Lakshmi Baramma: ವೈಷ್ಣವ್ ಜೊತೆ ಹೆಜ್ಜೆ ಹಾಕಿದ ಲಕ್ಷ್ಮೀ: ಕೆಲವೇ ಗಂಟೆಗಳಲ್ಲಿ ಲಕ್ಷ ಲಕ್ಷ ವ್ಯೂವ್ ಪಡೆದ ಸಾಂಗ್

By Poorva

ವೈಷ್ಣವ್ ಕೊಟ್ಟ ಶಾಕ್‌ಗೆ ಇದೀಗ ಕೀರ್ತಿ ಹಾಗೂ ಕಾವೇರಿ ಸುಸ್ತಾಗಿದ್ದಾರೆ. ಲಕ್ಷ್ಮೀ ಜೊತೆ ಆಲ್ಬಮ್ ಸಾಂಗ್‌ಗೆ ಹೆಜ್ಜೆ ಹಾಕಲ್ಲ ಎಂದಿದ್ದ ವೈಷ್ಣವ್ ಇದೀಗ ಎಲ್ಲರಿಗೂ ಸರ್ಪ್ರೈಸ್ ನೀಡಿದ್ದಾನೆ . ಕೀರ್ತಿ ಮಾತ್ರ ವೈಷ್ಣವ್ ಕೊಟ್ಟ ಸರ್ಪ್ರೈಸ್‌ಗೆ ಫುಲ್ ಶಾಕ್ ಆಗಿದ್ದಾಳೆ. ಹಾಗೆಯೇ ತಾನು ಪ್ರೀತಿಸುತ್ತಿರುವ ವೈಷ್ಣವ್ ಇವನೇನಾ? ಎನ್ನುವಷ್ಟರ ಮಟ್ಟಿಗೆ ಕೀರ್ತಿಗೆ ಬೇಸರ ಆಗುತ್ತದೆ.

ಲಕ್ಷ್ಮೀ ಬಾರಮ್ಮ ತಂಡ ಆಲ್ಬಮ್ ಸಾಂಗ್ ಅನ್ನು ಚಿತ್ರೀಕರಣ ಮಾಡಿದೆ. ಈ ಹಾಡು ವೀಕ್ಷಕರಿಗೆ ಬಹಳ ಖುಷಿಯನ್ನು ನೀಡಿದೆ ಎಂದರೆ ತಪ್ಪಾಗದು. ಲಕ್ಷ್ಮೀ ಬರೆದ ಹಾಡಿಗೆ ವೈಷ್ಣವ್ ರಾಗ ಸಂಯೋಜಿಸಿ, ಹಾಡಿ ಪತ್ನಿಯ ಜೊತೆಗೇ ಹೆಜ್ಜೆ ಹಾಕುವ ಆಲ್ಬಂ ಹಾಡನ್ನು ನೋಡಿದ ಜನರು ಮೆಚ್ಚುಗೆಯನ್ನು ಸೂಚಿಸಿದ್ದಾರೆ. ಇವರಿಬ್ಬರ ಜೋಡಿ ನೋಡಿದ ಜನ ಸಖತ್ ಖುಷಿ ಪಟ್ಟಿದ್ದಾರೆ.

Kannada serial Lakshmi baramma 2nd January written update

ಈ ಇಬ್ಬರು ಜೋಡಿ ನೋಡಿ ಮೇಡ್ ಫಾರ್ ಇಚ್ ಅದರ್ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ. ಗಾಯಕ ಬ್ರೋ ಗೌಡ ಶಮಂತ್ ನಾಯಕನ ಪಾತ್ರದಲ್ಲಿ ನಟನೆ ಮಾಡುತ್ತಾ ಇದ್ದಾರೆ. ಬ್ರೋ ಗೌಡ ಗಾಯಕರು ಆಗಿದ್ದು ಆಲ್ಬಂ ಹಾಡನ್ನು ಅವರೇ ಹಾಡಿದ್ದು ವಿಶೇಷವಾಗಿದೆ. ಆಲ್ಬಂ ಸಾಂಗ್‌ಗೆ ಬಹಳ ಒಳ್ಳೆಯ ರೆಸ್ಪಾನ್ಸ್ ಸಿಕ್ತಿದ್ದು ಲಕ್ಷ ಲಕ್ಷ ವೀವ್ಸ್ ಗಿಟ್ಟಿಸಿದೆ.

ರೊಮ್ಯಾಂಟಿಕ್ ಆಗಿ ಸ್ಟೆಪ್ ಹಾಕಿದ ಜೋಡಿ

ಈ ಹಾಡು ರೊಮ್ಯಾಂಟಿಕ್ ಮೆಲೊಡಿ ಆಗಿದ್ದು, ಈಗಾಗಲೇ ಸಿನಿಮಾ ಹಾಡಿನ ರೇಂಜ್‌ಗೆ ವೈರಲ್ ಆಗಿದೆ. 'ಲಕ್ಷ್ಮೀ ಬಾರಮ್ಮ' ಧಾರವಾಹಿ ತಂಡ ಹೊಸ ಸಂಚಲನ ಸೃಷ್ಟಿಸಿದೆ. ಲಕ್ಷ್ಮೀ ಹಾಗೂ ವೈಷ್ಣವ್ ಮಾಡಿರುವ ಡಾನ್ಸ್‌ಗೆ ಫಿದಾ ಆಗದವರೇ ಇಲ್ಲ. ಈ ಹಾಡು ರಿಲೀಸ್ ಆಗಿ ಕೇವಲ 12 ಗಂಟೆಗಳಲ್ಲಿ 1 ಮಿಲಿಯನ್‌ಗೂ ವ್ಯೂವ್ ಪಡೆದುಕೊಂಡಿದೆ. ಇನ್ನು ಇದನ್ನು ನೋಡಿದ ಭಾಗ್ಯ ಹಾಗೂ ಲಕ್ಷ್ಮಿ ಖುಷಿ ಆಗಿದ್ದಾರೆ

ಕೀರ್ತಿ ಫುಲ್ ಶಾಕ್

ವೈಷ್ಣವ್ ಸೆಲೆಬ್ರಿಟಿ ಆದ ಕಾರಣ ವೈಷ್ಣವ್ ಹಾಗೂ ಆತನ ಹೆಂಡತಿ ಲಕ್ಷ್ಮೀ ಫೋಟೋ ಶೂಟ್ ಮಾಡಿಸಿಕೊಳ್ಳುತ್ತಿರುತ್ತಾರೆ. ಇದನ್ನು ಕೀರ್ತಿ ಮರೆಯಿಂದ ನೋಡುತ್ತಿರುವಾಗ ವೈಷ್ಣವ್ ಅತ್ತೆ ಬೇಕು ಅಂತಲೇ ಕೀರ್ತಿ ಗೆ ನೋವು ಆಗುವ ಹಾಗೆ ಮಾತನಾಡುತ್ತಾಳೆ. ಇದನ್ನು ಕೇಳಿ ಕೀರ್ತಿಗೆ ಆಕೆಗೆ ಏನು ಹೇಳಬೇಕು ಎಂದು ತಿಳಿಯದೇ ಅಲ್ಲಿಂದ ನೇರವಾಗಿ ಹೋಗುತ್ತಾಳೆ .

Kannada serial Lakshmi baramma 2nd January written update

ಕುಸುಮಾಳನ್ನು ವೈಷ್ಣವ್ ಖುಷಿ

ವೈಷ್ಣವ್ ನೀಡುತ್ತಿರುವ ಸರ್ಪ್ರೈಸ್ ಪಾರ್ಟಿಗೆ ಕುಸುಮಾ ಹಾಗೂ ಆಕೆಯ ಕುಟುಂಬ ಕೂಡ ಪಾಲ್ಗೊಳ್ಳುತ್ತಾರೆ. ಅವರೆಲ್ಲರನ್ನು ನೋಡಿದ ವೈಷ್ಣವ್ ಬಹಳ ಖುಷಿ ಪಡುತ್ತಾನೆ. ಭಾಗ್ಯಗೆ ತನ್ನ ಪ್ರೀತಿಯ ಲಡ್ಡುವನ್ನು ನೋಡುವ ಬಯಕೆ . ಪೆದ್ದು ಪೆದ್ದಾಗಿ ಮುದ್ದು ಮುದ್ದಾಗಿ ಮಾತನಾಡುತ್ತಾ ಇರುತ್ತಿದ್ದ ಲಡ್ಡು ಇದೀಗ ಹೇಗಿದ್ದಾಳೆ ಎಂದು ಆಕೆಯನ್ನು ನೋಡುವ ಬಯಕೆ ಆಕೆಗೆ. ಕುಸುಮಾ ಮಾತ್ರ ಆಟೋದವರ ಬಳಿ ಕೂಡ ವೈಷ್ಣವ ನನ್ನ ತಂಗಿಯ ಮಗ ಎಂದು ಬೀಗಿದಾಗ ಅವರ್ಯಾರೂ ನಂಬಲು ರೆಡಿ ಇರಲಿಲ್ಲ. ವೈಷ್ಣವ್ ದೊಡ್ಡಮ್ಮ ಎಂದು ಕರೆದಾಗ ಎಲ್ಲರೂ ಕಣ್ಣು ಬಿಟ್ಟು ಹಾಗೆ ನೋಡುತ್ತ ಇರುತ್ತಾರೆ.

More from Filmibeat

English summary
Lakshmi baramma serial: Vaishnav - Lakshmi album song goes viral;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X