ಕಮಲಿಗೆ ಇನ್ನೊಂದು ಸಂಕಷ್ಟ ಎದುರಾಗುತ್ತಾ?

By ಪೂರ್ವ

ಕಮಲಿ ಧಾರವಾಹಿ ಉತ್ತಮವಾಗಿ ಮೂಡಿ ಬರುತ್ತಿದೆ. ಇನ್ನೂ ಕಮಲಿ ಬಗ್ಗೆ ರಿಷಿ ಹೊಗಳಿ ಕಮಲಿನ ಅಟ್ಟಕ್ಕೆ ಏರಿಸಿದ್ದಾನೆ. 'ಒಂದು ಸಣ್ಣ ಪ್ಲಾನ್ ಮಾಡಿ ಅದನ್ನು ಉತ್ತಮವಾಗಿ ನಿರ್ವಹಣೆ ಮಾಡಿದ್ದೀರಿ ಅಲ್ವಾ ಕಮಲಿ ಅವರೆ ಎಂದು ರಿಶಿ ಹೇಳಿದಾಗ ಕಮಲಿ, 'ನಿಜ ಸರ್ ಸರಿಯಾದ ಸಮಯಕ್ಕೆ ಆ ಉಪಾಯ ಬಂತು. ಇಲ್ಲಾಂದ್ರೆ ನಾನು ಏನು ಮಾಡುತ್ತಿದ್ದೇನೋ ನನಗೆ ಗೊತ್ತಿಲ್ಲ' ಎಂದು ಹೇಳುತ್ತಾಳೆ.

ಅದಕ್ಕೆ ರಿಷಿ, 'ಅದೆಲ್ಲಾ ಬಿಡಿ ಒಟ್ಟಿನಲ್ಲಿ ನಾವು ಅಂದುಕೊಂಡಿದ್ದು ಆಯ್ತಲ್ಲ ಬಿಡಿ. ನೀವು ವಾಪಸ್ ಪಾರ್ಟಿಗೆ ಬಂದಿದ್ದೀರಿ ಅಂತ ಖುಷಿ ಆಯ್ತು ಎಂದು ಹೇಳುತ್ತಾನೆ. ಅದಕ್ಕೆ ಕಮಲಿ ಹೇಳುತ್ತಾಳೆ ಆದೆ ಸರ್ ನನಗೆ ಸಮಾಧಾನ. ಪಾಪ ಅಜ್ಜಿ ಇಂತಹ ಕಾರ್ಯಕ್ರಮದಲ್ಲಿ ನಾನು ಅಂಬಿ ಒಟ್ಟಿಗೆ ಇರಬೇಕು. ಒಟ್ಟಿಗೆ ಕಾಣಿಸಿಕೊಳ್ಳಬೇಕೆಂದು ತುಂಬಾ ಆಸೆ ಪಟ್ಟಿದ್ದರು. ಈಗಂತೂ ಅವರಿಗೆ ತುಂಬಾ ಖುಷಿ ಆಗಿರಬಹುದು. ಅಜ್ಜಿಗೆ ಖುಷಿ ಕೊಟ್ಟೆ ಅನ್ನೋ ಸಮಾಧಾನ ನನಗೆ ಇದೆ ಸರ್' ಎಂದು ಕಮಲಿ ಖುಷಿ ಪಡುತ್ತಾಳೆ.

ಅದಕ್ಕೆ ಋಷಿ ಹೇಳುತ್ತಾನೆ, 'ಅಲ್ಲಾ ಕಮಲಿಯವರೆ ನನಗಂತೂ ನಂಬಲಿಕ್ಕೆ ಆಗಲಿಲ್ಲ. ನಿಮ್ಮ ಪುಟ್ಟ ತಲೆಯಲ್ಲಿ ಇಷ್ಟೆಲ್ಲ ಬುದ್ಧಿ ಇದೆಯಾ ನನಗೆ ಡೌಟ್ ಬರುತ್ತಿದೆ' ಎಂದಾಗ ಕಮಲಿ ಹುಸಿ ಕೋಪ ಮಾಡಿಕೊಳ್ಳುತ್ತಾಳೆ.

ಕಮಲಿಯನ್ನು ಹೊಗಳಿದ ರಿಷಿ

ಕಮಲಿಯನ್ನು ಹೊಗಳಿದ ರಿಷಿ

ಬಳಿಕ, 'ಯಾಕೆ ರಿಷಿ ಸರ್' ಎಂದಾಗ ರಿಷಿ ಹೇಳುತ್ತಾನೆ 'ಎರಡು ಕಡೆಯಿಂದಲೂ ಮ್ಯಾನೇಜ್ ಮಾಡಿದ್ರಿ. ಪೊಲೀಸರ ಬಳಿ ಸಿಕ್ಕಿ ಹಾಕಿಕೊಂಡರು ಅವರಿಂದ ತಪ್ಪಿಸಿಕೊಂಡು ಇಲ್ಲಿಗೆ ಬಂದ್ರಿ. ಗ್ರೇಟ್ ಕಮಲಿಯವರೆ ಎಂದಾಗ ಕಮಲಿ ಯಾಕ್ ಸಾರ್ ಇದಕ್ಕೆ ನಾನೇ ಕಾರಣ ಅನ್ನೋ ಥರ ಹೋಗಳುತ್ತಿದ್ದೀರಾ. ನೀವು ನನ್ನ ಜೊತೆಗೆ ಇರಲಿಲ್ಲ ಎಂದರೆ ನನಗೆ ಇದೆಲ್ಲಾ ಸಾಧ್ಯನೇ ಆಗುತ್ತಿರಲಿಲ್ಲ ಸರ್ ಅದು ಅಲ್ಲದೆ ನೀವು ಇಲ್ಲಿ ಇದ್ದು ಎಲ್ಲಾ ಮ್ಯಾನೇಜ್ ಮಾಡಲಿಲ್ವಾ' ಎನ್ನುತ್ತಾನೆ.

ಕೋಪಗೊಂಡ ಕಮಲಿ

ಕೋಪಗೊಂಡ ಕಮಲಿ

'ಅದೇನು ದೊಡ್ಡ ವಿಚಾರ ಅಲ್ಲ ಬಿಡು' ಎಂದು ರಿಷಿ ಹೇಳಿದಾಗ, ಕಮಲಿ ಹೇಳುತ್ತಾಳೆ 'ಹೌದು ಸಾರ್ ಆ ಡ್ಯುಪ್ಲಿಕೆಟ್ ಕಮಲಿ ಜೊತೆ ಖುಷಿಯಾಗಿ ಡಾನ್ಸ್ ಮಾಡಿ ಕಾಲ ಕಳೆದಿದ್ದು ದೊಡ್ಡ ವಿಷಯ ಅಲ್ಲ' ಎಂದಾಗ ಋಷಿ ಹೇಳುತ್ತಾನೆ 'ಓ ಯಾಕೊ ಕೋಪ ಬಂದಿರೋ ಹಾಗೆ ಕಾಣಿಸುತ್ತಿದೆ. ಇಷ್ಟೊಂದು ಕೋಪನಾ.. ಅಲ್ಲಾ ಆ ಸ್ಟೇಜ್ ಮೇಲೆ ನೀವೇ ಇರೋದು ಅಂತ ಎಲ್ಲರಿಗೂ ಪ್ರೂ ಮಾಡಬೇಕು ಅಲ್ವಾ. ಹಾಗೆ ಪ್ರೂ ಮಾಡಬೇಕಾದರೆ ನಿನ್ನ ಜೊತೆ ನಾನು ಹೆಗಿರುತ್ತೆನೋ ಆ ಹುಡುಗಿ ಜೊತೆ ಹಾಗೆ ಇರಬೇಕು ಅಲ್ವಾ ಅದಕ್ಕೋಸ್ಕರ ಹಾಗೆ ಇರಬೇಕಾಯಿತು. ಕೋಪ ಬಂತಾ' ಎನ್ನುತ್ತಾರೆ.

ಕಮಲಿಗೆ ಹೊಸ ಸಂಕಷ್ಟಗಳು

ಕಮಲಿಗೆ ಹೊಸ ಸಂಕಷ್ಟಗಳು

'ಕೋಪ ಇತ್ತು ಆದರೆ ಆಮೇಲೆ ಹೊರಟು ಹೋಯಿತು ಸರ್' ಎನ್ನುತ್ತಾಳೆ ಕಮಲಿ. ಅದಕ್ಕೆ ರಿಷಿ ಹೇಳುತ್ತಾನೆ 'ಆದರೂ ನೀವು ತುಂಬಾನೇ ಪೊಸೆಸಿವ್ ಅಲ್ವಾ' ಎಂದಾಗ ಕಮಲಿ 'ಹುಂ ನಿಮ್ಮ ವಿಷಯದಲ್ಲಿ ನಾನು ಪೊಸೆಸಿವ್ ಸರ್' ಎಂದಾಗ ರಿಷಿ ಕಮಲಿಯನ್ನು ಬಾಚಿ ತಬ್ಬಿಕೊಳ್ಳುತ್ತಾನೆ. ಆದರೆ ಕಮಲಿಗೆ ಹೊಸ ಸಮಸ್ಯೆಗಳು, ಸಂಕಷ್ಟಗಳು ಎದುರಾಗುವ ಲಕ್ಷಣಗಳು ಕಾಣುತ್ತಿವೆ.

More from Filmibeat

English summary
Kannada serial Kamali Written updated on 23th July. Know more about the episode.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X