»   » ಪ್ರೀತಿಸುವ ಅಭಿಮಾನಿಗಳ ಜೊತೆ 'ಜೋಡಿಹಕ್ಕಿ'ಯ 300ರ ಸಂಭ್ರಮ

ಪ್ರೀತಿಸುವ ಅಭಿಮಾನಿಗಳ ಜೊತೆ 'ಜೋಡಿಹಕ್ಕಿ'ಯ 300ರ ಸಂಭ್ರಮ

By Bharath Kumar
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  ಹಳ್ಳಿಗಾಡಿನ ಹಸಿರ ಮಧ್ಯೆ ಅರಳಿ ನಿಲ್ಲೋ ಜೋಡಿಹಕ್ಕಿ. ಮುಖ್ಯ ಪಾತ್ರಧಾರಿಗಳಾದ ಪೈಲ್ವಾನ್ ರಾಮಣ್ಣನ ಮುಗ್ಧ ಪ್ರೀತಿ, ಜಾನಕಿ ಟೀಚರ್ ಮುದ್ದು ಮಾತುಗಳ ಮೂಲಕವೇ ವೀಕ್ಷಕರ ಮನಗೆದ್ದಿರುವ ಧಾರಾವಾಹಿ. ಹಳ್ಳಿಯ ಸೊಗಡನ್ನೇ ಉಸಿರಾಡುವ ಕಲ್ಲುಬಂಡೆಯಂತಹ ಪೈಲ್ವಾನ್ ರಾಮಣ್ಣ, ಸಿಟಿಯಿಂದ ಬರೋ ಜಾನಕಿ ಟೀಚರ್‍ ಪ್ರೀತಿಗೆ ಮನಸೋತು ಮದುವೆಯಾಗಿ ಒಟ್ಟಿಗೆ ಬದುಕೋ ಸುಮಧುರ ಕತೆ ಸಾಕಷ್ಟು ವೀಕ್ಷಕರನ್ನ ರಂಜಸಿದೆ.

  ಕರ್ನಾಟಕದುದ್ದಕ್ಕೂ ಜೋಡಿಹಕ್ಕಿ ಧಾರಾವಾಹಿ ಅಪಾರ ಅಭಿಮಾನಿ ಬಳಗವನ್ನೇ ಗಳಿಸಿ, ಸದ್ಯ, ಯಶಸ್ವಿ 300 ಸಂಚಿಕೆಗಳನ್ನು ಪೂರೈಸಿದೆ. ಕಿರುತೆರೆಯ ಇತಿಹಾಸದಲ್ಲೇ ಮೊಟ್ಟಮೊದಲ ಬಾರಿಗೆ ಧಾರಾವಾಹಿ ತಂಡವೊಂದು ತನ್ನ ಅಭಿಮಾನಿಗಳಿಗಾಗೇ ಒಂದು ದಿನವನ್ನು ಮೀಸಲಿಟ್ಟು ಅವರಿಗಾಗಿ ವೇದಿಕೆಯೊಂದನ್ನು ನಿರ್ಮಿಸಿ 300ರ ಸಂಭ್ರಮನ್ನು ತನ್ನ ಅಭಿಮಾನಿಗಳೊಟ್ಟಿಗೇ ಆಚರಿಸಿದೆ.

  ಅಪಾರ ಅಭಿಮಾನಿಗಳಿಗಾಗೇ ಒಂದು ದಿನವನ್ನು ಮೀಸಲಿಟ್ಟು ಅವರನ್ನು ರಂಜಿಸಬೇಕೆಂಬ ಹಂಬಲದೊಂದಿಗೆ ಅಭಿಮಾನಿಗಳೊಂದಿಗೆ 'ಜೋಡಿಹಕ್ಕಿ' ಧಾರಾವಾಹಿಯ 300ರ ಸಂಭ್ರಮವನ್ನು ನಡೆಸಿ ಅಭಿಮಾನಿಗಳೊಟ್ಟಿಗೆ ಸಂತಸ ಹಂಚಿಕೊಂಡಿದ್ದಾರೆ ಕಿರುತೆರೆಯ ಯಶಸ್ವಿ ನಿರ್ದೇಶಕ ಆರೂರು ಜಗದೀಶ್. ಈ ಅಮೋಘ ಕಾರ್ಯಕ್ರಮಕ್ಕೆ ಕರ್ನಾಟಕ ಮೂಲೆ ಮೂಲೆಯಿಂದಲೂ ಅಭಿಮಾನಿಗಳು ಬಂದು ಧಾರಾವಾಹಿ ತಂಡದೊಟ್ಟಿಗೆ ಸಂಭ್ರಮಿಸಿದ್ದು ವಿಶೇಷ.

  ಸಿನಿ ಸಂಭ್ರಮದಂತೆಯೇ ಪ್ರತಿಯೊಬ್ಬ ಧಾರಾವಾಹಿಯ ನಟ ನಟಿಯರ ಕಟೌಟ್ ಗಳು ಕಾರ್ಯಕ್ರಮದಲ್ಲಿ ರಾರಾಜಿಸುತ್ತಿದ್ದವು. ಇಡೀ ದಿನವನ್ನು ಅಭಿಮಾನಿಗಳಿಗಾಗಿ ಮೀಸಲಿಟ್ಟ ಧಾರಾವಾಹಿ ತಂಡ, ಅವರೆಲ್ಲರ ಪ್ರಶ್ನೆಗಳಿಗೆ ಉತ್ತರಿಸಿ ಖುಷಿಪಡಿಸಿತು. ಕಾರ್ಯಕ್ರಮದಲ್ಲಿ ಮತ್ತೊಂದು ಮಹೋನ್ನತ ಕಾರ್ಯ ಕೈಗೊಂಡ ಜೋಡಿಹಕ್ಕಿ ತಂಡ.. ಧಾರಾವಾಹಿಯಲ್ಲಿ ಪಾತ್ರ ನಿರ್ವಹಿಸುತ್ತಿದ್ದ ದಿ. ಭೂಪಾರವರ ಕುಟುಂಬಕ್ಕೆ 1 ಲಕ್ಷ ರೂ ನೀಡಿ ಕಾರ್ಯಕ್ರಮಕ್ಕೆ ಮತ್ತೊಂದು ಸಾರ್ಥಕತೆ ತಂದುಕೊಟ್ಟಿತು.

  ಇದೇ ವೇಳೆ ವೇದಿಕೆಯಲ್ಲಿ ಉಪಸ್ಥಿತರಿದ್ದ ಜೀ ಕನ್ನಡ ವಾಹಿನಿಯ ಬ್ಯುಸಿನೆಸ್ ಹೆಡ್ ರಾಘವೇಂದ್ರ ಹುಣಸೂರ್ ಇದೊಂದು ವಿಶಿಷ್ಟ ಕಥಾಹಂದರವುಳ್ಳ ಧಾರಾವಾಹಿ.. ನಾವೆಷ್ಟು ಪ್ರೀತಿಯಿಂದ ಇದನ್ನು ನಿರ್ಮಿಸಿದ್ದೆವೋ ಅದಕ್ಕೂ ಮಿಗಿಲಾಗಿ ಇದನ್ನು ಪ್ರೀತಿಸಿ, ಪ್ರೋತ್ಸಾಹಿಸಿದ್ದೀರಿ ಎಂದು ಅಭಿಮಾನಿ ವೃಂದಕ್ಕೆ ಅಭಿನಂದನೆ ತಿಳಿಸಿದರು. 'ಜೋಡಿಹಕ್ಕಿ ಅಭಿಮಾನಿಗಳೊಂದಿಗೆ 300ರ ಸಂಭ್ರಮ' ಈ ಅದ್ದೂರಿ ಕಾರ್ಯಕ್ರಮ ಅತೀ ಶೀಘ್ರದಲ್ಲೇ ಜೀó ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ.

  English summary
  For the first time in the history of any fiction show that runs in a Kannada General Entertainment Channel, Zee Kannada organized a Meet & Greet session with Team Jodi Hakki in Bangalore. Fans from all over Karnataka gathered at Sri Sai Palace, Kengeri to celebrate with their beloved Jodi Hakki couple.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more