Lakshmi Baramma: ತಾನೊಂದು ಬಗೆದರೆ ದೈವವೊಂದು ಬಗೆದಂತೆ.. ಸುಪ್ರೀತಾಳ ಕೆಟ್ಟತನ ಲಕ್ಷ್ಮೀಗೆ ಒಳಿತೇ ಆಗಿದೆ..!
ಕೆಟ್ಟವರಿಗೆ ಒಳ್ಳೆಯದ್ದೇ ಆದರೂ, ಒಳ್ಳೆಯವರಿಗೂ ಒಳ್ಳೆಯದ್ದು ಆಗಿಯೇ ಆಗುತ್ತೆ. ಅದಕ್ಕೆ ಸಾಕಷ್ಟು ಉದಾಹರಣೆಗಳು ಇದೆ. ಈಗ ಲಕ್ಷ್ಮೀ ಬಾಳಿಗೂ ಅದೇ ರೀತಿ ಆಗ್ತಾ ಇದೆ. ಯಾರು ಎಷ್ಟೇ ಕೆಟ್ಟದ್ದನ್ನು ಮಾಡುವುದಕ್ಕೆ ಹೋದರೂ, ಅದು ಒಳ್ಳೆಯದ್ದೇ ಆಗ್ತಾ ಇದೆ. ವೈಷ್ಣವ್ ಮತ್ತು ಲಕ್ಷ್ಮೀ ತಮ್ಮ ಮದುವೆ ದಿನದ ಸಂಭ್ರಮವನ್ನು ಅನುಭವಿಸುವುದಕ್ಕೂ ಬಿಡದೆ, ಕೆಟ್ಟದ್ದನ್ನೇ ಮಾಡುವುದಕ್ಕೆ ಹೋಗಿದ್ದಾಳೆ. ಆದರೆ, ಅದು ಉಲ್ಟಾ ಆಗಿ ಲಕ್ಷ್ಮೀಗೆ ಎಲ್ಲವೂ ಒಳ್ಳೆಯದ್ದೆ ಆಗಿದೆ.
ಒಂದು ಕಡೆ ಕೀರ್ತಿಗೆ ಹೇಗಾದರೂ ಮಾಡಿ ವೈಷ್ಣವ್ ಜೊತೆಗೆ ಕಾಲ ಕಳೆಯುಬೇಕು ಎಂಬ ಬಯಕೆ. ಹೀಗಾಗಿಯೇ ಲಕ್ಷ್ಮೀ ಭಯ ಹುಟ್ಟಿಸಿ ಮನೆಗೆ ಕಳುಹಿಸಿದ್ದಾಳೆ. ಲಕ್ಷ್ಮೀ, ಕೀರ್ತಿ ಹೇಳಿದ್ದು ಸರಿ ಇರಬಹುದು ಎಂದುಕೊಂಡು ಸೀದಾ ಮನೆಗೆ ಹೊರಡಲು ಹೊರಟಿದ್ದಾಳೆ. ಆದ್ರೆ ಸಂಕಷ್ಟ ಎದುರಾದಾಗ ಯಾವಾಗಲೂ ಜೊತೆಗಿರುತ್ತೀನಿ ಎಂದಿದ್ದ ವೈಷ್ಣವ್ ಸುಮ್ಮನೆ ಇರುತ್ತಾನಾ. ಜೊತೆಗೆ ನಿಂತಿದ್ದಾನೆ.

ಲಕ್ಷ್ಮೀಗೆ ಮುಜುಗರ
ಸುಪ್ರೀತಾ ಮೊದಲೇ ಪ್ಲ್ಯಾನ್ ಮಾಡಿದ್ದಾಳೆ. ಹೇಗಾದರೂ ಮಾಡಿ, ಲಕ್ಷ್ಮೀಗೆ ಅವಮಾನ ಮಾಡಬೇಕು ಎಂದು ಮೀಡಿಯಾದವರನ್ನು ಛೂ ಬಿಟ್ಟಿದ್ದಾಳೆ. ಹೇಗಾದರೂ ಮಾಡಿ ಲಕ್ಷ್ಮೀಯನ್ನು ಓಡಿಸಬೇಕೆಂದುಕೊಂಡು ಪ್ಲ್ಯಾನ್ ಮಾಡಿ ಓಡಿಸಿದ್ದಾಳೆ. ಆದರೆ ಗೇಟ್ ಬಳಿಯೇ ಮೀಡಿಯಾದವರ ಕೈಗೆ ಲಕ್ಷ್ಮೀ ಸಿಕ್ಕಿಬಿದ್ದಿದ್ದಾಳೆ. ಮೊದಲೇ ಪ್ಲ್ಯಾನ್ ಆಗಿದ್ದರಿಂದ ಏನೇನೋ ಪ್ರಶ್ನೆಗಳು ಬಂದಿವೆ. ನಿತಿನ್ ಎಲ್ಲಿ, ವೈಷ್ಣವ್‌ನ ಹೇಗೆ ಬೀಳಿಸಿಕೊಂಡ್ರಿ. ಹೀಗೆ ಲಕ್ಷ್ಮೀಗೆ ಮುಜುಗರವಾಗುವಂತ ಪ್ರಶ್ನೆಗಳೇ ಬಂದಿವೆ.
ಕೀರ್ತಿಯ ಮೇಲೆ ಕೋಪಗೊಂಡ ವೈಷ್ಣವ್
ಕೀರ್ತಿ ಸೇರಿದಂತೆ ಎಲ್ಲರಿದಂಲೂ ಲಕ್ಷ್ಮೀಗೆ ಮುಜುಗರವಾಗಿತ್ತು. ಅದಕ್ಕೆ ಮನೆಗೆ ಹೋಗಿದ್ದಾಳೆ ಎಂದು ನಂಬಿಸಿದ್ದಳು. ವೈಷ್ಣವ್ ಕಾಲ್ ಮಾಡುವುದಕ್ಕೆ ಹೋದರೂ ಅದಕ್ಕೂ ಬಿಡಲಿಲ್ಲ. ಸರಿ ಅಂತ ಪರಿಸ್ಥಿತಿಗೆ ಅನುಗುಣವಾಗಿ ವೈಷ್ಣವ್ ಸುಮ್ಮನೆ ಆಗಿದ್ದಾನೆ. ಬಳಿಕ ಮೀಡಿಯಾದವರೆಲ್ಲಾ ಲಕ್ಷ್ಮೀಯನ್ನು ಸುತ್ತುವರೆದು, ಏನೇನೋ ಪ್ರಶ್ನೆ ಮಾಡ್ತಾ ಇದ್ದದ್ದು, ಜ್ಯುವೆಲ್ಲರಿ ಶಾಪ್‌ನ ಸಿಬ್ಬಂದಿಗೆ ತಿಳಿದಿದೆ. ಅದು ವೈಷ್ಣವ್ ಕಿವಿಗೂ ಬಿದ್ದು, ಕೀರ್ತಿಯನ್ನು ಕೋಪದಿಂದ ನೋಡಿದ್ದಾಳೆ.

ಲಕ್ಷ್ಮೀಯ ಜೊತೆಗೆ ನಿಂತ ವೈಷ್ಣವ್
ನೇರ ಲಕ್ಷ್ಮಿಯಿದ್ದ ಬಳಿಗೆ ಬಂದ ವೈಷ್ಣವ್ ಮಾಧ್ಯಮದವರಿಗೆ ಖಡಕ್ ಉತ್ತರ ಕೊಟ್ಟಿದ್ದಾನೆ. ಅದೇನು ಗಂಡ ಹೆಂಡತಿ ಇಬ್ಬರು ಇರುವಾಗ, ಬರೀ ಹೆಂಡತಿಯನ್ನೇ ಕೇಳುವುದು. ಈಗ ಕೇಳಿ ಎಂದು ಹೆಗಲ ಮೇಲೆ ಕೈ ಹಾಕಿದ್ದಾನೆ. ಇದನ್ನು ಕಂಡು ಲಕ್ಷ್ಮೀಗೆ ಸೆಕ್ಯೂರ್ ಫೀಲ್ ಆಗಿದೆ. ಇದು ಕಂಪ್ಲೀಟ್ ಅರೇಂಜ್ಡ್ ಮ್ಯಾರೇಜ್. ಯಾರು ಯಾರನ್ನು ಓಡಿಸಿಕೊಂಡು ಹೋಗಿಲ್ಲ. ಮನೆಯವರ ಆಶೀರ್ವಾದ ಪಡೆದು ನನ್ನ ಹೆಂಡತಿ ಕೈ ಹಿಡಿದಿದ್ದೀನಿ ಎಂದು ವೈಷ್ಣವ್ ಖುಷಿಯಾಗಿ ಹೇಳಿಕೊಳ್ಳುತ್ತಿದ್ದರೆ ಆ ಕಡೆ ಕೀರ್ತಿ ಉರಿದುರಿದು ಬಿದ್ದಿದ್ದಾಳೆ.
ಸುಪ್ರೀತಾಗೂ ಸೋಲು, ಕೀರ್ತಿಗೂ ಸೋಲು
ಒಂದು ಕಡೆ ಕೀರ್ತಿ, ಮತ್ತೊಂದು ಕಡೆ ಸುಪ್ರೀತಾ. ಕೀರ್ತಿಗೆ ವೈಷ್ಣವ್ ಪಡೆಯುವ ಹಂಬಲ. ಸುಪ್ರೀತಾಗೆ ಸತ್ಯ ತಿಳಿಯುವ ಹಂಬಲ. ಇದರ ನಡುವೆ ಕೆಡುತ್ತಿರುವುದು ಕಾವೇರಿ ತಲೆ. ವೈಷ್ಣವ್ ಮನಸ್ಥಿತಿ. ಈಗಾಗಲೇ ಲಕ್ಷ್ಮೀಯನ್ನು ಬಿಡುವ ಮಾತೇ ಇಲ್ಲ ಎಂಬುದನ್ನು ವೈಷ್ಣವ್ ನಿರ್ಧರಿಸಿ ಆಗಿದೆ. ಕೀರ್ತಿಯನ್ನು ಮನೆ ತುಂಬಿಸಿಕೊಳ್ಳುವುದಕ್ಕೆ ಸಾಧ್ಯವೇ ಇಲ್ಲ ಎನ್ನುವುದನ್ನು ಕಾವೇರಿಗೂ ಮನದಟ್ಟು ಮಾಡಿ ಆಗಿದೆ. ಆದರೂ ಇಬ್ಬರ ಪ್ರಯತ್ನಗಳು ಮಾತ್ರ ನಿಲ್ಲುತ್ತಿಲ್ಲ.


Click it and Unblock the Notifications











