ಸಿಕ್ಕಂತೆ ಸಿಕ್ಕು ದೂರಾಗುತ್ತಿದ್ದಾರೆ ಕಮಲಿಯ ಅಪ್ಪ
'ಕಮಲಿ' ಧಾರವಾಹಿ ಚೆನ್ನಾಗಿ ಮೂಡಿ ಬರುತ್ತಿದೆ. ಇತ್ತೀಚಿನ ದಿನಗಳಲ್ಲಿ ಕಮಲಿಗೆ ಅವಳ ತಂದೆಯ ಪ್ರೀತಿ ಕೂಡ ಸಿಗದ ರೀತಿಯಲ್ಲಿ ಅನಿಕಾ ಮಾಡಿದ್ದಾಳೆ ಆದರೆ ಇದು ಕಮಲಿಯ ಅರಿವಿಗೆ ಬರುತ್ತಿಲ್ಲ. ಕಮಲಿ ಹಾಗೂ ಋಷಿ ಮದುವೆಯ ವಾರ್ಷಿಕೋತ್ಸವದ ದಿನದಂದು ಒಟ್ಟಾಗಿ ಇರಬೇಕು ಎಂದು ಯೋಜನೆ ಹಾಕಿಕೊಂಡಿರುತ್ತಾರೆ ಅದರಲ್ಲೂ ಋಷಿ, ಹೆಂಡತಿಗೆ ಏನಾದರು ಒಂದು ಸರ್ಪ್ರೈಸ್ ನೀಡಬೇಕು ಎಂದು ಹೇಳಿ ಕರೆದುಕೊಂಡು ಹೋಗುತ್ತಾನೆ.
ಬಳಿಕ ಕಮಲಿ ಕಣ್ಣಿಗೆ ಪಟ್ಟಿ ಕಟ್ಟಿ ಆಕೆಯ ಅಮ್ಮನ ಸಮಾಧಿ ಬಳಿ ಕರೆದುಕೊಂಡು ಹೋಗುವ ಋಷಿ, ಅಲ್ಲಿ ಕಮಲಿ ಕಣ್ಣಿನ ಪಟ್ಟಿ ತೆಗೆಯುತ್ತಾನೆ. ಅಮ್ಮನ ಸಮಾಧಿ ಬಳಿ ಹೋದ ಕಮಲಿಗೆ ಬಹಳ ಖುಷಿಯಾಗುತ್ತದೆ. ಇತ್ತ ಅಮ್ಮನ ಬಳಿ ತನ್ನ ಮದುವೆಯ ವಾರ್ಷಿಕೋತ್ಸವದ ಕುರಿತು ಹೇಳುತ್ತಿರುತ್ತಾರೆ. ಇನ್ನೊಂದು ಶಾಕ್ ಕಮಲಿಗೆ ಕಾದಿರುತ್ತದೆ. ಅದೇನೆಂದರೆ ಕಮಲಿ ತಂದೆ ಅಮ್ಮನ ಸಮಾಧಿ ಬಳಿ ಇರುತ್ತಾರೆ.
ಬಳಿಕ ಅಲ್ಲಿಗೆ ಊರ್ಮಿಳಾ ಹಾಗೂ ಅನಿಕಾ ಬರುತ್ತಾರೆ ಅದನ್ನು ನೋಡಿದ ಕಮಲಿಯ ತಂದೆ ಶಾಕ್ ಆಗುತ್ತಾರೆ. ಇನ್ನು ಆನಿಕಾ ತಂದೆಯ ಬಳಿ ನಾಟಕೀಯವಾಗಿ ಎಲ್ಲಿಗೆ ಹೋಗಿದ್ದೆ ಅಪ್ಪ ನೀನು, ನಿನ್ನ ಏಷ್ಟು ಹುಡುಕಿದೆ ಆದರೆ ನೀನು ನನಗೆ ಸಿಕ್ಕಿರಲಿಲ್ಲ. ಐ ಮಿಸ್ ಯು ಅಪ್ಪ ಎಂದು ಹೇಳುತ್ತಾರೆ. ಅದನ್ನು ನೋಡಿದ ಚಂದ್ರಕಾಂತ್ ಹೆದರಿ ಕಮಲಿ ಬಳಿ ಬಂದು ಕಮಲಿ ಎಂದು ಹೇಳುತ್ತಾರೆ.

ಚಂದ್ರಕಾಂತ್ ಅನ್ನು ಪ್ರಶ್ನೆ ಮಾಡುವ ಊರ್ಮಿಳಾ
ಅದಕ್ಕೆ ಕಮಲಿ..ಇವತ್ತು ನಮ್ಮ ಮದುವೆಯಾದ ಮೊದಲ ವರುಷ ಅಪ್ಪ ಸಿಕ್ಕಿದ್ದು ಒಳ್ಳೇದಾಯ್ತು ಮನೆಗೆ ಕರೆದುಕೊಂಡು ಹೋಗುವ ಎಂದಾಗ ಅನಿಕಾಗೆ ಶಾಕ್ ಆಗುತ್ತದೆ. ಆಗ ಊರ್ಮಿಳಾ ಕೇಳುತ್ತಾಳೆ ಚಂದ್ರಕಾಂತ್ ಬಳಿ ಬಂದು ಯಾಕ್ರೀ ಏನಾಯ್ತು. ಇಷ್ಟು ದೂರ ಅದು ಹೇಗೆ ನೀವು ಒಬ್ಬರೆ ಬಂದ್ರಿ ಎಂದು ಕೇಳುತ್ತಾಳೆ ಬೇಸರದಿಂದ.

ಅಪ್ಪ ಸಿಕ್ಕಿದ ಖುಷಿಯಲ್ಲಿ ಕಮಲಿ
ಅದಕ್ಕೆ ಋಷಿ, ಅಂಕಲ್ ತುಂಬಾ ಶಾಕ್ ಅಲ್ಲಿ ಇದ್ದಾರೆ ಎಂದು ಕಾಣಿಸುತ್ತೆ ಅವರನ್ನು ಏನು ಕೇಳೋದು ಬೇಡಾ ಎಂದು ಹೇಳಿದಾಗ ಕಾಮಲಿ ಹೇಳುತ್ತಾಳೆ ಹೇಗೋ ಅಪ್ಪ ಸಿಕ್ಕಿದ್ರಲ್ಲ ನನಗೆ ಅದೇ ಖುಷಿ. ಅದು ಬೇರೆ ನನ್ನ ಆನಿವರ್ಸರಿ ದಿನ ಸಿಕ್ಕಿದ್ದಾರೆ. ಇದಕ್ಕಿಂತ ದೊಡ್ಡ ಗಿಫ್ಟ್ ನನಗೆ ಇನ್ನೇನು ಬೇಡ ಸರ್. ನನಗೆ ಅಷ್ಟೇ ಸಾಕು ಇವತ್ತು ನಮ್ಮ ಜೊತೆ ಅವರು ಬರುತ್ತಾರೆ ಎಂದಾಗ ಊರ್ಮಿಳಾ ಶಾಕ್ ಅನ್ನು ತಡೆಯದೆ ಸ್ತಬ್ಧ ಆಗುತ್ತಾಳೆ.

ಆಸ್ಪತ್ರೆಗೆ ತೋರಿಸಿ ಎನ್ನುವ ಊರ್ಮಿಳಾ
ಕಮಲಿ ಹೇಳುತ್ತಾಳೆ, ಅಪ್ಪ ಇವತ್ತು ನಮ್ಮ ಮದುವೆಯಾದ ಮೊದಲ ವರುಷದ ಇವೆಂಟ್ ಇದೆ ಅದಕ್ಕೆ ನೀವು ಬಂದರೆ ಖುಷಿಯಾಗುತ್ತದೆ ಎಂದು ಹೇಳುತ್ತಾಳೆ. ಅಪ್ಪ ಬನ್ನಿ ಎಂದು ಕರೆಯುವಾಗ ಊರ್ಮಿಳಾ ಹೇಳುತ್ತಾಳೆ ಹೇ ಏನು ಮಾಡುತ್ತಿದ್ದಿಯಾ ಅವರಿಗೆ ಹುಷಾರಿಲ್ಲ ಅಂತ ಗೊತ್ತಲ್ವಾ ನಿನಗೆ. ಅವರು ಇಲ್ಲಿಗೆ ಬಂದ ಮೇಲೆ ಎಲ್ಲೆಲ್ಲಿ ಅಲೆದು ಏಷ್ಟು ವೀಕ್ ಆಗಿದ್ದಾರೆ ನೋಡು ಮೊದಲು ಅವರನ್ನು ಕರೆದುಕೊಂಡು ಹೋಗಿ ಆಸ್ಪತ್ರೆಯಲ್ಲಿ ಟ್ರೀಟ್ಮೆಂಟ್ ಕೊಡಬೇಕು ಎಂದಾಗ ಕಮಲಿ ಅದು ಚಿಕ್ಕಮ್ಮ ಅಂದಾಗ ಊರ್ಮಿಳಾ ಹೇಳುತ್ತಾಳೆ ನೀನೇನು ಹೇಳಬೇಡ ಡಾಕ್ಟರ್ ಕಾಯುತ್ತಿದ್ದಾರೆ. ಇವರು ಮಾತ್ರೆ ಬೇರೆ ತೆಗೆದುಕೊಂಡಿಲ್ಲ ಎಂದು ಹೇಳುತ್ತಾಳೆ.

ಚಂದ್ರುವನ್ನು ಎಳೆದೊಯ್ಯುವ ಊರ್ಮಿಳಾ
ಬಳಿಕ, ನೋಡು ಕಮಲಿ, ಚಂದು ನನ್ನ ಗಂಡ ಅವರ ಆರೋಗ್ಯ ನನಗೆ ಇಂಪಾರ್ಟೆಂಟ್. ನಾನು ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದೇನೆ. ಎಂದು ಹೇಳಿ ಕಮಲಿ ಕೈಯಿಂದ ಚಂದುವನ್ನು ಹೇಗಾದರೂ ಬಿಡಿಸಿಕೊಂಡು ಹೋಗುತ್ತಾಳೆ. ಆದರೆ ಕಮಲಿ 'ಚಿಕ್ಕಮ್ಮ ಅಪ್ಪನನ್ನು ಬಿಡಿ' ಎಂದು ಪರಿ ಪರಿಯಾಗಿ ಕೇಳಿದರು ಬಿಡದೆ ಇದೀಗ ಕರೆದುಕೊಂಡು ಹೋಗಿರುವುದನ್ನು ನೋಡಿದ ಕಮಲಿಗೆ ದುಃಖ ಉಮ್ಮಳಿಸಿ ಬರುತ್ತದೆ.


Click it and Unblock the Notifications











