ಕಮಲಿ ವಿರುದ್ದ ಕೂಗಾಡಿದ ತಾರಾ: ಕಮಲಿ ಹೇಳಿದ್ದೇನು?

By ಪೂರ್ವ

ಕಮಲಿ ಧಾರವಾಹಿ ಚೆನ್ನಾಗಿ ಮೂಡಿ ಬರುತ್ತಿದೆ. ಇದೀಗ ಕಮಲಿ ಮನಸಿಗೆ ಮಲ ತಾಯಿ ನೋವನ್ನು ಉಂಟು ಮಾಡಿದ್ದಾಳೆ. ಕಮಲಿ ಮನೆಗೆ ಬಂದಿರುವುದನ್ನು ಕಂಡ ಊರ್ಮಿಳಾ ಹೇಳುತ್ತಾಳೆ ದಯವಿಟ್ಟು ಇವರು ಸರಿ ಹೋಗೋ ವರೆಗೂ ನೀನು ಇಲ್ಲಿಗೆ ಬರಬೇಡ, ನೀನು ಈ ಮನೆ ಕಡೆ ತಲೆ ಹಾಕಬೇಡ ಎಂದು ಹೇಳುತ್ತಾಳೆ. ಇದನ್ನು ಕೇಳಿದ ಕಮಲಿಗೆ ಶಾಕ್ ಆಗುತ್ತದೆ.

ಕಮಲಿ ಹೇಳುತ್ತಾಳೆ ಆದರೆ ಅಮ್ಮ ಅವರು ನನ್ನ ಅಪ್ಪಯ್ಯ ಎಂದಾಗ ಊರ್ಮಿಳಾ ಹೇಳುತ್ತಾಳೆ ಅವರು ನಿನ್ನ ಅಪ್ಪಯ್ಯ ಆಗಿರಬಹುದು ಆದರೆ ನನಗೆ ಗಂಡ, ನನ್ನ ಗಂಡನ ನಾನು ನೋಡಿಕೊಳ್ಳುತ್ತೇನೆ ಇದರಲ್ಲಿ, ಬೇರೆಯವರು ತಲೆ ಹಾಕೋದು ನನಗೆ ಇಷ್ಟ ಆಗಲ್ಲ. ಗೆಟ್ ಔಟ್ ಎಂದಾಗ ಕಮಲಿ ಹೇಳುತ್ತಾಳೆ ಚಿಕ್ಕಮ್ಮ ಎಂದಾಗ ಕೋಪ ಗೊಂಡ ಊರ್ಮಿಳಾ ಹೇಳುತ್ತಾಳೆ ಇಲ್ಲಿಂದ ಹೊರ ಹೋಗಿ ಹೇಳಿದ್ದು ಅರ್ಥ ಆಗಲ್ವಾ ಸುಮ್ಮನೆ ನಿಂತಿದ್ದೀಯಾ ಹೋಗು ಮನೆಯಿಂದ ಆಚೆ ಎಂದು ಜೋರಾಗಿ ಹೇಳುತ್ತಾಳೆ.

ಹೊರಡುವ ಕಮಲಿ

ಹೊರಡುವ ಕಮಲಿ

ಇದನ್ನು ಕೇಳಿದ ಕಮಲಿ ಹೊರಡಲು ಅನುವಾಗುತ್ತಾಳೆ. ಆಗ ಕಮಲಿ ಎಂದು ಜೋರಾಗಿ ಕರೆಯುತ್ತಾನೆ ಚಂದ್ರಕಾಂತ್. ಕಮಲಿಯ ಕೈ ಹಿಡಿದುಕೊಳ್ಳುತ್ತಾನೆ. ಬಳಿಕ ಅಲ್ಲಿಂದ ಅಪ್ಪನ ಕೈ ಬಿಡಿಸಿಕೊಂಡು ಕಮಲಿ ಹೋಗುತ್ತಾಳೆ. ಕಮಲಿ ಮನೆಯಲ್ಲಿ ಅತ್ತೆ ಅತ್ತಿಂದ ಇತ್ತ ಹೋಗುತ್ತಾ ಇರುತ್ತಾರೆ.

ಕ್ಷಮೆ ಕೇಳುವ ಕಮಲಿ

ಕ್ಷಮೆ ಕೇಳುವ ಕಮಲಿ

ಆಗ ಆಕೆಯ ಗಂಡ ಬಂದು ತಾರಾ ಮಲಗು ಅಂದಾಗ ತಾರಾ ಹೇಳುತ್ತಾಳೆ ಇಲ್ಲ ಕಮಲಿ ಬರಬೇಕೆಂದು ಕಾಯುತ್ತಾ ಇದ್ದೇನೆ. ಎಂದಾಗ ಕಮಲಿ ಬರುತ್ತಾಳೆ ಆಗ ತಾರಾ ಹೇಳುತ್ತಾಳೆ ನಿಂತುಕೋ ಕಮಲಿ ಎಲ್ಲಿ ಹೋಗಿದ್ದೆ ಇಷ್ಟು ಹೊತ್ತು? ಎಂದಾಗ ಕಮಲಿ ಹೇಳುತ್ತಾಳೆ ಅತ್ತೆಮ್ಮಾ ದಯವಿಟ್ಟು ನನ್ನ ಕ್ಷಮಿಸಿ ಬಿಡಿ ಅಪ್ಪಯ್ಯನ ನೋಡಬೇಕು ಎಂಬ ಆತುರದಲ್ಲಿ ನಿಮಗೆ ಯಾರಿಗೂ ಎನು ಹೇಳದೆ ಹೊರಟು ಹೋದೆ. ಇನ್ಯಾವತ್ತೂ ಹೀಗೆ ಮಾಡುವುದಿಲ್ಲ ಅತ್ತೆಮ್ಮ ದಯವಿಟ್ಟು ನನ್ನ ಕ್ಷಮಿಸಿ ಬಿಡಿ ಎನ್ನುತ್ತಾಳೆ.

'ಪ್ರತಿ ಬಾರಿ ಅದೇ ತಪ್ಪು'

'ಪ್ರತಿ ಬಾರಿ ಅದೇ ತಪ್ಪು'

''ಒಂದು ತಪ್ಪು ಮಾಡಿ ಕ್ಷಮೆ ಕೇಳಿದರೆ ಅದಕ್ಕೆ ಬೆಲೆ ಇರುತ್ತೆ ಆದರೆ ಅದೇ ತಪ್ಪನ್ನು ಮತ್ತೆ ಮತ್ತೆ ಮಾಡಿದರೆ ಅದು ನಾಟಕ ಅನ್ನಿಸಿಬಿಡುತ್ತದೆ. ನೀವೀಗ ಬೆಳೆದಿದ್ದಿರಾ ಅದು ತಪ್ಪಲ್ಲ ಎಷ್ಟರ ಮಟ್ಟಿಗೆ ಬೆಳೆದಿದ್ದಿರಾ ಅಂದರೆ ಮನೆ ಹಿರಿಯರಿಗೆ ರೆಸ್ಪೆಕ್ಟ್ ಕೊಡ ಬೇಕು ಅನ್ನಿಸುವುದಿಲ್ಲ ಅಷ್ಟರ ಮಟ್ಟಿಗೆ ಬೆಳೆದಿದ್ದೀರಿ ಅಲ್ವಾ ಅದು ತಪ್ಪು. ನನ್ನ ಫ್ರೆಂಡ್ಸ್ ಎಲ್ಲ ನಿಮ್ಮ ಸೊಸೆ ಎಲ್ಲಿ ಎಂದು ಕೇಳುತ್ತಿದ್ದರು. ಅವರೆಲ್ಲ ಹೋಗೋ ತನಕ ಇರಬೇಕು ಎಂಬ ಕಾಮನ್ ಸೆನ್ಸ್ ಕೂಡ ಇಲ್ಲ ನಿನಗೆ. ಅವರೆಲ್ಲ ನಿನಗೆ ಗೊತ್ತಿಲ್ಲದೆ ನಿನ್ನ ಸೊಸೆ ಎಲ್ಲಿ ಹೋದರೂ ನಿನಗೆ ಹೇಳದೆ ಹೋಗುತ್ತಾಳ ಅಂತ ಕೇಳಿದರು'' ಎನ್ನುತ್ತಾಳೆ ಅತ್ತೆ.

ಮುಂದೇನಾಗುತ್ತದೆ ನೋಡಬೇಕಿದೆ

ಮುಂದೇನಾಗುತ್ತದೆ ನೋಡಬೇಕಿದೆ

''ಅವರ ಮುಂದೆ ನನಗೆ ಏಷ್ಟು ಅವಮಾನ ಆಯ್ತು ಗೊತ್ತಾ ಎಂದಾಗ ಕಮಲಿ ಹೇಳುತ್ತಾಳೆ ಆತ್ತೆಮ್ಮಾ ನಿಮಗೆ ಗೌರವ ಕೊಡಬಾರದು ಎಂದು ನಾನು ಹಾಗೆ ಹೋಗಿಲ್ಲ. ನನಗೆ ಅಂತಹ ಭಾವನೆ ಇನ್ನೂ ಬಂದಿಲ್ಲ. ಎಂದಾಗ ತಾರಾ ಕೋಪದಿಂದ ಇದೆಲ್ಲಾ ನಿನಗೆ ಹೇಳಿ ಎನು ಪ್ರಯೋಜನ ನೋಡು ಕಮಲಿ ಇನ್ನೊಂದು ಸಲ ಇದು ರಿಪೀಟ್ ಆಗಬಾರದು . ರಿಪೀಟ್ ಆದರೆ ಚೆನ್ನಾಗಿರಲ್ಲ ಕಮಲಿ. ಎಂದು ಹೇಳಿ ಅಲ್ಲಿಂದ ಹೋಗುತ್ತಾಳೆ. ಮುಂದೇನಾಗುತ್ತದೆ ಕಾದು ನೋಡಬೇಕಿದೆ.

More from Filmibeat

English summary
Kannada serial kamali written updated on 26th July. Here is more detail about the episode.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X