Kenda Sampige: ಸುಮನಾ ಮೇಲೆ ಹಗೆ ಸಾಧಿಸುತ್ತಿರುವ ಸಾಧನಾ; ಸುಮನಾ ನಿರ್ಧಾರಕ್ಕೆ ಒಪ್ಪಿಗೆ ಕೊಡುತ್ತಾರಾ ಮಾವ?

By Poorva

ಕೆಂಡಸಂಪಿಗೆ ಧಾರವಾಹಿ ನೋಡುಗರ ಮನ ಸೆಳೆಯುತ್ತಿದೆ. ಇದೀಗ ಮಾವ ಮಾಡಿದ ಕೆಲಸಕ್ಕೆ ಮನೆಯವರೆಲ್ಲರ ಮೇಲೆ ಸಾಧನ ಕಿಡಿಕಾರುತ್ತಿರುತ್ತಾಳೆ. ಸಾಧನ ರೂಂಗೆ ಸುಮನಾ ಬರುತ್ತಾಳೆ. ಸಾಧನ ಬಹಳ ಕೋಪದಲ್ಲಿ ಇರುತ್ತಾಳೆ. ನನಗೆ ಅವಮಾನ ಆಗಿದೆ ನನಗೆ ಅವಮಾನ ಮಾಡಿದವರಿಗೆ ಶಿಕ್ಷೆ ಕೊಡುತ್ತೇನೆ ಎಂದು ಹೇಳುತ್ತಾ ಇರುತ್ತಾಳೆ.

ಆಗ ಸುಮನಾ ಸಾಧನ ಬಳಿ ಅಕ್ಕ ನೀವು ಕೋಪ ಮಾಡಿಕೊಳ್ಳಬೇಡಿ ನನಗೆ ಗೊತ್ತಾಗಿದೆ ನಿಮಗೆ ಬಹಳ ನೋವಾಗಿದೆ ಆದರೆ ನಾನು ನೀವು ಗೆಲ್ಲುತ್ತಿರಾ ಎಂದು ಅಂದುಕೊಂಡಿದ್ದೆ ಎಂದಾಗ ಸುಮನಾ ಮೇಲೆ ಸಾಧನ ಬಹಳ ಕೋಪ ಮಾಡಿಕೊಂಡಿರುತ್ತಾಳೆ.

ಬಳಿಕ ಸಾಧನ ಜೋರಾಗಿ ಸುಮನಾ ಇಲ್ಲಿಂದ ಹೊರಟು ಹೋಗು ಎಂದು ಹೇಳುತ್ತಾಳೆ. ಆದರೆ ಸುಮನಾ ಅಕ್ಕ ನೀವು ಕೋಪ ಕಡಿಮೆ ಮಾಡಿಕೊಳ್ಳಿ, ದಯವಿಟ್ಟು ಎಂದು ಬೇಡಿದರೂ ಸಾಧನ ಮಾತ್ರ ಅದ್ಯಾವುದನ್ನೂ ಕೇಳಿಸಿಕೊಳ್ಳದೆ ಆಕೆಯ ಹಠವನ್ನು ಸಾಧಿಸುತ್ತಾ ಇರುತ್ತಾಳೆ.

kendasampige-serial

ಇನ್ನು ಸುಮಾನಳನ್ನು ರೂಮ್ ನಿಂದ ಹೊರಗೆ ಹಾಕಿ ಸಾಧನ ಸುಮನಳನ್ನು ಸುಮ್ಮನೆ ಬಿಡುವುದಿಲ್ಲ ಎಂದು ಮನದಲ್ಲಿ ಯೋಚನೆ ಮಾಡುತ್ತಾ ಇರುತ್ತಾ ಇರುತ್ತಾಳೆ. ಸುಭಾಷ್ ಮಾತ್ರ ಸುಮನಾ ತಂಗಿಯ ಬಳಿ ತನ್ನ ಅತ್ತಿಗೆಯ ಬಗ್ಗೆ ಗುಣಗಾನ ಮಾಡುತ್ತಾ ಇರುತ್ತಾನೆ. ಅತ್ತಿಗೆ ಮಾಡಿರುವುದು ಸರಿ ಆಗಿದೆ ಎಂದೆಲ್ಲ ಹೇಳಿದಾಗ ಸುಮನಾ ತಂಗಿಗೆ ಬಹಳ ಬೇಸರ ಆಗುತ್ತದೆ

ಸುಭಾಷ್ ಅರ್ಥ ಮಾಡಿಕೊಂಡಷ್ಟು ನಾನು ಕೂಡ ಅಕ್ಕನನ್ನು ಅರ್ಥ ಮಾಡಿಕೊಳ್ಳಲಿಲ್ಲ ಅಲ್ವಾ ಎಂದೆಲ್ಲ ಹೇಳುತ್ತ ಇರುತ್ತಾಳೆ. ಇನ್ನು ಸುಮನಾ ಮಹಡಿ ಮೇಲೆ ನಿಂತುಕೊಂಡು ಯೋಚನೆ ಮಾಡುತ್ತಾ ಇರುತ್ತಾಳೆ. ಆಗ ಅಲ್ಲಿಗೆ ಬಂದ ತೀರ್ಥ ಸುಮನಾ ಬಳಿ ಕೇಳುತ್ತಾನೆ. ಯಾಕೆ ಸುಮನಾ ಏನಾಯ್ತು ಬಹಳ ಬೇಸರದಲ್ಲಿ ಇದ್ದಿಯಾ ಎಂದೆಲ್ಲ ಹೇಳುತ್ತ ಇರುತ್ತಾನೆ.

ಆಗ ಸುಮನಾ ಸಾಧನಗೆ ಬಹಳ ಬೇಸರ ಆಗಿರುವ ವಿಚಾರದ ಬಗ್ಗೆ ಹೇಳುತ್ತ ಇರುತ್ತಾಳೆ. ಆಕೆ ಸಾಧನ ಬಳಿ ಮಾತನಾಡಿದ್ದನ್ನು ಕೂಡ ತೀರ್ಥನ ಬಳಿ ಹೇಳಿದಾಗ ಯಾಕೆ ಹೀಗೆ ಮಾಡಿದೆ ನೀನು ಯಾಕೆ ನೀನು ಸಾಧನ ಅತ್ತಿಗೆ ರೂಮ್ ಗೆ ಹೋದೆ ಎಲೆಕ್ಷನ್ ನಲ್ಲಿ ಅವರು ಸೋತು ಹೋಗಿದ್ದರು ಆದರೂ ನೀನು ಅವರ ರೂಮ್ ಗೆ ಹೋಗಿದ್ದು ಸರಿಯಲ್ಲ, ಯಾಕೆಂದರೆ ಅವರು ಸೋತಿದ್ದಾರೆ, ಅವರ ಮನಸ್ಸಿಗೆ ಕೂಡ ನೋವು ಆಗುತ್ತದೆ ಅಲ್ವಾ ಆದ ಕಾರಣ ಅವರಿಗೆ ಇನ್ನೂ ಬೇಸರ ಆಗುತ್ತದೆ ಎಂದು ಹೇಳುತ್ತಾನೆ‌

ಆಗ ಸುಮನಾ ಅಕ್ಕನ ಕೋಪ ತಣಿಸಲು ಹೋದೆ ಎಂದೆಲ್ಲ ಹೇಳಿದರು ತೀರ್ಥ ಮಾತ್ರ ಇನ್ನುಮುಂದೆ ಅವರ ರೂಮ್ ಬಳಿ ಹೋಗಬೇಡ ಎಂದು ಹೇಳುತ್ತಾನೆ.

ಇನ್ನು ಜಾಹ್ನವಿಗೆ ಸಾಧನ ಅವಮಾನ ಮಾಡಿರುತ್ತಾಳೆ. ಆ ಕಾರಣಕ್ಕೆ ಜಾಹ್ನವಿ ಸುಮನಳನ್ನು ಕರೆದುಕೊಂಡು ಇರುವಾಗ ಅಲ್ಲಿಗೆ ಸುಭಾಷ್ ಬಂದು ಜಾಹ್ನವಿಗೆ ಬುದ್ದಿ ಮಾತು ಹೇಳುತ್ತಾನೆ. ಆದರೆ ಜಾಹ್ನವಿ ಮಾತ್ರ ಸುಭಾಷ್ ಮೇಲೆ ಬಹಳ ಕೋಪಗೊಂಡು ಸುಮನಳಿಗೆ ಒಂದು ಗತಿ ಕಾಣಿಸಬೇಕು ಎಂದು ಯೋಚನೆ ಮಾಡುತ್ತಾ ಇರುತ್ತಾಳೆ.

ಇನ್ನು ಸುಮನಾ ನೇರವಾಗಿ ಅತ್ತೆಯ ರೂಮ್ ಗೆ ಬರುತ್ತಾಳೆ. ಬಂದು ಅತ್ತೆಯ ಬಳಿ ಸಾಧನ ಕೋಪಗೊಂಡು ಮನೆಯವರ ಮನದಲ್ಲಿ ನೂರಾರು ಆಲೋಚನೆ ಮಾಡುವ ಹಾಗೆ ಮಾಡಿದ್ದಾಳೆ ಎಂದೆಲ್ಲ ಸುಮನಾ ಅತ್ತೆ ಹೇಳುತ್ತ ಇರುವಾಗ ಸುಮನಾ ಅತ್ತೆಯ ಬಳಿ ಅತ್ತೆ ಈ ಡಾಬುವನ್ನು ಅವರಿಗೆ ಕೊಟ್ಟುಬಿಡಿ ಎಂದು ಹೇಳಿದಾಗ ಆಕೆಯ ಅತ್ತೆ ಕೂಡ ಅದೇ ಮಾತನ್ನು ಹೇಳುತ್ತ ಇರುವುದನ್ನು ಜಾಹ್ನವಿ ರೆಕಾರ್ಡ್ ಮಾಡಿಕೊಂಡು ಇರುತ್ತಾಳೆ‌.

More from Filmibeat

English summary
Kannada serial kenda sampige written updated on 1th july
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X