ಮುಚ್ಚಿಟ್ಟಿದ್ದ ಸತ್ಯವನ್ನು 'ಕಮಲಿ' ಬಳಿ ಹೇಳುತ್ತಾನಾ ಚಂದ್ರಕಾಂತ್?
'ಕಮಲಿ' ಧಾರಾವಾಹಿ ಅದ್ಭುತವಾಗಿ ಮೂಡಿ ಬರುತ್ತಿದೆ. ಇದೀಗ ಕಮಲಿ ತಂದೆ ಸಿಕ್ಕಿರುವ ಖುಷಿಯಲ್ಲಿ ಹಾರಾಡುತ್ತಿದ್ದಾಳೆ. ತಂದೆಯ ಬಳಿ ಯಾವಾಗ ಮಾತನಾಡುತ್ತೇನೋ ಎಂದು ಓಡೋಡಿ ತವರು ಮನೆಗೆ ಬರುತ್ತಾಳೆ. ತಂದೆಯ ಬೆಡ್ ರೂಮ್ ಬಳಿ ಬಂದಾಗ ಕಮಲಿಗೆ ಮಲತಾಯಿ ಸಿಗುತ್ತಾಳೆ. ಆಕೆಯ ಬಳಿ ಹೇಳುತ್ತಾಳೆ ಕಮಲಿ ಒಂದು ಬಾರಿ ನಾನು ತಂದೆಯ ಬಳಿ ಮಾತನಾಡಬೇಕು ಎಂದು ಸುಮಾರು ಕೇಳಿಕೊಳ್ಳುತ್ತಾಳೆ.
'ಕಮಲಿ'ಯನ್ನೂ ಕಂಡೊಡನೆ ಊರ್ಮಿಳಾ ಕೇಳುತ್ತಾಳೆ ಎನು ಇಷ್ಟೊತ್ತಿಗೆ ಬಂದಿದ್ದೀಯಾ ಎಂದು ಕೇಳಿದಾಗ "ಕಮಲಿ ಹೇಳುತ್ತಾಳೆ ಇದೇನು ಚಿಕ್ಕಮ್ಮ ಹೀಗೆ ಹೇಳುತ್ತಿದ್ದೀರಾ ಇದು ನನಗೂ ಮನೇನೇ ಅಲ್ವಾ ಎಂದಾಗ ಊರ್ಮಿಳಾ ಹೇಳುತ್ತಾಳೆ. ಅಲ್ಲಾ ಏನು ವಿಷಯ ಅಂತ ಕೇಳಿದೆ ಎಂದಾಗ, ಕಮಲಿ ಹೇಳುತ್ತಾಳೆ ತಂದೆಯನ್ನೂ ನೋಡಬೇಕಿತ್ತು ಅದಕ್ಕೆ ಬಂದೆ ಎಂದಾಗ ಸಿಟ್ಟುಗೊಂಡ ಊರ್ಮಿಳಾ ಅವರು ಮಲಗಿದ್ದಾರೆ. ಕಮಲಿ ನೀನೇನು ಅವರನ್ನು ನೋಡಬೇಕಿಲ್ಲ. ಪಾರ್ಟಿ ನಡೆಯಬೇಕಿದ್ದರೆ ಅವರ ನೆನಪಾದರು. ಇತ್ತ ನಿನಗೆ ಇದೀಗ ಬಂದು ನೋಡಬೇಕು ಅಂದರೆ ಆಗಲ್ಲ ಹೋಗು ನೀನು" ಎಂದು ಕಡ್ಡಿ ಮುರಿದ ಹಾಗೆ ಹೇಳುತ್ತಾಳೆ.

ಕಮಲಿಗೆ ತಡೆ ಗೋಡೆ ಯಾರು?
ಆಗ ಕಮಲಿ " ಅಯ್ಯೋ ಚಿಕ್ಕಮ್ಮ ನನಗೆ ಪಾರ್ಟಿಗೆ ಹೋಗಲು ಇಷ್ಟ ಇರಲಿಲ್ಲ. ನನಗೂ ಅಪ್ಪ ಜೊತೇನೆ ಇರಬೇಕು ಅನ್ನಿಸುತ್ತಿತ್ತು. ಆದರೆ ನಾನೇನು ಮಾಡಲಿ ನೆಂಟರೆಲ್ಲರು ಬಂದಿದ್ದರು. ಅನಿವಾರ್ಯವಾಗಿ ನಾನು ಹೋದೆ ಅಷ್ಟೇ ಅಷ್ಟೆ. ಆ ಮಾತ್ರಕ್ಕೆ ಅಪ್ಪನ ನೆನಪೇ ಇಲ್ಲ ಅಂತ ಹೇಗೆ ಹೇಳುತ್ತೀರಾ ಚಿಕ್ಕಮ್ಮ . ಅವರ ನೆನಪು ಇಲ್ಲ ಅಂದರೆ ಇಷ್ಟು ರಾತ್ರಿ ನಾನು ಯಾಕೆ ಇಲ್ಲಿಗೆ ಬರುತ್ತಿದೆ. ಪ್ಲೀಸ್ ಚಿಕ್ಕಮ್ಮ ಒಂದೇ ಸಲ ನಾನು ಅವರನ್ನು ನೋಡಿಕೊಂಡು ಹೋಗುತ್ತೇನೆ." ಎನ್ನುತ್ತಾಳೆ. ಆಗ ಊರ್ಮಿಳಾ "ಪ್ಲೀಸ್ ಕಮಲಿ ಅರ್ಥ ಮಾಡಿಕೋ. ನೋಡು ಅವರು ಕಾಣಲಿಲ್ಲ ಅಂತ ಬೆಳಗ್ಗೆಯಿಂದ ಹುಡುಕಿ ಹುಡುಕಿ ಸುಸ್ತಾಗಿದೆ. ನೀನು ಪಾರ್ಟಿಯಲ್ಲಿ ಇದ್ದು ಸುಸ್ತಾಗಿದ್ದೀಯಾ ಹೋಗಿ ರೆಸ್ಟ್ ತಗೋ. ಒಳ್ಳೆ ಮಾತಿನಲ್ಲಿ ಹೇಳಿದರೆ ಆಗಲ್ವಾ ಹೋಗ್ತಾ ಇರು" ಎಂದು ಗದರಿದ್ದಾಳೆ.

ಕಮಲಿ ಬಂದಿದ್ದು ಅಪ್ಪನಿಗೆ ಗೊತ್ತಾಯ್ತು
ಆಗ ಕಮಲಿ ಬೇಸರದಿಂದ ಹೋಗಲು ಅನುವಾಗುತ್ತಾಳೆ. ಆಗ ತಂದೆ ಚಂದ್ರಕಾಂತ್ ಕಮಲಿಯನ್ನೂ ನೋಡಿ ಅಮ್ಮ ಕಮಲಿ ಎಂದು ಕರೆಯುತ್ತಾರೆ . ಕಮಲಿ ಹತ್ತಿರ ಬಂದ ಚಂದ್ರಕಾಂತ್ ಮಗಳನ್ನು ಬಾಚಿ ತಬ್ಬಿಕೊಳ್ಳುತ್ತಾರೆ. ಬಳಿಕ ಚೆನ್ನಾಗಿದ್ದಿಯಾ ಎಂದು ಕಮಲಿಯನ್ನು ವಿಚಾರಿಸಿಕೊಳ್ಳುತ್ತಾರೆ. ನಿಮ್ಮನ್ನು ನೋಡಬೇಕೆಂದು ಬಂದೆ ಅಪ್ಪ ಎಂದಾಗ, ಊರ್ಮಿಳಾ " ನೀವು ಯಾಕೆ ಬರೋಕೋದ್ರಿ ಮಲಗಿಕೊಳ್ಳುವುದು ಅಲ್ವಾ. ಹೋಗಿ ಮಲಗಿಕೊಳ್ಳಿ ಎಂದಾಗ ಚಂದ್ರಕಾಂತ್‌ಗೆ ಹೇಳುತ್ತಾರೆ.

ಊರ್ಮಿಳಾಗೆ ಕೋಪವೇಕೆ?
ಆಗ ಊರ್ಮಿಳಾ ಆಯ್ತಾ ಈಗ ಸಮಾಧಾನ ಆಯ್ತಾ ನೀನು ಬಂದೆ ಅಂತ ಎದ್ದು ಬಂದ್ರಲ್ಲ ಛೇ ಪಾಪ ಏಷ್ಟು ಸುಸ್ತಾಗಿತ್ತು ಅವರಿಗೆ ಸ್ವಲ್ಪ ಮಲಗಿಕೊಳ್ಳಲಿ ಎಂದು ಅಂದುಕೊಂಡಿದ್ದೆ. ನೀನು ಬಂದು ಎಲ್ಲಾ ಹಾಳು ಮಾಡಿದೆ ಎಂದಾಗ ಚಂದ್ರಕಾಂತ್ ಶೂ .... ಬಯ್ಯಬೇಡ ನನ್ನ ಮಗಳು ಕಮಲಿ ಎಂದು ಹೇಳುತ್ತಾರೆ. ಆಗ ಕಮಲಿ "ಅಪ್ಪ ನನಗೆ ಎಷ್ಟು ಖುಷಿ ಆಗುತ್ತಿದೆ ಗೊತ್ತಾ. ಒಂದೆರಡು ನಿಮಿಷ ಮಾತನಾಡಿಸಿ ಹೊರಟು ಹೋಗುತ್ತೇನೆ ಎಂದು ಊರ್ಮಿಳಾ ಬಳಿ ಕೇಳಿದಾಗ, ನಿನಗೆ ಹೇಳಿದರೆ ಅರ್ಥ ಆಗಲ್ಲ ಇವರಿಗೂ ಗೊತ್ತಾಗಲ್ಲ ನಿನಗೂ ಗೊತ್ತಾಗಲ್ವಾ ಎಂದಾಗ ಚಂದ್ರಕಾಂತ್ ನೀರು ಎಂದು ಊರ್ಮಿಳಾ ಬಳಿ ಕೇಳಿದಾಗ ನೀರು ತರಲು ಹೋಗುತ್ತಾಳೆ.

ಕಮಲಿ ಅಪ್ಪ ಏನಂತಾರೆ?
ಚಂದ್ರಕಾಂತ್ ಮಗಳ ಬಳಿ ಹೇಳುತ್ತಾನೆ ನಿನ್ನ ಬಳಿ ನನಗೆ ಮಾತನಾಡಲು ಇದೆ ಬಾ ಅಲ್ಲಿ. ಮಾತನಾಡುವ ಅಂದಾಗ ಅಲ್ಲಿಗೆ ಹೋಗಬೇಕು ಎನ್ನುವಷ್ಟರಲ್ಲಿ ಊರ್ಮಿಳಾ ಬರುತ್ತಾಳೆ ಎಲ್ಲಿಗೆ ಹೋಗುತ್ತಿದ್ದೀರ ಎಂದಾಗ ಅಪ್ಪ ವಾಕ್ ಹೋಗಬೇಕು ಅಂದ್ರು ಎಂದು ಹೇಳುತ್ತಾಳೆ ಮುಂದೇನಾಗುತ್ತೆ ಎಂಬುವುದನ್ನು ಕಾದು ನೋಡಬೇಕಿದೆ.


Click it and Unblock the Notifications