Kendasampige: ರಾಜೇಶ್‌ನನ್ನು ಕೊಂದಿದ್ದು ನಾನಲ್ಲ ಎಂದು ಎದೆ ಹಿಡಿದುಕೊಂಡು ಕುಸಿದ ತೀರ್ಥ, ಸುಮನಾ ಶಾಕ್!
ಕೆಂಡಸಂಪಿಗೆ ಧಾರಾವಾಹಿ ನೋಡುಗರಲ್ಲಿ ಕುತೂಹಲ ಇನ್ನಷ್ಟು ಹೆಚ್ಚು ಮಾಡುತ್ತಿದೆ. ಹೌದು ಇದೀಗ ಸುಮನಾ ಸಾಧನ ಕೈಯಲ್ಲಿ ಸರಿಯಾಗಿ ಲಾಕ್ ಆಗಿದ್ದಾರೆ. ಸುಮನಾ ಹಾಗೂ ಸಾಧನ ರಾಜೇಶ್ ಸಾವಿಗೆ ಕಾರಣ ಎನು ಎಂಬುವುದನ್ನು ತಿಳಿಯಲು ಹೋಗಿ ಸುಮನಾಳನ್ನು ಖೆಡ್ಡಾಕ್ಕೆ ದೂಡಿದ್ದಾಳೆ ಸಾಧನ.
ಹೌದು.. ಸಾಧನ ಸುಮನಳನ್ನು ಹಾಗೆಯೇ ಮನೆಯವರನ್ನು ಕಂಡರೆ ಅಷ್ಟಕಷ್ಟೆ. ಆದರೆ ಇದೀಗ ಹೇಗಾದರೂ ಮಾಡಿ ಸುಮಾನಾಳನ್ನು ಇದರಲ್ಲಿ ಸಿಲುಕಿಸಬೇಕು ಎನ್ನುವುದು ಸಾಧನ ಮಾಸ್ಟರ್ ಪ್ಲಾನ್ ಎಂದರೆ ತಪ್ಪಾಗದು. ಸುಮನಾ ಯಾವುದೋ ಒಂದು ವಿಡಿಯೋ ತುಣುಕನ್ನು ನೋಡಿ ನನ್ನ ಗಂಡನೇ ನನ್ನ ತಮ್ಮ ರಾಜೇಶನ ಸಾವಿಗೆ ಕಾರಣ ಎಂದೆಲ್ಲ ಹೇಳುತ್ತಾ ಮನೆಯವರ ಮುಂದೆ ಕೋಪವನ್ನು ತೋರಿಸುತ್ತಾ ಇರುತ್ತಾಳೆ.

ಇದನ್ನು ನೋಡಿದ ತೀರ್ಥ ಮಾತ್ರ ನಾನು ತಪ್ಪು ಮಾಡಿಲ್ಲ. ನನ್ನಿಂದ ಯಾವುದೇ ಅಪರಾಧ ಆಗಿಲ್ಲ ಎಂದೆಲ್ಲ ಜೋರಾಗಿ ಹೇಳಿದರೂ, ಆ ಮಾತುಗಳನ್ನು ಕೇಳಿಸಿಕೊಳ್ಳಲು ಸುಮನಾ ರೆಡಿ ಇಲ್ಲ. ಯಾಕೆಂದರೆ ಆ ವಿಡಿಯೋದಲ್ಲಿ ಕೇಳಿಸಿಕೊಂಡ ಧ್ವನಿ ಮಾತ್ರ ತೀರ್ಥಂಕರದ್ದು.. ಇದರಿಂದ ಬಹಳ ಕೋಪ ಮಾಡಿಕೊಂಡಿದ್ದಾಳೆ.
ತೀರ್ಥನ ಮಾತು ನಂಬದ ಮನೆಮಂದಿ
ಇನ್ನೂ, ಮನೆ ಮಂದಿ ಎಲ್ಲಾ ಆ ವಿಡಿಯೋವನ್ನು ನೋಡಿದಾಗ ತೀರ್ಥ ಮಾತ್ರ ಮನೆಯವರ ಮುಂದೆ ಅಪರಾಧಿಯ ಹಾಗೆ ಕಾಣಿಸುತ್ತಾನೆ. ಇದನ್ನು ನೋಡಿದ ಮನೆ ಮಂದಿಗೆಲ್ಲ ಬಹಳ ಶಾಕ್ ಆಗುತ್ತದೆ. ರಾಜಕೀಯದ ದುರಾಸೆಗೆ ಒಂದು ಜೀವವನ್ನು ಬಲಿ ಕೊಡುವ ಮಟ್ಟಕ್ಕೆ ಹೋಗುವವನು ನನ್ನ ಮಗ ಅಲ್ಲ ಎಂದೆಲ್ಲ ಹೇಳುತ್ತ ಇರುತ್ತಾನೆ ತೀರ್ಥ ಅವರ ತಂದೆ. ಇದನ್ನು ಯಾವುದನ್ನು ಕೇಳಿಸಿಕೊಳ್ಳದ ಸುಮನಾ ಮಾತ್ರ ನನ್ನ ತಮ್ಮನ ಸಾವಿಗೆ ಕಾರಣ ನನ್ನ ಗಂಡನೇ ಎಂದು ನೇರವಾಗಿ ಆಪಾದನೆ ಮಾಡುತ್ತಾಳೆ.

ಸಾಧನ ಕುತಂತ್ರ ಸುಮನಾ ಅರಿವಿಗೆ ಬರುತ್ತಾ?
ಆದರೆ, ಅದಾಗಲೇ ಸಾಧನ ತನ್ನ ಕೆಲಸವನ್ನು ಸಾಧಿಸಿಕೊಂಡಿದ್ದಾಳೆ. ಆ ಮೊಬೈಲ್‌ನಲ್ಲಿದ್ದ ವಿಡಿಯೋವನ್ನು ಮೀಡಿಯಾದವರಿಗೆ ಅದು ಹೇಗೋ ತೆಗೆದುಕೊಂಡು ಕೊಟ್ಟಿದ್ದಳು. ಇನ್ನೂ ತೀರ್ಥಂಕರ ರಾಜೇಶನನ್ನು ಸಾಯಿಸಿದ್ದಾರೆ ಎಂದೆಲ್ಲ ಮೀಡಿಯಾದಲ್ಲಿ ಬರುತ್ತದೆ. ಇದನ್ನು ನೋಡಿದ ತೀರ್ಥ ಎದೆ ಹಿಡಿದುಕೊಂಡು ಕುಸಿದು ಹೋಗುತ್ತಾನೆ.
ಮಾವನ ಬಳಿಯೂ ಸುಮನಾಗೆ ಕ್ಷಮೆ ಇಲ್ಲ!
ಯಾಕೆಂದರೆ ಮಾಡದ ತಪ್ಪಿಗೆ ಈ ರೀತಿ ನಾನು ಶಿಕ್ಷೆ ಅನುಭವಿಸುವ ಹಾಗೆ ಆಯಿತಲ್ಲ ಎಂದು ಮನದಲ್ಲಿ ಬಹಳ ಬೇಸರ ಮಾಡಿಕೊಂಡು ಇರುತ್ತಾನೆ. ಇನ್ನೂ ಸುಮನಾಳತ್ತ ಎಲ್ಲರೂ ಬಹಳ ಕೋಪಗೊಂಡು ಇರುತ್ತಾರೆ. ಜಾಹ್ನವಿ ಸುಮನಾಳನ್ನು ನಿಂದಿಸುತ್ತಾರೆ. ಎಲ್ಲಾ ತಪ್ಪು ಸಾಧನ ಮಾಡಿದ್ದರೂ, ಸುಮನಾ ಮಾತ್ರ ಮೂಕಳಾಗಿ ಇರುತ್ತಾಳೆ.. ಇನ್ನೂ ಮನೆಯವರೆಲ್ಲ ಸುಮನಾ ವಿರುದ್ಧ ತಿರುಗಿ ನಿಂತರೆ ಸುಮನಾ ಮಾತ್ರ ನಾನು ಈ ವೀಡಿಯೋವನ್ನು ಮೀಡಿಯಾದವರಿಗೆ ನೀಡಿಲ್ಲ ನಾನು ಸಾಧನ ಅಕ್ಕ ಮಾತ್ರ ನೋಡಿದ್ದು ಎಂದು ಹೇಳಿದಾಗಲೂ ಯಾರು ನಂಬುವುದು ಇಲ್ಲ. ಇನ್ನೂ ಇದನ್ನೆಲ್ಲ ಕೇಳಿಸಿಕೊಂಡ ಸಾಧನ ಏನು ಮಾತನಾಡದೆ ಸುಮ್ಮನೆ ನಿಂತುಕೊಂಡಿದ್ದಾಳೆ.


Click it and Unblock the Notifications











