Namma Lacchi: ದುಷ್ಟರಿಂದ ಮಕ್ಕಳನ್ನು ರಕ್ಷಿಸಿದ ಸಂಗಮ್: ತಂದೆಯನ್ನು ಅಪಾಯದಿಂದ ಕಾಪಾಡಿದ ಲಚ್ಚಿ
ಲಚ್ಚಿ ಹಾಗೂ ರಿಯಾಳನ್ನು ಹುಡುಕಿಕೊಂಡು ಸಂಗಮ್ ಬಂದ್ದಿದ್ದಾನೆ. ಸಂಗಮ್‌ಗೆ ಲಚ್ಚಿ ಹಾಗೂ ರಿಯಾ ಸಂಕಷ್ಟಕ್ಕೆ ಸಿಲುಕಿದ್ದಾರೆ ಎನ್ನುವ ಸಣ್ಣ ಸುಳಿವು ಸಿಗುತ್ತದೆ. ಶಾಂತ ಏನಾದರೂ ಕಿತಾಪತಿ ಮಾಡಿದ್ದಾಳೆ ಎಂದು ಅಂದುಕೊಂಡ ಸಂಗಮ್ ಮಕ್ಕಳಿಬ್ಬರನ್ನು ಹುಡುಕುತ್ತಾನೆ. ಆಗ ಮಕ್ಕಳನ್ನು ಗೂಂಡಾಗಳು ಸುತ್ತುವರೆದಿದ್ದನ್ನು ನೋಡಿದ ಸಂಗಮ್ ರೌಡಿಗಳನ್ನು ಬೆನ್ನಟ್ಟಿ ಬೆಂಡೆತ್ತುತ್ತಾನೆ.
ಶಾಂತಗೆ ಏನು ಮಾಡಬೇಕು ಎಂದು ತಿಳಿಯದೆ ಶಾಕ್ ಆಗಿ ನಿಲ್ಲುತ್ತಾಳೆ . ಆಗ ಶಾಂತನೊಟ್ಟಿಗೆ ಇದ್ದ ಒಬ್ಬ ಗೂಂಡಾ ಸಂಗಮ್‌ಗೆ ಸರಿಯಾಗಿ ಪೆಟ್ಟು ಕೊಡಲು ಹೋಗುತ್ತಾನೆ. ಲಚ್ಚಿ ಆ ಗೂಂಡಾಗೆ ಬುದ್ಧಿ ಕಲಿಸಲು ನೋಡುತ್ತಾಳೆ. ಹೇಗಾದರೂ ಮಾಡಿ ಇವರಿಂದೆಲ್ಲ ಸಂಗಮಪ್ಪನನ್ನು ಕಾಪಾಡಬೇಕು ಎನ್ನುವುದು ಲಚ್ಚಿಯ ಬಯಕೆ. ಇನ್ನೇನು ಸಂಗಮ್‌ಗೆ ಆ ಗೂಂಡ ಹೊಡೆಯಬೇಕು ಎನ್ನುವಷ್ಟರಲ್ಲಿ ಲಚ್ಚಿ ಆತನಿಗೆ ಹೊಡೆಯುತ್ತಾಳೆ.

ಗೂಂಡಾಗಳಿಗೆ ಹೊಡೆದ ಲಚ್ಚಿ
ಲಚ್ಚಿ ಹೊಡೆದ ರಭಸಕ್ಕೆ ಗೂಂಡಾ ಅಲ್ಲೇ ನಿಲ್ಲುತ್ತಾನೆ. ಆ ವೇಳೆ ಗೂಂಡಾಗಳ ಹೊಡೆತಕ್ಕೆ ನಲುಗಿದ ಸಂಗಮ್ ಮೈ ಕೊಡವಿ ನಿಂತಾಗ ಅಲ್ಲಿರುವ ಮಂದಿಗೆ ಭಯವಾಗುತ್ತದೆ. ಲಚ್ಚಿ ಇಲ್ಲದಿದ್ದರೆ ಸಂಗಮ್ ಕಥೆ ಇದೀಗ ಮುಗಿದು ಹೋಗುತ್ತಿತ್ತು. ಅದು ಹೇಗೋ ರೌಡಿಗಳಿಂದ ತಪ್ಪಿಸಿಕೊಂಡು ಅಪಾಯದಿಂದ ಪಾರಾಗಿದ್ದಾರೆ. ಆದರೆ ಸಂಗಮ್ ತನ್ನ ಮಕ್ಕಳ ಜೊತೆ ಮನೆಗೆ ಬಂದಿದ್ದಾನೆ.
ಶಾಂತಳನ್ನು ಮನೆಯಿಂದ ಹೊರಗೆ ಹಾಕಿದ ಸಂಗಮ್
ಮನೆಯಿಂದ ಶಾಂತಳನ್ನು ಸಂಗಮ್ ಹೊರಗೆ ಹಾಕುತ್ತಾನೆ. ಆಕೆಯ ಸ್ವಭಾವ ಸಂಗಮ್‌ಗೆ ತಿಳಿದ ಮೇಲೆ ಮನೆಯಲ್ಲಿ ಜಾಗವಿರುವುದಿಲ್ಲ. ಶಾಂತ ಜೊತೆ ಆಕೆಯ ಗಂಡನಿಗೂ ಸಂಗಮ್ ಜಾಗ ಕೊಡುವುದಿಲ್ಲ .ಮನೆಯಿಂದ ಹೊರಗಡೆ ಹಾಕುತ್ತಾನೆ. ಇದನ್ನೆಲ್ಲ ನೋಡಿದ ಶಾಂತ, ಸಂಗಮ್ ಅಣ್ಣನಿಗೆ ಆವಾಜ್ ಹಾಕುತ್ತಾಳೆ. ನಾನು ಇಲ್ಲದೇ ನೀವು ಹೇಗೆ ಉದ್ಧಾರ ಆಗ್ತೀರಾ ನೋಡುತ್ತೇನೆ. ನಿಮ್ಮ ಮನೆ ಖುಷಿ ಖುಷಿಯಾಗಿರಲು ನಾನು ಬಿಡುವುದಿಲ್ಲ ಎಂದು ಶಪಥ ಮಾಡಿ ಹೋಗುತ್ತಾಳೆ.

ಮಾವನ ಸ್ಥಿತಿಯನ್ನು ಕಂಡು ಲಚ್ಚಿ ಬೇಸರ
ಇನ್ನು ಲಚ್ಚಿಗೆ ಬೇಸರ ಏನೆಂದರೆ ನನ್ನ ಮಾವ ನನ್ನನ್ನು ಬಿಟ್ಟು ಹೋಗುತ್ತಿದ್ದಾರೆ ಅನ್ನೋದು. ನನ್ನ ಮಾವನನ್ನು ಈ ಸ್ಥಿತಿಯಲ್ಲಿ ನೋಡಲು ನನ್ನಿಂದ ಸಾಧ್ಯವಿಲ್ಲ ಎಂದು ಬಹಳ ಬೇಸರ ವ್ಯಕ್ತಪಡಿಸುತ್ತಾ ಇರುತ್ತಾಳೆ. ಆದರೆ ಈ ವಿಚಾರವನ್ನು ಯಾರ ಬಳಿಯೂ ಹೇಳಲಾಗದೆ ಬಹಳ ನೊಂದುಕೊಂಡು ಇರುತ್ತಾಳೆ. ರಿಯಾಳನ್ನು ನೋಡಿದ ದೀಪಿಕಾ ಮಾತ್ರ ಬಹಳ ಖುಷಿ ಪಟ್ಟಿದ್ದಾಳೆ. ನನ್ನ ಮಗಳು ನನ್ನ ಕೈ ಸೇರಿದಳು ಎನ್ನುವ ಖುಷಿ ದೀಪಿಕಾಗೆ ಇರುತ್ತದೆ . ತನ್ನ ಮಗಳನ್ನು ಕದ್ದು ಬೇರೆಯವರಿಗೆ ಮಾರಾಟ ಮಾಡಲು ಹೋದ ಶಾಂತ ಬಗ್ಗೆ ದೀಪಿಕಾಗೆ ಕೋಪ ಉಕ್ಕಿ ಬರುತ್ತದೆ.
ಶಾಂತ ತಪ್ಪನ್ನು ಕ್ಷಮಿಸದ ದೀಪಿಕಾ
ಶಾಂತ ಮಾಡಿದ ತಪ್ಪಿಗೆ ಕ್ಷಮೆ ಇಲ್ಲ ಎನ್ನುವಷ್ಟು ಕೋಪಗೊಂಡು ಇರುತ್ತಾಳೆ ದೀಪಿಕಾ. ಇನ್ನು ಸಂಗಮ್‌ಗೆ ಲಚ್ಚಿ ಹಾಗೂ ರಿಯಾ ಎಂದರೆ ಪಂಚ ಪ್ರಾಣ. ಮಕ್ಕಳಿಗಾಗಿ ತನ್ನ ಪ್ರಾಣವನ್ನೇ ಒತ್ತೆಯಿಡಲು ಹೊರಟಿದ್ದ ಸಂಗಮ್‌ಗೆ ಇದೀಗ ಕೊಂಚ ನೆಮ್ಮದಿ ಸಿಕ್ಕಿದೆ.


Click it and Unblock the Notifications











