Kenda Sampige: ತೀರ್ಥಂಕರ ಆಡಿದ ನಾಟಕಕ್ಕೆ ಸುಮನಾ ಬಾಳು ಬೀದಿಗೆ ಬಂತು.. ಆದರೆ ಮುಂದಿದೆ ಕಹಾನಿ!

By ಪೂರ್ವ

ಕಿರುತೆರೆ ವೀಕ್ಷಕರನ್ನು ಸೆಳೆಯುತ್ತಿರುವ ಮತ್ತೊಂದು ಧಾರಾವಾಹಿ 'ಕೆಂಡ ಸಂಪಿಗೆ'. ಗಂಡ, ಹೆಂಡತಿ ಹಾಗೂ ಪ್ರೇಯಸಿ ನಡುವೆ ಸಾಗುತ್ತಿರುವ ಈ ಕಥೆ ಟ್ವಿಸ್ಟ್ ಮೇಲೆ ಟ್ವಿಸ್ಟ್ ಕೊಡುತ್ತಿದೆ. ಇದೀಗ ತೀರ್ಥಂಕರ, ಸುಮನಳನ್ನು ಮನೆಯಿಂದ ಹೊರ ಹಾಕಲು ನೋಡುತ್ತಿದ್ದಾನೆ. ತನ್ನ ಹಳೆಯ ಪ್ರೇಯಸಿಯ ಮಾತು ಕೇಳಿ ಸುಮನಾ ಬಾಳನ್ನು ಹಾಳು ಮಾಡಲು ಹೊಂಚು ಹಾಕಿದ್ದಾನೆ.

ತೀರ್ಥಂಕರ ಹತ್ತಿದ ಏಣಿಯನ್ನು ಒದೆಯುವ ವ್ಯಕ್ತಿ. ಆತ ಸ್ವಾರ್ಥದಿಂದ ಕೂಡಿದ ಒಬ್ಬ ಕಾರ್ಪೊರೇಟರ್. ಎಲೆಕ್ಷನ್‌ನಲ್ಲಿ ಹೇಗಾದರೂ ಮಾಡಿ ಗೆಲ್ಲಲೇ ಆಗಬೇಕು ಅಂತ, ಹೂ ಮಾರುತ್ತಿದ್ದ ಹುಡುಗಿಯ ಕೊರಳಿಗೆ ತಾಳಿ ಕಟ್ಟಿದ್ದ. ಇದೀಗ ಮನೆಯಿಂದ ಹೊರ ಹಾಕಲು ನೋಡುತ್ತಿದ್ದಾನೆ.

Kannada serial Kenda Sampige written update on May 6th

ಮಗನ ನಿರ್ಧಾರಕ್ಕೆ ಪದ್ಮಾ ಶಾಕ್

ಪದ್ಮಾ, ಕೇಶವ ಪ್ರಸಾದ್ ತನ್ನ ಸೊಸೆಯನ್ನು ಮಗಳ ಹಾಗೆ ಕಾಣುತ್ತಾ ಇರುತ್ತಾರೆ. ಅತ್ತೆ, ಮಾವ ಹಾಗೂ ಸೊಸೆ ಸಂಬಂಧ ಚೆನ್ನಾಗಿಯೇ ಇದೆ. ಇದೇ ವೇಳೆ ತೀರ್ಥಂಕರ ಮನೆಗೆ ಬಂದು ಹೇಳುತ್ತಾನೆ. "ನನಗೆ ಇಷ್ಟ ಇಲ್ಲದ ಕೆಲಸವನ್ನು ನಾನು ಯಾವತ್ತೂ ಮಾಡುವುದಿಲ್ಲ. ಇವತ್ತು ಒಂದು ವಿಚಾರ ಎಲ್ಲರಿಗೂ ತಿಳಿಯಬೇಕಾಗಿದೆ. ನಾನು ಈ ಮನೆಯ ಮುಖ್ಯಸ್ಥನಾಗಿ ಒಬ್ಬರಿಗೆ ಒಂದು ನಿಜ ವಿಚಾರ ಹೇಳಬೇಕು" ಎಂದಾಗ ಪದ್ಮಾ ಶಾಕ್ ಆಗುತ್ತಾರೆ.

ಮನೆಯವರ ಮುಂದೆ ತೀರ್ಥಂಕರ ಹೇಳುತ್ತಾನೆ. "ನಾನು ರಾಜಕೀಯಕ್ಕೆ ಇಳಿದು, ಎಲೆಕ್ಷನ್‌ನಲ್ಲಿ ಗೆಲುವು ಸಾಧಿಸಲು ಮುಖ್ಯ ಕಾರಣ ಸುಮನಾ. ಅವರು ಸುಮನಾ ಇಲ್ಲದೆ ಇದ್ದರೆ ನನಗೆ ಗೆಲ್ಲಲು ಆಗುತ್ತಿರಲಿಲ್ಲ. ಅವರು ನನಗೆ ಆಧಾರ ಸ್ತಂಭ ಆಗಿದ್ದರು. ಆದರೆ ನಾನು ಅವರ ಕೊರಳಿಗೆ ತಾಳಿ ಕಟ್ಟಿದ್ದು ಮಾತ್ರ ರಾಜಕೀಯದಲ್ಲಿ ಗೆಲ್ಲಬೇಕು ಅನ್ನೋ ಉದ್ದೇಶದಿಂದ. ಇದೀಗ ಆ ಆಸೆ ಪೂರ್ತಿ ಆಗಿದೆ. ಇನ್ನು ಅವರು ಈ ಮನೆಯಲ್ಲಿ ಇದ್ದರೆ, ನಾನು ಈ ಮನೆಯಲ್ಲಿ ಇರುವುದು ಇಲ್ಲ" ಎಂದು ಖಡಕ್ ಆಗಿ ಹೇಳಿದ್ದಾನೆ. ಇದು ಕುಟುಂಬದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ.

Kannada serial Kenda Sampige written update on May 6th

ಮದುವೆ ವಿಚಾರ ಬಿಚ್ಚಿಟ್ಟ ತೀರ್ಥ

ಸುಮನಾ ಇದೀಗ ಗರ್ಭಿಣಿ . ನನ್ನ ಸಂಸಾರ ಈಗ ಸರಿ ಹೋಗುತ್ತಿದೆ ಎಂದುಕೊಂಡಿರುವಾಗಲೇ ಈ ಶಾಕಿಂಗ್ ನ್ಯೂಸ್ ಕೊಟ್ಟಿದ್ದಾಗಿದೆ. ತಾನು ಗರ್ಭಿಣಿ ಎನ್ನುವ ವಿಚಾರವನ್ನು ಎಲ್ಲರ ಬಳಿ ಹೇಳಬೇಕು, ಸಂತೋಷ ಪಡಬೇಕು ಎನ್ನುವ ವೇಳೆ ಸುಮನಾಗೆ ಭರ ಸಿಡಿಲು ಬಡಿದ ಹಾಗೆ ಆಗುತ್ತದೆ.

ಕಣ್ಣೀರಲ್ಲಿ ಸುಮನಾ ತೀರ್ಥಂಕರನ ಮುಖ ನೋಡುತ್ತಲೇ ಇರುತ್ತಾಳೆ. ಆಗ ಸಾಧನಾ ಹೇಳುತ್ತಾರೆ. "ತೀರ್ಥಂಕರ ಇಲ್ಲದ ಮನೆಯಲ್ಲಿ ನಾವು ಇರುವುದು ಇಲ್ಲ" ಎಂದು ಹೇಳುತ್ತಾಳೆ. ಆಗ ಪದ್ಮಾ ಮಾತ್ರ ಬಹಳ ದುಃಖ ಪಡುತ್ತಾಳೆ. ತನ್ನ ಮಗ ಎಷ್ಟು ಕೀಳು ಮಟ್ಟಕ್ಕೆ ತಲುಪಿದ ಎಂದು ಬಹಳ ಬೇಸರ ಪಡುತ್ತಿದ್ದ ಪದ್ಮಾ ಮಾತ್ರ ತನ್ನ ಮಗನಿಗೆ ಬುದ್ದಿ ಹೇಳುತ್ತಾರೆ. ಇನ್ನು ಇದನ್ನೆಲ್ಲ ಕೇಳಿದ ಸುಮನಾ ಜೋರಾಗಿ ನಿಲ್ಲಿಸಿ ಎಂದು ಅರಚುತ್ತಾಳೆ.

ಸಾಧನಾ ಮಾತಿಗೆ ಸುಮನಾ ಬೇಸರ

ಬಳಿಕ ಸುಮನಾ ಅಳುತ್ತಾ ತೀರ್ಥಂಕರ ಬಳಿ ಹೇಳುತ್ತಾಳೆ. "ನಾನು ನಿಮ್ಮ ಕಣ್ಣಿಗೆ ಗೊಂಬೆಯ ಹಾಗೆ ಕಾಣುತ್ತಾ ಇದ್ದೇನೆ ಅಲ್ವಾ .. ನನಗೆ ಮನಸ್ಸೇ ಇಲ್ವಾ.. ಎಲ್ಲರೂ ಬಾಯಿಗೆ ಬಂದ ಹಾಗೆ ಮಾತನಾಡುತ್ತಾ ಇದ್ದೀರಾ.. ನೀವು ನನಗೆ ತಾಳಿ ಕಟ್ಟಿದ್ದಿರ.. ನಾನು ಈ ಮನೆಗೆ ನಿಮ್ಮಿಂದನೇ ಬಂದಿದ್ದು. ಇದೀಗ ನೀವು ಹೋಗು ಎಂದು ಹೇಳುತ್ತಿದ್ದೀರಾ ಹೊರಟು ಹೋಗುತ್ತೇನೆ. ಆದರೆ ಒಂದು ಮಾತು ನಿಮ್ಮ ಬಳಿ ಹೇಳಬೇಕು ಅಂದುಕೊಂಡಿದ್ದೇನೆ" ಎನ್ನುತ್ತಾಳೆ.

ಆ ಬಳಿಕ ತೀರ್ಥಂಕರ ಅದಕ್ಕೆ ಒಪ್ಪಿಕೊಂಡು ರೂಮ್‌ನತ್ತ ಹೋಗುತ್ತಾನೆ. ಆಗ ಸುಮನಾ ಆತನ ಬಳಿ ಹೇಳುತ್ತಾಳೆ "ನೀವು ಆಡಿದ ನಾಟಕದಿಂದಾಗಿ ನನ್ನ ಜೀವನ ಹಾಳಾಯಿತು. ಆದರೆ ಇದೀಗ ನಿಮ್ಮ ಮಗುವಿಗೆ ತಾಯಿ ಆಗುತ್ತಾ ಇದ್ದೇನೆ. ಈಗ ನನಗೆ ನಿಮ್ಮ ಮನೆ ಬಿಟ್ಟು ಹೋಗಲು ಸಾಧ್ಯ ಇಲ್ಲ" ಎಂದು ಹೇಳಿದಾಗ ತೀರ್ಥಂಕರನಿಗೆ ಶಾಕ್ ಆಗುತ್ತೆ.

More from Filmibeat

English summary
Kannada serial Kenda Sampige written update on May 6th, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X