ಕೊನೆಗೂ ಕಮಲಿಗೆ ತಿಳಿಯಿತು ನಿಜ ವಿಚಾರ: ಮುಂದೇನು ಮಾಡುತ್ತಾಳೆ?
ಕಮಲಿ ಧಾರವಾಹಿ ಚೆನ್ನಾಗಿ ಮೂಡಿ ಬರುತ್ತಿದೆ. ತಂದೆಗೆ ಮಗಳ ಪರದಾಟ ಅರ್ಥವಾದಂತಿದೆ. ಕಮಲಿ ತಂದೆ ಹೇಳುತ್ತಾರೆ, ಕ್ಷಮಿಸಮ್ಮ ನಿನ್ನೆ ನಿನಗೆ ನಾನು ಏನೇನೋ ಹೇಳಿಬಿಟ್ಟೆ ಐಯಾಮ್ ವೆರಿ ಸಾರಿ ಎಂದಾಗ ಕಮಲಿ, ''ಅಯ್ಯೋ ಅಪ್ಪಯ್ಯ ನೀವು ಯಾಕೆ ಕ್ಷಮೆ ಕೇಳುತ್ತಿದ್ದಿರಾ. ನೀವು ಸರಿ ಹೋಗಿರುವ ವಿಚಾರ ನಮ್ಮ ಬಳಿ ಯಾಕೆ ಹೇಳಿಲ್ಲ. ನಾನು ಏಷ್ಟು ಚಿಂತೆ ಮಾಡುತ್ತಿದ್ದೆ ಗೊತ್ತಾ ಅಪ್ಪ. ಅಲ್ಲಾ ಅಪ್ಪಯ್ಯ ನೀವು ಇಷ್ಟು ಸರಿಯಾಗಿ ಮಾತನಾಡುತ್ತಿದ್ದಿರ ಅಂದರೆ ನೀವು ಹುಷಾರು ಆಗಿದ್ದೀರಿ ಎಂದರ್ಥ ಆದ್ರೂ ನೀವು ಯಾಕೆ ತೊದಲುತ್ತಾ ಮಾತನಾಡುತ್ತಿದ್ದಿರಿ ಎಂದು ಪ್ರಶ್ನೆ ಮಾಡುತ್ತಾಳೆ.
''ಯಾಕಪ್ಪ ಸರಿ ಹೋಗಿರದ ಥರ ಇರುತ್ತಿದ್ದಿರಿ. ಅಪ್ಪ ದಯವಿಟ್ಟು ಮಾತನಾಡಿ ಹೀಗೆ ಮಾತನಾಡದೆ ಸುಮ್ಮನಿದ್ದರೆ ಹೇಗೆ. ಎನು ವಿಚಾರ ಇದೆ ಅಂತ ನನಗೆ ಚೆನ್ನಾಗಿ ಗೊತ್ತಿದೆ. ಅದೇನು ಅಂಥ ಹೇಳಿ ಅಪ್ಪ ಎಂದು ಕಮಲಿ ಕೇಳುತ್ತಾಳೆ.
ಬಳಿಕ, ''ನನಗೆ ಗೊತ್ತು ಅಪ್ಪ ನನ್ನ ಬಳಿ ಏನೋ ಹೇಳಬೇಕೋ ಅಂತ ಇದ್ದೀರಿ ಆದರೆ ಏನು ಅಂತ ದಯವಿಟ್ಟು ಹೇಳಿ ಎನ್ನುತ್ತಾಳೆ ಅದಕ್ಕೆ ಕಮಲಿ ತಂದೆ ಹೇಳುತ್ತಾರೆ ಕಮಲಿ ನೀನು ಹೇಗೆ ವೇಷ ಹಾಕಿಕೊಂಡಿದ್ದಿಯೋ ಹಾಗೆಯೇ ನಾನು ವೇಷ ಹಾಕಿಕೊಂಡಿದ್ದೇನೆ. ಅದಕ್ಕೆ ಕಮಲಿ ಹೇಳುತ್ತಾಳೆ ಅಪ್ಪಯ್ಯ ಏನು ಹೇಳುತ್ತಿದ್ದೀರಿ ಎಂದಾಗ ಕಮಲಿ ತಂದೆ ಹೇಳುತ್ತಾರೆ ಹೌದಮ್ಮ ನಾನು ಕೆಲವರ ಭಯಕ್ಕೆ ಇನ್ನೂ ಸರಿ ಹೋಗದೆ ಇರೋ ಥರ ಇನ್ನೂ ಮೆಂಟಲಿ ಇರೋ ಥರ ನಾಟಕ ಮಾಡುತ್ತಿದ್ದೇನೆ ಎನ್ನುತ್ತಾರೆ.

ಅದಕ್ಕೆ ಕಮಲಿ ಕೇಳುತ್ತಾಳೆ ಅಪ್ಪಯ್ಯ ಯಾರ ಭಯ ಅಪ್ಪಯ್ಯ. ಆ ಅನಿಕಾ ಏನಾದ್ರೂ.... ಎಂದೂ ಸುಮ್ಮನಾಗುತ್ತಾಳೆ. ಬಳಿಕ ಹೇಳುತ್ತಾಳೆ ನನ್ನ ಕ್ಷಮಿಸಿ ಅಪ್ಪ ಅವಳು ನಿಮಗೆ ಮಗಳೆ. ಆದರೆ ಅವಳು ಸರಿ ಇಲ್ಲ. ಅವಳು, ನನ್ನನ್ನೇ ಷೂಟ್ ಮಾಡಿ ಸಾಯಿಸೋಕೆ ನೋಡಿದ್ದಾಳೆ ಎನುತ್ತಾಳೆ ಅದಕ್ಕೆ ಕಮಲಿ ತಂದೆ ಹೇಳುತ್ತಾರೆ ಹೌದಮ್ಮ ಆ ವಿಚಾರ ಗೊತ್ತಗಿದ್ದಕ್ಕೆ ನಾನು ನಿನ್ನ ಫಾಲೋ ಮಾಡಿಕೊಂಡು ಬಂದಿದ್ದು ಎನ್ನುತ್ತಾರೆ.
ನೋಡಿದ್ರಾ ಅಪ್ಪಯ್ಯ ಒಡಹುಟ್ಟಿದವಳಾಗಿ ಏನೆಲ್ಲ ಮಾಡುತ್ತಾಳೆ ಅಂತ ಎನ್ನುತ್ತಾಳೆ ಅದಕ್ಕೆ ಕಮಲಿ ತಂದೆ ಹೇಳುತ್ತಾರೆ ನೀನಾದರೆ ಅವಳ ದೊಡ್ಡಮ್ಮನ ಮಗಳು ನಾನು ಸ್ವಂತ ತಂದೆ ಸ್ವಂತ ಅಪ್ಪಂಗೆ ಏನೆಲ್ಲಾ ಮಾಡಿದ್ದಾಳೆ ಗೊತ್ತಾ ಇಷ್ಟು ದಿನ ಮೆಂಟಲ್ ಆಗಿದ್ದು ಯಾರಿಂದ ಗೊತ್ತಾ ಅವಳಿಂದಲೇ ಎನ್ನುತ್ತಾರೆ. ಅದಕ್ಕೆ ಕಮಲಿ, ಅಪ್ಪಯ್ಯ ಏನು ಹೇಳುತ್ತಿದ್ದೀರ ನೀವು ಹಿಂಗೆ ಆಗೋದಕ್ಕೆ ಕಾರಣ ಆ ಅನಿಕಾನ? ಎಂದಾಗ ಕಮಲಿ ತಂದೆ, ''ಹೌದಮ್ಮ ಇಷ್ಟು ದಿನ ಹಾಗಿರಲು ಕಾರಣ ಅವಳೇ. ಮಾತ್ರೆ ಕೊಟ್ಟು ಕೊಟ್ಟು ಮೆಂಟಲ್ ಆಗೋ ಥರ ಮಾಡಿದ್ದಳು ಎಂದಾಗ ಕಮಲಿಗೆ ಶಾಕ್ ಆಗುತ್ತದೆ.


Click it and Unblock the Notifications











