Katheyondu Shuruvagide: ಕೃತಿಯನ್ನು ನೋಡಿದರೆ ಸಿಡಿದು ಬೀಳುವ ಯುವ.. ಜೀವನ ಪೂರ್ತಿ ಇರುತ್ತಾನಾ?

By ಪೂರ್ವ

'ಕಥೆಯೊಂದು ಶುರುವಾಗಿದೆ' ವೀಕ್ಷಕರನ್ನು ಸೆಳೆಯುತ್ತಿರುವ ಮತ್ತೊಂದು ಧಾರಾವಾಹಿ. ಪ್ರತಿಯೊಂದು ಮನೆಯಲ್ಲಿರುವ ಧಾರಾವಾಹಿಗಳ ಲಿಸ್ಟ್‌ನಲ್ಲಿ 'ಕಥೆಯೊಂದು ಶುರುವಾಗಿದೆ' ಕೂಡ ಇದೆ.

ಇದೀಗ ವರ್ಣಿಕ ಮಾಡಿದ ಕೆಲಸದಿಂದ ಆಗಿ ಕೃತಿ ಸಂಕಷ್ಟಕ್ಕೆ ಸಿಲುಕುವಂತೆ ಆಗುತ್ತದೆ. ವರ್ಣಿಕಾ, ಸಾಮ್ರಾಟ್‌ನನ್ನು ಹೇಗಾದರೂ ಮಾಡಿ ಮದುವೆ ಆಗಲೇ ಬೇಕು ಅಂದ್ಕೊಂಡು ಇರುತ್ತಾಳೆ. ಆದರೆ, ಸಾಮ್ರಾಟ್ ಬೇರೆ ಹುಡುಗಿಯನ್ನು ಮದುವೆ ಆಗಲು ತಯಾರಿ ನಡೆಸುತ್ತಿರೋದ್ರಿಂದ ವಾರ್ಣಿಕಾ ಸುಳ್ಳು ಹೇಳುತ್ತಿರುತ್ತಾಳೆ. ತಾನು ಗರ್ಭಿಣಿ ಎಂದು ಹೇಳಿ ಕೃತಿ ಜೊತೆ ಜೋರಾಗಿ ಅತ್ತಿರೋ ಕಾರಣ, ಕೃತಿ ಹಾಗೂ ಯುವ ಸೇರಿ ಸಾಮ್ರಾಟ್‌ ಜೊತೆ ವರ್ಣಿಕಾಳನ್ನು ಮದುವೆ ಮಾಡುತ್ತಾರೆ.

Kannada serial Katheyondu Shuruvagide written update on 13th May

ಮನೆಯವರ ಮುಂದೆ ವರ್ಣಿಕಾ ಬಣ್ಣ ಬಯಲು

ಆದರೆ, ವರ್ಣಿಕಾ ಹೇಳಿದ್ದು ಸುಳ್ಳು ಎಂದು ಸಾಮ್ರಾಟ್‌ಗೆ ತಿಳಿದೇ ಬಿಟ್ಟಿದೆ. ಆತ ಮನೆಯವರ ಎದುರು ಎಲ್ಲಾ ನಿಜವನ್ನು ಹೇಳುತ್ತಾನೆ. ವರ್ಣಿಕಾ ಸುಳ್ಳು ಹೇಳಿ ಮದುವೆ ಆಗಿದ್ದಾಳೆ ಅನ್ನೋ ವಿಷಯ ಗೊತ್ತಾದಾಗಾ ಮಾತ್ರ ಭಯದಿಂದ ನಡುಗುತ್ತಿದ್ದಳು. ಈ ಮುಂಚೆ ವರ್ಣಿಕಾ ಗರ್ಭಿಣಿ ಅಲ್ಲ ಅನ್ನೋ ವಿಚಾರ ಕೃತಿಗೆ ತಿಳಿದಿತ್ತು. ಆ ಸಲುವಾಗಿಯೇ ವರ್ಣಿಕಾಗೆ ವಾರ್ನಿಂಗ್ ಕೊಟ್ಟಿದ್ದಳು.

ಇದೀಗ ವರ್ಣಿಕಾ ಮನೆಯವರ ಮುಂದೆ ಸಿಕ್ಕಿ ಹಾಕಿಕೊಂಡಿದ್ದಾರೆ. ಆ ತಪ್ಪನ್ನು ಕೃತಿಯ ಮೇಲೆ ಹಾಕಿದ್ದಾಳೆ. ವರ್ಣಿಕಾ ಮಾತಿನಿಂದ ಕೃತಿಗೇ ಶಾಕ್ ಆಗಿದೆ. ಇದೆಲ್ಲ ಕೇಳಿಸಿಕೊಂಡ ಯುವನಿಗೆ ಮಾತ್ರ ಸಿಡಿಲು ಬಡಿದ ಹಾಗೆ ಆಗಿದೆ. ಆಗಷ್ಟೇ ಕೃತಿ, ಯುವನಿಗೆ ಹತ್ತಿರ ಆಗುತ್ತಿದ್ದಳು. ಆದರೆ, ವರ್ಣಿಕಾ ಮಾತಿಗೆ ಇಬ್ಬರು ಇನ್ನಷ್ಟು ದೂರ ಆಗುವಂತಾಗಿದೆ.

ಅಜ್ಜಿಗೆ ಹೃದಯಾಘಾತ

ಇದೀಗ ಕೃತಿಯನ್ನು ಮನೆಯಿಂದ ಹೊರ ದಬ್ಬಲು ಯುವ ನೋಡಿದಾಗ ಅಜ್ಜಿಗೆ ಹೃದಯಾಘಾತವಾಗಿದೆ. ಅಜ್ಜಿ ತನ್ನ ಮೊಮ್ಮಗಳು ಏನು ತಪ್ಪು ಮಾಡಿಲ್ಲ. ಆಕೆ ಬಹದ್ದೂರ್ ಮನೆತನದ ಮಾನ ಮರ್ಯಾದೆಯನ್ನು ಎಂದಿಗೂ ತೆಗೆಯುವುದಿಲ್ಲ. ಅಂತವಳ ಮೇಲೆ ಈ ರೀತಿ ಆರೋಪ ಹೊರಿಸುವುದು ಸರಿ ಅಲ್ಲ ಎಂದು ಹೇಳಿದರು ಯುವ ಅಜ್ಜಿಯ ಮಾತನ್ನು ಕೇಳುವುದೇ ಇಲ್ಲ.

Kannada serial Katheyondu Shuruvagide written update on 13th May

ಅಜ್ಜಿ ನೆಲಕ್ಕೆ ಕುಸಿದು ಬೀಳುವ ವೇಳೆ ಯುವ ಓಡಿ ಅಜ್ಜಿ ಬಳಿಗೆ ಬರುತ್ತಾನೆ. ಆ ಬಳಿಕ ಡಾಕ್ಟರ್, ಅಜ್ಜಿಗೆ ಹೃದಯಾಘಾತ ಆಗಿರುವ ಬಗ್ಗೆ ತಿಳಿಸುತ್ತಾರೆ. ಇದನ್ನು ಕೇಳಿಸಿಕೊಂಡ ಮನೆಯವರಿಗೆ ಆತಂಕ ಹೆಚ್ಚು ಆಗುತ್ತದೆ.

ವರ್ಣಿಕಾಗೆ ತಿಳಿ ಹೇಳಿದ ಕೃತಿ

ಕೃತಿ ಮಾತ್ರ ಅಜ್ಜಿಯ ಕಾಲು ಹಿಡಿದು.. "ನಿಮಗೆ ನಾನು ನೋವು ಕೊಟ್ಟೆ ಅಜ್ಜಿ. ಸರಿಯಾಗಿ ಸತ್ಯ ತಿಳಿದುಕೊಳ್ಳದೆ ನಾನು ಈ ರೀತಿ ಮಾಡಿದೆ. ನನ್ನದು ತಪ್ಪಾಯಿತು" ಎಂದು ಕಾಲು ಹಿಡಿದು ಅಳುತ್ತಾಳೆ. ಇನ್ನು ಕೃತಿ ದೇವರ ಕೋಣೆ ಬಳಿ ಕುಳಿತಿರಬೇಕಾದರೆ ಅಲ್ಲಿಗೆ ಬಂದ ವರ್ಣಿಕಾ, ಕೃತಿಯನ್ನು ಕರೆಯುತ್ತಾಳೆ. ಆದರೆ, ಕೃತಿ ಮಾತ್ರ ವಾರ್ಣಿಕಾ ಬಳಿ ಸರಿಯಾಗಿ ಮಾತನಾಡುವುದು ಇಲ್ಲ. ಆಕೆ ಮಾಡಿದ ಕೆಲಸಕ್ಕೆ ತಲೆ ತಗ್ಗಿಸುತ್ತಾಳೆ ವರ್ಣಿಕಾ .

ಆ ಬಳಿಕ ವರ್ಣಿಕಾ ಬಳಿ ಕೃತಿ ಹೇಳುತ್ತಾಳೆ. "ನೀನು ಏನೇ ಮಾಡಿದರೂ ಅದರಿಂದ ತನ್ನ ತಂದೆ ತಾಯಿ ಮೇಲೆ ಆಗುವ ಪರಿಣಾಮ ಬಹಳ ದೊಡ್ಡದು. ಅವರ ಮರ್ಯಾದೆಯನ್ನು ನಾವು ಇನ್ನಷ್ಟು ಹೆಚ್ಚು ಮಾಡಬೇಕು ವಿನಃ ಅದನ್ನು ಇನ್ನಷ್ಟು ಕಡಿಮೆ ಮಾಡಬಾರದು ಎಂದು ಹೇಳುತ್ತಾಳೆ. ಇದನ್ನು ಕೇಳಿದ ವರ್ಣಿಕಾ, ಸಬೂಬು ಹೇಳುತ್ತಾಳೆ. ಆದರೆ, ಅದ್ಯಾವುದಕ್ಕೂ ಕಿವಿ ಕೊಡುವುದು ಇಲ್ಲ ಕೃತಿ. ಆ ಬಳಿಕ ವರ್ಣಿಕಾ ಅಜ್ಜಿಗೆ ಜ್ಞಾನ ಬಂದಿರುವ ವಿಚಾರವನ್ನು ಕೃತಿಗೆ ಹೇಳಿದಾಗ ಮನೆಯ ಹೊರಗೆ ಬರುತ್ತಾಳೆ . ಇನ್ನು ಯುವ ಎಲ್ಲರ ಬಳಿ ಬಂದು ಅಜ್ಜಿ ಹುಷಾರಿದ್ದಾರೆ. ಆದರೆ, ನನ್ನ ಜೊತೆ ಬಾ ಎಂದು ಅಜ್ಜಿಯ ಬಳಿ ಕರೆದುಕೊಂಡು ಹೋಗುತ್ತಾನೆ. ಅಜ್ಜಿ ಅವರಿಬ್ಬರನ್ನು ನೋಡಿ ಬಹಳ ಖುಷಿ ಪಡುತ್ತಾರೆ. ಅವರಿಬ್ಬರೂ ಬೇರೆ ಆಗಬಾರದು ಎಂದು ಮಾತು ತೆಗೆದುಕೊಳ್ಳುತ್ತಾರೆ. ಮುಂದೇನಾಗುತ್ತೇ ಅನ್ನೋದೇ ಕುತೂಹಲ.

More from Filmibeat

English summary
Kannada Serial Katheyondu Shuruvagide written update on 13th May, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X