ಅನಿಕಾ ದುರಹಂಕಾರ ಮಟ್ಟ ಹಾಕುತ್ತಾಳಾ ಕಮಲಿ?

By ಪೂರ್ವ

ಕಮಲಿ ಧಾರವಾಹಿ ಚೆನ್ನಾಗಿ ಮೂಡಿ ಬರುತ್ತಿದೆ. ಕಮಲಿ ತಂದೆ ಇದೀಗ ಹುಷಾರಾಗಿದ್ದಾರೆ. ಇದೀಗ ತಾರಾ ಬಳಿ ಕಮಲಿ ತಂದೆ ಧನ್ಯವಾದ ಅರ್ಪಿಸುತ್ತಿದ್ದಾರೆ. ತಾರಾ ಅವರೆ, ನನ್ನ ಮಗಳನ್ನು ನಿಮ್ಮ ಮಗಳ ಹಾಗೆ ನೋಡಿಕೊಳ್ಳುತ್ತಿದ್ದಿರಾ ಥಾಂಕ್ಸ್ ಎಂದು ಹೇಳುತ್ತಾರೆ.

ಅದಕ್ಕೆ ತಾರಾ ಹೇಳುತ್ತಾರೆ ಮಗಳ ಥರ ನೋಡೋದು ಅಲ್ಲ ಚಂದ್ರು ಅವರೇ ಅವಳು ನನಗೆ ಮಗಳಿಗಿಂತ ಹೆಚ್ಚು. ಯಾಕೆ ಎಂದರೆ ಕಮಲಿ ನನ್ನ ಮಗಳ ಜೀವನ ಸರಿ ಮಾಡಿದ್ದಾಳೆ ಮನೆ ಜವಬ್ದಾರಿ ತೆಗೆದುಕೊಂಡಿದ್ದಾಳೆ. ನನಗೆ ತಕ್ಕ ಸೊಸೆ ಎಂದು ಹೇಳಿಕೊಂಡಿದ್ದಾಳೆ. ಇದಕ್ಕಿಂತ ಹೆಚ್ಚು ಇನ್ನೇನು ಬೇಕು ಅಕ್ಟುಲಿ ಇಂಥ ಮಗಳನ್ನು ನೀವು ನನ್ನ ಮನೆಗೆ ಸೊಸೆ ಆಗಿ ಕಳಿಸಿದ್ದಿರಿ ಅಲ್ವಾ ನಾವು ನಿಮಗೆ ಧನ್ಯವಾದ ಹೇಳಬೇಕು ಎನ್ನುತ್ತಾರೆ.

ಅದಕ್ಕೆ ಚಂದ್ರು ಹೇಳುತ್ತಾರೆ ಇಷ್ಟು ದಿನ ತಂದೆಯಾಗಿ ಕಮಲಿಗೆ ನ್ಯಾಯ ಕೊಡಕ್ಕೆ ಆಗಲಿಲ್ಲ. ಚೆನ್ನಾಗಿ ನೋಡಿಕೊಳ್ಳಲು ಆಗಲಿಲ್ಲ ಅನ್ನೋದು ನನ್ನ ಮನಸಲ್ಲಿ ಇತ್ತು. ಆದರೆ ಇವತ್ತು ನಿಮ್ಮನ್ನು ನೋಡಿದ ಮೇಲೆ ನನಗೆ ತುಂಬಾ ಖುಷಿ ಆಗುತ್ತಿದೆ. ನನ್ನ ಮಗಳನ್ನು ನೀವು ಇಷ್ಟು ಚೆನ್ನಾಗಿ ನೋಡಿಕೊಳ್ಳಿತ್ತಿದ್ದಿರಾ ಅವಳಿಗೆ ಪ್ರೋತ್ಸಾಹ ಕೊಡುತ್ತಿದ್ದೀರ ಅವಳ ಮೇಲೆ ನಂಬಿಕೆ ಇಟ್ಟುಕೊಂಡಿದ್ದಿರಾ. ಇದೀಗ ಕಮಲಿ ಪರವಾಗಿ ಮಾತನಾಡಿದಿರಿ ಅಲ್ವಾ. ಇನ್ನೂ ಅವಳು ಇತ್ತ ಸುಳಿಯುವುದಿಲ್ಲ ಎನ್ನುತ್ತಾರೆ.

ಗ್ಯಾರೆಂಟಿ ನೀಡುವ ತಾರಾ ಗಂಡ

ಗ್ಯಾರೆಂಟಿ ನೀಡುವ ತಾರಾ ಗಂಡ

ತಾರಾ ಗಂಡ ಹೇಳುತ್ತಾರೆ, ''ಚಂದ್ರು, ಕಮಲಿ ಬಗ್ಗೆ ನೀನು ಎನು ಯೋಚನೆ ಮಾಡಬೇಡ ಅವಳು ನಮ್ಮ ಮನೆಯಲ್ಲಿ ಸೇಫ್ ಆಗಿ ಇರುತ್ತಾಳೆ, ಸುಖವಾಗಿ ಇರುತ್ತಾರೆ ನಾನೇ ಗ್ಯಾರಂಟಿ ಎನ್ನುತ್ತಾನೆ. ಬಳಿಕ ತಾರಾ ಬಳಿ, 'ತಾರಾ, ಚಂದ್ರು ಹೇಳಿದ ಹಾಗೆಯೇ ಇವತ್ತು ಊರ್ಮಿಳಾ ಮುಂದೆ ನಮ್ಮ ಕಮಲೀನ ಸಪೋರ್ಟ್ ಮಾಡಿಕೊಂಡು ಮಾತನಾಡಿದೆ ಅಲ್ವಾ ನಾನು ಊಹಿಸಿರಲಿಲ್ಲ. ತುಂಬಾ ಖುಷಿಯಾಯಿತು ಎಂದು ನಗುತ್ತಾನೆ.

ಪೊಲೀಸರಿಗೆ ದೂರು ನೀಡುವ ಬಗ್ಗೆ ಮಾತು

ಪೊಲೀಸರಿಗೆ ದೂರು ನೀಡುವ ಬಗ್ಗೆ ಮಾತು

ಅದಕ್ಕೆ ತಾರಾ ಹೇಳುತ್ತಾಳೆ ಇದರಲ್ಲಿ ಸಪೋರ್ಟ್ ಮಾಡಿಕೊಂಡು ಮಾತನಾಡೋದು ಏನಿದೆ ರಮೇಶ್, ಕಮಲಿ ಎಂತ ಸ್ಥಿತೀಲಿ ಕೂಡ ಆ ಮಟ್ಟಕ್ಕೆ ಇಳಿಯಲ್ಲ. ಅದು ಇರಲಿ ರಮೇಶ್, ಇಷ್ಟೆಲ್ಲ ಆದರೂ ನಾವು ಯಾಕೆ ಸುಮ್ಮನೆ ಇದ್ದೀವಿ. ನಾನು ಪೊಲೀಸ್ ಗೆ ಕಂಪ್ಲೇಂಟ್ ಕೊಡ್ತೀನಿ. ಮುಂದೆ ಈ ರೀತಿ ಆದರೆ ಸರಿ ಹೋಗಲ್ಲ. ಎನ್ನುತ್ತಾಳೆ.

ಅನಿಕಾಳ ಬಗ್ಗೆ ಚರ್ಚೆ

ಅನಿಕಾಳ ಬಗ್ಗೆ ಚರ್ಚೆ

ಆಗ ರಮೇಶ್ ಹೇಳುತ್ತಾನೆ, 'ಹೌದು ಚಂದ್ರು ಯಾಕೋ ಬಾರಿ ವಿಚಿತ್ರ ಅನ್ನಿಸುತ್ತಿದೆ. ಜನ್ಮ ಕೊಟ್ಟ ತಂದೆಗೆ ಹೀಗೆ ಮಾಡೋದು ಅಂದ್ರೆ ಎನು ಅರ್ಥ ಇದನ್ನು ಹೀಗೆ ಬಿಟ್ಟರೆ ಮುಂದೊಂದು ದಿನ ಆನಿಕಾ, ನಮ್ಮ ಫ್ಯಾಮಿಲಿ ಗೆ ತುಂಬಾ ಡೇಂಜರ್ ಅನ್ನಿಸುತ್ತದೆ. ಈಗಾಗಲೆ ನಿನ್ನ ಜೀವ ಡೇಂಜರ್ ನಲ್ಲಿದೆ ಯಾವಾಗ ಏನಾಗುತ್ತೆ ಗೊತ್ತಿಲ್ಲ. ಹೀಗೆ ಸುಮ್ಮನಿದ್ದರೆ ಕಷ್ಟ ಆಗುತ್ತದೆ. ಏನಾದರು ಮಾಡು ಎನ್ನುತ್ತಾನೆ ಆಗ ಚಂದ್ರು ಹೇಳುತ್ತಾನೆ ನನಗೂ ಇದರ ವಿರುದ್ಧ ಆಕ್ಷನ್ ತೆಗೆದುಕೊಳ್ಳಬೇಕು ಎಂದು ಅನ್ನಿಸುತ್ತದೆ. ಆದರೆ ನನಗಿಂತ ಜಾಸ್ತಿ ಅನ್ಯಾಯ ಆಗಿರೋದು ಕಮಲಿಗೆ ಎನ್ನುತ್ತಾರೆ. ಮುಂದೇನು ಮಾಡುತ್ತಾರೆ ಕಮಲಿ ಎಂಬುವುದನ್ನು ಕಾದು ನೋಡಬೇಕಿದೆ.

Recommended Video

ನವೆಂಬರ್ 1ಕ್ಕೆ ಕರುನಾಡಿ‌ನ ಪರಮಾತ್ಮನಿಗೆ ಕರ್ನಾಟಕ ರತ್ನ ಪ್ರಧಾನ | Puneeth Rajkumar | Basavaraj Bommai
ಕಲಿಯ ತಂದೆಯ ಜೀವ ಅಪಾಯದಲ್ಲಿ

ಕಲಿಯ ತಂದೆಯ ಜೀವ ಅಪಾಯದಲ್ಲಿ

ಕಮಲಿಯ ತಂದೆಯ ಜೀವ ಅಪಾಯದಲ್ಲಿದೆ. ಮಗಳೇ ಅಪ್ಪನನ್ನು ಕೊಲ್ಲಲು ಯತ್ನಿಸುತ್ತಿದ್ದಾಳೆ. ಆಕೆ ನೀಡಿದ ಮಾತ್ರಗಳಿಂದಲೇ ಕಮಲಿಯ ತಂದೆಗೆ ಮತಿಭ್ರಮಣೆ ಆಗಿತ್ತು. ಆದರೆ ಈಗ ಕಮಲಿಯ ತಂದೆ ಸರಿ ಹೋಗಿದ್ದಾರೆ. ಆದರೂ ಅನಿಕಾಳ ಭಯದಿಂದ ಹುಚ್ಚನ ರೀತಿಯಲ್ಲೇ ವರ್ತಿಸುತ್ತಿದ್ದ. ಆದರೆ ಈ ವಿಷಯವನ್ನು ಕಮಲಿಗೆ ತಿಳಿಸಿಬಿಟ್ಟಿದ್ದಾನೆ. ಕಮಲಿ ಸಹ ಅನಿಕಾಳ ವಿರುದ್ಧ ಸೇಡು ತೀರಿಸಿಕೊಂಡೇ ಸಿದ್ಧ ಎಂದು ಸಿದ್ಧವಾಗಿದ್ದಾಳೆ.

More from Filmibeat

English summary
Kannada serial Kamali written updated on 5th August. Know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X