಡುತ್ತಿರುತ್ತಾರೆ. ಲೀಲಾ ಏಜೆಗಾಗಿ ನೀರಿನ ಬಾಟಲಿ ತೆಗೆದುಕೊಂಡು ಬರುತ್ತಾಳೆ, ಏಜೆ ಮನೆಯ ಮೆಟ್ಟಿಲು ಇಳಿದುಕೊಂಡು ಬರುವ ವೇಳೆ ಲೀಲಾ ನೀರಿನ ಬಾಟಲಿ ಹಿಡಿದು ನಿಂತಿರುತ್ತಾಳೆ. ಇದನ್ನು ಕಂಡ ಏಜೆ ಎನು ಎಂದು ಕೇಳುತ್ತಾನೆ. ನೀರಿನ ಬಾಟಲಿ ಎಂದು ಹೇಳುತ್ತಾಳೆ ಅದಕ್ಕೆ ಏಜೆ ಹೇಳುತ್ತಾನೆ ನನಗೆ ಬೇಡ ಎಂದು ಹೋಗುತ್ತಾನೆ ಇದರಿಂದ ಲೀಲಾಗೆ ಬೇಸರವಾಗುತ್ತದೆ.

ಇದರಿಂದ ಬೇಸರ ಮಾಡಿಕೊಂಡ ಲೀಲಾ ಮೌನಕ್ಕೆ ಶರಣಗುತ್ತಾಳೆ. ಇತ್ತ ಏಜೆ ಕಾರಿನ ಬಳಿ ಹೋದಾಗ ಬಿಕ್ಕಳಿಕೆ ಬಂದು ನೀರು ಕುಡಿಯುವ ಮನಸ್ಸಾಗುತ್ತದೆ. ಇದು ಏಜೆಗೂ ಬೇಸರ ತರುತ್ತದೆ. ಲೀಲಾಳನ್ನು ನೆನದು ಬೇಸರ ಮಾಡಿಕೊಳ್ಳುತ್ತಾನೆ. ಇತ್ತ ಅಜ್ಜಿ ಬಹಳ ನೊಂದುಕೊಂಡಿದ್ದಾರೆ. ಏಜೆ ಅಮ್ಮನ ಕೈ ಹಿಡಿದು ದುಃಖ ಪಡುತ್ತಾನೆ. ಏನಮ್ಮ ಇದೆಲ್ಲ, ಯಾಕೆ ಬೇಕಿದೆಲ್ಲ, ಪ್ಲೀಸ್ ಇನ್ನೊಂದು ಸಲ ಈ ತರ ಮಾಡಬೇಡ. ನಿಮಗೇನಾದ್ರೂ ಹೆಚ್ಚು ಕಮ್ಮಿ ಆದರೆ ಎಂದು ದುಃಖ ಪಡುತ್ತಾ ಪ್ಲೀಸ್ ಮಾಡಬೇಡ ಎಂದು ಹೇಳುತ್ತಾನೆ.

ಏಜೆ ಬಳಿ ಕ್ಷಮೆ ಕೇಳಿದ ಅಜ್ಜಿ

ಏಜೆ ಬಳಿ ಕ್ಷಮೆ ಕೇಳಿದ ಅಜ್ಜಿ

ಈ ಅಮ್ಮನ ಕ್ಷಮಿಸ್ತಿಯಾ ಎಂದು ಏಜೆ ಬಳಿ ಕೇಳುತ್ತಾರೆ, ಅದಕ್ಕೆ ಏಜೆ, ''ಏನಾಗಿದೆ ಅಂತ ಹೇಳಿ ಇಷ್ಟು ದೊಡ್ಡ ದೊಡ್ಡ ಮಾತನಾಡುತ್ತಿದ್ದಿಯಾ'' ಎನ್ನುತ್ತಾರೆ. ಅದಕ್ಕೆ ಅಜ್ಜಿ ಹೇಳುತ್ತಾರೆ ''ಈ ಹಾಳು ಹಠದಿಂದ ನಿನ್ನ ಮರ್ಯಾದೆ, ಲೀಲಾ ಮರ್ಯಾದೆ ತೆಗೆದೆ. ಈಗ ಅದನ್ನ ವಾಪಸ್ ಹೇಗೆ ತರೋದು ಅಡಿಕೆಗೆ ಹೋದ ಮಾನ ಆನೆ ಕೊಟ್ಟರೂ ಬರೋಲ್ಲ ಅಲ್ವಾ ನಾನೇನು ಮಾಡ್ಲಿ'' ಎಂದು ಅಳುತ್ತಾರೆ.

ಸತ್ಯ ಗೊತ್ತಾಗುತ್ತದೆ ಎಂದ ಲೀಲಾ

ಸತ್ಯ ಗೊತ್ತಾಗುತ್ತದೆ ಎಂದ ಲೀಲಾ

''ನನ್ನ ಕ್ಷಮಿಸಿಬಿಡು ಲೀಲಾ'' ಎಂದಾಗ ಲೀಲಾ ಹೇಳುತ್ತಾಳೆ ಅಜ್ಜಿ ನೀವು ಈ ಥರ ಕಣ್ಣೀರು ಹಾಕಿದರೆ ಸರಿ ಇರಲ್ಲ ಹೇಳಿ ಈಗ ಏನಾಗಿದೆಂತಾ ಹೀಗೆ ಕಣ್ಣೀರು ಹಾಕುತ್ತಿದ್ದಿರಾ ನಿಮ್ಮ ಮುಂದೆ ಇರೋದು ನಿಮ್ಮ ಮಗ ಏಜೆ. ಅವರಿಗೆ ಸತ್ಯಕ್ಕೆ ಸಪೋರ್ಟ್ ಮಾಡೋದು ಗೊತ್ತು ಸುಳ್ಳನ್ನು ತುಳಿಯೋದು ಗೊತ್ತು. ಟಿವಿಯಲ್ಲಿ ಬಂದಿದ್ದು ಸುಳ್ಳು ಅಂತ ನಾಳೆ ಬಂದೆ ಬರುತ್ತದೆ. ನೀವು ಎನು ತಲೆಕೆಡಿಸಿಕೊಳ್ಳಬೇಡಿ ಎಂದು ಸಮಾಧಾನ ಹೇಳುತ್ತಾಳೆ.

ತಮಾಷೆ ಸಂಗತಿ ಹೇಳಿದ ಲೀಲಾ

ತಮಾಷೆ ಸಂಗತಿ ಹೇಳಿದ ಲೀಲಾ

ಬಳಿಕ ಲೀಲಾ, ಪವಿತ್ರ ಬಳಿ ಮಾತನಾಡುತ್ತಿದ್ದಾರೆ. ಕ್ಷಮಿಸಿ ಅಜ್ಜಿ ಟೆಂಟಲ್ಲಿ ಇದ್ದ ಕಾರಣ ಸರಿ ಮಾತನಾಡಲು ಆಗಿರಲಿಲ್ಲ ನಿಮ್ಮ ಹತ್ರ ಆದ್ರೂ ಏಷ್ಟು ಮಜಾ ಇತ್ತು ಗೊತ್ತಾ ನೀವು ಅಲ್ಲಿ ಇರುತ್ತಿದ್ದರೆ ಹೊಟ್ಟೆ ನೋವು ಬರುವಷ್ಟು ನಗುತ್ತಿದ್ದಿರಿ. ನಿಮಗೊಂದು ವಿಷಯ ಹೇಳುತ್ತೇನೆ ಯಾರತೇನು ಹೇಳಬಾರದು ಎನ್ ಗೊತ್ತಾ ಏಜೆ ಅಜ್ಜಿಗೊಸ್ಕರ ರೊಮ್ಯಾಂಟಿಕ್ ಆಗಿ ಡೈಲಾಗ್ ಹೇಳಿದ್ರು ಪಾಪ ಏಜೆ ಮನಸಲ್ಲಿ ಎನು ಫೀಲಿಂಗ್ ಇಲ್ಲ ಅಂದ್ರು ಸುಮ್ ಸುಮ್ಮನೆ ಆಕ್ಟಿಂಗ್ ಮಾಡುವುದು ಏಷ್ಟು ಕಷ್ಟ ಅಲ್ವಾ ಆದ್ರೂ ನೀವೇನೇ ಹೇಳಿ ಏಜೆಗೆ ಸುಳ್ಳು ಹೇಳಲು ಬರಲ್ಲ'' ಎಂದು ತಮಾಷೆ ಮಾಡುತ್ತಾಳೆ.

ಮಾತನಾಡಿದ ಪವಿತ್ರಾ

ಮಾತನಾಡಿದ ಪವಿತ್ರಾ

ಮುಂದುವರೆದು, ''ಪವಿತ್ರ ಅವರೇ ಮೊನ್ನೆ ಚುಕ್ಕಿ ಅದೇನೋ ವಾಟ್ಸಪ್ ಲ್ಲಿ ವೆಬ್ ಸಿರಿಸ್ ಇದ್ದು ಲಿಂಕ್ ಹಾಕಿದ್ದಳು. ಅದನ್ನು ನೋಡುತ್ತಿದ್ದೆ ಅದರಲ್ಲಿ ಒಬ್ಬ ವಿಲನ್ ಇದ್ದ ಅವನು ಎಲ್ಲರ ಜೊತೆ ಇರುತ್ತಾನೆ ಆದರೆ ಗೊತ್ತಾಗಲ್ಲ. ಒಳ್ಳೆಯವನ ಥರ ನಾಟವಾಡುತ್ತಾನೆ ಆದರೆ ಸಿಕ್ಕಿ ಹಾಕಿಕೊಳ್ಳಲ್ಲ. ಅವನ ಹೆಂಡತಿಯನ್ನು ಬೆಟ್ಟದ ಮೇಲೆ ಕರೆದುಕೊಂಡು ಹೋಗಿ ತಳ್ಳಿ ಸಾಯಿಸುವ ಸಿನ್ ಇತ್ತು. ಅಬ್ಬಬ್ಬಾ ಆ ಸೀನ್ ಏಷ್ಟು ರಿಯಲಿಸ್ಟಿಕ್ ಆಗಿ ಇತ್ತು ಗೊತ್ತಾ ನೋಡಿ ನನ್ನ ಕೈ ಕಾಲೇಲ್ಲ ಬೆವರು ಬಂದು ಬಿಡ್ತು ಎಂದಾಗ ಪವಿತ್ರಗೆ ಹಿಂದೆ ನಡೆದ ಘಟನೆಗಳು ನೆನಪಿಗೆ ಬರುತ್ತದೆ. ದೇವ್ ಎಂದು ಚೀರಿಕೊಳ್ಳುತ್ತಾಳೆ. ಪವಿತ್ರ ಅವರೇ ನೀವು ಮಾತನಾಡುತ್ತ ಇದ್ದೀರಾ'' ಎಂದು ಖುಷಿಯಲ್ಲಿ ಲೀಲಾ ಹೇಳುತ್ತಾಳೆ. ಮುಂದೇನು ಆಗುತ್ತದೆ ಕಾದು ನೋಡಬೇಕಿದೆ.

More from Filmibeat

English summary
Kannada serial Hitler Kalyana written updated on 7th July. Finlay AJ's mother came back to home.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X